ಹಾಲು ಕುಡಿದ ಬಳಿಕ ಈ ತಪ್ಪು ಮಾಡಬೇಡಿ…

(ನ್ಯೂಸ್‌ ಕಡಬ) newskadaba.com, ಆ.18: ಹಾಲು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಲಿನಲ್ಲಿರುವ ಅನೇಕ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಪ್ರಯೋಜನಗಳನ್ನು ನೀಡುತ್ತವೆ. ಆದರೆ, ಹಾಲು ಕುಡಿದ ಬಳಿಕ ಕೆಲವು ಆಹಾರಗಳನ್ನು ಸೇವಿಸಬಾರದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹಾಗಾದರೆ ಆ ಆಹಾರಗಳು ಯಾವುದು, ಏಕೆ ಒಳ್ಳೆಯದಲ್ಲ ಎನ್ನುವುದನ್ನು ತಿಳಿದುಕೊಳ್ಳೋಣ. ಹಾಲು ಕುಡಿದ ಬಳಿಕ ಅನೇಕ ಮಂದಿ ಚಿಪ್ಸ್‌, ಖಾರದ ಬಿಸ್ಕತ್ತುಗಳು ಹಾಗೂ ಜಂಕ್‌ ಫುಡ್‌ಗಳನ್ನು ತಿನ್ನುತ್ತಾರೆ. ನಿಮಗೆ ಈ ಅಭ್ಯಾಸ ಇದ್ದಲ್ಲಿ ಕೂಡಲೇ ಇದನ್ನು ಬಿಟ್ಟುಬಿಡಿ. ಆರೋಗ್ಯ […]

ಹಾಲು ಕುಡಿದ ಬಳಿಕ ಈ ತಪ್ಪು ಮಾಡಬೇಡಿ… Read More »

ಆರೋಗ್ಯ ಮಾಹಿತಿ
crime, arrest, suspected

ಅಕ್ರಮ ಕೆಂಪುಕಲ್ಲು ಸಾಗಾಟ ಆರೋಪ- ಟಿಪ್ಪರ್ ವಶಕ್ಕೆ

(ನ್ಯೂಸ್ ಕಡಬ) newskadaba.com ಆ. 18. ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಉಡುಪಿ ನಗರ ಪೊಲೀಸರು 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಸ್ಥಾನದ ಬಳಿ ವಶಪಡಿಸಿಕೊಂಡಿರುವ ಕುರಿತು ವರದಿಯಾಗಿದೆ. ಅಲೆವೂರು ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ 15,750 ರೂ. ಮೌಲ್ಯದ ಸುಮಾರು 350 ಕೆಂಪುಕಲ್ಲು ಇರುವುದು ಕಂಡುಬಂದಿದ್ದು, ಇದನ್ನು ಮಂಚಿಕೇರಿ ಎಂಬಲ್ಲಿಂದ ಕಳವು ಮಾಡಿ ಸಾಗಾಟ ಮಾಡಲಾಗುತ್ತಿತ್ತೆನ್ನಲಾಗಿದೆ. ಘಟನಾ ಸಂಬಂಧ ವಾಹನ ಚಾಲಕ ಮತ್ತು

ಅಕ್ರಮ ಕೆಂಪುಕಲ್ಲು ಸಾಗಾಟ ಆರೋಪ- ಟಿಪ್ಪರ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಶಿಕ್ಷಕಿಯರಾಗಲು ನಿಮಗಿದೋ ಸುವರ್ಣಾವಕಾಶ..! ಕಡಬದ ಜ್ಞಾನಸುಧಾ ವಿದ್ಯಾಲಯದಲ್ಲಿ ಒಂದೇ ವರ್ಷದಲ್ಲಿ ಪಡೆಯಿರಿ ಮೊಂಟೆಸ್ಸರಿ ಶಿಕ್ಷಣ

(ನ್ಯೂಸ್ ಕಡಬ) newskadaba.com ಕಡಬ, ಆ. 18. ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ನ ಎದುರು ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಹಾಗಣಪತಿ ಬಿಲ್ಡಿಂಗ್ ನಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜನರ ವಿಶ್ವಾಸಕ್ಕೆ ಪಾತ್ರವಾಗಿರುವ ಜ್ಞಾನಸುಧಾ ವಿದ್ಯಾಲಯದಲ್ಲಿ ಮೊಂಟೆಸ್ಸರಿ ಶಿಕ್ಷಣವನ್ನು ಒದಗಿಸಲಾಗುತ್ತಿದೆ.     ಪ್ರತಿವರ್ಷವೂ ಈ ವಿದ್ಯಾ ಕೇಂದ್ರದಲ್ಲಿ ಮೊಂಟೆಸ್ಸರಿ ತರಬೇತಿ ಪಡೆಯುವ ಶಿಕ್ಷಣಾರ್ಥಿಗಳು ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆಗೊಂಡು ಸಂಸ್ಥೆಗೆ 100% ಫಲಿತಾಂಶ ನೀಡುವ ಮೂಲಕ ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ

