ಬದುಕಿದ್ದವರನ್ನು ಸತ್ತಿದ್ದಾರೆಂದು ಹೇಳಿ ವಿವಾದ ಸೃಷ್ಟಿಸಿದ ಸಂಸದೆ ► ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಬರೆದಿರುವ ಪತ್ರದಲ್ಲಿ ಯಡವಟ್ಟು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.19. ರಾಜ್ಯದಲ್ಲಿ ಕೋಮು ಗಲಭೆಯನ್ನು ಪ್ರಸ್ತಾಪಿಸುವ ಭರದಲ್ಲಿ ಬಿಜೆಪಿ ಸಂಸದೆ ಯಡವಟ್ಟು ಮಾಡಿಕೊಂಡಿದ್ದಾರೆ. ಕೇಂದ್ರವನ್ನು ಓಲೈಸುವ ಭರದಲ್ಲಿಯೋ ಅಥವಾ ಕಾಂಗ್ರೆಸ್ ಸರಕಾರವನ್ನು ಹಣಿಯುವ ಭರದಲ್ಲೋ ಯಾವುದೇ ಪರಿಶೀಲನೆ ಮಾಡದೆ ಅನೌಪಚಾರಿಕವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್’ಗೆ ಬರೆದ ಪತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಯಡವಟ್ಟು ಸ್ಪಷ್ಟವಾಗಿ ಕಂಡು ಬಂದಿದೆ. ಬಿಜೆಪಿಯ ಈ ಯಡವಟ್ಟು ಮತ್ತಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸಂಸದೆ ಶೋಭಾ ಕರಂದ್ಲಾಜೆ ಬರೆದ ಪತ್ರದಲ್ಲಿ ಬದುಕಿದ್ದವರನ್ನೂ ಕೊಲೆಯಾದವರ ಪಟ್ಟಿಯಲ್ಲಿ  ಸೇರಿಸಿದ್ದಾರೆ. ಅಲ್ಲದೆ […]

ಬದುಕಿದ್ದವರನ್ನು ಸತ್ತಿದ್ದಾರೆಂದು ಹೇಳಿ ವಿವಾದ ಸೃಷ್ಟಿಸಿದ ಸಂಸದೆ ► ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಬರೆದಿರುವ ಪತ್ರದಲ್ಲಿ ಯಡವಟ್ಟು Read More »

ರಾಷ್ಟ್ರೀಯ ನ್ಯೂಸ್

ಉದನೆ: ನಿಂತಿದ್ದ ಲಾರಿಗೆ ಈಚರ್ ಢಿಕ್ಕಿ ►ಉಪ್ಪಿನಂಗಡಿ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 19. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಎಂಬಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಈಚರ್ ಲಾರಿಯೊಂದು ಢಿಕ್ಕಿಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಮೃತರನ್ನು ಈಚರ್ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಉಪ್ಪಿನಂಗಡಿಯ ಹರಿನಗರ ನಿವಾಸಿ ಇಲ್ಯಾಸ್ (40)  ಎಂದು ಗುರುತಿಸಲಾಗಿದೆ. ಹಾಸನ ಕಡೆಯಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಈಚರ್ ಲಾರಿ ನಿಯಂತ್ರಣ ಕಳೆದುಕೊಂಡು, ನಿಂತಿದ್ದ ಕನ್ಟೈನರ್ ಲಾರಿಗೆ ಢಿಕ್ಕಿ ಹೊಡೆದು ಈ ಅಪಘಾತ

ಉದನೆ: ನಿಂತಿದ್ದ ಲಾರಿಗೆ ಈಚರ್ ಢಿಕ್ಕಿ ►ಉಪ್ಪಿನಂಗಡಿ ನಿವಾಸಿ ಮೃತ್ಯು Read More »

