ನ್ಯೂಸ್ ಕಡಬ

➤ ಭೂಕಂಪ ಪೀಡಿತ ಟರ್ಕಿಯಲ್ಲಿ ಬೆಂಗಳೂರು ಮೂಲದ ಟೆಕಿ ನಾಪತ್ತೆ!

ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.10.   ಭೂಕಂಪ ಪೀಡಿತ ಟರ್ಕಿಗೆ  ಔದ್ಯೋಗಿಕ ಕೆಲಸ ನಿಮಿತ್ತ ಹೋಗಿದ್ದ ಬೆಂಗಳೂರಿನ ಎಂಜಿನಿಯರ್ ವಿಜಯ್‌ಕುಮಾರ್ (36 ವರ್ಷ) ಎಂಬುವವರು ನಾಪತ್ತೆಯಾಗಿದ್ದಾರೆ. ಪೀಣ್ಯದಲ್ಲಿರುವ ಆಮ್ಲಜನಕ ಹಾಗೂ ನೈಟ್ರೋಜನ್ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್, ಕಂಪನಿಯ ಹೊಸ ಘಟಕ ಸ್ಥಾಪನೆ ಕೆಲಸಕ್ಕಾಗಿ ಟರ್ಕಿಗೆ ಹೋಗಿದ್ದರು. ಇದೇ ಟರ್ಕಿಯಲ್ಲಿ ಭೂಕಂಪ ಸಂಭವಿಸಿದ್ದು, ವಿಜಯ್‌ಕುಮಾರ್ ಎಲ್ಲಿದ್ದಾರೆಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

➤ ಭೂಕಂಪ ಪೀಡಿತ ಟರ್ಕಿಯಲ್ಲಿ ಬೆಂಗಳೂರು ಮೂಲದ ಟೆಕಿ ನಾಪತ್ತೆ! Read More »

ಕರ್ನಾಟಕ

ವಂದೇ ಭಾರತ್​ ಮಾದರಿಯಲ್ಲಿ ಓಡುತ್ತೆ ವಂದೇ ಮೆಟ್ರೋ…

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.10. ರೈಲ್ವೆ ಇಲಾಖೆ ವಂದೇ ಮೆಟ್ರೋ ಓಡಿಸಲು ಸಜ್ಜಾಗಿದೆ. 2023ರಲ್ಲೇ ವಂದೇ ಮೆಟ್ರೋ ಓಡಿಸಲು ತಯಾರಿ ನಡೆದಿದೆ. ಇದು ಜನರಿಗೆ ಶುಭ  ಸುದ್ದಿಯಾಗಿದ್ದು, ವಂದೇ ಭಾರತ್​ ಮಾದರಿಯಲ್ಲಿ ಓಡುತ್ತೆ ವಂದೇ ಮೆಟ್ರೋ ಎಂದು ವರದಿಯಾಗಿದೆ. ವಂದೇ ಮೆಟ್ರೋ ಬೆಂಗಳೂರಿನ 100 ಕಿ.ಮೀ. ವ್ಯಾಪ್ತಿಯಲ್ಲಿ ಓಡಲಿದೆ. ಎರಡು ವಿಭಿನ್ನ ನಗರಗಳನ್ನು ಸಂಪರ್ಕಿಸುವ ಹೊಸ ಯೋಜನೆಯಾಗಿದೆ. ಪ್ರಧಾನಿ ಮುತುವರ್ಜಿಯಿಂದ ವಂದೇ ಮೆಟ್ರೋ ಆರಂಭವಾಗಲಿದೆ. ಬೆಂಗಳೂರು-ತುಮಕೂರು, ಬೆಂಗಳೂರು-ಹಿಂದೂಪುರ ನಡುವೆ ಸಂಚಾರ ನಡೆಸಲಿದೆ. ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್

ವಂದೇ ಭಾರತ್​ ಮಾದರಿಯಲ್ಲಿ ಓಡುತ್ತೆ ವಂದೇ ಮೆಟ್ರೋ… Read More »

