ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ 1317.61 ಕೋಟಿ ರೂ.ನಷ್ಟು ಇಳಿಕೆ

(ನ್ಯೂಸ್ ಕಡಬ) newskadaba.com, ಮೇ.06: ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತಿಂಗಳಾದ ಏಪ್ರಿಲ್ ನಲ್ಲಿ 8560.86 ಕೋಟಿ ರೂ. ಮಾತ್ರ ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚು ಇಳಿಕೆಯಾಗಿರುವುದು ಕಂಡುಬಂದಿದೆ. ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ ಕಳೆದ 2024ರ ಏಪ್ರಿಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ 7677.87 ಕೋಟಿ ರೂ., ಕರ್ನಾಟಕ ಮಾರಾಟ ತೆರಿಗೆ 1811.32 ಕೋಟಿ ರೂ. ಹಾಗೂ ವೃತ್ತಿ […]

ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ 1317.61 ಕೋಟಿ ರೂ.ನಷ್ಟು ಇಳಿಕೆ Read More »

ಕರ್ನಾಟಕ

‘ಭಾರತ ಯಾವುದೇ ಸಮಯದಲ್ಲಿ ಬೇಕಾದರೂ ದಾಳಿ ನಡೆಸಬಹುದು’- ಪಾಕ್ ರಕ್ಷಣಾ ಸಚಿವ

(ನ್ಯೂಸ್ ಕಡಬ) newskadaba.com, ಮೇ.06: ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಯಾವುದೇ ಸಮಯದಲ್ಲಿ ಬೇಕಾದರೂ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಿಳಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ಎಲ್‌ಒಸಿಯಲ್ಲಿ ಭಾರತ ಯಾವುದೇ ಸ್ಥಳದ ಮೇಲೆ ದಾಳಿ ಮಾಡಬಹುದು ಎಂಬ ವರದಿಗಳಿವೆ. ಸೂಕ್ತ ಪ್ರತ್ಯುತ್ತರ ನೀಡಲಾಗುವುದು, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಅವರು, ರಾಜಕೀಯ ಲಾಭಕ್ಕಾಗಿ ಈ

‘ಭಾರತ ಯಾವುದೇ ಸಮಯದಲ್ಲಿ ಬೇಕಾದರೂ ದಾಳಿ ನಡೆಸಬಹುದು’- ಪಾಕ್ ರಕ್ಷಣಾ ಸಚಿವ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಟೈಗರ್ಸ್ ಔಟ್‌ಸೈಡ್ ಟೈಗರ್ ರಿಸರ್ವ್ಸ್’ ಯೋಜನೆ ಜಾರಿಗೆ ಕೇಂದ್ರ ಸಜ್ಜು

(ನ್ಯೂಸ್ ಕಡಬ) newskadaba.com, ಮೇ.06: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ‘ಟೈಗರ್ಸ್ ಔಟ್‌ಸೈಡ್ ಟೈಗರ್ ರಿಸರ್ವ್ಸ್’ ಎಂಬ ಯೋಜನೆಯನ್ನು ಜಾರಿಗೆ ತರಲು ಕೇಂದ್ರವು ಸಜ್ಜಾಗಿದೆ. ಹುಲಿಗಳ ಬೇಟೆಯನ್ನು ತಡೆಯುವ ಮತ್ತು ಹುಲಿ ಮೀಸಲು ಪ್ರದೇಶದ ಹೊರಗಿನ ಪ್ರದೇಶಗಳಲ್ಲಿ ಹುಲಿಗಳ ಸಂರಕ್ಷಣೆ ಕುರಿತು ಯೋಜನೆಯನ್ನು ರೂಪಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಇತ್ತೀಚೆಗೆ ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ ಎಂದು ತಿಳಿದುಬಂದಿದೆ. ಮಾನವ-ಪ್ರಾಣಿ ಸಂಘರ್ಷದ ನಿದರ್ಶನಗಳನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ.

‘ಟೈಗರ್ಸ್ ಔಟ್‌ಸೈಡ್ ಟೈಗರ್ ರಿಸರ್ವ್ಸ್’ ಯೋಜನೆ ಜಾರಿಗೆ ಕೇಂದ್ರ ಸಜ್ಜು Read More »

ಬ್ರೇಕಿಂಗ್ ನ್ಯೂಸ್

ಅಣು ಬಾಂಬ್ ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ

(ನ್ಯೂಸ್ ಕಡಬ) newskadaba.com, ಮೇ.06: ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗಿನ ಉದ್ವಿಗ್ನತೆಯ ಮಧ್ಯೆ ಕಳೆದ ರಾತ್ರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಚ್ಚಿದ ಬಾಗಿಲಿನ ಸಮಾಲೋಚನೆಯಲ್ಲಿ ಪಾಕಿಸ್ತಾನವು ಕಠಿಣ ಪ್ರಶ್ನೆಗಳನ್ನು ಎದುರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು 25 ಪ್ರವಾಸಿಗರು ಮತ್ತು ಕಾಶ್ಮೀರಿ ಕುದುರೆ ಸವಾರಿ ಆಪರೇಟರ್ ಅನ್ನು ಭಯೋತ್ಪಾದಕರು ಕೊಂದ ಪಹಲ್ಲಾಮ್ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಭಾಗಿಯಾಗಿರುವ ಬಗ್ಗೆ ಯುಎಎನ್ಎಸ್ಸಿ ಸದಸ್ಯರು ಇಸ್ಲಾಮಾಬಾದ್ ಅನ್ನು ಪ್ರಶ್ನಿಸಿದ್ದಾರೆ.

