ಕಡಬ ನ್ಯೂಸ್

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 23.  ಗದಗ ಟ್ಯಾಂಕರ್ ವಾಹನ ಹಾಗೂ ಕೆಂಟರ್ ನಡುವೆ  ಅಪಘಾತ ಸಂಭವಿಸಿದೆ. ಈ ರಭಸಕ್ಕೆ ಟ್ಯಾಂಕರ್ ಸಂಪೂರ್ಣ ಜಖಂಗೊಂಡಿರುವ ಘಟನೆ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿಯಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ಚಾಲಕನ 2 ಕಾಲು ಕಟ್ ಆಗಿದ್ದು, ವಾಹನ  ಒಳಕ್ಕೆ ಸಿಲುಕಿಕೊಂಡು ಚಾಲಕ ನರಳಾಡಿದ್ದಾನೆ.ಪೊಲೀಸರು ಹಾಗೂ ಸ್ಥಳೀಯರಿಂದ ಸಿಲುಕಿಕೊಂಡ ಚಾಲಕನ ರಕ್ಷಣೆ ಮಾಡಲಾಗಿದೆ. ಚಾಲಕನನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಟರ್ ವಾಹನ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ. […]

Read More »

ಕರ್ನಾಟಕ, ಕ್ರೈಮ್ ನ್ಯೂಸ್

ದೆಹಲಿಯಲ್ಲಿ ಕಂಪಿಸಿದ ಭೂಮಿ ➤ ಮನೆಯಿಂದ ಹೊರಗಡೆ ಓಡಿ ಬಂದ ಜನ

ನ್ಯೂಸ್ ಕಡಬ) newskadaba.com, ನವದೆಹಲಿ. ಜ. 24. ರಾಷ್ಟ್ರ ರಾಜಧಾನಿ ವಲಯದಲ್ಲಿ ಭೂಕಂಪನ ಉಂಟಾಗಿರುವ ಘಟನೆ ನಡೆದಿದೆ. ಭೂಮಿ ಕಂಪನದಿಂದ ಕಟ್ಟಡಗಳಲ್ಲಿರುವರಿಗೆ ಸುಮಾರು 30 ಸೆಕೆಂಡುಗಳ ಕಾಲ ಭಯದ ಅನುಭವ ಉಂಟಾಗಿದ್ದು, ಅನೇಕರು ಮನೆಯಿಂದ ಓಡಿ ಬಂದರು ಎಂದು ತಿಳಿದು ಬಂದಿದೆ. ಉತ್ತರಾಖಂಡ,  ನೇಪಾಳದಲ್ಲಿ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.  

ದೆಹಲಿಯಲ್ಲಿ ಕಂಪಿಸಿದ ಭೂಮಿ ➤ ಮನೆಯಿಂದ ಹೊರಗಡೆ ಓಡಿ ಬಂದ ಜನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಿನಲ್ಲಿ ಏರೊ ಇಂಡಿಯಾ ಶೋ ➤ ಆಯೋಜನೆ ಕುರಿತು ಇಂದು ನಡೆದ ಸಭೆಯಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ) newskadaba.com, ಬೆಂಗಳೂರು. ಜ. 24. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮುಂದಿನ ತಿಂಗಳು ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೊ ಇಂಡಿಯಾ ಶೋ ಆಯೋಜನೆಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಲಬುರಗಿ ವಾಯುನೆಲೆಯಿಂದ ವಿಡಿಯೊ ಕಾನ್ಫೆರೆನ್ಸ್ ಮೂಲಕ ಅಪೆಕ್ಸ್ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿದೊಡ್ಡ ಏರ್ ಶೋ ಪ್ರದರ್ಶನ ಸಿಲಿಕಾನ್

ಬೆಂಗಳೂರಿನಲ್ಲಿ ಏರೊ ಇಂಡಿಯಾ ಶೋ ➤ ಆಯೋಜನೆ ಕುರಿತು ಇಂದು ನಡೆದ ಸಭೆಯಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ Read More »

ಕರ್ನಾಟಕ

➤ ವಿಜ್ಞಾನ ವಿಷಯ ಇಷ್ಟವಾಗಲಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com, ವಿಜಯಪುರ, ಜ. 24. ವಿಜ್ಞಾನ ವಿಷಯ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು 17 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ತಾಲೂಕಿನ ಕೋಮಲಾಪುರ ನಿವಾಸಿ ಪದ್ಮಾವತಿ ನಾಗರಬೆಟ್ಟದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಎಷ್ಟು ಹೊತ್ತಾದರೂ ಆಕೆ ಹೊರಗೆ ಬಾರದೇ ಇದ್ದಾಗ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಒಳಗೆ ಇಣುಕಿ ನೋಡಿದಾಗ ಘಟನೆ ಬಳಕಿಗೆ ಬಂದಿದೆ.

