ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ ಬೆಸ್ಕಾಂ ನೌಕರ ವಿದ್ಯುತ್ ತಗುಲಿ ಮೃತ್ಯು..! – News Kadaba

➤ ಬೆಸ್ಕಾಂ ನೌಕರ ವಿದ್ಯುತ್ ತಗುಲಿ ಮೃತ್ಯು..!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 23.  ಬೆಂಗಳೂರು ದುರಸ್ತಿ ಕೆಲಸಕ್ಕೆಂದು ಟ್ರಾನ್ಸ್ ಫಾರ್ಮರ್ ಏರಿದ್ದ ಬೆಸ್ಕಾಂ ನೌಕರ ಗೌತಮ್ (25) ವಿದ್ಯುತ್ ತಗುಲಿ ಮೃತಪಟ್ಟ ಘಟನೆ ನಡೆದಿದೆ. ಸುಂಕದಕಟ್ಟರ ನಿವಾಸಿ ಗೌತಮ್, ಹಲವು ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಅವರು ಟ್ರಾನ್ಸ್ ಫಾರ್ಮರ್ ದುರಸ್ತಿಗೆ ಹೋದಾಗ ಈ ಘಟನೆ ನಡೆದಿದೆ.

ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಟ್ರಾನ್ಸ್ ಫಾರ್ಮರ್ ನಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿತ್ತು. ಸಾರ್ವಜನಿಕರು ನೀಡಿದ್ದ ಮಾಹಿತಿಯಂತೆ ಗೌತಮ್ ಹಾಗೂ ಸಿದ್ದರಾಮ್ ಎಂಬವರು ಸ್ಥಳಕ್ಕೆ ಹೋಗಿದ್ದು, ದುರಸ್ತಿ ಕೆಲಸದಲ್ಲಿ ನಿರತರಾಗಿದ್ದರು. ಇದೇ ವೇಳೆ ಇನ್ನೊಂದು ಟ್ರಾನ್ಸ್ ಫಾರ್ಮರ್  ತಂತಿಯಲ್ಲಿ ವಿದ್ಯುತ್ ಹರಿಯುತ್ತಿತ್ತು. ಅದು ಅವರ ಗಮನಕ್ಕೆ ಬಂದಿರಲಿಲ್ಲ. ಅದೇ ತಂತಿಯಿಂದಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Scroll to Top