ಮಂಗಳೂರು

ಮಾಸ್ಕ್ ಧರಿಸದಿರುವುದಕ್ಕೆ ಪೊಲೀಸರಿಂದ ದಂಡ ➤ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಭೂಪ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 26:  ಮಾಸ್ಕ್ ಹಾಕದ ಕಾರಣ ಠಾಣೆಗೆ ಕರೆದೊಯ್ದು ದಂಡ ಹಾಕಿದ ಪೊಲೀಸ್ ಪೇದೆಯ ಬೈಕ್ ಅನ್ನೇ ಖದೀಮನೋರ್ವ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ. ಹೊಸನಗರ ಪೊಲೀಸ್ ಠಾಣೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಆರೋಪಿ ಚೇತನ್ ನನ್ನು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬಂಧಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದ ಕಾರಣದಿಂದ ಚೇತನ್ ಗೆ ಪೊಲೀಸರು ಠಾಣೆಗೆ ಕರೆದೊಯ್ದು ದಂಡ ವಿಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಆತ ಪೊಲೀಸ್ […]

ಮಾಸ್ಕ್ ಧರಿಸದಿರುವುದಕ್ಕೆ ಪೊಲೀಸರಿಂದ ದಂಡ ➤ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಭೂಪ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು : ಒಂಟಿ ಮಹಿಳೆಯ ಹತ್ಯೆ ➤ ಅತ್ಯಾಚಾರವೆಸಗಿರುವ ಶಂಕೆ .!!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.26: ಕೊಣಾಜೆ ಬಳಿಯ ಹೂಹಾಕುವಕಲ್ಲು ಬೆಳ್ಳೇರಿಯಲ್ಲಿ ಒಂಟಿ ಮಹಿಳೆಯನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.  ಹತ್ಯೆಗೀಡಾದ ಮಹಿಳೆಯನ್ನು ಕುಸುಮ(50) ಎಂದು ಗುರುತಿಸಲಾಗಿದೆ ಮತ್ತು ಇವರ ಶವ ಮನೆಯಲ್ಲಿ ಪತ್ತೆಯಾಗಿದೆ.     ಕುಸುಮ ಅವರು ತನ್ನ ಮನೆಯಲ್ಲಿ ಏಕಾಂಗಿಯಾಗಿರುತ್ತಿದ್ದು, ಅತ್ಯಾಚಾರವೆಸಗಿ ಹತ್ಯೆ ನಡೆಸಿರುವುದಾಗಿ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆಯ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಂಗಳೂರು : ಒಂಟಿ ಮಹಿಳೆಯ ಹತ್ಯೆ ➤ ಅತ್ಯಾಚಾರವೆಸಗಿರುವ ಶಂಕೆ .!! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು : ಅಡುಗೆ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಪಲ್ಟಿ..!!

(ನ್ಯೂಸ್ ಕಡಬ) newskadaba.com ಕಾರವಾರ, ಸೆ. 26:  ಅಡುಗೆ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಕುಮಟಾ ತಾಲೂಕಿನ ಹಂದಿಗೋಣ ಬಳಿ ಇಂದು ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಹುಬ್ಬಳ್ಲಿಗೆ ತೆರಳುತ್ತಿದ್ದಾಗ ಶನಿವಾರ ಭೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮದ್ಯದಲ್ಲೇ ಟ್ಯಾಂಕರ್ ಪಲ್ಟಿಯಾಗಿದೆ.   ಪಲ್ಟಿಯಾದ ರಭಸಕ್ಕೆ ಟ್ಯಾಂಕರ್ ನಿಂದ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ ಆಗುತ್ತಿದೆ ಎನ್ನಲಾಗಿದೆ. ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ.  ಇದರಿಂದ ಆಸುಪಾಸಿನ ಮನೆಯವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಒಲೆ

ಮಂಗಳೂರು : ಅಡುಗೆ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಪಲ್ಟಿ..!! Read More »

ಕರ್ನಾಟಕ

ರೌಡಿಶೀಟರ್ ಕಿಶನ್ ಹತ್ಯೆ ಪ್ರಕರಣ ➤ ಐವರು ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ) newskadaba.com ಹಿರಿಯಡ್ಕ, ಸೆ. 26:   ಹಿರಿಯಡ್ಕ ಪೇಟೆಯಲ್ಲಿ ಹಾಡುಹಾಗಲೇ ನಡೆದ ರೌಡಿಶೀಟರ್ ಕಿಶನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಪೊಲೀಸರು ಬಂದಿಸಿದ್ದಾರೆ. ಇನ್ನು ಇಂದು ಮಧ್ಯಾಹ್ನ ನ್ಯಾಯಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.   ಹಿರಿಯಡ್ಕ ಪೇಟೆ ಶ್ರೀ ವೀರಭದ್ರ ದೇವಸ್ಥಾನದ ಸಮೀಪ ರೌಡಿಶೀಟರ್ ಕಿಶನ್ ಹೆಗ್ಡೆ ಯನ್ನು ಸುತ್ತಿಗೆ, ಮಾರಕಾಯುಧಗಳನ್ನು ಹಿಡಿದುಕೊಂಡು ಕಾರಿನ ಮುಂಭಾಗದಿಂದ ಆಗಮಿಸಿದ 4-5 ಮಂದಿಯ ತಂಡ ಏಕಾಏಕಿಯಾಗಿ ಕಾರಿನ ಗಾಜಿಗೆ ಸುತ್ತಿಗೆಯಿಂದ ಹೊಡೆದು ಜಖಂ ಗೊಳಿಸಿತ್ತು. ಅನಂತರ ಕಿಶನ್‌