➤ ವಿಜ್ಞಾನ ವಿಷಯ ಇಷ್ಟವಾಗಲಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..! Read More »

ಕ್ರೈಮ್ ನ್ಯೂಸ್

➤ಬಿಹಾರದಲ್ಲಿ ಕಳ್ಳಬಟ್ಟಿ ದುರಂತ ➤ 5 ಸಾವು, ಹಲವರು ಗಂಭೀರ!

(ನ್ಯೂಸ್ ಕಡಬ) newskadaba.com, ಪಾಟ್ನಾ, ಜ. 24. ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತ ಸಂಭವಿಸಿದ್ದು, ನಕಲಿ ಮದ್ಯ ಸೇವಿಸಿ ಕನಿಷ್ಠ 5 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಬಿಹಾರದ ಸಿವಾನ್ ಜಿಲ್ಲೆಯ ಲಕಾರಿ ನಬಿಗಂಜ್‌ನ ಬಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ ಐದಕ್ಕೆ ಏರಿಕೆಯಾಗಿದೆ. ನಕಲಿ ಮದ್ಯ ಸೇವಿಸಿ ತೀವ್ರವಾಗಿ ಅಸ್ವಸ್ಥರಾಗಿರುವ ಎಲ್ಲರೂ ಸಿವಾನ್‌ನ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಈ ನಕಲಿ ಮದ್ಯ

➤ಬಿಹಾರದಲ್ಲಿ ಕಳ್ಳಬಟ್ಟಿ ದುರಂತ ➤ 5 ಸಾವು, ಹಲವರು ಗಂಭೀರ! Read More »

ಕ್ರೈಮ್ ನ್ಯೂಸ್

➤ ಟಾಲಿವುಡ್ ನ ಯುವ ನಟ ಸುಧೀರ್ ವರ್ಮ’ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 23.  ಟಾಲಿವುಡ್ ಯುವ ನಟ ಸುಧೀರ್ ವರ್ಮ ವೈಯಕ್ತಿಕ ಸಮಸ್ಯೆಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ. ಈ ಘಟನೆ ಸೋಮವಾರ ವಿಶಾಖಪಟ್ಟಣದಲ್ಲಿ ನಡೆದಿದೆ.  ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. 2013ರಲ್ಲಿ ಕಿಶೋರ್ ತಿರುಮಲ ನಿರ್ದೇಶನದ ಸೆಕೆಂಡ್ ಹ್ಯಾಂಡ್ ಸಿನಿಮಾ ಸುಧೀರ್ ವರ್ಮಾಗೆ ನಾಯಕನಾಗಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಂತೋಷ್ ಎಂಬ ಛಾಯಾಗ್ರಾಹಕನ ಪಾತ್ರವನ್ನ ಸುಧೀರ್ ವರ್ಮಾ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್ಗೆ ಪ್ರವೇಶಿಸಿದರು. ನಂತ್ರ ಸುಧೀರ್ ವರ್ಮಾ ವರಮುಲಪುಡಿ ನಿರ್ದೇಶನದ

➤ ಟಾಲಿವುಡ್ ನ ಯುವ ನಟ ಸುಧೀರ್ ವರ್ಮ’ಆತ್ಮಹತ್ಯೆ! Read More »

ಕ್ರೈಮ್ ನ್ಯೂಸ್

➤ ಬೆಸ್ಕಾಂ ನೌಕರ ವಿದ್ಯುತ್ ತಗುಲಿ ಮೃತ್ಯು..!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 23.  ಬೆಂಗಳೂರು ದುರಸ್ತಿ ಕೆಲಸಕ್ಕೆಂದು ಟ್ರಾನ್ಸ್ ಫಾರ್ಮರ್ ಏರಿದ್ದ ಬೆಸ್ಕಾಂ ನೌಕರ ಗೌತಮ್ (25) ವಿದ್ಯುತ್ ತಗುಲಿ ಮೃತಪಟ್ಟ ಘಟನೆ ನಡೆದಿದೆ. ಸುಂಕದಕಟ್ಟರ ನಿವಾಸಿ ಗೌತಮ್, ಹಲವು ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಅವರು ಟ್ರಾನ್ಸ್ ಫಾರ್ಮರ್ ದುರಸ್ತಿಗೆ ಹೋದಾಗ ಈ ಘಟನೆ ನಡೆದಿದೆ. ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಟ್ರಾನ್ಸ್ ಫಾರ್ಮರ್ ನಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿತ್ತು. ಸಾರ್ವಜನಿಕರು ನೀಡಿದ್ದ ಮಾಹಿತಿಯಂತೆ ಗೌತಮ್

