➤ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಕೊಟ್ಟು ಕೊಂದ ಪಾಪಿ ಪತಿ

(ನ್ಯೂಸ್ ಕಡಬ) newskadaba.com. ಬೆಂಗಳೂರು. ಮಾ.02.  ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ  ಘಟನೆ ಕೋಣನಕುಂಟೆಯಲ್ಲಿ ನಡೆದಿದೆ.  ವಿಜಯ (28) ನಿಷಾ(7)  ದೀಕ್ಷಾ(5) ಮೃತ ಪಟ್ಟವರು .

ಪತಿ ನಾಗೇಂದ್ರ  ವಿಷ ಬೆರೆಸಿದ ಊಟವನ್ನು ನೀಡಿದ್ದು, ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿಯೇ ನರಳಾಡಿ ಸಾವನ್ನಪ್ಪಿದ್ದಾರೆ.  ಬಳಿಕ ನಾಗೇಂದ್ರ  ಆತ್ಮಹತ್ಯೆಗೆ ಯತ್ನಿಸಿದ್ದಾನೆ.   ಇನ್ನು ಪತಿ ನಾಗೇಶ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

Scroll to Top