ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.26. ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರಸಕ್ತ ಕಾಲಘಟ್ಟದಲ್ಲಿ ಮುದ್ರಣಾ ಮಾಧ್ಯಮಕ್ಕೆ ಸವಾಲಾಗಿದ್ದು, ವರದಿಗಾರರು ಕ್ಲಿಷ್ಟಕರ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಮಾಜದ ಅಭಿವೃದ್ದಿಗೆ ಪುರಕವಾದ ವರದಿ ನೀಡಿದಾಗ ಪತ್ರಕರ್ತನ ಘನತೆ ಹೆಚ್ಚುತ್ತದೆ ಎಂದು ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸುಬ್ರಹ್ಮಣ್ಯ ರಾವ್ ಹೇಳಿದರು. ಅವರು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ […]

 ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ Read More »

ಕರಾವಳಿ

ರೌಡಿಶೀಟರ್ ಪವನ್ ರಾಜ್ ಕೊಲೆ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.26. ಮಂಗಳೂರಿನ ಹೊರವಲಯದ ವಾಮಂಜೂರಿನಲ್ಲಿ ಮಂಗಳವಾರದಂದು ನಡೆದಿದ್ದ ಕೊಲೆ ಪ್ರಕರಣವನ್ನು ಕೃತ್ಯ ನಡೆದ 24 ಗಂಟೆಗಳೊಳಗಾಗಿ ಪೊಲೀಸರು ಬೇಧಿಸಿದ್ದಾರೆ. ಮಂಗಳವಾರದಂದು ರೌಡಿಶೀಟರ್ ಪವನ್ ರಾಜ್ ಶೆಟ್ಟಿಯನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಮಂಗಳೂರು ಗ್ರಾಮಾಂತರ ಪೋಲೀಸರು ಇದೀಗ ಹತ್ಯೆಗೆ ಸಂಬಂಧಿಸಿದಂತೆ ವಾಮಂಜೂರಿನ ಬಿಪಿನ್, ಶರಣ್ ಹಾಗೂ ಹರೀಶ್ ರವರನ್ನು ಬಂಧಿಸಿದ್ದಾರೆ. ಪವನ್ ರಾಜ್ ಕೊಲೆ ಮಾಡಿದ ಬಳಿಕ ಆರೋಪಿಗಳು ಹತ್ಯೆಗೆ ನಡೆಸಿದ ಲಾಂಗ್ ಮಚ್ಚುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಕೊಲೆಯಾದ ಪವನ್ ರಾಜ್

ರೌಡಿಶೀಟರ್ ಪವನ್ ರಾಜ್ ಕೊಲೆ ಆರೋಪಿಗಳ ಬಂಧನ Read More »

ಕರ್ನಾಟಕ

ಕಡಬ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು.25. ಠಾಣಾ ವ್ಯಾಪ್ತಿಯ ಕೊಲ್ಯದ ಕಟ್ಟೆ ಎಂಬಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಯುವಕನನ್ನು ಗೋಳಿಯಡ್ಕ ನಿವಾಸಿ ಅಮ್ಮು ಮುಗೇರ ಎಂಬವರ ಪುತ್ರ ವಸಂತ (26) ಎಂದು ಗುರುತಿಸಲಾಗಿದೆ. ಬುಧವಾರದಂದು ಬೆಳಿಗ್ಗೆ ಸ್ಥಳೀಯ ವ್ಯಕ್ತಿಯೊಂದಿಗೆ ಮೀನು ಹಿಡಿಯಲೆಂದು ತೆರಳಿದ್ದ ವಸಂತ ಕೊಲ್ಯದಕಟ್ಟೆ ಪವರ್ ಡ್ಯಾಂ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಎದೆನೋವು ಇದೆಯೆಂದು ಮನೆಯವರಲ್ಲಿ ತಿಲಿಸಿದ್ದಾರೆನ್ನಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕಾರಣ

ಕಡಬ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು Read More »