➤ ಬೆಸ್ಕಾಂ ನೌಕರ ವಿದ್ಯುತ್ ತಗುಲಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪೋಷಕರ ಆಸ್ತಿ ಪಡೆದು ತಂದೆ ತಾಯಿಯನ್ನು ನಿರ್ಲಕ್ಷಿಸಿದ ಮಗಳು ➤ ಆಸ್ತಿ ದಾನ ಪತ್ರ ರದ್ದುಗೊಳಿಸಿದ ನಾಗರಿಕ ರಕ್ಷಣಾ ಕಾಯ್ದೆ!

(ನ್ಯೂಸ್ ಕಡಬ) newskadaba.com. ಮಡಿಕೇರಿ, ಜ. 21. ತಂದೆ ತಾಯಿಯರ ಯೋಗ ಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಇಲ್ಲಿನ ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದ  ಘಟನೆ ನಡೆದಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ ಬಿ.ಎಸ್.ಜಾನಕಿ ತಮ್ಮ ಹೆಸರಿನಲ್ಲಿ 0.15 ಎಕ್ರೆ ಆಸ್ತಿಯನ್ನು ಹೊಂದಿದ್ದರು. ಈ ಆಸ್ತಿಯನ್ನು ಅವರ ಎರಡನೇ ಮಗಳಾದ ಜಯಲಕ್ಷಿ ದಾನಪತ್ರದ ಮೂಲಕ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದರು. . ನಂತರದ ದಿನಗಳಲ್ಲಿ ಪೋಷಕರ ಯೋಗಕ್ಷೇಮ ನೋಡಿಕೊಳ್ಳದೆ ನಿರ್ಲಕ್ಷಿಸಿದರು.

ಪೋಷಕರ ಆಸ್ತಿ ಪಡೆದು ತಂದೆ ತಾಯಿಯನ್ನು ನಿರ್ಲಕ್ಷಿಸಿದ ಮಗಳು ➤ ಆಸ್ತಿ ದಾನ ಪತ್ರ ರದ್ದುಗೊಳಿಸಿದ ನಾಗರಿಕ ರಕ್ಷಣಾ ಕಾಯ್ದೆ! Read More »

ಕರ್ನಾಟಕ

ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ➤ ಸಿಎಂ ಬೊಮ್ಮಾಯಿ ಚಾಲನೆ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 20. ಗಣರಾಜ್ಯೋತ್ಸವದ ಸಲುವಾಗಿ ಪ್ರತಿ ವರ್ಷ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತದೆ. ಅದರಂತೆ ನಗರದ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ 11 ದಿನಗಳ ಕಾಲ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. 213ನೇ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ಚಾಲನೆ ನೀಡಲಿದ್ದಾರೆ. ಈ ಮೂಲಕ ಸಸ್ಯಕಾಶಿ ಲಾಲ್ ಬಾಗ್ ನಲ್ಲಿನ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಈ ಬಾರಿಯ ಲಾಲ್ ಬಾಗ್ ಫಲಪುಷ್ಪ

ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ➤ ಸಿಎಂ ಬೊಮ್ಮಾಯಿ ಚಾಲನೆ! Read More »

ಕರ್ನಾಟಕ

➤ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ➤ ಸಿಎಂ ಬೊಮ್ಮಾಯಿ ಚಾಲನೆ!

ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 20. ಗಣರಾಜ್ಯೋತ್ಸವದ ಸಲುವಾಗಿ ಪ್ರತಿ ವರ್ಷ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತದೆ. ಅದರಂತೆ ನಗರದ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ 11 ದಿನಗಳ ಕಾಲ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. 213ನೇ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ಚಾಲನೆ ನೀಡಲಿದ್ದಾರೆ. ಈ ಮೂಲಕ ಸಸ್ಯಕಾಶಿ ಲಾಲ್ ಬಾಗ್ ನಲ್ಲಿನ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಈ ಬಾರಿಯ ಲಾಲ್ ಬಾಗ್ ಫಲಪುಷ್ಪ

➤ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ➤ ಸಿಎಂ ಬೊಮ್ಮಾಯಿ ಚಾಲನೆ! Read More »

ಕರ್ನಾಟಕ
Scroll to Top