ರಾಂಚಿ : ನೆರೆಮನೆಯ ಮಗುವಿಗೆ ವಿಷ ಹಾಕಿ ಕೊಲೆಗೆ ಯತ್ನಿಸಿದ ಯುವತಿ ಬಂಧನ

(ನ್ಯೂಸ್‌ ಕಡಬ) newskadaba.com,  ಸೆ.23 ರಾಂಚಿ :  ಯುವತಿಯೊಬ್ಬಳು ನೆರೆ ಮನೆಯ ಮಗುವಿಗೆ ವಿಷ ಬೆರೆಸಿದ ಆಹಾರ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ  ನಡೆದಿದೆ. ಇದೀಗ ಯುವತಿಯನ್ನು ಜೈಪುರದ ಧರ್ಮಶಾಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭೂಬನ್ ಗ್ರಾಮದ ಮಧುಸ್ಥಿತ ಮೊಹಾಂತಿ(21) ಕೊಲೆಗೆ ಯತ್ನಿಸಿರುವ ಯುವತಿ. ಕಳೆದ ಸೆ.8ರಂದು ಮಧುಸ್ಮಿತ ಪಕ್ಕದ ಮನೆಯ 2  ವರ್ಷದ ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ವಿಷ ಬೆರೆಸಿದ ಆಹಾರವನ್ನು ತಿನಿಸಿದ್ದಾಳೆ. ಆಹಾರ ಸೇವಿಸಿದ ನಂತರ ಮಗು ಅಸ್ವಸ್ಥಗೊಂಡಿದೆ. -ಮಂಕಾಗಿದ್ದ […]

ರಾಂಚಿ : ನೆರೆಮನೆಯ ಮಗುವಿಗೆ ವಿಷ ಹಾಕಿ ಕೊಲೆಗೆ ಯತ್ನಿಸಿದ ಯುವತಿ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋಲ್ಕತ್ತಾದಲ್ಲಿ ಭಾರೀ ಮಳೆ ; ರಸ್ತೆಗಳು ಜಲಾವೃತ- ಐವರು ಸಾವು

(ನ್ಯೂಸ್‌ ಕಡಬ) newskadaba.com,  ಸೆ.23 ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಸೋಮವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಕೋಲ್ಕತ್ತಾ ಪೊಲೀಸರ ಪ್ರಕಾರ, ಹೊಸೈನ್ ಶಾ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ 5:15ರ ಸುಮಾರಿಗೆ 60 ವರ್ಷದ ಜಿತೇಂದ್ರ ಸಿಂಗ್ ಎಂಬಾತ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಮೃತಪಟ್ಟ ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ ಮಳೆಯ ತೀವ್ರತೆ ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ

ಕೋಲ್ಕತ್ತಾದಲ್ಲಿ ಭಾರೀ ಮಳೆ ; ರಸ್ತೆಗಳು ಜಲಾವೃತ- ಐವರು ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಸ್ಲಾಮಾಬಾದ್‌ : ಪಾಕ್‌ ದೇಶದ ಒಳಗಡೆ ಏರ್‌ಸ್ಟ್ರೈಕ್‌ – ಏಳು ಬಾಂಬ್‌ಗೆ 30 ಮಂದಿ ಸಾವು

(ನ್ಯೂಸ್‌ ಕಡಬ) newskadaba.com,  ಸೆ.23 ಇಸ್ಲಾಮಾಬಾದ್‌: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಜೆ-17 ಯುದ್ಧ ವಿಮಾನಗಳು ಎಂಟು LS-6 ಬಾಂಬ್‌ಗಳನ್ನು ಹಾಕಿವೆ. ಸೋಮವಾರ ನಸುಕಿನ ಜಾವ 2 ಗಂಟೆಯ ವೇಳೆ ಈ ದಾಳಿ ನಡೆದಿದ್ದು ಭಾರೀ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ. ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು

ಇಸ್ಲಾಮಾಬಾದ್‌ : ಪಾಕ್‌ ದೇಶದ ಒಳಗಡೆ ಏರ್‌ಸ್ಟ್ರೈಕ್‌ – ಏಳು ಬಾಂಬ್‌ಗೆ 30 ಮಂದಿ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸೆ. 24 ರಂದು ಮಂಗಳೂರಿನಲ್ಲಿ ಜಿ ಕೋಡ್‌ ನೂತನ ಫ್ಯಾಷನ್‌ ಮಳಿಗೆ ಶುಭಾರಂಭ