ಶಿಕ್ಷಕಿಯರಾಗಲು ನಿಮಗಿದೋ ಸುವರ್ಣಾವಕಾಶ..! ಕಡಬದ ಜ್ಞಾನಸುಧಾ ವಿದ್ಯಾಲಯದಲ್ಲಿ ಒಂದೇ ವರ್ಷದಲ್ಲಿ ಪಡೆಯಿರಿ ಮೊಂಟೆಸ್ಸರಿ ಶಿಕ್ಷಣ Read More »

ಕರಾವಳಿ

ಸೆ.1ರಂದು ಮೈಸೂರಿಗೆ ದ್ರೌಪದಿ ಮುರ್ಮು ಭೇಟಿ

(ನ್ಯೂಸ್‌ ಕಡಬ) newskadaba.com, ಆ.18: ಸೆ.1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಮಾನಸ ಗಂಗೋತ್ರಿಯ ಅಖಿಲ ಭಾರತ ವಾಕ್‌ ಹಾಗೂ ಶ್ರವಣ ಸಂಸ್ಥೆ ವಜ್ರ ಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿಗಳು ಅಲ್ಲಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ದ್ರೌಪದಿ ಮುರ್ಮು ಅವರು ಮೈಸೂರಿಗೆ ಆಗಮಿಸುತ್ತಿರುವುದು ಇದು 2ನೇ ಬಾರಿ. 2022ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ದ್ರೌಪದಿ ಮುರ್ಮು ಅವರು ಮೈಸೂರಿಗೆ ಆಗಮಿಸಿದ್ದರು.

ಸೆ.1ರಂದು ಮೈಸೂರಿಗೆ ದ್ರೌಪದಿ ಮುರ್ಮು ಭೇಟಿ Read More »

ಕರ್ನಾಟಕ

ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಆ. 18 ಬೆಂಗಳೂರು: ಮುಂಗಾರು ಮಳೆಯ ಆರ್ಭಟ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಹಳ್ಳಕೊಳ್ಳಗಳು ಭರ್ತಿಯಾಗಿ ಹೊಲಗದ್ದೆಗಳು ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗಿದೆ. 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಡಗಿನಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದ್ದು, ನಿರಂತರ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಬೃಹತ್‌ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲದೆ ಜನ ಪರದಾಡುವಂತಾಗಿದೆ. ಹಾಸನದಲ್ಲಿ

ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಥನಿ ಐಟಿಐಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 16. ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಬೆಥನಿ ಧರ್ಮ ಸೇವಾ ಸಂಘಂ ಇದರ ಸಂಚಾಲಕರಾದ ರೆ.ಫಾ.ಡಾ.ವರ್ಗೀಸ್ ಕೈಪನಡ್ಕ, ಬೆಥನಿ ಐಟಿಐ ನೆಲ್ಯಾಡಿ ಇದರ ನಿರ್ದೇಶಕರಾದ ರೆ.ಫಾ.ಜೋರ್ಜ್ ಸ್ಯಾಮುವೆಲ್ ಓಐಸಿ, ರೆ.ಫಾ.ಜೈಸನ್ ಸೈಮನ್ ಓ.ಐ ಸಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಉಷಾ ಜೋಯ್, ಬೆಥನಿ ಐಟಿಐ ಪ್ರಾಂಶುಪಾಲ

ಬೆಥನಿ ಐಟಿಐಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ Read More »

ಕರಾವಳಿ

ಧರ್ಮಸ್ಥಳದ ಪ್ರಕರಣ ಮಧ್ಯಂತರ-ಅಂತಿಮ ವರದಿ ಎಸ್‌ಐಟಿ ಬಿಟ್ಟಿದ್ದು, ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ-ಗೃಹಸಚಿವ

(ನ್ಯೂಸ್ ಕಡಬ) newskadaba.com ಆ. 18 ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಸಾಕ್ಷಿ-ದೂರುದಾರ ವ್ಯಕ್ತಿ ಹೇಳಿದ ಹಾಗೆ ಅಗೆಯುತ್ತಲೇ ಇರಲು ಸಾಧ್ಯವಿಲ್ಲ, ವಿಶೇಷ ತನಿಖಾ ದಳದ ಅಧಿಕಾರಿಗಳು ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆಂದು ರಾಜ್ಯ ಸರ್ಕಾರ ಭಾನುವಾರ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಸ್ಥಿಪಂಜರದ ಅವಶೇಷಗಳಿಗಾಗಿ ಎಷ್ಟು ಸಮಯದವರೆಗೆ ಅಗೆಯಬೇಕು ಎಂಬುದನ್ನು ನಿರ್ಧರಿಸುತ್ತದೆ, ದೂರುಗಳ ಆಧಾರದ ಮೇಲೆ ಅಗೆಯುತ್ತಲೇ

