ಬಂಗಾಳ ಕೊಲ್ಲಿ : ವಾಯುಭಾರ ಕುಸಿತ – ಸೆ.29ರವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ

(ನ್ಯೂಸ್‌ ಕಡಬ) newskadaba.com,  ಸೆ.24 ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಸೆ.29ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಉಪಸಾಗರದ ಉತ್ತರ ಒಡಿಶಾ, ಆಂಧ್ರದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆ.23ರಿಂದ ಸೆ.29ರವರೆಗೆ ಹಲವಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡು, ಕರಾವಳಿ ಭಾಗ ಹಾಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿ : ವಾಯುಭಾರ ಕುಸಿತ – ಸೆ.29ರವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರಣ್ಯದಲ್ಲಿ 15 ದಿನದ ಮಗುವಿನ ದೇಹ ಪತ್ತೆ

(ನ್ಯೂಸ್‌ ಕಡಬ) newskadaba.com,  ಸೆ.24 ಜೈಪುರ : ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕಾಡಿನಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದ್ದು, ಮಗುವಿನ ತುಟಿಗಳನ್ನು ಗಮ್‌ ಹಾಕಿ ಅಂಟಿಸಿ ವಿಕೃತಿ ಮೆರೆಯಲಾಗಿತ್ತು. ಮಗುವನ್ನು ಕಂಡ ದನಗಾಹಿಯೊಬ್ಬ ರಕ್ಷಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಮಗುವಿನ ಬಾಯಿಗೆ ಹಾಕಿದ್ದ ಗಮ್‌ ತೆಗೆದು ನೋಡಿದಾಗ ಬಾಯೊಳಗೆ ಕಲ್ಲನ್ನು ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಕೂಡಲೇ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವನ್ನು ಕೊಲ್ಲಲು ಈ ರೀತಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಭಿಲ್ವಾರದ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ

ಅರಣ್ಯದಲ್ಲಿ 15 ದಿನದ ಮಗುವಿನ ದೇಹ ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು : ಪ್ರತಿಷ್ಠಿತ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ

(ನ್ಯೂಸ್‌ ಕಡಬ) newskadaba.com,  ಸೆ.24 ಬೆಂಗಳೂರು: ಆದಾಯ ಮೀರಿ ಅಸ್ತಿಗಳಿಕೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ​ PES ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿದೆ. ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನ PES ಕಾಲೇಜುಗಳು  ಸೇರಿದಂತೆ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪಿಇಎಸ್‌ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಕಾಲೇಜಿನ ಮಾಲೀಕರು, ಆಡಳಿತ ಮಂಡಳಿಯವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ,

ಬೆಂಗಳೂರು : ಪ್ರತಿಷ್ಠಿತ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ್ವಿಚಕ್ರ ವಾಹನ ಪೋಲಿಸ್ ಜೀಪ್ ಗೆ ಡಿಕ್ಕಿ; ಸವಾರನಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಸೆ.24 ಬಂಟ್ವಾಳ : ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸವಾರನೋರ್ವ ಪೋಲಿಸ್ ಜೀಪ್ ಗೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ನಡೆದಿದೆ. ಪಿಲಾತಬೆಟ್ಟು ನಿವಾಸಿ ಹರ್ಷಿತ್ (19) ಗಾಯಗೊಂಡ ಯುವಕನಾಗಿದ್ದಾನೆ. ಧರ್ಮಸ್ಥಳ ಪೋಲೀಸ್ ಠಾಣೆಯ ಪಿಎಸ್.ಐ.ಮಂಗಳೂರು ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಇಲಾಖೆಯ ಪೋಲಿಸ್ ಜೀಪ್ ನಲ್ಲಿ ಹೋಗುತ್ತಿದ್ದ ವೇಳೆಗೆ ಪುಂಜಾಲಕಟ್ಟೆ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ದ್ವಿ ಚಕ್ರವಾಹನ ಸವಾರ ನಿಯಂತ್ರಣ ಕಳೆದುಕೊಂಡು ಪೋಲೀಸ್ ಜೀಪ್ ಗೆ ಡಿಕ್ಕಿ ಹೊಡೆದು ರಸ್ತೆಗೆ

ದ್ವಿಚಕ್ರ ವಾಹನ ಪೋಲಿಸ್ ಜೀಪ್ ಗೆ ಡಿಕ್ಕಿ; ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಶಾಲಾ ಆಟೋಟ ಸ್ಪರ್ಧೆಯ ನಡುವೆ ಕುಸಿದು ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

