ಕಡಬ: ಇಬ್ಬರು ಹೆಡ್ ಕಾನ್ಸ್ಟೇಬಲ್ ಹಾಗೂ ನಾಲ್ವರು ಕಾನ್ಸ್ಟೇಬಲ್ ಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಜೂ. 12. ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಡಬ ಠಾಣೆಯಿಂದ ಇಬ್ಬರು ಹೆಡ್ ಕಾನ್ಸ್ಟೇಬಲ್ ಗಳು ಹಾಗೂ ನಾಲ್ಕು ಮಂದಿ ಕಾನ್ಸ್ಟೇಬಲ್ ಗಳನ್ನು ವರ್ಗಾವಣೆ ಮಾಡಲಾಗಿದೆ.

ಕಡಬ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಹರೀಶ್ ಪುಂಚಪ್ಪಾಡಿ ಅವರು ವಿಟ್ಲ ಠಾಣೆಗೆ, ರಮೇಶ್ ಲಂಭಾಣಿ ಅವರು ಸುಳ್ಯ ಠಾಣೆಗೆ, ಕಾನ್‌ಸ್ಟೇಬಲ್‌ಗಳಾದ ಹರೀಶ್ ಅವರು ಪುತ್ತೂರು ಟ್ರಾಫಿಕ್ ಠಾಣೆಗೆ, ವಿಠಲ್ ಜೋಗಣ್ಣನವರ್ ವಿಟ್ಲ ಠಾಣೆಗೆ, ಸೋಮಯ್ಯ ಹಿರೇಮಠ ಅವರು ಸುಳ್ಯ ಠಾಣೆಗೆ ಹಾಗೂ ಮಂಜುನಾಥ ಅವರು ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

 

ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನೂತನ ಎಸ್ಪಿಯಾಗಿ ಡಾ. ಅರುಣ್ ಅವರು ಅಧಿಕಾರ ಸ್ವೀಕರಿಸಿದ ದಿನವೇ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಮೇ ತಿಂಗಳ 31ಕ್ಕೆ 4 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಒಂದೇ ಠಾಣೆ ಅಥವಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಐ, ಎಚ್‌ಸಿ ಮತ್ತು ಪಿಸಿಗಳ ಮಾಹಿತಿಯನ್ನು ಮೇ 31ರ ಸಂಜೆ 4 ಗಂಟೆಯೊಳಗೆ ಎಸ್ಪಿ ಕಚೇರಿಗೆ ನೀಡುವಂತೆಯೂ ಸೂಚಿಸಿದ್ದರು.

Scroll to Top