ಕಡಬ ನ್ಯೂಸ್

➤ ಕುಡಿದು ಪೀಡಿಸುತ್ತಿದ್ದ ಮಗನನ್ನು ಕೊಂದ ತಂದೆ

(ನ್ಯೂಸ್ ಕಡಬ) newskadaba.com. ಬೆಳಗಾವಿ, ಮಾ 3. ಕೂಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ, ಆ ದಂಪತಿಗೆ ಎರಡು ಗಂಡು ಮಕ್ಕಳು ಇದ್ದಾರೆ. ಒಬ್ಬ ಓದುತ್ತಿದ್ದರೆ, ದೊಡ್ಡ ಮಗ ಕುಡಿತದ ಚಟಕ್ಕೆ ದಾಸನಾಗಿ ಹಣಕ್ಕಾಗಿ ತಂದೆ ತಾಯಿಯನ್ನ ಪೀಡಿಸುತ್ತಿದ್ದ. ಈ ಕಿರುಕುಳ ತಾಳಲಾರದೇ ತಂದೆಯೇ ಮಗನನ್ನ ಕೊಲೆ ಮಾಡಿದ್ದಾನೆ. ಬೆಳಗಾವಿ ದಿಕ್ಕು ತೋಚದ ಸ್ಥಿತಿಯಲ್ಲಿ ಕುಳಿತ ಈ ತಾಯಿಯ ಪರಿಸ್ಥಿತಿ ಯಾರಿಗೂ ಬಾರದಿರಲಿ. ಒಂದು ಕಡೆ ಗಂಡ ಜೈಲು ಸೇರಿದ್ದರೆ ಇನ್ನೊಂದು ಕಡೆ ಮಗ ಮಸಣ ಸೇರಿದ್ದಾನೆ. ಎನೂ […]

➤ ಕುಡಿದು ಪೀಡಿಸುತ್ತಿದ್ದ ಮಗನನ್ನು ಕೊಂದ ತಂದೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಕಡಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹರಡುತ್ತಿರುವ ಬೆಂಕಿ

(ನ್ಯೂಸ್ ಕಡಬ) newskadaba.com. ಬಂಟ್ವಾಳ, ಮಾ 3. ಕಡಬ, ಮಾ 03.  ಕಡಬ ತಾಲೂಕಿನ ನೆಲ್ಯಾಡಿ ಸಮೀಪದಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಕೆಲ  ದಿನಗಳಿಂದ ಹರಡುತ್ತಿರುವ ಬೆಂಕಿ ನಿಯಂತ್ರಣಕ್ಕೆ ಬಾರದೆ ಮತ್ತೆ ಮುಂದಕ್ಕೆ ಸಾಗುತ್ತಿದ್ದು, ಬೆಂಕಿ ನಂದಿಸಲು ಗ್ರಾಮಸ್ಥರು, ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಮೂರು ದಿನದ ಹಿಂದೆ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಸಿಬ್ಬಂದಿಗಳ ಜೊತೆಗೆ ಗ್ರಾಮಸ್ಥರು ಸಹಕರಿಸಿ ಬೆಂಕಿ ನಂದಿಸಿದ್ದರು. ಆದರೆ

➤ ಕಡಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹರಡುತ್ತಿರುವ ಬೆಂಕಿ Read More »

ಕರಾವಳಿ

➤ ಕರಾವಳಿಯಲ್ಲಿ 36.9 ಡಿಗ್ರಿ ಸೆ. ಉಷ್ಣಾಂಶ

ನ್ಯೂಸ್ ಕಡಬ) newskadaba.com. ಮಂಗಳೂರು. ಮಾ 3.ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ದಾಖಲೆಯತ್ತ ಸಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ ಗುರುವಾರ 36.9 ಡಿ. ಸೆ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ದೇಶದಲ್ಲಿಯೇ ಅತ್ಯಧಿಕವಾಗಿತ್ತು. ಅಲ್ಲದೇ ಇದು ವಾಡಿಕೆಗಿಂತ 3 ಡಿ.ಸೆ ಹೆಚ್ಚಳವಾಗಿದೆ. ಇದೇ ವೇಳೆ 23.8 ಡಿ.ಸೆ ಕನಿಷ್ಠ ತಾಪಮಾನ ದಾಖಲಾಗಿದ್ದು, 1 ಡಿ.ಸೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

➤ ಕರಾವಳಿಯಲ್ಲಿ 36.9 ಡಿಗ್ರಿ ಸೆ. ಉಷ್ಣಾಂಶ Read More »

ಕರಾವಳಿ

ಅಡಿಕೆ ಕೊಯ್ಯುವ ವೇಳೆ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com. ಕುಂದಾಪುರ, ಮಾ 3.  ಅಡಿಕೆ ಕೊಯ್ಯುವ ವೇಳೆ ಕಬ್ಬಿಣದ ಕೊಕ್ಕೆ ಹೈಟೆನ್ಯನ್ ವಯರ್ ನ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಕೊನ್ಕೆಯ ಅಂಗಡಿ ಮನೆಯಲ್ಲಿ ಇಂದು ನಡೆದಿದೆ. ಕೊನ್ಕೆಯ ಅಂಗಡಿ ಮನೆಯ ನಿವಾಸಿ ಭಜಂಗ ಶೆಟ್ಟಿ (59) ಸಾವನ್ನಪ್ಪಿದವರು. ತಮ್ಮದೇ ಮನೆಯ ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಡಿಕೆ ಕೊಯ್ಯುವ ವೇಳೆ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅರ್ಜೆಂಟೀನಾ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್ ಹೊಟ್ಟೆಯೊಳಗೆ ಪತ್ತೆ..!

