ಉದನೆ: ನಿಂತಿದ್ದ ಲಾರಿಗೆ ಈಚರ್ ಢಿಕ್ಕಿ ►ಉಪ್ಪಿನಂಗಡಿ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 19. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಎಂಬಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಈಚರ್ ಲಾರಿಯೊಂದು ಢಿಕ್ಕಿಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಈಚರ್ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಉಪ್ಪಿನಂಗಡಿಯ ಹರಿನಗರ ನಿವಾಸಿ ಇಲ್ಯಾಸ್ (40)  ಎಂದು ಗುರುತಿಸಲಾಗಿದೆ. ಹಾಸನ ಕಡೆಯಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಈಚರ್ ಲಾರಿ ನಿಯಂತ್ರಣ ಕಳೆದುಕೊಂಡು, ನಿಂತಿದ್ದ ಕನ್ಟೈನರ್ ಲಾರಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

 
Scroll to Top