ಪಾಕ್‌ನಿಂದ ಸಂಭಾವ್ಯ ದಾಳಿ ಮುನ್ಸೂಚನೆ – ಚಂಢೀಗಡದಲ್ಲಿ ಸೈರನ್ ಮೊಳಗಿಸಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com, ಮೇ.09: ಸೇನೆ ದಾಳಿ ಮಾಡುವ ಮುನ್ಸೂಚನೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ವಾಯು ಸೇನೆಯ ಸೂಚನೆಯಂತೆ ಚಂಢೀಗಡದಲ್ಲಿ ಸೈರನ್ ಮೊಳಗಿಸಲಾಗಿದೆ. ಜನರು ರಸ್ತೆಗಳಲ್ಲಿ ಓಡಾಡದಂತೆ, ಬಾಲ್ಕನಿಗಳಲ್ಲೂ ಕಾಣಿಸಿಕೊಳ್ಳದಂತೆ ಸೂಚನೆ ನೀಡಲಾಗಿದೆ. ಗುರುವಾರ ರಾತ್ರಿ ಪಂಜಾಬ್, ಚಂಡೀಗಢದ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಸೇನೆ ಪಾಕಿಸ್ತಾನದ ಕ್ಷಿಪಣಿ, ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು.

ಪಾಕ್‌ನಿಂದ ಸಂಭಾವ್ಯ ದಾಳಿ ಮುನ್ಸೂಚನೆ – ಚಂಢೀಗಡದಲ್ಲಿ ಸೈರನ್ ಮೊಳಗಿಸಿ ಎಚ್ಚರಿಕೆ Read More »

ಬ್ರೇಕಿಂಗ್ ನ್ಯೂಸ್

ಸಲಾಲ್, ಬಾಗ್ಲಿಹಾರ್ ಅಣೆಕಟ್ಟಿನಿಂದ ನೀರು ಬಿಟ್ಟ ಭಾರತ- ಪಾಕ್‌ ಗೆ ಪ್ರವಾಹ ಭೀತಿ

(ನ್ಯೂಸ್ ಕಡಬ) newskadaba.com, ಮೇ.09: ಭಾರತ ಸಲಾಲ್ ಹಾಗೂ ಬಾಗ್ಲಿಹಾರ್​ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿದ್ದು, ಪಾಕ್‌ಗೆ ಪ್ರವಾಹ ಭೀತಿ ಎದುರಾಗಿದೆ. ಈಗ ಭಾರತ ಪಾಕಿಸ್ತಾನದ ವಿರುದ್ಧ ಜಲದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮೇ 6-7ರ ರಾತ್ರಿ ಭಾರತ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿತ್ತು. ಗುರುವಾರವೂ ಭಾರತವು ಲಾಹೋರ್ ಮತ್ತು

ಸಲಾಲ್, ಬಾಗ್ಲಿಹಾರ್ ಅಣೆಕಟ್ಟಿನಿಂದ ನೀರು ಬಿಟ್ಟ ಭಾರತ- ಪಾಕ್‌ ಗೆ ಪ್ರವಾಹ ಭೀತಿ Read More »

ಬ್ರೇಕಿಂಗ್ ನ್ಯೂಸ್

ಗಣಿಗಾರಿಕೆ ಹಗರಣ: ಶಿಕ್ಷೆಗೊಳಗಾದ ಜನಾರ್ದನ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹ

(ನ್ಯೂಸ್ ಕಡಬ) newskadaba.com, ಮೇ.09: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಗಣಿ ದೊರೆ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಮೇ 8 ರಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಅನರ್ಹತೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಗಣಿಗಾರಿಕೆ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಹೈದರಾಬಾದ್ ಸಿಬಿಐ ಕೋರ್ಟ್, ಏಳು ವರ್ಷಗಳ ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಇದರಿಂದ ಶಾಸಕ ಸ್ಥಾನ ಉಳಿಸಿಕೊಳ್ಳಲು ಶಿಕ್ಷೆ ಕಡಿಮೆ ಮಾಡಿ ಎಂದು ರೆಡ್ಡಿ

ಗಣಿಗಾರಿಕೆ ಹಗರಣ: ಶಿಕ್ಷೆಗೊಳಗಾದ ಜನಾರ್ದನ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹ Read More »

