ವಿಟ್ಲ: ಲಾರಿ – ಬೈಕ್ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ನ.23. ಗೂಡ್ಸ್ ಲಾರಿ ಮತ್ತು ಯಮಹಾ FZ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರದಂದು ಕಾಡುಮಠ ಸೇತುವೆ ಸಮೀಪದ ಅಪಾಯಕಾರಿ ತಿರುವಿನಲ್ಲಿ ನಡೆದಿದೆ.

ಘಟನೆಯಲ್ಲಿ ಮಂಚಿ ಸಮೀಪದ ನಾಡಾಜೆ ನಿವಾಸಿಗಳಿಬ್ಬರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಡುಮಠ ಸೇತುವೆ ಕಾಮಗಾರಿಯು ಅಪೂರ್ಣವಾಗಿ ಇರುವುದರಿಂದ ಹಳೆಯ ರಸ್ತೆ ಮತ್ತು ಹೊಸ ರಸ್ತೆಯ ಬಗ್ಗೆ ವಾಹನ ಚಾಲಕರಲ್ಲಿ ಗೊಂದಲ ಉಂಟಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ ಒಟ್ಟು ಐದು ಅಪಘಾತಗಳು ನಡೆದಿವೆಯೆನ್ನಲಾಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Scroll to Top