ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲು ವಿಪಕ್ಷಗಳು ಮುಂದು..!

(ನ್ಯೂಸ್‌ ಕಡಬ) newskadaba.com, ಆ.18: ನವದೆಹಲಿ: ‘ಮತ ಕಳ್ಳತನʼ ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮತ ಕಳ್ಳತನದ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದೆ. ಈ ಮಧ್ಯೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೋಷಾರೋಪಣೆ ಮಾಡಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ ಎಂದು […]

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲು ವಿಪಕ್ಷಗಳು ಮುಂದು..! Read More »

ಬ್ರೇಕಿಂಗ್ ನ್ಯೂಸ್

ಬೆಂಗಳೂರು: ಕೂಡಲೇ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಬದಲಾಯಿಸಿ- ಬಿ.ವೈ. ವಿಜಯೇಂದ್ರ ಒತ್ತಾಯ

(ನ್ಯೂಸ್‌ ಕಡಬ) newskadaba.com, ಆ.18 ಬೆಂಗಳೂರು: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಕೂಡಲೇ ಬದಲಾಯಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರವನ್ನು ಸೋಮವಾರ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತಾಡಿದ ಅವರು, ಕಳೆದ ಆಗಸ್ಟ್ ನಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದಿತ್ತು. ಹೀಗಾಗಿ ಸಾವಿರಾರು ಕ್ಯುಸೆಕ್ ನೀರು ಹರಿದು ವ್ಯರ್ಥವಾಗಿದೆ. ಅದಕ್ಕೆ ಶಾಶ್ವತ ಪರಿಹಾರ ನೀಡಿದೆ ವಿಳಂಬ ಮಾಡಿದ್ದರಿಂದ ನೀರಿನ ಒತ್ತಡ ಇತರ ಗೇಟ್‌ಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲ 33 ಕ್ರಸ್ಟ್ ಗೇಟನ್ನೂ

ಬೆಂಗಳೂರು: ಕೂಡಲೇ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಬದಲಾಯಿಸಿ- ಬಿ.ವೈ. ವಿಜಯೇಂದ್ರ ಒತ್ತಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿ. ಕೆ. ಹರಿಪ್ರಸಾದ್‌ಗೆ ಗೊತ್ತಿರುವುದು ಹಿಂಬಾಗಿಲ ರಾಜಕಾರಣವೊಂದೇ: ಬಿಜೆಪಿ

(ನ್ಯೂಸ್‌ ಕಡಬ) newskadaba.com, ಆ.18: ಒಂದು ಕಾಲದ ಬೀದಿ ರೌಡಿ, ಕೊತ್ವಾಲ್‌ಪುರದ ಶಿಷ್ಯ, ಚಮಚಾಗಿರಿ ಮಾಡಿ, ಕಂಡವರ ಮನೆ ಬಾಗಿಲು ಕಾಯ್ದು ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡ ಬಿ.ಕೆ ಹರಿಪ್ರಸಾದ್ ಇಂದು ಖಾದಿ ಬಟ್ಟೆ ಹಾಕಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡ ಬಿಜೆಪಿ, ಬಿ. ಕೆ. ಹರಿಪ್ರಸಾದ್‌ ಅವರಿಗೆ ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿಯೇ ರಾಜಕೀಯ ಸ್ಥಾನಮಾನ ಗಿಟ್ಟಿಸಬೇಕೇ

ಬಿ. ಕೆ. ಹರಿಪ್ರಸಾದ್‌ಗೆ ಗೊತ್ತಿರುವುದು ಹಿಂಬಾಗಿಲ ರಾಜಕಾರಣವೊಂದೇ: ಬಿಜೆಪಿ Read More »

ಕರ್ನಾಟಕ

ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌

(ನ್ಯೂಸ್‌ ಕಡಬ) newskadaba.com, ಆ.18: ದುಲೀಪ್‌ ಟ್ರೋಫಿಯಿಂದ ಇಶಾನ್‌ ಕಿಶನ್‌ ಹೊರಬಿದ್ದಿದ್ದಾರೆ. ಪೂರ್ವ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಇಶಾನ್ ಗಾಯದ ಕಾರಣ ಹೊರಗುಳಿದಿದ್ದಾರೆ. ಅವರ ಬದಲಿಗೆ ಅಭಿಮನ್ಯು ಈಶ್ವರನ್‌ ಅವರಿಗೆ ಕ್ಯಾಪ್ಟನ್‌ ಸ್ಥಾನ ನೀಡಲಾಗಿದೆ. ಇಶಾನ್‌ ಕಿಶನ್‌ ಸ್ಥಾನಕ್ಕೆ ವಿಕೆಟ್‌ ಬ್ಯಾಟರ್‌ ಆಶೀರ್ವಾದ್‌ ಸ್ವೈನ್‌ ಆಯ್ಕೆಯಾಗಿದ್ದಾರೆ. ಆಶೀರ್ವಾದ್‌ ಅವರು ಈವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ.21 ಇನ್ನಿಂಗ್ಸ್‌ನಲ್ಲಿ ಆಡಿರುವ ಅವರು 30.75 ಸರಾಸರಿಯಲ್ಲಿ ಒಟ್ಟು 615 ರನ್‌ ಗಳಿಸಿದ್ದಾರೆ. ಇದರೊಂದಿಗೆ ವಿಕೆಟ್‌ ಕೀಪಿಂಗ್‌ನಲ್ಲಿ

ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌ Read More »

ಕ್ರೀಡಾ ನ್ಯೂಸ್

ಕಡಬ: ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಪ್ರಶಸ್ತಿ ಬಾಚಿಕೊಂಡ ಕ್ನಾನಾಯ ಜ್ಯೋತಿ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಆ. 18. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನೆಟ್ಟಣದ ಮೌಂಟ್ ಸಿಯೋನ್ ಶಾಲೆಯ ಆಶ್ರಯದಲ್ಲಿ ಶಟಲ್ ಬಾಡ್ಮಿಂಟನ್ ಕ್ರೀಡಾಕೂಟವು ಕುಲ್ಕುಂದದಲ್ಲಿ ನಡೆಯಿತು. ನಾಲ್ಕು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಾರಿ ಕಡಬ ವಲಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಾಲ್ಕು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಫೈನಲ್ ಹಂತ ಪ್ರವೇಶಿಸಿದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ

ಕಡಬ: ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಪ್ರಶಸ್ತಿ ಬಾಚಿಕೊಂಡ ಕ್ನಾನಾಯ ಜ್ಯೋತಿ ವಿದ್ಯಾರ್ಥಿಗಳು Read More »

ಕ್ರೀಡಾ ನ್ಯೂಸ್

ಉಡುಪಿ – ಸಿಯಾಚಿನ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು 1,300 ಕಿ.ಮೀ ದೂರ ಬೈಕ್‌ ಸವಾರಿ ಮಾಡಿದ 57 ನೇ ವಯಸ್ಸಿನ ಮಹಿಳೆಯ ಸಾಹಸ !

(ನ್ಯೂಸ್ ಕಡಬ) newskadaba.com ಆ. 18 ಉಡುಪಿ : ಸಾಹಸಕ್ಕೆ ವಯಸ್ಸು ಅಡ್ಡಿಯಾಗಲ್ಲ ಎಂದು ಕುಂದಾಪುರದ 57 ವರ್ಷದ ವಿಲ್ಮಾ ಕ್ರಾಸ್ತಾ ಕಾರ್ವಾಲ್ಹೋ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ. 2023 ರಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶವಾದ ಪಾಸ್ ಉಮ್ಲಿಂಗ್ ಗೆ ತನ್ನ ಮಗಳು ಚೆರಿಶ್ ಕರ್ವಾಲೋ ಜೊತೆ ಧೈರ್ಯಶಾಲಿಯಾಗಿ ಬೈಕ್‌ ಸವಾರಿ ಮೂಲಕ ಗಮನ ಸೆಳೆದ ನಂತರ, ವಿಲ್ಮಾ ಈಗ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದಾರೆ. ಆಗಸ್ಟ್‌ 15 ಸ್ವಾತಂತ್ರ್ಯ ದಿನದಂದು, ವಿಶ್ವದ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾದ ಸಿಯಾಚಿನ್

ಉಡುಪಿ – ಸಿಯಾಚಿನ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು 1,300 ಕಿ.ಮೀ ದೂರ ಬೈಕ್‌ ಸವಾರಿ ಮಾಡಿದ 57 ನೇ ವಯಸ್ಸಿನ ಮಹಿಳೆಯ ಸಾಹಸ ! Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

(ನ್ಯೂಸ್‌ ಕಡಬ) newskadaba.com, ಆ.18: ಸಿಎಂ ಸಿದ್ದರಾಮಯ್ಯ ಅವರು ಕೊಲೆಗಳನ್ನು ಮಾಡಿಸಿದ್ದಾರೆ ಎಂದು ಮಹೇಶ್‌ ತಿಮರೋಡಿ ಆರೋಪ ಮಾಡಿದ್ದಾರೆ. ಅವರು ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಎಂದರೆ ನಾನು ನಂಬುವುದಿಲ್ಲ. ಈ ಬಗ್ಗೆಯೂ ತನಿಖೆ ನಡೆಯಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ಆರೋಪ ಮಾಡಿದವರ ವಿರುದ್ದ ತನಿಖೆ ನಡೆಸದಿದ್ದಲ್ಲಿ ಸರ್ಕಾರವೂ ಈ ಪ್ರಕರಣದಲ್ಲಿ ಶಾಮೀಲಾಗಿದೆ ಎಂದು ನಾವು ಅನುಮಾನ ಪಡಬೇಕಾಗುತ್ತದೆ ಎಂದಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು,

ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ Read More »

ಕರ್ನಾಟಕ

ತುಮಕೂರು- ಬೆಂಗಳೂರು ನಡುವೆ 4 ಹೊಸ ರೈಲುಮಾರ್ಗ- ವಿ.ಸೋಮಣ್ಣ

(ನ್ಯೂಸ್ ಕಡಬ) newskadaba.com ಆ. 18. ಭವಿಷ್ಯದ ದೃಷ್ಟಿಯಿಂದ ಬೆಂಗಳೂರು – ತುಮಕೂರು ನಡುವೆ ನಾಲ್ಕು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಹೀಗಾಗಿ ಹೆಚ್ಚುವರಿ ರೈಲುಗಳ ಸೇವೆ ಒದಗಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ನಗರದ ರೈಲ್ವೆ ನಿಲ್ದಾಣದಲ್ಲಿ ಹಮಿಕೊಂಡಿದ್ದ 11ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರೈಲು ಅವಲಂಬನೆ

ತುಮಕೂರು- ಬೆಂಗಳೂರು ನಡುವೆ 4 ಹೊಸ ರೈಲುಮಾರ್ಗ- ವಿ.ಸೋಮಣ್ಣ Read More »

ಕರ್ನಾಟಕ

ಹೆಬ್ಬಾಳ ಫ್ಲೈಓವರ್‌ ಲೋಕಾರ್ಪಣೆ ಮಾಡಿದ ಸಿಎಂ, ಡಿಸಿಎಂ

(ನ್ಯೂಸ್‌ ಕಡಬ) newskadaba.com, ಆ.18: ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್‌.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಮೇಲ್ಸೇತುವೆಯನ್ನು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಲೋಕಾರ್ಪಣೆಗೊಳಿಸಿದರು. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡ ಡಿಕೆ ಶಿವಕುಮಾರ್‌, ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್‌.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಮೇಲ್ಸೇತುವೆಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಲೋಕಾರ್ಪಣೆಗೊಳಿಸಲಾಯಿತು ಎಂದು ತಿಳಿಸಿದರು. ಇಂದಿನಿಂದ ಹೆಬ್ಬಾಳದ ಹೊಸ ಮೇಲ್ಸೇತುವೆ ರ‍್ಯಾಂಪ್ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ

ಹೆಬ್ಬಾಳ ಫ್ಲೈಓವರ್‌ ಲೋಕಾರ್ಪಣೆ ಮಾಡಿದ ಸಿಎಂ, ಡಿಸಿಎಂ Read More »

ಕರ್ನಾಟಕ

ಭಾರತದಲ್ಲಿ ಉಕ್ಕು ತಯಾರಿಕೆಗೆ ದಕ್ಷಿಣ ಕೊರಿಯಾ ಜೊತೆ ಕೈಜೋಡಿಸಿದ JSW

(ನ್ಯೂಸ್ ಕಡಬ) newskadaba.com ಆ. 18. ದೇಶದಲ್ಲಿ ವಾರ್ಷಿಕ 6 ಮಿಲಿಯನ್‌ ಟನ್‌ (ಎಂಟಿಪಿಎ) ಉಕ್ಕಿನ ಸ್ಥಾವರವನ್ನು ಸ್ಥಾಪಿಸುವ ಬಗ್ಗೆ ಅನ್ವೇಷಿಸಲು ದಕ್ಷಿಣ ಕೊರಿಯಾದ ಪೋಸ್ಕೋ ಗ್ರೂಪ್‌ ಜೊತೆ ಸ್ವದೇಶಿ ಸಂಸ್ಥೆ ಜೆಎಸ್‌‍ಡಬ್ಲ್ಯೂ ಕೈಜೋಡಿಸಿರುವ ಕುರಿತು ವರದಿಯಾಗಿವೆ. ಮುಂದಿನ ಹಂತಗಳ ಭಾಗವಾಗಿ, ಸ್ಥಾವರದ ಸ್ಥಳ, ಹೂಡಿಕೆ ನಿಯಮಗಳು, ಸಂಪನ್ಮೂಲ ಲಭ್ಯತೆ ಮತ್ತು ಇತರ ನಿರ್ಣಾಯಕ ಅಂಶಗಳನ್ನು ಅಂತಿಮಗೊಳಿಸಲು ಜೆಎಸ್‌‍ಡಬ್ಲ್ಯೂ ಮತ್ತು ಪೋಸ್ಕೋ ವಿವರವಾದ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲಿವೆ.

ಭಾರತದಲ್ಲಿ ಉಕ್ಕು ತಯಾರಿಕೆಗೆ ದಕ್ಷಿಣ ಕೊರಿಯಾ ಜೊತೆ ಕೈಜೋಡಿಸಿದ JSW Read More »

ರಾಷ್ಟ್ರೀಯ ನ್ಯೂಸ್
Scroll to Top