(ನ್ಯೂಸ್‌ ಕಡಬ) newskadaba.com,  ಸೆ.23  ಮಂಗಳೂರು :  ಜಿ ಕೋಡ್‌ ಫ್ಯಾಷನ್‌ ಮಳಿಗೆ ಸೆ. 24 ರಂದು ಮಂಗಳೂರಿನ ಹಂಪನಕಟ್ಟೆಯಲ್ಲಿ ಆರಂಭವಾಗಲಿದೆ. ನಟ ರೂಪೇಶ್‌ಶೆಟ್ಟಿ ನೂತನ ಮಳಿಗೆಯನ್ನು ಶುಭಾರಂಭ ಮಾಡಲಿದ್ದಾರೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಿನೂತನ ಬ್ರ್ಯಾಂಡೆಡ್ ಬಟ್ಟೆಗಳು ನೂತನ ಜಿ ಕೋಡ್‌ ಮಳಿಗೆಯಲ್ಲಿ ಸಿಗಲಿದೆ. ಈಗಾಗಲೇ ಮುಂಬೈ, ಬೆಂಗಳೂರಿನಲ್ಲಿ ಜಿ ಕೋಡ್‌ ಫ್ಯಾಷನ್‌ ಮಳಿಗೆ ಶಾಖೆ ಇದೆ. ಇತ್ತಿಚೆಗೆ ಮೈಸೂರಿನಲ್ಲೂ ಜಿ ಕೋಡ್‌ ಶಾಖೆ ಆರಂಭಗೊಂಡಿದೆ. ಇದೀಗ ಸದ್ಯ ಮಂಗಳೂರು ನಗರ ಜಿ ಕೋಡ್‌ ಕಾಲಿಡಲಿದೆ. ಮಹಿಳೆಯರಿಗೆ,

ಸೆ. 24 ರಂದು ಮಂಗಳೂರಿನಲ್ಲಿ ಜಿ ಕೋಡ್‌ ನೂತನ ಫ್ಯಾಷನ್‌ ಮಳಿಗೆ ಶುಭಾರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಗಳ ಮುಂದೆಯೇ ಹೆಂಡತಿಗೆ 11 ಬಾರಿ ಇರಿದು ಕೊಂದ ಗಂಡ..!

(ನ್ಯೂಸ್‌ ಕಡಬ) newskadaba.com,  ಸೆ.23  ಬೆಂಗಳೂರು: ಶೀಲ ಶಂಕಿಸಿ ತನ್ನ 2ನೇ ಪತ್ನಿಗೆ 11ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ. ಕೆಬ್ಬೆಹಳ್ಳದ ನಿವಾಸಿ ರೇಖಾ (32) ಕೊಲೆಯಾದ ದುರ್ದೈವಿ. ಹತ್ಯೆ ಬಳಿಕ ಮೃತಳ ಪ್ರಿಯಕರ ಲೋಹಿತಾಶ್ವ ಅಲಿಯಾಸ್ ಲೋಕೇಶ್ ಪರಾರಿಯಾಗಿದ್ದಾನೆ. ಆರೋಪಿ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ರೇಖಾ ಮೇಲೆ ಏಕಾಏಕಿ ಚೂರಿಯಿಂದ ದಾಳಿ ನಡೆಸಿದ್ದಾನೆ. ಆಕೆ

ಮಗಳ ಮುಂದೆಯೇ ಹೆಂಡತಿಗೆ 11 ಬಾರಿ ಇರಿದು ಕೊಂದ ಗಂಡ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೈಸೂರು ಚಾಮುಂಡಿ ಬೆಟ್ಟದ ಶಿವಾರ್ಚಕ ನಿಧನ

