ನ್ಯೂಸ್ ಕಡಬ

ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿದ ದಂಪತಿ

(ನ್ಯೂಸ್ ಕಡಬ) newskadaba.com  ಗುರುಗ್ರಾಮ್,  ಫೆ.10.  ಮನೆ ಕೆಲಸದಾಕೆಗೆ ಹೊಡೆದು ಬಡಿದು ಚಿಮ್ಮಟಿಯಲ್ಲಿ ದೇಹದ ವಿವಿಧ ಭಾಗಗಳಿಗೆ ಸುಟ್ಟು ತೊಂದರೆ ನೀಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು,  ಈ ದಂಪತಿ ಕೆಲಸ ಮಾಡುತ್ತಿದ್ದ ಸಂಸ್ಥೆಯೂ ಕೂಡ ಇವರನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ. 17 ವರ್ಷದ ಮನೆ ಕೆಲಸದಾಕೆಗೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದಂಪತಿಯ ಬಂಧನವಾಗಿದೆ. ಅಲ್ಲದೇ ಅಪ್ರಾಪ್ತ ಬಾಲಕಿಯನ್ನು ಕೆಲಸಕ್ಕೆ ನಿಯೋಜಿಸಿದ ಪ್ಲೇಸ್‌ಮೆಂಟ್ ಸಂಸ್ಥೆಗಾಗಿಯೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.  

ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿದ ದಂಪತಿ Read More »

ರಾಷ್ಟ್ರೀಯ ನ್ಯೂಸ್

  ಚಿಕ್ಕಮಗಳೂರು ಬೆಂಕಿ ಅವಘಡ ➤ 25  ಎಕರೆ ಕುರುಚಲು ಕಾಡು ನಾಶ

(ನ್ಯೂಸ್ ಕಡಬ) newskadaba.com  ಚಿಕ್ಕಮಗಳೂರು, ಫೆ.10.  ನಗರ ಸಮೀಪದ  ಚುರ್ಚೆಗುಡ್ಡ ಅರಣ್ಯ   ಪ್ರದೇಶದಲ್ಲಿ  ನಿನ್ನೆ ರಾತ್ರಿ  ಬೆಂಕಿ  ಕಾಣಿಸಿಕೊಂಡಿದ್ದು,  ಬೆಂಕಿಯ  ಕೆನ್ನಾಲಿಗೆಗೆ  ಸುಮಾರು  25  ಎಕರೆ  ಪ್ರದೇಶದಲ್ಲಿದ್ದ  ಕುರುಚಲು  ಕಾಡು  ಸುಟ್ಟು  ಭಸ್ಮವಾಗಿದೆ. ಈ  ನಡುವೆ  ಬೆಂಕಿಯ  ಹಿಂದೆ  ಕಿಡಿಗೇಡಿಗಳ   ಕೃತದ  ಶಂಕೆ  ವ್ಯಕ್ತವಾಗಿದೆ. ನಗರದ  ಹೊರವಲಯದಲ್ಲಿರುವ  ಪವಿತ್ರವನ  ಸಮೀಪದ  ಚುರ್ಚೆಗುಡ್ಡೆ  ಅರಣ್ಯ  ಪ್ರದೇಶದಲ್ಲಿ  ಈ  ಬೆಂಕಿ  ಕಾಣಿಸಿಕೊಂಡಿದೆ.  ಬೆಂಕಿ  ನಂದಿಸಲು  ಅರಣ್ಯ  ಇಲಾಖೆಯ  ಸಿಬ್ಬಂದಿ  ಕಳೆದ  ರಾತ್ರಿ  ಹರಸಾಹಸ  ಪಟ್ಟಿದ್ದು  ಬೆಂಕಿಯನ್ನು  ಸದ್ಯ ನಿಯಂತ್ರಿಸಲಾಗಿದೆ ಎಂದು

  ಚಿಕ್ಕಮಗಳೂರು ಬೆಂಕಿ ಅವಘಡ ➤ 25  ಎಕರೆ ಕುರುಚಲು ಕಾಡು ನಾಶ Read More »