ಕರಾವಳಿ

ಹಳಿ ತಪ್ಪಿದ ಗೂಡ್ಸ್ ರೈಲು ► ರೈಲ್ವೇ ನಿಲ್ದಾಣದ ವಾಕ್‍ಪಾತ್‍ಗೆ ಹಾನಿ

(ನ್ಯೂಸ್ ಕಡಬ) newskadaba.com ಕಾರವಾರ, ಜು.19. ಆಂಧ್ರ ಪ್ರದೇಶದಿಂದ ಕಾರವಾರಕ್ಕೆ ರೇಷನ್ ತರುತಿದ್ದ ಗೂಡ್ಸ್ ರೈಲೊಂದು ನಿಲ್ದಾಣದ ವಾಕ್ ಪಾತ್ ಗೆ ಡಿಕ್ಕಿ ಹೊಡೆದು ಹಳಿತಪ್ಪಿ ನೆಲಕ್ಕೆ ಕುಸಿದ ಘಟನೆ ಕಾರವಾರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮಂಗಳವಾರ ಮಧ್ಯರಾತ್ರಿ ವೇಳೆ ಆಂಧ್ರದಿಂದ ಕಾರವಾರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಗೂಡ್ಸ್ ರೈಲನ್ನು ನಿಲ್ದಾಣದಲ್ಲಿ ನಿಲ್ಲಿಸುವ ವೇಳೆ ಈ ಘಟನೆ ನಡೆದಿದೆ. ಅಪಘಾತದಿಂದ ನಿಲ್ದಾಣದ ವಾಕ್ ಪಾತ್ ಸಂಪೂರ್ಣ ಹಾಳಾಗಿದ್ದು ಢಿಕ್ಕಿ ಹೊಡೆದ ರಭಸಕ್ಕೆ ಬೋಗಿ ಹಳಿತಪ್ಪಿ ನೆಲಕ್ಕೆ ಕುಸಿದಿದೆ. ಸ್ಥಳಕ್ಕೆ ರೈಲ್ವೆ

ಹಳಿ ತಪ್ಪಿದ ಗೂಡ್ಸ್ ರೈಲು ► ರೈಲ್ವೇ ನಿಲ್ದಾಣದ ವಾಕ್‍ಪಾತ್‍ಗೆ ಹಾನಿ Read More »

ಕರ್ನಾಟಕ

ಕರಾವಳಿಯ ಕೆಲವು ಗ್ರಾಮಗಳಲ್ಲಿ ಇನ್ಮುಂದೆ 24 ಗಂಟೆ ವಿದ್ಯುತ್ ► ಅದರಲ್ಲಿ ನಿಮ್ಮ ಗ್ರಾಮ ಸೇರಿದೆಯೇ ಎಂದು ತಿಳಿಯಬೇಕೇ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜು.18. ಇನ್ಮುಂದೆ ಕರಾವಳಿಯ ಕೆಲವು ಗ್ರಾಮಗಳಿಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್‌ ಪೂರೈಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಪವರ್‌ ಕಟ್‌ ಸಮಸ್ಯೆಗೆ ಮುಕ್ತಿ ಸಿಗಲಿದೆ. ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ರವರ ‘ಮಾದರಿ ವಿದ್ಯುತ್‌ ಗ್ರಾಮ’ ಆಶಯದಂತೆ ದಕ್ಷಿಣ ಕನ್ನಡ ಜಿಲ್ಲೆಯ 35 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತೀ ಗ್ರಾಮಕ್ಕೆ ಗರಿಷ್ಠ 40 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಮಾದರಿ

ಕರಾವಳಿಯ ಕೆಲವು ಗ್ರಾಮಗಳಲ್ಲಿ ಇನ್ಮುಂದೆ 24 ಗಂಟೆ ವಿದ್ಯುತ್ ► ಅದರಲ್ಲಿ ನಿಮ್ಮ ಗ್ರಾಮ ಸೇರಿದೆಯೇ ಎಂದು ತಿಳಿಯಬೇಕೇ…? Read More »