(ನ್ಯೂಸ್ ಕಡಬ) newskadaba.com. ಅರ್ಜೆಂಟೀನಾ,  ಮಾ 3. ಕಳೆದ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ವ್ಯಕ್ತಿಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ. ಕೆಲವು ದಿನಗಳ ಹಿಂದೆ ಅರ್ಜೆಂಟೀನಾದ ದಕ್ಷಿಣ ಚುಬುಟ್ ಪ್ರಾಂತ್ಯದ ಕರಾವಳಿಯಲ್ಲಿ ತಿರುಗಾಟಕ್ಕೆ ಹೋಗಿದ್ದ 32 ವರ್ಷದ ಡಿಯಾಗೋ ಬರ್ರಿಯಾ ಎಂಬ ವ್ಯಕ್ತಿ ನಾಪತ್ತೆಯಾಗಿದ್ದನು. ಫೆಬ್ರವರಿ 20 ರಂದು, ರೋಕಾಸ್ ಕೊಲೊರಾಡಾಸ್ ಬಳಿಯ ಕಡಲತೀರದಲ್ಲಿ ಶೋಧ ತಂಡವು ಅವರ ವಾಹನವನ್ನು ಪತ್ತೆ ಮಾಡಿತ್ತು. ಹುಡುಕಾಟ ತಂಡವು ಬಾರ್ರಿಯಾ ಅವರ ಹೆಲ್ಮೆಟ್ ಅನ್ನು ಸಹ ಪತ್ತೆ ಮಾಡಿತ್ತು.

ಅರ್ಜೆಂಟೀನಾ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್ ಹೊಟ್ಟೆಯೊಳಗೆ ಪತ್ತೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಕಾಲೇಜಿನಲ್ಲಿ ಕಿರುಕುಳ ➤ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com. ಹೈದರಾಬಾದ್‌  ಮಾ.02.  ಕಾಲೇಜಿನಲ್ಲಿ ಕಿರುಕುಳ ತಾಳಲಾಗದೆ ʻಅಮ್ಮ ಐ ಲವ್​ ಯೂʼ –ಡೆತ್​​ನೋಟ್​​ ಬರೆದಿಟ್ಟು ವಿದ್ಯಾರ್ಥಿಆತ್ಮಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್​ನ ಶ್ರೀ ಚೈತನ್ಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ, ವಿದ್ಯಾರ್ಥಿಯೊಬ್ಬನಿಗೆ ಉಪನ್ಯಾಸಕರ ಪದೇ ಪದೇ ನೀನು ಫೈಲ್​ ಆಗಿದ್ದೀಯಾ ಅಂತ ಹೀಯಾಳಿಸುತ್ತಿದ್ದರು. ಅಷ್ಟೆ ಅಲ್ಲದೇ ಆತನಿಗೆ ಚಿತ್ರಹಿಂಸೆ ನೀಡುತ್ತಾ ಆತನಿಗೆ ಹೆಚ್ಚು ಒತ್ತಡ ಹಾಕುತ್ತಿದ್ದರು. ಇದಕ್ಕೆ ಬೇಸತ್ತ ಯುವಕ ಅಮ್ಮ ಐ ಲವ್​ ಯೂ -ಡೆತ್​​ನೋಟ್​​ ಬರೆದಿಟ್ಟು ವಿದ್ಯಾರ್ಥಿಆತ್ಮಹತ್ಯೆ ಶರಣಾಗಿದ್ದಾನೆ. ಮೃತಪಟ್ಟ

ಕಾಲೇಜಿನಲ್ಲಿ ಕಿರುಕುಳ ➤ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ! Read More »

ಕ್ರೈಮ್ ನ್ಯೂಸ್

➤ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

(ನ್ಯೂಸ್ ಕಡಬ) newskadaba.com. ಬೆಂಗಳೂರು. ಮಾ.02.  ಬಾಲಿವುಡ್ ನಟಿ, ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅವರಿಗೆ ಹೃದಯಾಘಾತ ಸಂಭವಿಸಿದೆ. 47 ವರ್ಷದ ಸುಶ್ಮಿತಾ ಸೇನ್ ಹೃದಯಾಘಾತಕ್ಕೊಳಗಾಗಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಸದ್ಯ ಸುಶ್ಮಿತಾ ಸೇನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ  ತಿಳಿದು ಬಂದಿದೆ.