(ನ್ಯೂಸ್‌ ಕಡಬ) newskadaba.com,  ಸೆ.24 ಕಾಸರಗೋಡು : ಶಾಲಾ ಮೈದಾನದಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಂಗಲ್ಪಾಡಿ ಜಿ. ಬಿ ಎಲ್. ಪಿ ಶಾಲೆಯ ವಿದ್ಯಾರ್ಥಿ ಹಸನ್ ರಾಝಾ (10)ಮೃತಪಟ್ಟ ಬಾಲಕ. ಆಟೋಟ ಕ್ರೀಡಾ ಚಟುವಟಿಕೆ ಮಧ್ಯೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಈತ ಉತ್ತರ ಪ್ರದೇಶದ ಮುರ್ಷಿದಾಬಾದ್ ನ ಇನ್ಸಾಫಾಲಿ ಎಂಬವರ ಪುತ್ರನಾಗಿದ್ದಾನೆ. ಉದ್ಯೋಗ ನಿಮಿತ್ತ ಆಗಮಿಸಿದ ವಲಸೆ ಕಾರ್ಮಿಕರ ಮಕ್ಕಳು ಕೇರಳದ ಶಾಲೆಗಳಲ್ಲಿ

ಕಾಸರಗೋಡು: ಶಾಲಾ ಆಟೋಟ ಸ್ಪರ್ಧೆಯ ನಡುವೆ ಕುಸಿದು ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಲೆಗಢ : ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ – ಮಗು, ಮಹಿಳೆ ಸೇರಿ ನಾಲ್ವರ ಸಜೀವ ದಹನ

(ನ್ಯೂಸ್‌ ಕಡಬ) newskadaba.com,  ಸೆ.23 ಅಲೆಗಢ : ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವಾಹನಗಳಿಗೆ ಬೆಂಕಿ ಹೊತ್ತುಕೊಂಡ ಪರಿಣಾಮ ಮಹಿಳೆ, ಮಗು ಸೇರಿದಂತೆ ನಾಲ್ವರು ಸುಟ್ಟು ಕರಕಲಾಗಿರುವ ಘಟನೆ ಅಲಿಘಡದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ-34 ರಲ್ಲಿ ಕಾರು ಮತ್ತು ಕ್ಯಾಂಟರ್ ಡಿಕ್ಕಿ ಹೊಡೆದು ಮಹಿಳೆ ಮತ್ತು ಮಗು ಸೇರಿದಂತೆ ನಾಲ್ವರು ಜೀವಂತ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಪಿ ಸೇತುವೆ ಸಮೀಪ ಅಲಿಗಢ ಕಡೆಗೆ ಹೋಗುತ್ತಿದ್ದ ಕಾರು ಟೈರ್

ಅಲೆಗಢ : ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ – ಮಗು, ಮಹಿಳೆ ಸೇರಿ ನಾಲ್ವರ ಸಜೀವ ದಹನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಂಗಳೂರು : ‘ಸರ್ಕಾರ ಮಾಡುತ್ತಿರುವ ಜಾತಿ ಗಣತಿಯನ್ನು ನಾವು ಒಪ್ಪಲು ಸಾಧ್ಯವಿಲ್ಲ’- ಮಾಜಿ ಸಚಿವ ಸಿಸಿ ಪಾಟೀಲ್

(ನ್ಯೂಸ್‌ ಕಡಬ) newskadaba.com,  ಸೆ.23 ಬೆಂಗಳೂರು : ಸರ್ಕಾರ ಮಾಡುತ್ತಿರುವ ಜಾತಿ ಗಣತಿ ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿಸಿ ಪಾಟೀಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಾತಿ ಗಣತಿ ಸರ್ವೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಮಾಡುತ್ತಿರುವ ‘ಈ ಜಾತಿ ಗಣತಿ ನಾವು ಒಪ್ಪಲ್ಲ. ಗಣತಿ ಪ್ರಾರಂಭ ಆಗಿದೆ. ಇವತ್ತು ಹೈಕೋರ್ಟ್‌‌ನಲ್ಲಿ ಕೇಸ್ ಇದೆ. ಏನಾಗುತ್ತೋ ನೋಡೋಣ. ಹೈಕೋರ್ಟ್‌ನಿಂದ ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದರು. ಇದು ಯಾವ ರೀತಿ

ಬೆಂಗಳೂರು : ‘ಸರ್ಕಾರ ಮಾಡುತ್ತಿರುವ ಜಾತಿ ಗಣತಿಯನ್ನು ನಾವು ಒಪ್ಪಲು ಸಾಧ್ಯವಿಲ್ಲ’- ಮಾಜಿ ಸಚಿವ ಸಿಸಿ ಪಾಟೀಲ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರೀ ಮಳೆ : ವಿದ್ಯುತ್ ಸ್ಪರ್ಶ ಕ್ಕೆ 5 ಮಂದಿ ಸಾವು