ಕರಾವಳಿ

ಅರ್ಧ ಗಂಟೆಯಲ್ಲಿ 7000 ಕೋಟಿ ಕಳೆದುಕೊಂಡ ಎಲ್ಐಸಿ

ಮುಂಬೈ, ಜು.18. ಐಟಿಸಿ ಷೇರುಗಳ ಮೇಲೆ ಅವಲಂಬಿತವಾಗಿದ್ದ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆಯು ಮಂಗಳವಾರ ಮಧ್ಯಾಹ್ನದ ವೇಳೆಗೆ ಭಾರಿ ನಷ್ಟ ಅನುಭವಿಸಿದ್ದು, ಷೇರುಪೇಟೆಯಲ್ಲಿ ಅರ್ಧ ಗಂಟೆಯಲ್ಲಿ 7,000 ಕೋಟಿ ರೂ. ಕಳೆದುಕೊಂಡಿದೆ. ಐಟಿಸಿ ಷೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಶೇ 15ರಷ್ಟು ಕುಸಿತ ಕಂಡಿದ್ದು, ಎಲ್ಐಸಿಗೆ ಮಾರಕವಾಗಿ ಪರಿಣಮಿಸಿದೆ. ಜೂನ್ 30, 2017ರಂತೆ ಸಿಗರೇಟ್ ತಯಾರಕ ಸಂಸ್ಥೆಯಲ್ಲಿ ಶೇ 16.29ರಷ್ಟು ಪಾಲನ್ನು ಎಲ್ಐಸಿ ಹೊಂದಿದೆ. 1992ರ ನಂತರ ಇದೇ ಮೊದಲ ಬಾರಿಗೆ ಐಟಿಸಿ ಈ ಪ್ರಮಾಣದಲ್ಲಿ ಕುಸಿತ

ಅರ್ಧ ಗಂಟೆಯಲ್ಲಿ 7000 ಕೋಟಿ ಕಳೆದುಕೊಂಡ ಎಲ್ಐಸಿ Read More »

ರಾಷ್ಟ್ರೀಯ ನ್ಯೂಸ್

ನಾಳೆಯಿಂದ ಕಡಬ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.18. ಕಡಬದ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ಬ್ರೇಕರ್ ಗಳನ್ನು ನೂತನವಾಗಿ ಉನ್ನತೀಕರಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಜುಲೈ 19ನೇ ಬುಧವಾರದಿಂದ ಜುಲೈ 26ನೇ ಬುಧವಾರದವರೆಗೆ ಕಡಬದಿಂದ ಹೊರಡುವ ವಿದ್ಯುತ್ ಮಾರ್ಗಗಳಲ್ಲಿ ಸ್ವಲ್ಪ ಮಟ್ಟಿಗೆ ವಿದ್ಯುತ್ ವ್ಯತ್ಯಾಸವಿರುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆಯಿಂದ ಕಡಬ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ Read More »

ಕರಾವಳಿ

ಗದ್ದಲದಲ್ಲಿ ನಡೆದ ನೂಜಿಬಾಳ್ತಿಲ ಗ್ರಾಮ ಸಭೆ ► ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಜು.18. ಇಲ್ಲಿಗೆ ಸಮೀಪದ ನೂಜಿಬಾಳ್ತಿಲ ಗ್ರಾಮ ಸಭೆಯು ಕಲ್ಲುಗುಡ್ಡೆಯಲ್ಲಿ ನೂತನವಾಗಿ ಆರಂಭವಾಗಲಿರುವ ಮದ್ಯದಂಗಡಿ ವಿರೋಧಿಸಿ ಹಲವು ಗದ್ದಲದ ನಡುವೆ ಮಂಗಳವಾರದಂದು ನೂಜಿಬಾಳ್ತಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೆದ್ದಾರಿ ಬದಿಯಲ್ಲಿನ ಬಾರ್ ಗಳನ್ನು ಮುಚ್ಚಬೇಕೆನ್ನುವ ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿನ ಬಾರನ್ನು ಕಲ್ಲುಗುಡ್ಡೆಗೆ ವರ್ಗಾಯಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಗ್ರಾಮಸ್ಥರ ವಿರೋಧ ಇರುವುದರಿಂದ

ಗದ್ದಲದಲ್ಲಿ ನಡೆದ ನೂಜಿಬಾಳ್ತಿಲ ಗ್ರಾಮ ಸಭೆ ► ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ವ್ಯಾಪಕ ಆಕ್ರೋಶ Read More »

ಕರಾವಳಿ

ಕಡಬ ಸಿ.ಎ.ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜು. 29 ರವರೆಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.18. ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆಗೆ ಹಲ್ಲೆ ನಡೆಸಿದ ಆರೋಪಿಗಳಾದ ಪ್ರಕಾಶ್, ಟಿನ್ಸನ್, ಸನೂಷ್, ಲಿಜೋ, ಸಂತೋಷ್, ಬಿಜು ಎಂಬವರನ್ನು ಸೋಮವಾರದಂದು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಜುಲೈ 29 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವರ ವಿರುದ್ದ ಐಪಿಸಿ ಸೆಕ್ಷನ್ 143, 147, 341, 323, 326, 307, 395, 149 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ ಸೋಮವಾರದಂದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಯ

ಕಡಬ ಸಿ.ಎ.ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜು. 29 ರವರೆಗೆ ನ್ಯಾಯಾಂಗ ಬಂಧನ Read More »

ಕರಾವಳಿ

ರಾಜಕೀಯ ಲಾಭಕ್ಕಾಗಿ ಮನುಷತ್ವ ಕಳೆದುಕೊಳ್ಳಬೇಡಿ: ಎಪಿ ಅಬೂಬಕ್ಕರ್ ಮುಸ್ಲಿಯಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಧರ್ಮಾಧಾರಿತವಾಗಿ ಒಡೆಯಲು ಯತ್ನಿಸುತ್ತಿದೆ. ಅವರಿಗೆ ಓಟಿನ ಚಿಂತನೆಯಾದರೆ ಜನರಿಗೆ ಬದುಕಿನ ಚಿಂತೆ ಉಂಟಾಗಿದೆ‌. ಜನರನ್ನು ಸಮಾಧಾನ ಮತ್ತು ಸೌಹಾರ್ದತೆಯಿಂದ ಬದುಕಲು ಬಿಡಿ ಎಂದು ಸುನ್ನೀ ನಾಯಕ ಎಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ವಿನಂತಿಸಿದ್ದಾರೆ. ಅವರು ಸೋಮವಾರದಂದು ಮಂಗಳೂರಿನಲ್ಲಿ ಕರ್ನಾಟಕ ಸುನ್ನೀ ಉಲೆಮಾಗಳ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂ ಮುಸ್ಲಿಮ್ ಕ್ರೈಸ್ತರು ಇಂದಿಗೂ ಸಹೋದರತೆಯಿಂದ ಬದುಕುತ್ತಿದ್ದಾರೆ. ಪ್ರತಿಯೊಬ್ಬರೂ ಶಾಂತಿಯನ್ನು

ರಾಜಕೀಯ ಲಾಭಕ್ಕಾಗಿ ಮನುಷತ್ವ ಕಳೆದುಕೊಳ್ಳಬೇಡಿ: ಎಪಿ ಅಬೂಬಕ್ಕರ್ ಮುಸ್ಲಿಯಾರ್ Read More »

ಕರಾವಳಿ

ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರ ಬಯಲಿಗೆಳೆದ ಪ್ರಕರಣ ► ಡಿಐಜಿ ರೂಪಾ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.17. ಇತ್ತೀಚಿಗೆ ರಾಜ್ಯದಲ್ಲಿ ಕೋಲಾಹಲವೆಬ್ಬಿಸಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರವನ್ನು ಬಯಲಿಗೆಳೆದ ಡಿಐಜಿ ರೂಪಾ, ಅವ್ಯವಹಾರ ಆರೋಪ ಹೊತ್ತ ಕಾರಾಗೃಹ ಎಡಿಜಿಪಿ ಎನ್.ಎಚ್. ಸತ್ಯನಾರಾಯಣ ರಾವ್ ಸೇರಿದಂತೆ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಜೈಲಿನ ಅವ್ಯವಹಾರವನ್ನು ಬಯಲಿಗೆಳೆದ ಡಿಐಜಿ ರೂಪಾ ಡಿ. ಮೌದ್ಗಿಲ್ ರನ್ನು ಸಾರಿಗೆ ಸುರಕ್ಷತಾ ವಿಭಾಗದ ಡಿಐಜಿಯಾಗಿ ವರ್ಗಾಯಿಸಲಾಗಿದೆ. ಜುಲೈ 22 ರಂದು ನಿವೃತ್ತರಾಗಲಿರುವ ಅವ್ಯವಹಾರ ಆರೋಪ ಹೊತ್ತ ಕಾರಾಗೃಹ ಎಡಿಜಿಪಿ

ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರ ಬಯಲಿಗೆಳೆದ ಪ್ರಕರಣ ► ಡಿಐಜಿ ರೂಪಾ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ Read More »

ಕರ್ನಾಟಕ
Scroll to Top