ಧರ್ಮಸ್ಥಳದ ಪ್ರಕರಣ ಮಧ್ಯಂತರ-ಅಂತಿಮ ವರದಿ ಎಸ್‌ಐಟಿ ಬಿಟ್ಟಿದ್ದು, ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ-ಗೃಹಸಚಿವ Read More »

ಕರಾವಳಿ, ಕರ್ನಾಟಕ

ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಓರ್ವ ಯೋಧ ಹುತಾತ್ಮ

(ನ್ಯೂಸ್‌ ಕಡಬ) newskadaba.com, ಆ.18: ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ ಓರ್ವ ಯೋಧ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಹುತಾತ್ಮ ಯೋಧರನ್ನು ದಿನೇಶ್‌ ನಾಗ್‌ ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರು ಯೋಧರಿಗೆ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ಡಿಜಿಆರ್‌ ತಂಡವು ನಕ್ಸಲ್‌ ವಿರೋಧಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ನಕ್ಸಲರು ಸುಧಾರಿತ ಸ್ಪೋಟಕ(ಐಇಡಿ) ಸ್ಪೋಟಿಸಿದ ಪರಿಣಾಮ ಜಿಲ್ಲಾ ಮೀಸಲು ಪಡೆ(ಡಿಜಿಆರ್)ಯ ಯೋಧರೊಬ್ಬರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಭಾನುವಾರದಿಂದ ಕಾರ್ಯಾಚರಣೆ ಶುರುವಾಗಿತ್ತು, ಇಂದು

ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಓರ್ವ ಯೋಧ ಹುತಾತ್ಮ Read More »

ರಾಷ್ಟ್ರೀಯ ನ್ಯೂಸ್

ಇಂದು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ ಶುಭಾಂಶು ಶುಕ್ಲಾ

(ನ್ಯೂಸ್‌ ಕಡಬ) newskadaba.com, ಆ.18: ಆಕ್ಸಿಯಂ-4 ಮಿಷನ್‌ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ಕೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶುಭಾಂಶು ಶುಕ್ಲಾ ಅವರು, ಭೂಮಿಗೆ ಮರಳಿದ ನಂತರ ಮೊದಲ ಬಾರಿಗೆ ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ಶುಭಾಂಶು ಶುಕ್ಲಾ ಅವರು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ

ಇಂದು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ ಶುಭಾಂಶು ಶುಕ್ಲಾ Read More »

ರಾಷ್ಟ್ರೀಯ ನ್ಯೂಸ್

ಸುಳ್ಯ: ಕೇರಳ ಲಾಟರಿಯಲ್ಲಿ 1 ಕೋಟಿ ರೂ. ಗೆದ್ದ ಸುಳ್ಯದ ನಿವಾಸಿ..!

(ನ್ಯೂಸ್ ಕಡಬ) newskadaba.com ಆ. 18 ಸುಳ್ಯ. ಕೇರಳ ರಾಜ್ಯದ ಲಾಟರಿಯಲ್ಲಿ ಸುಳ್ಯ ತಾಲೂಕಿನ ನಿವಾಸಿಯೊಬ್ಬರು 1 ಕೋಟಿ ರೂಪಾಯಿ ಬಂಪರ್ ಬಹುಮಾನ ಗೆದ್ದಿದ್ದಾರೆ. ಶನಿವಾರ ನಡೆದ ಡ್ರಾದಲ್ಲಿ, OG 445643 ಸಂಖ್ಯೆಯ ಟಿಕೆಟ್ ಸುಳ್ಯ ತಾಲ್ಲೂಕಿನ ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲೀಕ ವಿನಯ್ ಯಾವಟೆ ಅವರಿಗೆ ಅದೃಷ್ಟ ಒಲಿದಿದೆ. ಅವರು 1 ಕೋಟಿ ರೂಪಾಯಿ ಬಂಪರ್ ಬಹುಮಾನವನ್ನು ತಮ್ಮದಾಗಿಸಿಕೊಂಡರು. ವಿನಯ್ ಕಾಸರಗೋಡಿನ ಪಂಜಿಕಲ್ಲು ಎಂಬಲ್ಲಿ ಟಿಕೆಟ್ ಖರೀದಿಸಿದ್ದರು.

ಸುಳ್ಯ: ಕೇರಳ ಲಾಟರಿಯಲ್ಲಿ 1 ಕೋಟಿ ರೂ. ಗೆದ್ದ ಸುಳ್ಯದ ನಿವಾಸಿ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top