(ನ್ಯೂಸ್‌ ಕಡಬ) newskadaba.com,  ಸೆ.23 ಕೋಲ್ಕತ್ತಾ:  ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗೂ ಮುನ್ನ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ವಿದ್ಯುತ್ ಸ್ಪರ್ಶದಿಂದ 5 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಧ್ಯರಾತ್ರಿಯ ನಂತರ ಪ್ರಾರಂಭವಾದ ಮಳೆಯಿಂದ ರಸ್ತೆಗಳು ನೀರಿನಲ್ಲಿ ಮುಳುಗಿ ನಗರದಾದ್ಯಂತ ಅನೇಕ ಮನೆಗಳು ಮತ್ತು ವಸತಿ ಸಂಕೀರ್ಣಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿ ಇಡೀ ಜನರು ಜಾಗರಣೆ ಮಾಡುವಂತಾಗಿದೆ, ಜೊತೆಗೆ ಹಲವಾರು ಸ್ಥಳಗಳಲ್ಲಿ ಮೊಣಕಾಲು ಆಳದ ನೀರಿನಿಂದ ಮುಳುಗಿ ಸಂಚಾರ ಅಸ್ತವ್ಯಸ್ತವಾಗಿ

ಭಾರೀ ಮಳೆ : ವಿದ್ಯುತ್ ಸ್ಪರ್ಶ ಕ್ಕೆ 5 ಮಂದಿ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಬ್ಬಗಳ ನೆಪದಲ್ಲಿ ಆಗುತ್ತಿದ್ದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ

(ನ್ಯೂಸ್‌ ಕಡಬ) newskadaba.com,  ಸೆ.23 ನವದೆಹಲಿ : ಹಬ್ಬಗಳ ವೇಳೆಯಲ್ಲಿ ಆಗುತ್ತಿದ್ದ ದುಂದು ವೆಚ್ಚಕ್ಕೆ ಕೇಂದ್ರದ ಮೋದಿ ಸರ್ಕಾರ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ. ಹಬ್ಬಗಳಿವೆ ಎಂದು ಸರ್ಕಾರದ ಹಣದಿಂದ ಉಡುಗೊರೆಗಳನ್ನು ಕೊಡುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ದೀಪಾವಳಿ ಸೇರಿ ಯಾವುದೇ ಹಬ್ಬಕ್ಕೆ ಸಾರ್ವಜನಿಕ ಹಣ ಬಳಕೆಗೆ ನಿರ್ಬಂಧ ಹೇರಲಾಗಿದೆ. ಸೆ.19ರಂದು ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.ಈ ಹಿಂದೆಯೂ ಕೇಂದ್ರ ಸರ್ಕಾರ ಇಂತಹ ನಿರ್ದೇಶನ ನೀಡಿತ್ತು, ಆದರೆ ಅದು ಸಮರ್ಪಕವಾಗಿ

ಹಬ್ಬಗಳ ನೆಪದಲ್ಲಿ ಆಗುತ್ತಿದ್ದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದ ವಿದ್ಯಾರ್ಥಿನಿಯ ಅಪಹರಣ

(ನ್ಯೂಸ್‌ ಕಡಬ) newskadaba.com,  ಸೆ.23 ಇಂದೋರ್: ಹಾಡಹಗಲೇ 12ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸೋಮವಾರ (ಸೆ.22) ಗಂಧ್ವಾನಿ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಹುಡುಗಿಯು ಎಟಿಎಂ ಬಳಿ ನಿಂತಿದ್ದಾಗ ಮಹೀಂದ್ರಾ ಬೊಲೆರೊ ಇದ್ದಕ್ಕಿದ್ದಂತೆ ಆಕೆಯ ಬಳಿ ನಿಂತಿದೆ. ಮೂವರು ಪುರುಷರು ಹೊರಗೆ ಹಾರಿ, ಆಕೆಯ ಬಾಯಿ ಮುಚ್ಚಿ, ವಾಹನಕ್ಕೆ ಎಳೆದುಕೊಂಡು ಹೋಗಿ ಪರಾರಿಯಾಗಿದ್ದಾರೆ .ಕೂಡಲೇ ಅಲ್ಲದ್ದ ಸ್ಥಳೀಯರೆಲ್ಲಾ ಸೇರಿ

ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದ ವಿದ್ಯಾರ್ಥಿನಿಯ ಅಪಹರಣ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top