ರೌಡಿಶೀಟರ್ ಕಿಶನ್ ಹತ್ಯೆ ಪ್ರಕರಣ ➤ ಐವರು ಆರೋಪಿಗಳು ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಕೋಟ್ಯಾಂತರ ಅಭಿಮಾನಿಗಳ ಕಣ್ಣೀರ ವಿದಾಯ ➤ ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ

(ನ್ಯೂಸ್ ಕಡಬ) newskadaba.com ತಿರುವಳ್ಳೂರ್, ಸೆ. 26:  ತಮಿಳು ನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಎಂಬಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಅವರ ಅಂತಿಮ ಯಾತ್ರೆಯ ವಿಧಿ ವಿಧಾನ ಕಾರ್ಯಗಳು, ಧಾರ್ಮಿಕ ಸಂಪ್ರದಾಯಗಳು ನೆರವೇರಿತು. ಸಂಪೂರ್ಣ ಪೊಲೀಸ್ ಗೌರವದೊಂದಿಗೆ ಗಾನಯೋಗಿ ಗೆ ವಿದಾಯ ಹೇಳಲಾಯಿತು.     ಎಸ್ ಪಿಬಿಯವರ ಪುತ್ರ ಹಿನ್ನೆಲೆ ಗಾಯಕ ಎಸ್ ಪಿ ಚರಣ್ ತಂದೆಯ ಅಂತಿಮ ಯಾತ್ರೆಯ ವಿಧಿ ವಿಧಾನಗಳನ್ನು ಶೈವ ಸಂಪ್ರದಾಯದಂತೆ ಕುಟುಂಬದ

ಕೋಟ್ಯಾಂತರ ಅಭಿಮಾನಿಗಳ ಕಣ್ಣೀರ ವಿದಾಯ ➤ ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ Read More »

ರಾಷ್ಟ್ರೀಯ ನ್ಯೂಸ್

ಕಡಬ : ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

(ನ್ಯೂಸ್ ಕಡಬ) newskadaba.com ಸವಣೂರು, ಸೆ. 26:  ಅಕ್ಕಿ ಹೇಗೆ ಬರುತ್ತೆ. ಭತ್ತ ಹೇಗೆ ಬೆಳೆಯೋದು ಎಂದು ಕೇಳಿದ ಪುಟ್ಟ ತಂಗಿಯ ಪ್ರಶ್ನೆಗೆ ಅವಳಿ ಸಹೋದರರಿಬ್ಬರು ಪ್ರಾಯೋಗಿಕವಾಗಿ ಭತ್ತ ಬೆಳೆಸುವ ಮೂಲಕ ತಂಗಿಯ ಪ್ರಶ್ನೆ ಗೆ ಉತ್ತರಿಸಿ ಸೈ ಎನಿಸಿಕೊಂಡಿದ್ದಾರೆ. ತಿನ್ನುವ ಅಕ್ಕಿ ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ ಎನ್ನುವ ಪ್ರಶ್ನೆಗೆ ತಂಗಿಯ ಪ್ರಶ್ನೆ ವಿದ್ಯಾರ್ಥಿಗಳಾಗಿರುವ ಭವನ್ ಹಾಗೂ ಭುವನ್ ಗೆ ಭತ್ತದ ಕೃಷಿಯ ಮಹತ್ವವನ್ನು ತಿಳಿಸಿತ್ತು. ಈ ಕಾರಣಕ್ಕಾಗಿ ಮನೆಯ ಅಂಗಳದಲ್ಲೇ ಭತ್ತವನ್ನು ಬಿತ್ತಿ ಭತ್ತದ

ಕಡಬ : ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು Read More »

ಕರಾವಳಿ, ಕರ್ನಾಟಕ

ಕೋಳಿ ಅಂಕಕ್ಕೆ ಪೊಲೀಸರ‌ ದಾಳಿ ➤ 9 ಮಂದಿ ವಶಕ್ಕೆ

(ನ್ಯೂಸ್ ಕಡಬ) newskadaba.com ಚೊಕ್ಕಡಿ, ಸೆ.26: ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬೆಳ್ಳಾರೆ ಪೊಲೀಸರು ಧಾಳಿ ನಡೆಸಿ 14 ಕೋಳಿಗಳನ್ನು ಹಾಗೂ 9 ಮಂದಿಯನ್ನು ವಶಕ್ಕೆ ಪಡೆದ ಘಟನೆ ಕಳೆದ ದಿನ ರಾತ್ರಿ ನಡೆದಿದೆ.     ಕೋಳಿ ಅಂಕ ಹಾಗೂ ಜುಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರಭಾರ ಠಾಣಾಧಿಕಾರಿ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ಮಧು ಟಿ ಹಾಗೂ ಪೊಲೀಸರು ಜುಜಾಟ ನಡೆಸುತ್ತಿದ್ದ ಸ್ಥಳಕ್ಕೆ