ಕರ್ನಾಟಕ

ಬೆಂಕಿ ಅವಘಡ: ನಾರಿನ ಘಟಕ ಸಂಪೂರ್ಣ ನಾಶ‌…

(ನ್ಯೂಸ್ ಕಡಬ) newskadaba.com ತುಮಕೂರು, ಫೆ.10. ಜಿಲ್ಲೆಯ ತುರುವೇಕೆರೆ ತಾಲೂಕಿನ ಬಿಗನೇನಹಳ್ಳಿ ಹೊರವಲಯದಲ್ಲಿ ಬೆಂಕಿ ಅವಘಡ ಸಂಭವಿಸಿ ನಾರಿನ ಘಟಕ ಸಂಪೂರ್ಣ ಭಸ್ಮವಾಗಿದೆ. ಹಳ್ಳದಹೊಸಹಳ್ಳಿ ಗ್ರಾಮದ ನಿವಾಸಿ ಬಸವರಾಜುರಿಗೆ ಸೇರಿದ ನಾರಿನ ಘಟಕವಾಗಿದೆ. ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕ್ಷಣ ಮಾತ್ರದಲ್ಲಿ ಇಡೀ ಘಟಕ ಸಂಪೂರ್ಣ ಸುಟ್ಟು ನಾಶವಾಗಿದೆ. ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆದಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿ ಅವಘಡ: ನಾರಿನ ಘಟಕ ಸಂಪೂರ್ಣ ನಾಶ‌… Read More »

ಕರ್ನಾಟಕ

ಮಾಜಿ ಸಚಿವ ಟಿ. ಜಾನ್ ವಿಧಿವಶ​

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.10.  ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಟಿ. ಜಾನ್ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಜಾನ್​ ಅವರಿಗೆ 92 ವರ್ಷ ವಯಸ್ಸಾಗಿತ್ತು. ಎಸ್‌ ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ಅಬಕಾರಿ ಉದ್ಯಮದಲ್ಲಿ ಹೆಸರು ಮಾಡಿದ್ದರು. ಮೂಲತಃ ಕೇರಳದವರಾದ ಟಿ.ಜಾನ್ ವರು  ಉದ್ಯಮದಲ್ಲಿ ತೊಡಗಿಕೊಂಡು ಹಂತ ಹಂತವಾಗಿ ಸಿರಿವಂತಿಕೆ ಪಡೆದುಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು. ರೆಸಾರ್ಟ್ ಗಳನ್ನೂ ಕೂಡ ಜಾನ್ ಆರಂಭಿಸಿ ಯಶಸ್ಸು ಗಳಿಸಿದ್ದರು. ಕಷ್ಟ ಹೇಳಿಕೊಂಡು ಯಾರೇ ಬಂದರು ಸಹಾಯಹಸ್ತ ಚಾಚುತ್ತಿದ್ದ

ಮಾಜಿ ಸಚಿವ ಟಿ. ಜಾನ್ ವಿಧಿವಶ​ Read More »

ಕರ್ನಾಟಕ

ಐದು ವರ್ಷದಿಂದ ತಪ್ಪಿಸಿಕೊಂಡಿದ್ದ ಕೇರಳ ಮೂಲದ ಮಹಿಳೆ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.10.  ವಂಚನೆ ಪ್ರಕರಣದಲ್ಲಿ ಐದು ವರ್ಷಗಳಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಮಹಿಳೆಯೊಬ್ಬರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಕೇರಳದ ಕಣ್ಣೂರಿನ ಪಯ್ಯನೂರಿನ ಪಣಚೇರಿಯ ನಿವಾಸಿ 42 ವರ್ಷದ ಸುಜಾತಾರನ್ನು ಬಂಧಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸುಜಾತಾ 5 ವರ್ಷಗಳ ಹಿಂದೆ ಕೋರ್ಟ್​ಗೆ ಹಾಜರಾಗಲು ವಿಫಲರಾಗಿದ್ದರು. ಅವರಿಗೆ ಲುಕೌಟ್ ನೋಟೀಸ್ ನೀಡಲಾಗಿತ್ತು. ವಿಟ್ಲ ಪೊಲೀಸ್ ಠಾಣೆಯಲ್ಲಿ ಸುಜಾತಾ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್ ವಿಚಾರಣೆ ಹಾಜರಾಗದೇ ಹೋದ್ದರಿಂದ ಲುಕೌಟ್ ನೋಟೀಸ್ ಜಾರಿ

ಐದು ವರ್ಷದಿಂದ ತಪ್ಪಿಸಿಕೊಂಡಿದ್ದ ಕೇರಳ ಮೂಲದ ಮಹಿಳೆ ಬಂಧನ Read More »