ಕರ್ನಾಟಕ

ದೇಶಾದ್ಯಂತ ಹೈಅಲರ್ಟ್‌ – 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಸ್ಥಗಿತ

(ನ್ಯೂಸ್ ಕಡಬ) newskadaba.com, ಮೇ.09: ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ದೇಶಾದ್ಯಂತ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಹಲವು ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣದ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯನ್ನು ಮಾಡಿಕೊಳ್ಳುವಂತೆ ತಿಳಿಸಿವೆ. ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ

ದೇಶಾದ್ಯಂತ ಹೈಅಲರ್ಟ್‌ – 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಸ್ಥಗಿತ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

(ನ್ಯೂಸ್ ಕಡಬ) newskadaba.com, ಮೇ.09: ಇಸ್ಲಾಮಾಬಾದ್: ಭಾರತದ ಸೇನಾ ನೆಲೆಗಳನ್ನು ಟಾರ್ಗೆಟ್‌ ಮಾಡಿದ್ದ ಪಾಕ್‌ಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಕರಾಚಿಯ 15 ಕಡೆ ಭಾರತವು ಭಾರೀ ದಾಳಿ ನಡೆಸಿದೆ. ಐಎನ್‌ಎಸ್‌ ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌ ಮಾಡಲಾಗಿದೆ. 1971 ರ ಬಳಿಕ ಕರಾಚಿ ಮೇಲೆ ಭಾರತ ದಾಳಿ ಮಾಡಿದೆ. ಕರಾಚಿ ಬಂದರನ್ನು ಭಾರತೀಯ ನೌಕಾಪಡೆ ನಾಶಪಡಿಸಿದೆ. ಪಾಕ್ ವಿರುದ್ಧ ವಿಶ್ವದ 10ನೇ ಅತಿದೊಡ್ಡ ಹಡಗು ಐಎನ್‌ಎಸ್‌ ವಿಕ್ರಾಂತ್ ಅಖಾಡಕ್ಕಿಳಿದಿದೆ. ಯುದ್ಧನೌಕೆಗಳು ನಿಯೋಜನೆಯಾಗಿವೆ.

ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌ Read More »

ಬ್ರೇಕಿಂಗ್ ನ್ಯೂಸ್

ಭದ್ರತಾ ಪಡೆಗಳ ಕಾರ್ಯಾಚರಣೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಶಕ್ಕೆ

(ನ್ಯೂಸ್ ಕಡಬ) newskadaba.com, ಮೇ.06: ಐಎಸ್‌ಐ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಮಂಗಳವಾರ ಕಾರ್ಯಾಚರಣೆ ನಡೆಸಿದ ಪಂಜಾಬ್ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್‌ಬಿಎಸ್ ನಗರದ ಟಿಬ್ಬಾ ನಂಗಲ್-ಕುಲಾರ್ ರಸ್ತೆಯ ಬಳಿಯ ಅರಣ್ಯ ಪ್ರದೇಶದಲ್ಲಿ ಪಂಜಾಬ್ ಪೊಲೀಸರು ಮತ್ತು ಕೇಂದ್ರ ತನಿಖಾ ದಳದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಎರಡು ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ), ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ), ಐದು ಪಿ-86 ಹ್ಯಾಂಡ್ ಗ್ರೆನೇಡ್‌ಗಳು, ಒಂದು ಮೊಬೈಲ್

ಭದ್ರತಾ ಪಡೆಗಳ ಕಾರ್ಯಾಚರಣೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಶಕ್ಕೆ Read More »

ಬ್ರೇಕಿಂಗ್ ನ್ಯೂಸ್

ಜೇಮ್ಸ್, ಜೆಲ್ಲಿಸ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ; ಟೆಸ್ಟ್ಗೆ ಮುಂದಾದ ಆಹಾರ ಇಲಾಖೆ

(ನ್ಯೂಸ್ ಕಡಬ) newskadaba.com, ಮೇ.06: ಮಕ್ಕಳಿಗೆ ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ ಬಹಳ ಅಚ್ಚುಮೆಚ್ಚು. ಆದರೆ ಇವುಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದ್ದು, ಇವುಗಳನ್ನು ಮಕ್ಕಳಿಗೆ ನೀಡುವ ಮುನ್ನ ಪೋಷಕರು ಎಚ್ಚರಿಕೆ ವಹಿಸುವಂತೆ ಆಹಾರ ಇಲಾಖೆ ತಿಳಿಸಿದೆ. ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್‌ಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಜೊತೆಗೆ

ಜೇಮ್ಸ್, ಜೆಲ್ಲಿಸ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ; ಟೆಸ್ಟ್ಗೆ ಮುಂದಾದ ಆಹಾರ ಇಲಾಖೆ Read More »

ಬ್ರೇಕಿಂಗ್ ನ್ಯೂಸ್

ಜಾತಿ ಜನಗಣತಿ ಕುರಿತು ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

(ನ್ಯೂಸ್ ಕಡಬ) newskadaba.com, ಮೇ.06: ಸರ್ಕಾರದ ಜಾತಿ ಜನಗಣತಿ ನಿರ್ಧಾರದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತೆಲಂಗಾಣ ಮಾದರಿಯನ್ನು ಬಳಸಿಕೊಳ್ಳುವಂತೆ ಮತ್ತು ಈ ವಿಷಯದ ಬಗ್ಗೆ ಶೀಘ್ರದಲ್ಲೇ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ಖರ್ಗೆ ಅವರು, ಸಾಂವಿಧಾನಿಕ ತಿದ್ದುಪಡಿಯ ಮೂಲಕ ಮೀಸಲಾತಿಯ ಮೇಲಿನ ಶೇ. 50 ರ ಮಿತಿಯನ್ನು ತೆಗೆದುಹಾಕಬೇಕು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ,

ಜಾತಿ ಜನಗಣತಿ ಕುರಿತು ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ Read More »

ಕರ್ನಾಟಕ
Death, deadbody, Waterfall

ಪಾಣೆಮಂಗಳೂರು : ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ – ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com, ಮೇ.06: ರೈಲ್ವೆ ಮೇಲ್ಸೇತುವೆಯ ಅಡಿಭಾಗದಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ. ಸುಮಾರು 40-45 ವರ್ಷ ವಯಸ್ಸಿನ ಗಂಡಸಿನ ಮೃತದೇಹ ಇದಾಗಿದೆ ಎನ್ನಲಾಗಿದೆ. ಈ ಬಗ್ಗೆ ತಲಪಾಡಿ-ಪೊನ್ನೋಡಿ ನಿವಾಸಿ ಪ್ರಥಮ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರಿನಲ್ಲಿ ಏರ್ ಕಂಡೀಷನ್ ಟೆಕ್ನಿಶಿಯನ್ ಆಗಿರುವ ಇವರು ಕೆಲಸಕ್ಕೆ ರಜೆ ಇದ್ದುದರಿಂದ ಸಂಜೆ ವೇಳೆ ಬಿ. ಮೂಡ ಗ್ರಾಮದ ಕೈಕುಂಜೆ ರೈಲ್ವೆ ಹಳಿಯ ಬ್ರಿಡ್ಜ್ ಮೇಲೆ ನಂದಾವರಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಮಯ ನೇತ್ರಾವತಿ

ಪಾಣೆಮಂಗಳೂರು : ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ – ಪ್ರಕರಣ ದಾಖಲು Read More »

ಕರಾವಳಿ

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಳೆ ಮಾಕ್ ಡ್ರಿಲ್

(ನ್ಯೂಸ್ ಕಡಬ) newskadaba.com, ಮೇ.06: ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಭರ್ಜರಿ ತಾಲೀಮು ನಡೆಸಿದೆ. ಹೀಗಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಮಾಕ್​ ಡ್ರಿಲ್ ಮಾಡಲು ಆದೇಶಿಸಿದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾಕ್​ ಡ್ರಿಲ್​​ ಮಾಡಲಾಗುತ್ತಿದೆ.ಇತ್ತ ಕರ್ನಾಟಕದಲ್ಲಿ ಕೂಡ ಮಾಕ್​ ಡ್ರಿಲ್​​ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ನಾಳೆ ಮಾಕ್​ ಡ್ರಿಲ್​ಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬರುತ್ತದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿದ್ದಾರೆ. ಅಗ್ನಿಶಾಮಕ

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಳೆ ಮಾಕ್ ಡ್ರಿಲ್ Read More »

ಕರ್ನಾಟಕ
Scroll to Top