ಅಣು ಬಾಂಬ್ ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ Read More »

ಬ್ರೇಕಿಂಗ್ ನ್ಯೂಸ್

ಹುಬ್ಬಳ್ಳಿ ಭೀಕರ ಅಪಘಾತ : ಕಾರಿಗೆ ಲಾರಿ ಡಿಕ್ಕಿಯಾಗಿ 5 ಮಂದಿ ಸ್ಥಳದಲ್ಲೇ ಸಾವು

(ನ್ಯೂಸ್ ಕಡಬ) newskadaba.com, ಮೇ.06: ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐದು ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ವೇತಾ (29) ಅಂಜಲಿ (26) ಸಂದೀಪ್ (26), ವಿಠಲ್ (55) ಹಾಗೂ ಶಶಿಕಲಾ (40) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 8.30 ರ ಸುಮಾರಿನಲ್ಲಿ ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ ಕಾರಿನಲ್ಲಿ

ಹುಬ್ಬಳ್ಳಿ ಭೀಕರ ಅಪಘಾತ : ಕಾರಿಗೆ ಲಾರಿ ಡಿಕ್ಕಿಯಾಗಿ 5 ಮಂದಿ ಸ್ಥಳದಲ್ಲೇ ಸಾವು Read More »

ಕರ್ನಾಟಕ

ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com, ಮೇ.06: ರಾಜ್ಯದಲ್ಲಿ ಹಲವೆಡೆ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮೇ 6ರಂದು ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮರಾಠವಾಡದಿಂದ ದಕ್ಷಿಣ ತಮಿಳುನಾಡಿವರೆಗೆ

ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಮಳೆ ಸಾಧ್ಯತೆ Read More »

ಕರ್ನಾಟಕ

ಬುಡ್ಗಾಮ್ನ ಚೆಕ್ಪಾಯಿಂಟ್ನಲ್ಲಿ ಇಬ್ಬರು ಭಯೋತ್ಪಾದಕ ಸಹಚರರ ಬಂಧನ

(ನ್ಯೂಸ್ ಕಡಬ) newskadaba.com, ಮೇ.06: 26 ಜನರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ಕೆಲವು ದಿನಗಳ ನಂತರ, ಬುಡ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶ್ರೀನಗರದ ಹೊರವಲಯದಲ್ಲಿರುವ ಬುಚ್‌ಪೋರಾ ಪಟ್ಟಣದಲ್ಲಿ ನಾಕಾ ತಪಾಸಣೆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದೆ. ಪೂಂಚ್‌ನಲ್ಲಿ ಭಯೋತ್ಪಾದಕ ಅಡಗುತಾಣವನ್ನು ಪತ್ತೆಹಚ್ಚಲಾಗಿದೆ. ಪೂಂಚ್ ಜಿಲ್ಲೆಯ ಸುರನ್‌ಕೋಟ್ ಸೆಕ್ಟರ್‌ನ ಹರಿ ಮರೋಟೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು

ಬುಡ್ಗಾಮ್ನ ಚೆಕ್ಪಾಯಿಂಟ್ನಲ್ಲಿ ಇಬ್ಬರು ಭಯೋತ್ಪಾದಕ ಸಹಚರರ ಬಂಧನ Read More »

ಬ್ರೇಕಿಂಗ್ ನ್ಯೂಸ್

ಮೇ 7ರಂದು ಯುದ್ಧ ಕಾಲದ ಮಾಕ್ ಡ್ರಿಲ್

(ನ್ಯೂಸ್ ಕಡಬ) newskadaba.com, ಮೇ.06: ಭಾರತ-ಪಾಕಿಸ್ತಾನ ಯುದ್ಧೋನ್ಮಾದ ನಡುವೆ ಗೃಹ ಇಲಾಖೆ ಹಲವು ರಾಜ್ಯಗಳಿಗೆ ಮೇ 7ರಂದು ಮಿಲಿಟರಿ ಅಣಕು ಪ್ರದರ್ಶನ ನಡೆಸುವಂತೆ ಸೂಚಿಸಿದೆ. ಅದರಂತೆ ವಾಯುದಾಳಿ ವೇಳೆ ಸೈರನ್ ಮೊಳಗಿಸುವುದು, ಶತ್ರುಗಳ ದಾಳಿ ವೇಳೆ ಆತ್ಮರಕ್ಷಣೆ ಬಗ್ಗೆ ವಿದ್ಯಾರ್ಥಿಗಳು, ನಾಗರಿಕರಿಗೆ ಅಗತ್ಯ ತರಬೇತಿ, ಅತಿಕಡಿಮೆ ಬೆಳಕಿನ ಬಳಕೆ ಮೂಲಕ ಬ್ಲ್ಯಾಕ್‌ಔಟ್‌ಗೆ ಸಹಕರಿಸುವುದು, ಪ್ರಮುಖ ಸ್ಥಾವರಗಳ ಇರುವಿಕೆ ಮರೆಮಾಚುವುದು, ರಕ್ಷಣಾ ಕಾರ್ಯಾಚರಣೆ-ಪೂರ್ವಾಭ್ಯಾಸ ಹೀಗೆ ಶತ್ರುಗಳ ಚಲನವಲನದಿಂದ ತಪ್ಪಿಸಿಕೊಳ್ಳುವುದು & ಸುರಕ್ಷತೆಗೆ ಪೂರಕವಾಗಿ ಈ ಅಣಕು ಡ್ರಿಲ್ ನಡೆಯಲಿದೆ