(ನ್ಯೂಸ್‌ ಕಡಬ) newskadaba.com,  ಸೆ.23  ಮೈಸೂರು: ಮೈಸೂರು ದಸರಾ ಸಂಭ್ರಮದ ನಡುವೆಯೇ ಚಾಮುಂಡಿ ಬೆಟ್ಟದಲ್ಲಿ ಸೂತಕ ಛಾಯೆ ಆವರಿಸಿದೆ. ಚಾಮುಂಡಿ ಬೆಟ್ಟದ ಶಿವಾರ್ಚಕರು ಇಹಲೋಕ ತ್ಯಜಿಸಿದ್ದಾರೆ. ಶಿವಾರ್ಚಕರ ನಿಧನದ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ದೇವಿಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ತಡರಾತ್ರಿ ಚಾಮುಂಡಿ ಬೆಟ್ಟದ ಶಿವಾರ್ಚಕ ನಿಧನ ಹಿನ್ನಲೆ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ದೇವಿ ದರ್ಶನ ಬಂದ್ ಮಾಡಲಾಗಿದೆ. ಮಧ್ಯಾಹ್ನ ಸಂಸ್ಕಾರ ಮುಗಿದ ಬಳಿಕ ದೇವಿ ದರ್ಶನಕ್ಕೆ

ಮೈಸೂರು ಚಾಮುಂಡಿ ಬೆಟ್ಟದ ಶಿವಾರ್ಚಕ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಅಶ್ವಿನಿ ಕ್ಲಿನಿಕ್‌ನಲ್ಲಿ ಅಗ್ನಿ ಅವಘಡ; ಸುಮಾರು ಲಕ್ಷಾಂತರ ರೂ. ನಷ್ಟ

(ನ್ಯೂಸ್‌ ಕಡಬ) newskadaba.com,  ಸೆ.23  ಕಾಸರಗೋಡು: ನಗರದ ಅಶ್ವಿನಿ ನಗರದಲ್ಲಿರುವ ಚರ್ಮ ಹಾಗೂ ಮಕ್ಕಳ ತಪಾಸಣಾ ಕ್ಲಿನಿಕ್ ಒಂದರಲ್ಲಿ ಅಗ್ನಿ ಅವಘಡ ಉಂಟಾಗಿ ಸುಮಾರು 25 ಲಕ್ಷ ರೂ. ನಷ್ಟವಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಸೋಮವಾರ ತಡರಾತ್ರಿ 11.30 ರ ಸುಮಾರಿಗೆ ಕ್ಲಿನಿಕ್ ನಲ್ಲಿ ಹೊಗೆ ಕಂಡುಬಂದ ಹಿನ್ನಲೆಯಲ್ಲಿ ಸಮೀಪದ ಹೊಟೇಲ್ ಕಾರ್ಮಿಕರು ಅಗ್ನಿ ಶಾಮಕ ದಳದ ಸಿಬ್ಬಂದಿ ಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ

ಕಾಸರಗೋಡು: ಅಶ್ವಿನಿ ಕ್ಲಿನಿಕ್‌ನಲ್ಲಿ ಅಗ್ನಿ ಅವಘಡ; ಸುಮಾರು ಲಕ್ಷಾಂತರ ರೂ. ನಷ್ಟ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು : ದೈಜಿವರ್ಲ್ಡ್ 24×7 ,ಅರ್ಪಿಸುತ್ತಿದೆ ‘ದಿ ಕಾಮನ್ ಮ್ಯಾನ್ ಶೋ ‘- ಸಾಮಾನ್ಯರ ಅಸಾಮಾನ್ಯ ಕಥೆ!

(ನ್ಯೂಸ್‌ ಕಡಬ) newskadaba.com,  ಸೆ.23 ಮಂಗಳೂರು : ನಗರದ ಪ್ರಮುಖ ಸುದ್ದಿಭಿತ್ತರ ಹಾಗು ಮನೋರಂಜನೆಯ ವಾಹಿನಿಯಾದ ದೈಜಿವರ್ಲ್ಡ್ , ಸಾಮಾನ್ಯನ ಅಸಾಮಾನ್ಯ ಕಥೆಗಳ ಸಂಗ್ರಹವಾಗಿರುವ ‘ದಿ ಕಾಮನ್ ಮ್ಯಾನ್ ಶೋ’ ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಸೆಪ್ಟೆಂಬರ್ 21 ರಂದು, ರವಿವಾರದ ರಾತ್ರಿ 9:00 ಗಂಟೆಗೆ ಈ ಕಾರ್ಯಕ್ರಮ ತನ್ನ ಪ್ರಥಮ ಪ್ರಸಾರವನ್ನು ದೈಜಿವರ್ಲ್ಡ್ ಟಿವಿ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ  ಪ್ರಾರಂಭಿಸಿದೆ. 6.75 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಚಾನೆಲ್, ಸಾಮಾಜಿಕ ಮಾಧ್ಯಮಗಳಲ್ಲಿಯೂ ಹೆಸರುವಾಸಿಯಾಗಿದ್ದು ಇದೀಗ ಸಾಮಾನ್ಯರ