➤ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ Read More »

ರಾಷ್ಟ್ರೀಯ ನ್ಯೂಸ್

➤ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಕೊಟ್ಟು ಕೊಂದ ಪಾಪಿ ಪತಿ

(ನ್ಯೂಸ್ ಕಡಬ) newskadaba.com. ಬೆಂಗಳೂರು. ಮಾ.02.  ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ  ಘಟನೆ ಕೋಣನಕುಂಟೆಯಲ್ಲಿ ನಡೆದಿದೆ.  ವಿಜಯ (28) ನಿಷಾ(7)  ದೀಕ್ಷಾ(5) ಮೃತ ಪಟ್ಟವರು . ಪತಿ ನಾಗೇಂದ್ರ  ವಿಷ ಬೆರೆಸಿದ ಊಟವನ್ನು ನೀಡಿದ್ದು, ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿಯೇ ನರಳಾಡಿ ಸಾವನ್ನಪ್ಪಿದ್ದಾರೆ.  ಬಳಿಕ ನಾಗೇಂದ್ರ  ಆತ್ಮಹತ್ಯೆಗೆ ಯತ್ನಿಸಿದ್ದಾನೆ.   ಇನ್ನು ಪತಿ ನಾಗೇಶ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

➤ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಕೊಟ್ಟು ಕೊಂದ ಪಾಪಿ ಪತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೇಮ 70ರ ವೃದ್ಧೆಯನ್ನು ವರಿಸಿದ 75ರ ವೃದ್ಧ

(ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ.  ಮಾ.02. ಮಹಾರಾಷ್ಟ್ರದ ಜಾನಕಿ ವೃದ್ಧಾಶ್ರಮದಲ್ಲಿ ಹುಟ್ಟಿದ  ಅಪರೂಪದ ಪ್ರೇಮ ಕಥೆ. ತನ್ನ ಪತ್ನಿಯನ್ನು ಕಳೆದುಕೊಂಡು ಕಳೆದ ಕೆಲ ವರ್ಷಗಳಿಂದ  ಜಾನಕಿ ವೃದ್ಧಾಶ್ರಮದಲ್ಲಿ ವಾಸವಿದ್ದ ಬಾಬುರಾವ್ ಪಾಟೀಲ್ ಮತ್ತು ಅದೇ ವೃದ್ಧಾಶ್ರಮದಲ್ಲಿ ವಾಸವಿದ್ದ 70ರ  ಅನಸೂಯ ಶಿಂಧೆ ಮದುವೆಯಾಗಿದು, ಒಂಟಿತನವನ್ನು ದೂರಮಾಡಿದ್ದಾರೆ. ಈ ಇಬ್ಬರ ಮದುವೆಯನ್ನು ಆಶ್ರಮದಲ್ಲೇ ಎಲ್ಲರೂ ಸೇರುಕೊಂಡು ಮಾಡಿದ್ದಾರೆ. ಹಿರಿ ವಯಸ್ಸಿನಲ್ಲಿ ಪರಸ್ಪರ ಜೊತೆಯಾಗಿ ಇರುವ ಕಾರಣದಿಂದ ಮದುವೆಯಾಗಿದ್ಧೇವೆ ಎನ್ನುವುದು ನೂತನ ದಂಪತಿಯ ಮಾತು.

➤ ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೇಮ 70ರ ವೃದ್ಧೆಯನ್ನು ವರಿಸಿದ 75ರ ವೃದ್ಧ Read More »

ರಾಷ್ಟ್ರೀಯ ನ್ಯೂಸ್

➤ ಟಿಕೆಟ್ ಇಲ್ಲದೆ ರೈಲು ಪ್ರಯಾಣ ರೂ. 100 ಕೋಟಿ ದಂಡ ಸಂಗ್ರಹ

ನ್ಯೂಸ್ ಕಡಬ) newskadaba.com. ಮುಂಬೈ, ಮಾ.2.  ರೈಲ್ವೇ ಅಧಿಕಾರಿಗಳು ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣಿಸುವರಿಗೆ ಭಾರಿ ದಂಡ ವಿಧಿಸಿದ್ದಾರೆ. ಸೆಂಟ್ರಲ್ ರೈಲ್ವೇ ಟಿಕೆಟ್ ರಹಿತ ರೈಲ್ವೇ ಪ್ರಯಾಣಿಕರಿಂದ ರೂ.100 ಕೋಟಿ ದಂಡ ಸಂಗ್ರಹಿಸಿದೆ. ಕಳೆದ ವರ್ಷ ಎಪ್ರಿಲ್ ನಿಂದ  ಈ ವರ್ಷದ ಫೆಬ್ರವರಿ ಅಂತ್ಯದವರೆಗೆ 100 ಕೋಟಿ  ಮೊತ್ತದ ದಂಡವನ್ನು ಸಂಗ್ರಹಿಸಲಾಗಿದೆ. ಎಂದು ತಿಳಿದು ಬಂದಿದೆ.

➤ ಟಿಕೆಟ್ ಇಲ್ಲದೆ ರೈಲು ಪ್ರಯಾಣ ರೂ. 100 ಕೋಟಿ ದಂಡ ಸಂಗ್ರಹ Read More »

ರಾಷ್ಟ್ರೀಯ ನ್ಯೂಸ್
Scroll to Top