ಕರಾವಳಿ

ಕಾಲಿಲ್ಲದಿದ್ದರೂ ಕನಸು ಕೈ ಹಿಡಿತು  ➤ ತಿಂಗಳಿಗೆ 1 ಲಕ್ಷ ಆದಾಯಗಳಿಸ್ತಿರೋ ರೈತ 

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಫೆ.10. ಉತ್ತರಪ್ರದೇಶದ  ಮಿರ್ಜಾಪುರ ಜಿಲ್ಲೆಯ ವಿಶೇಷ ಚೇತನ ಯುವಕನೊಬ್ಬ ಅಣಬೆ ಬೇಸಾಯ  ಮಾಡುವ ಮೂಲಕ ತನ್ನ ಅದೃಷ್ಟವನ್ನು ಬದಲಾಯಿಸಿಕೊಂಡಿದ್ದಾನೆ.  ಧೈರ್ಯ ಮತ್ತು ನಂಬಿಕೆಯ ಸಹಾಯದಿಂದ ತನ್ನ ದೈಹಿಕ ದೌರ್ಬಲ್ಯವನ್ನು ತನ್ನ ಕುಟುಂಬವನ್ನು ಪೋಷಿಸಲು ಯಶಸ್ಸಾಗಿ ಪರಿವರ್ತಿಸಿದ್ದಾನೆ. ಮಿರ್ಜಾಪುರ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಭಟೋಲಿ ಗ್ರಾಮದ ನಿವಾಸಿ ಬಸಂತ್ ಲಾಲ್ ಪೊಲಿಯೋ ಸಮಸ್ಯೆಯಿಂದ ತನ್ನ ಎರಡೂ ಕಾಲುಗಳ ಸ್ವಾಧಿನ ಕಳೆದುಕೊಂಡಿದ್ದರು.  ಬಸಂತ್​ ಜಿಡಿ ಬಿನಾನಿ ಕಾಲೇಜಿನಲ್ಲಿ ಬಿಎ ಮಾಡಿದರು,  ಅದರ

ಕಾಲಿಲ್ಲದಿದ್ದರೂ ಕನಸು ಕೈ ಹಿಡಿತು  ➤ ತಿಂಗಳಿಗೆ 1 ಲಕ್ಷ ಆದಾಯಗಳಿಸ್ತಿರೋ ರೈತ  Read More »

ರಾಷ್ಟ್ರೀಯ ನ್ಯೂಸ್

ಕಾಂತಾರ’  ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.10. ‘ಕಾಂತಾರ’ ಕನ್ನಡ ಸಿನೆಮಾದಲ್ಲಿ ‘ವರಾಹರೂಪಂ’ ಹಾಡಿನ ಕೃತಿಚೌರ್ಯ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ವಿನಾಯಿತಿ ನೀಡಿದೆ. ಈ ಮೂಲಕ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ನಿರಾಳರಾಗಿದ್ದಾರೆ ಎಂದು  ವರದಿ ತಿಳಿಸಿದೆ. ‘ಕಾಂತಾರ’ ಚಿತ್ರದ ‘ವರಾಹರೂಪಂ’ ಹಾಡನ್ನು ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಸಡಿಲಿಸಿದೆ. ಹಾಡಿನ ಮೇಲೆ ಹಕ್ಕುಸ್ವಾಮ್ಯ ಉಲ್ಲಂಘನೆ

ಕಾಂತಾರ’  ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್ Read More »

ರಾಷ್ಟ್ರೀಯ ನ್ಯೂಸ್

ಹಾಡಹಗಲೆ ಜ್ಯೂವೆಲರಿ ಅಂಗಡಿಗೆ ನುಗ್ಗಿದ ಕಳ್ಳ ➤ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com   ಚಿಕ್ಕಬಳ್ಳಾಪುರ, ಫೆ.10. ಜನನಿಬಿಡ ಪ್ರದೇಶದಲ್ಲಿರುವ ಜ್ಯೂವೆಲರಿ ಶಾಪ್ ಗೆ ನುಗ್ಗಿದ ಒಬ್ಬನೇ ಕಳ್ಳ ಏಕಾಂಗಿಯಾಗಿ ಹಾಡಹಗಲೆ ಅಂಗಡಿಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದು, ಬಾಗಿಲು ಮುಚ್ಚಿದ್ದ ಜ್ಯೂವೆಲರ್ಸ್ ಶಾಪ್ ನ ಶೆಟರ್ ಎತ್ತಿ ಒಳಬಂದ ಅಸಾಮಿಯೊಬ್ಬ… ಹಾಡಹಗಲೆ ಜ್ಯೂವೆಲರಿ ಅಂಗಡಿಯ ಡ್ರಾಯರ್ ಗೆ ಕೈ ಹಾಕಿ ಅದರಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು  ಕದ್ದು ಪರಾರಿಯಾಗಿರುವುದು ಚಿಕ್ಕಬಳ್ಳಾಪುರ ನಗರದ  ಗಂಗಮ್ಮ ಗುಡಿ ರಸ್ತೆಯಲ್ಲಿರುವ ಗಣೇಶ್ ಜ್ಯೂವೆಲರ್ಸ್ ಅಂಗಡಿಯಲ್ಲಿ.  ಅಂಗಡಿಯ ಮಾಲಿಕ