ಮಂಗಳೂರು : ದೈಜಿವರ್ಲ್ಡ್ 24×7 ,ಅರ್ಪಿಸುತ್ತಿದೆ ‘ದಿ ಕಾಮನ್ ಮ್ಯಾನ್ ಶೋ ‘- ಸಾಮಾನ್ಯರ ಅಸಾಮಾನ್ಯ ಕಥೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಟಿ20 ಕ್ರಿಕೆಟ್‌ನ ಹೆಸರಾಂತ ಆಟಗಾರ ಕೀರನ್ ಪೊಲಾರ್ಡ್ ಯಾರೂ ಸಾಧಿಸದ ವಿಶ್ವ ದಾಖಲೆಯ ಸಾಧನೆ

(ನ್ಯೂಸ್‌ ಕಡಬ) newskadaba.com,  ಸೆ.23  ಗಯಾನಾ : ಟಿ20 ಕ್ರಿಕೆಟ್‌ನ ಆಟಗಾರ ಪೊಲಾರ್ಡ್ ಮತ್ತೊಂದು ಅದ್ಭುತ ದಾಖಲೆಯ ಸಾಧನೆ ಮಾಡಿದ್ದಾರೆ. ಅವರು ಈಗ ಟಿ20 ಕ್ರಿಕೆಟ್ ಇತಿಹಾಸದಲ್ಲೇ 400 ಕ್ಯಾಚ್‌ಗಳ ಮೈಲುಗಲ್ಲು ದಾಟಿದ ವಿಶ್ವದ ಏಕೈಕ ಫೀಲ್ಡರ್ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ, ಕ್ಯಾಚ್‌ಗಳಲ್ಲಿಯೇ ಅಲ್ಲದೆ, ತಮ್ಮ ಎಲ್ಲಾ ಟಿ20 ಸಾಧನೆಗಳ ಸರಣಿಗೆ ಮತ್ತೊಂದು ಜ್ಯೋತಿರ್ಮಯ ಸಾಧನೆಯಾಗಿ ಸೇರಿಕೊಂಡಿದೆ.. ಇತ್ತೀಚೆಗಷ್ಟೇ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ, ಟ್ರಿನ್‌ಬಾಗೋ ನೈಟ್ ರೈಡರ್ಸ್ ಪರ ಗಯಾನಾ

ಟಿ20 ಕ್ರಿಕೆಟ್‌ನ ಹೆಸರಾಂತ ಆಟಗಾರ ಕೀರನ್ ಪೊಲಾರ್ಡ್ ಯಾರೂ ಸಾಧಿಸದ ವಿಶ್ವ ದಾಖಲೆಯ ಸಾಧನೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಬೈಕ್‌ಗೆ ಕಾರು ಢಿಕ್ಕಿ- ವಿದ್ಯಾರ್ಥಿಯೋರ್ವ ಸಾವು

(ನ್ಯೂಸ್‌ ಕಡಬ) newskadaba.com,  ಸೆ.23  ಮಂಗಳೂರು : ನಗರದ ಬೊಂದೇಲ್‌ ಮೆಸ್ಕಾಂ ಕಚೇರಿ ಬಳಿ ಬೈಕ್‌ನಲ್ಲಿ ಸಾಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾರು ಚಾಲಕ ಕನ್ನಡಿ ಸವರಿಕೊಂಡು ಹೋದ ಕಾರಣ ವಿದ್ಯಾರ್ಥಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಬಳಿಕ ಮೃತ ಪಟ್ಟಿದ್ದಾನೆ ಎಂದು ಹೇಳಲಾಗಿದೆ.. ಚಾಲಕ ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದು, ತೊಕ್ಕೊಟ್ಟು ಬಳಿ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಮೃತ ವಿದ್ಯಾರ್ಥಿ ಬಜಪೆ

ಮಂಗಳೂರಿನಲ್ಲಿ ಬೈಕ್‌ಗೆ ಕಾರು ಢಿಕ್ಕಿ- ವಿದ್ಯಾರ್ಥಿಯೋರ್ವ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top