ಕರ್ನಾಟಕ

ವಿಷ ಸೇವಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಫೆ.10.  ವಿಷ ಸೇವಿಸಿ ಠಾಣೆಗೆ ಹೋಗಿ ರಕ್ಷಣೆಗೆ ಕೂಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಚಂದ್ರಾ ಲೇಔಟ್ ನಲ್ಲಿ ನಡೆದಿದೆ.  ಡೆಲಿವರಿ ಏಜೆಂಟ್ ಆಗಿರುವ ಅನಿಲ್ (30) ಎಂಬ ವ್ಯಕ್ತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸ್ನೇಹಿತೆ ಲೀಲಾ (40) ಎಂಬುವವರೊಂದಿಗೆ ಮನಸ್ತಾಪವಾಗಿದ್ದ ಹಿನ್ನೆಲೆಯಲ್ಲಿ ಅನಿಲ್ ವಿಷ ಸೇವಿಸಿದ್ದ ಎಂದು  ತಿಳಿದಿದೆ. ಈ ಹಿಂದೆ ಕೂಡ ಇಬ್ಬರ ನಡುವೆ ಜಗಳವಾಗಿದ್ದು, ಲೀಲಾ ಅವರು ಪೊಲೀಸರಿಗೆ ದೂರು ನೀಡಿದ್ದರು.

ವಿಷ ಸೇವಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು! Read More »

ಕರ್ನಾಟಕ

  ಬಾರ್ಡ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ!

(ನ್ಯೂಸ್ ಕಡಬ) newskadaba.com  ನ್ಯೂಯಾರ್ಕ್, ಫೆ.10.  ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಭಾವ ಸೃಷ್ಟಿಸುತ್ತಿರುವ ಚಾಟ್‌ ಜಿಪಿಟಿಗೆ ಪರ್ಯಾಯವಾಗಿ ಗೂಗಲ್‌ ಬಿಡುಗಡೆ ಮಾಡಿರುವ ‘ಬಾರ್ಡ್’ ತಪ್ಪು ಮಾಹಿತಿಯೊಂದನ್ನು ನೀಡಿದೆ. ಇದರ ಬೆನ್ನಲ್ಲೇ ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್‌ನ ಷೇರು ಮೌಲ್ಯ ಒಟ್ಟಾರೆ 8.2 ಲಕ್ಷ ಕೋಟಿ ರೂ.ನಷ್ಟು ಕುಸಿತ ಕಂಡಿದೆ. ಸೋಮವಾರ ಬಿಡುಗಡೆಯಾದ ‘ಬಾರ್ಡ್‌’ನ ಪ್ರಾತ್ಯಕ್ಷಿಕೆಯನ್ನು ಬುಧವಾರ ಗೂಗಲ್‌ ಆಯೋಜಿಸಿತ್ತು. ಈ ವೇಳೆ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಬಗ್ಗೆ ವಿವರಿಸುತ್ತಿದ್ದ ಬಾರ್ಡ್‌, ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಮೊಟ್ಟಮೊದಲ ಬಾರಿಗೆ ನಮ್ಮ

  ಬಾರ್ಡ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ! Read More »

ಅಂತರ್ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಮೊದಲ ಬಾರಿಗೆ ಲಿಥಿಯಂ ನಿಕ್ಷೇಪಗಳು ಪತ್ತೆ

(ನ್ಯೂಸ್ ಕಡಬ) newskadaba.com  ಜಮ್ಮು ಕಾಶ್ಮೀರ, ಫೆ.10.  ಭಾರತದಲ್ಲಿ ಇದೇ ಮೊದಲ ಬಾರಿಗೆ ಲಿಥಿಯಂ ನಿಕ್ಷೇಪಗಳು ಜಮ್ಮು ಮತ್ತು ಕಾಶ್ಮೀರದಲ್ಲಿ  ಪತ್ತೆಯಾಗಿವೆ. ಖನಿಜ ಸಂಪತ್ತಿನಲ್ಲಿ ಸಮೃದ್ಧವಾಗಿರುವ ಅಮೂಲ್ಯವಾದ ಮತ್ತು ಪ್ರಮುಖವಾದ ಲೋಹ ಲಿಥಿಯಂನ ನಿಕ್ಷೇಪಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡುಬಂದಿವೆ. ಇದು ಭಾರತದ ಮೊದಲ ಲಿಥಿಯಂ ನಿಕ್ಷೇಪಗಳ ತಾಣವಾಗಿದೆ, ಇದನ್ನು ರಿಯಾಸಿ ಜಿಲ್ಲೆಯಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಗುರುತಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳಲ್ಲಿ ಬಳಸುವ ಲಿಥಿಯಂ ಮತ್ತು ಮೊಬೈಲ್ ಫೋನ್‌ಗಳಂತಹ ಸಾಧನಗಳನ್ನು ಆಸ್ಟ್ರೇಲಿಯಾ ಮತ್ತು

ದೇಶದಲ್ಲಿ ಮೊದಲ ಬಾರಿಗೆ ಲಿಥಿಯಂ ನಿಕ್ಷೇಪಗಳು ಪತ್ತೆ Read More »

