ಹಳಿ ತಪ್ಪಿದ ಗೂಡ್ಸ್ ರೈಲು ► ರೈಲ್ವೇ ನಿಲ್ದಾಣದ ವಾಕ್‍ಪಾತ್‍ಗೆ ಹಾನಿ

(ನ್ಯೂಸ್ ಕಡಬ) newskadaba.com ಕಾರವಾರ, ಜು.19. ಆಂಧ್ರ ಪ್ರದೇಶದಿಂದ ಕಾರವಾರಕ್ಕೆ ರೇಷನ್ ತರುತಿದ್ದ ಗೂಡ್ಸ್ ರೈಲೊಂದು ನಿಲ್ದಾಣದ ವಾಕ್ ಪಾತ್ ಗೆ ಡಿಕ್ಕಿ ಹೊಡೆದು ಹಳಿತಪ್ಪಿ ನೆಲಕ್ಕೆ ಕುಸಿದ ಘಟನೆ ಕಾರವಾರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮಂಗಳವಾರ ಮಧ್ಯರಾತ್ರಿ ವೇಳೆ ಆಂಧ್ರದಿಂದ ಕಾರವಾರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಗೂಡ್ಸ್ ರೈಲನ್ನು ನಿಲ್ದಾಣದಲ್ಲಿ ನಿಲ್ಲಿಸುವ ವೇಳೆ ಈ ಘಟನೆ ನಡೆದಿದೆ. ಅಪಘಾತದಿಂದ ನಿಲ್ದಾಣದ ವಾಕ್ ಪಾತ್ ಸಂಪೂರ್ಣ ಹಾಳಾಗಿದ್ದು ಢಿಕ್ಕಿ ಹೊಡೆದ ರಭಸಕ್ಕೆ ಬೋಗಿ ಹಳಿತಪ್ಪಿ ನೆಲಕ್ಕೆ ಕುಸಿದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೂಡ್ಸ್ ನಿಂದ ರೇಷನ್ ಸಾಮಾಗ್ರಿಗಳನ್ನು ಲಾರಿಗಳಲ್ಲಿ ಸಾಗಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಕೃಪೆ: ಪಬ್ಲಿಕ್ ಟಿವಿ

Also Read  ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ನಿರ್ವಹಣಾ ಪ್ರಾಧಿಕಾರ ರಚನೆ 

error: Content is protected !!
Scroll to Top