ಕೋಳಿ ಅಂಕಕ್ಕೆ ಪೊಲೀಸರ‌ ದಾಳಿ ➤ 9 ಮಂದಿ ವಶಕ್ಕೆ Read More »

ಕರಾವಳಿ

ಕೊಳ್ನಾಡು: ರಬ್ಬರ್‌ ತೋಟದಲ್ಲಿ ಕೆಲಸಕ್ಕಿದ್ದ ಕೇರಳ ಮೂಲದ ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೊಳ್ನಾಡು, ಸೆ.26:  ರಬ್ಬರ್‌ ತೋಟದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ನಡೆದಿದೆ.     ಮೃತ ವ್ಯಕ್ತಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಇರುವಸ್ಯ ಸಲ್ಮೋಯಿ ತೋಮಸ್(55 ವ.) ಎಂದು ಗುರುತಿಸಲಾಗಿದೆ. ಇವರು ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರ ಮಾಲಕತ್ವದ ರಬ್ಬರ್‌ ತೋಟದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಲ್ಮೋಯಿ ತೋಮಸ್‌ ರವರು ಕೆಲಸ ಮಾಡಿಕೊಂಡಿದ್ದರು. ಇನ್ನು ಆತ್ಮಹತ್ಯೆಗೆ

ಕೊಳ್ನಾಡು: ರಬ್ಬರ್‌ ತೋಟದಲ್ಲಿ ಕೆಲಸಕ್ಕಿದ್ದ ಕೇರಳ ಮೂಲದ ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಡ್ರಗ್ಸ್ ಪ್ರಕರಣ : ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 26:  ಮಾದಕ ವಸ್ತು ಸೇವನೆ ಪ್ರಕರಣ ಸಂಬಂಧ ಬಾಲಿವುಡ್’ನ ಖ್ಯಾತ ನಟಿ ದೀಪಿಕಾ ಪಡುಕೋಣೆಯವರು ಶನಿವಾರ ಮಾದಕ ವಸ್ತು ನಿಯಂತ್ರಣ ದಳ (ಎನ್’ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ದೀಪಿಕಾ ಪಡುಕೋಣೆಯವರಿಗೆ ಶುಕ್ರವಾರ ಹಾಜರಾಗಲು ಎನ್’ಸಿಬಿ ಸೂಚನೆ ನೀಡಿತ್ತು. ಆದರೆ, ಶನಿವಾರ ವಿಚಾರಣೆಗೆ ಹಾಜರಾಗುವುದಾಗಿ ದೀಪಿಕಾ ತಿಳಿಸಿದ್ದರು. ಇದರಂತೆ ಇಂದು ದೀಪಿಕಾ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಬಾಲಿವುಡ್’ನ ದೀಪಿಕಾ ಪಡುಕೋಣೆಯವರು ಡ್ರಗ್ಸ್’ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದ ವಾಟ್ಸ್’ಆಪ್

ಡ್ರಗ್ಸ್ ಪ್ರಕರಣ : ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ Read More »

ರಾಷ್ಟ್ರೀಯ ನ್ಯೂಸ್

ಗುತ್ತಿಗಾರು : ಸಿಕ್ಕಿಬಿದ್ದ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಸೆ. 26: ಗುತ್ತಿಗಾರಿನ ಯುವಕರೊಬ್ಬರಿಗೆ ಲಕ್ಷಾಂತರ ಮೌಲ್ಯದ ಚಿನ್ನದ ಸರವೊಂದು ಬಿದ್ದು ಸಿಕ್ಕಿತ್ತು. ಬಳಿಕ ಅದನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.   ನಡುಗಲ್ಲಿನಿಂದ ಗುತ್ತಿಗಾರು ಮಾರ್ಗವಾಗಿ ಪಂಜಕ್ಕೆ ಹೋಗುತ್ತಿದ್ದ ನವರತ್ನ ಮೊಬೈಲ್ ಶಾಪ್ ನ ಮಾಲಕ ಪ್ರದೀಪ್ ಅಂಬೆಕಲ್ಲು ರವರ ಸುಮಾರು ಒಂದು ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳೆದ ದಿನ ಬಿದ್ದು ಹೋಗಿದ್ದ ಘಟನೆ ನಡೆದಿತ್ತು. ಗುತ್ತಿಗಾರಿನ ಇಂಡಿಯನ್ ಪೆಟ್ರೋಲ್ ಪಂಪಲ್ಲಿ ಪೆಟ್ರೋಲ್ ತುಂಬಿಸಲು ಬಂದಿದ್ದ ಆಶಾಕಿರಣ್ ಎಂಬುವವರಿಗೆ

ಗುತ್ತಿಗಾರು : ಸಿಕ್ಕಿಬಿದ್ದ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ Read More »

ಕರಾವಳಿ, ಕರ್ನಾಟಕ
Scroll to Top