ರಾಷ್ಟ್ರೀಯ ನ್ಯೂಸ್

  ಟರ್ಕಿ-ಸಿರಿಯಾದಲ್ಲಿ ಭೀಕರ ಭೂಕಂಪ ದುರಂತ ➤ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಕಹ್ರಾಮನ್ಮರಸ್, ಫೆ.10. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಕಾರ್ಯಕರ್ತರು ಕೊನೆಯ ಹಂತದ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಅವಶೇಷಗಳಡಿ ಸಿಲುಕಿರುವ ಅನೇಕರ ಗುರುತು ಕೂಡ ಸಿಗದಂತಹ ಸ್ಥಿತಿ ಉಂಟಾಗಿದೆ. ಟರ್ಕಿಯ ಅಧ್ಯಕ್ಷರು ಇದನ್ನು “ಶತಮಾನದ ದುರಂತ” ಎಂದು ಕರೆದಿದ್ದು ಎರಡೂ ದೇಶಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. ಅವಶೇಷಗಳು, ಕಟ್ಟಡಗಳ ಅವಶೇಷಗಳು, ಲೋಹ, ಪುಡಿಮಾಡಿದ ಕಾಂಕ್ರೀಟ್ ಮತ್ತು ತಂತಿಗಳು ಎಲ್ಲೆಡೆ ಕಂಡುಬರುತ್ತಿವೆ. ಅಡಿಯಾಮಾನ್‌ನಲ್ಲಿ, ಕಟ್ಟಡದ 

  ಟರ್ಕಿ-ಸಿರಿಯಾದಲ್ಲಿ ಭೀಕರ ಭೂಕಂಪ ದುರಂತ ➤ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆ Read More »

ಕರಾವಳಿ

 ಮನೆ ಬಾಗಿಲಿಗೇ ಡ್ರಗ್ಸ್ ಡೆಲಿವರಿ ➤‌ 3 ಝೋಮ್ಯಾಟೋ ಬಾಯ್ಸ್ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.10. ಮನೆ ಬಾಗಿಲಿಗೆ ಡ್ರಗ್ಸ್ ಪೂರೈಸುತ್ತಿದ್ದ ಮೂವರು ‘ಝೋಮ್ಯಾಟೋ’ ಫುಡ್‌ ಡೆಲಿವರಿ ಬಾಯ್ಸ್ ಹಾಗೂ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 11 ಮಂದಿ ಪ್ರತ್ಯೇಕವಾಗಿ ಸಿಸಿಬಿಗೆ ಸಿಕ್ಕಿ ಬಿದ್ದಿದ್ದಾರೆ. ತಾಂಜೇನಿಯಾದ ಟಿಬೇರಿಯಸ್‌ ನ್ಯಾಕುಂಡಿ, ಕೀನ್ಯಾದ ಕೆರ್ರಿ ಸಾರಾ, ಮೊಹಮ್ಮದ್‌ ರಿಜ್ವಾನ್‌, ಕೇರಳದ ರಾಗೇಶ್‌, ಸಚಿನ್‌, ಶಾಹುಲ್‌, ಹಲಸೂರಿನ ಪ್ರಶಾಂತ್‌ ಹಾಗೂ ಪಶ್ಚಿಮ ಬಂಗಾಳದ ಸಿದ್ಧಾಂತ್‌ ಸೇರಿದಂತೆ 11 ಮಂದಿ ಆರೋಪಿಗಳು ಬಂಧಿತರಾಗಿದ್ದಾರೆ  ಎಂದು ವರದಿಯಾಗಿದೆ. ಆರೋಪಿಗಳಿಂದ 926.45 ಗ್ರಾಂ ಎಡಿಎಂಎ ಕ್ರಿಸ್ಟೆಲ್‌,

 ಮನೆ ಬಾಗಿಲಿಗೇ ಡ್ರಗ್ಸ್ ಡೆಲಿವರಿ ➤‌ 3 ಝೋಮ್ಯಾಟೋ ಬಾಯ್ಸ್ ಬಂಧನ Read More »