ಹಾಡಹಗಲೆ ಜ್ಯೂವೆಲರಿ ಅಂಗಡಿಗೆ ನುಗ್ಗಿದ ಕಳ್ಳ ➤ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು Read More »

ಕರ್ನಾಟಕ

 ಒಂದು ಅಂಕ ಹೆಚ್ಚು ಬಂದರೂ ಮರುಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದು ➤ಸಚಿವ ಬಿಸಿ.ನಾಗೇಶ್ 

(ನ್ಯೂಸ್ ಕಡಬ) newskadaba.com   ಬೆಂಗಳೂರು, ಫೆ.10. ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ‘ಒಂದು ಅಂಕ’ ಹೆಚ್ಚು ಬಂದರೂ ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದರು. ಈ  ಕುರಿತು ಮಾಹಿತಿ ನೀಡಿರುವ ಸಚಿವರು, ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ‘ಒಂದು ಅಂಕ’ ಹೆಚ್ಚು

 ಒಂದು ಅಂಕ ಹೆಚ್ಚು ಬಂದರೂ ಮರುಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದು ➤ಸಚಿವ ಬಿಸಿ.ನಾಗೇಶ್  Read More »

ಕರ್ನಾಟಕ

  ಬೆಂಕಿ ಅವಘಡ ➤ಕಟಾವಿಗೆ ಬಂದಿದ್ದ 3 ಎಕರೆ ಕಬ್ಬು ನಾಶ

(ನ್ಯೂಸ್ ಕಡಬ) newskadaba.com   ತಿ.ನರಸೀಪುರ, ಫೆ.10.  ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ಕಟಾವಿಗೆ ಬಂದಿದ್ದ 3 ಎಕರೆ ಕಬ್ಬು ವಿದ್ಯುತ್ ತಗುಲಿ ಸಂಪೂರ್ಣ  ಬೆಂಕಿಗಾಹುತಿ. ಹ್ಯಾಕನೂರು ಗ್ರಾಮದ ಸುಂದ್ರಮ್ಮ ಕೋಂ ಲೇ .ಮಹದೇವಪ್ಪ ಎಂಬುವರು ಬೆಳೆದಿದ್ದ ಕಬ್ಬು ಬೆಂಕಿಯ ಸ್ಪರ್ಶದಿಂದ ಸುಟ್ಟು ಭಸ್ಮವಾಗಿದೆ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಕಾರ್ಯಾಚರಣೆ ಪ್ರಾರಂಭಿಸಿದರೂ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ.ಹಾಗಾಗಿ 3 ಎಕರೆ ಕಬ್ಬಿನ ಗದ್ದೆ ಸಂಪೂರ್ಣ ಸುಟ್ಟು ನಾಶವಾಗಿದೆ. ಸಂತ್ರಸ್ತೆ ಸುಂದ್ರಮ್ಮ ಮಾತನಾಡಿ,ಕಬ್ಬು ಕಟಾವಿಗೆ ಬಂದಿದ್ದು,ಮುಂದಿನ ತಿಂಗಳು ಕಟಾವು ಆಗಬೇಕಿತ್ತು.ಆದರೆ,ವಿದ್ಯುತ್ ಅನಾಹುತದಿಂದ

  ಬೆಂಕಿ ಅವಘಡ ➤ಕಟಾವಿಗೆ ಬಂದಿದ್ದ 3 ಎಕರೆ ಕಬ್ಬು ನಾಶ Read More »

ಕರ್ನಾಟಕ
Scroll to Top