ಮೇ 7ರಂದು ಯುದ್ಧ ಕಾಲದ ಮಾಕ್ ಡ್ರಿಲ್ Read More »

ಬ್ರೇಕಿಂಗ್ ನ್ಯೂಸ್

ಪಹಲ್ಗಾಮ್ ದಾಳಿ ಖಂಡಿಸಿ ಜರ್ಮನಿಯಲ್ಲಿ ಶಾಂತಿಯುತ ಮೆರವಣಿಗೆ- ಒಗ್ಗಟ್ಟಿನ ಸಂದೇಶ ಸಾರಿದ ಭಾರತೀಯರು!

(ನ್ಯೂಸ್ ಕಡಬ) newskadaba.com, ಮೇ.05: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಸ್ಮರಣಾರ್ಥ ಸ್ಟಟ್​ಗಾರ್ಟ್​ನಲ್ಲಿ ಭಾರತೀಯ ಸಮುದಾಯವು ಶಾಂತಿಯುತ ಮೆರವಣಿಗೆಯನ್ನು ನಡೆಸಿತು. ಭಾರತೀಯ ಪರಿವಾರ್ ಬಿಡಬ್ಲ್ಯೂ ಬ್ಯಾನರ್ ಅಡಿಯಲ್ಲಿ, ಸ್ಟಟ್‌ಗಾರ್ಟ್‌ನಲ್ಲಿರುವ ಭಾರತೀಯ ವಲಸಿಗರು, ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳಿಗೆ ಗೌರವ ಸಲ್ಲಿಸಲು ಸ್ಕ್ಲೋಸ್‌ಪ್ಲಾಟ್ಜ್‌ನಲ್ಲಿ ಶಾಂತಿಯುತ ಮೆರವಣಿಗೆಯನ್ನು ಭಾನುವಾರ ಆಯೋಜಿಸಿದ್ದರು. ಸಂಜೆ 5 ಗಂಟೆಗೆ ಭಾರತೀಯ ಸಮುದಾಯದ 300 ಕ್ಕೂ ಹೆಚ್ಚು ಸದಸ್ಯರ ಆಗಮನದೊಂದಿಗೆ ಪ್ರಾರಂಭವಾಯಿತು. ಎಲ್ಲಾ

ಪಹಲ್ಗಾಮ್ ದಾಳಿ ಖಂಡಿಸಿ ಜರ್ಮನಿಯಲ್ಲಿ ಶಾಂತಿಯುತ ಮೆರವಣಿಗೆ- ಒಗ್ಗಟ್ಟಿನ ಸಂದೇಶ ಸಾರಿದ ಭಾರತೀಯರು! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಶ್ಮೀರದ ಜೈಲುಗಳ ಮೇಲೆ ದಾಳಿಗೆ ಉಗ್ರರ ಸಂಚು

(ನ್ಯೂಸ್ ಕಡಬ) newskadaba.com, ಮೇ.05: ಶ್ರೀನಗರ:  ಜಮು ಮತ್ತು ಕಾಶೀರದ ಜೈಲುಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿದೆ. ಪಹಲ್ಗಾಮ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರವಾಸಿಗರ ಮಾರಣಹೋಮದ ಬೆನ್ನಲ್ಲೇ ಉಗ್ರರು ಕಣಿವೆ ರಾಜ್ಯದಲ್ಲಿ ಮತ್ತೆ ಡೆಡ್ಲಿ ಅಟ್ಯಾಕ್‌ಗೆ ಸಂಚು ರೂಪಿಸಿರುವುದು ಬಯಲಾಗಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಮೂಲಗಳು ನೀಡಿದ್ದು, ಹೈ ಪೊಫೈಲ್‌ ಭಯೋತ್ಪಾದಕರು ಮತ್ತು ಶಂಕಿತ ಉಗ್ರರನ್ನು ಇರಿಸಿರುವ ಹಲವಾರು ಜೈಲುಗಳು ಭಯೋತ್ಪಾದಕ ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿವೆ. ಇದರಿಂದಾಗಿ

ಕಾಶ್ಮೀರದ ಜೈಲುಗಳ ಮೇಲೆ ದಾಳಿಗೆ ಉಗ್ರರ ಸಂಚು Read More »

ಬ್ರೇಕಿಂಗ್ ನ್ಯೂಸ್
Scroll to Top