ಕರ್ನಾಟಕ

ಟ್ಯಾಂಕ್ ಗೆ ಬಿದ್ದು ಬಾಲಕಿ ಮೃತ್ಯು

(ನ್ಯೂಸ್ ಕಡಬ)newskadaba.com ಔರದ್,ಫೆ.09. ಪಟ್ಟಣದ ಶಿಕ್ಷಕರ ಕಾಲೊನಿಯ ಅಂಗನವಾಡಿ ಕೇಂದ್ರದ ಬಳಿಯಿರುವ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಬಿದ್ದು ಬಾಲಕಿ ಸ್ಫೂರ್ತಿ (3) ಮೃತಪಟ್ಟಿದ್ದಾಳೆ. ಕೂಲಿಕಾರ್ಮಿಕ ಜೀವನ್ ಮತ್ತು ಶಿಲ್ಪಾ ದಂಪತಿ ತಮ್ಮ ಮೂವರು ಪುತ್ರಿಯರಾದ ಸಲೋಮಿ (4), ಸ್ಫೂರ್ತಿ (3) ಮತ್ತು ಸೃಷ್ಟಿ(1.5)  ಈ ಮೂವರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದರು.ಮನೆಗೆ ಕರೆ ತರಲು ಶಿಲ್ಪಾ ಹೋದಾಗ, ಸ್ಫೂರ್ತಿ ಕಾಣಿಸಲಿಲ್ಲ. ಆಕೆಯ ಶವ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಸಿಕ್ಕಿತು’ ಎಂದು ಪೋಲಿಸರು ತಿಳಿಸಿದ್ದಾರೆ. ‘ಅಂಗನವಾಡಿ ಕಟ್ಟಡ ನಿರ್ಮಿಸಲು ಮಾಡಿದ್ದ ಸೆಪ್ಟಿಕ್

ಟ್ಯಾಂಕ್ ಗೆ ಬಿದ್ದು ಬಾಲಕಿ ಮೃತ್ಯು Read More »

ಕರ್ನಾಟಕ

➤ಅವಧಿ ಮುಗಿಯುವ ಮೊದಲು ಕೊವಿಡ್ ಲಸಿಕೆಗಳನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಂಡ ರಾಜ್ಯ ಸರ್ಕಾರ!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.9. ಕಳೆದ 10-15 ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಗರಿಷ್ಠ ಪ್ರಮಾಣದ ಕೋವಿಡ್ ಲಸಿಕೆಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಜನವರಿ 29ರೊಳಗೆ 4.3 ಲಕ್ಷ ಡೋಸ್ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ರಾಜ್ಯ ಸರ್ಕಾರ ಬಳಸಬೇಕಾಗಿತ್ತು, ಈ ಪೈಕಿ 1.1 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಗಳು ಜನವರಿ 31 ರೊಳಗೆ ಮತ್ತು 3.2 ಲಕ್ಷ ಡೋಸ್ ಕೋವಿಶೀಲ್ಡ್  ಲಸಿಕೆಗಳು ಫೆಬ್ರವರಿ 9 ರೊಳಗೆ ಬಳಸಬೇಕಿತ್ತು. ಈ ಲಸಿಕೆಗಳನ್ನು ಜನವರಿ

➤ಅವಧಿ ಮುಗಿಯುವ ಮೊದಲು ಕೊವಿಡ್ ಲಸಿಕೆಗಳನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಂಡ ರಾಜ್ಯ ಸರ್ಕಾರ! Read More »

ಕರ್ನಾಟಕ

ಟ್ರ್ಯಾಕ್ಟರ್​ನಿಂದ ಬಿದ್ದು ಯೋಧ ಮೃತ್ಯು

(ನ್ಯೂಸ್ ಕಡಬ)newskadaba.com ಧಾರವಾಡ,ಫೆ.09.  ರಜೆಯ ನಿಮಿತ ತಮ್ಮ ಊರಿಗೆ ಬಂದಿದ್ದ ಸೈನಿಕ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಗರಗ-ಲೋಕೂರ ಕ್ರಾಸ್‌ನಲ್ಲಿ ನಡೆದಿದೆ. ನಾಗಪ್ಪ ಉದ್ಮೀಶಿ (27) ಮೃತ ಸೈನಿಕ. ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ಗ್ರಾಮಸ್ಥರೊಂದಿಗೆ ಗರಗ ಮಡಿವಾಳೇಶ್ವರ ಜಾತ್ರೆ ಬಂದಿದ್ದು, ಬಳಿಕ ಜಾತ್ರೆ ಮುಗಿಸಿಕೊಂಡು ವಾಪಸ್ಸ್​ ಮರಳುತ್ತಿದ್ದಾಗ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ದುರ್ಘಟನೆ ನಡೆದಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ ಎಂದು ತಿಳಿದಿದ್ದೆ.    

ಟ್ರ್ಯಾಕ್ಟರ್​ನಿಂದ ಬಿದ್ದು ಯೋಧ ಮೃತ್ಯು Read More »

ಕರ್ನಾಟಕ
Scroll to Top