ಕರಾವಳಿ

ದಕ್ಷಿಣ ಕನ್ನಡಕ್ಕೆ ಒಲಿಯಲಿದೆಯೇ ರಾಜ್ಯ ಗೃಹ ಖಾತೆ ► ಗೃಹ ಸಚಿವರಾಗಿ ರಮಾನಾಥ ರೈ ಮುಂದುವರಿಕೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.26. ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯ ಗೃಹ ಸಚಿವರ ಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಗೆ ದಕ್ಕಲಿದೆಯೇ…? ಹೀಗೊಂದು ಗುಮಾನಿ ಸರಕಾರದ ವಲಯದಲ್ಲಿ ಹಬ್ಬುತ್ತಿದ್ದು ಅರಣ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರಿಗೆ ಗೃಹ ಸಚಿವರಾಗಿ ಮುಂದುವರಿಯಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ. ಗೃಹ ಖಾತೆ ಬೇಡ ಎಂದಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ಪಕ್ಷ ನೀಡುವ ಯಾವುದೇ ಅಧಿಕಾರವನ್ನು ನಿಭಾಯಿಸಬಲ್ಲೆ ಎಂದಿರುವುದರಿಂದ ಗೃಹ

ದಕ್ಷಿಣ ಕನ್ನಡಕ್ಕೆ ಒಲಿಯಲಿದೆಯೇ ರಾಜ್ಯ ಗೃಹ ಖಾತೆ ► ಗೃಹ ಸಚಿವರಾಗಿ ರಮಾನಾಥ ರೈ ಮುಂದುವರಿಕೆ…? Read More »

ಕರ್ನಾಟಕ

ಬೇಲಿಯೇ ಎದ್ದು ಹೊಲ ಮೇಯ್ದರೆ ಏನೆನ್ನಬಹುದು…? ► ಬಜ್ಪೆ: 34 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.25. ವಿಮಾನ ನಿಲ್ದಾಣದ ಸಿಬ್ಬಂದಿಯೇ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಕಂದಾಯ ಗುಪ್ತಚರ ನಿರ್ದೇಶಾನಲಯ ಅಧಿಕಾರಿಗಳು 34 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡ ಘಟನೆ ಮಂಗಳವಾರದಂದು ನಡೆದಿದೆ. ಬಜ್ಪೆ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್‌ವೇಸ್‌ನ ಏರ್‌ಕ್ರಾಫ್ಟ್ ನಿರ್ವಹಣೆಯ ತಾಂತ್ರಿಕ ಸಿಬಂದಿಯನ್ಬು ಬಂಧಿಸಿ ಆತನಿಂದ 1166.5 ಗ್ರಾಂ ತೂಕದ 34.41 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಗಲ್ಫ್ ರಾಷ್ಟ್ರದಿಂದ ಮಂಗಳೂರಿಗೆ ಬರುವ ವಿಮಾನದ ಶೌಚಾಲಯಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳ

ಬೇಲಿಯೇ ಎದ್ದು ಹೊಲ ಮೇಯ್ದರೆ ಏನೆನ್ನಬಹುದು…? ► ಬಜ್ಪೆ: 34 ಲಕ್ಷ ಮೌಲ್ಯದ ಚಿನ್ನ ವಶಕ್ಕೆ Read More »

ಕರಾವಳಿ

ಆಲಂಕಾರು: ಅಕ್ರಮ ಮದ್ಯ ಮಾರಾಟ ಪ್ರಕರಣ ► ಬೈಕ್, ಮದ್ಯದೊಂದಿಗೆ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com ಕಡಬ, ಜು.25. ಠಾಣಾ ವ್ಯಾಪ್ತಿಯ ಆಲಂಕಾರು ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಆಲಂಕಾರು ಗ್ರಾಮ ಪಂಚಾಯಿತಿಯಿಂದ ನೀಡಿದ ದೂರಿನಂತೆ ದಾಳಿ ನಡೆಸಿದ ಅಬಕಾರಿ ಇಲಾಖಾ ಅಧಿಕಾರಿಗಳು ಒರ್ವನನ್ನು ಬಂಧಿಸಿ ಬೈಕ್ ಹಾಗೂ 5ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ತಡರಾತ್ರಿ ಆಲಂಕಾರಿನಲ್ಲಿ ನಡೆದಿದೆ. ಪೆರಾಬೆ ಗ್ರಾಮದ ಸುರುಳಿ ಮೋನಪ್ಪ ಗೌಡರ ಪುತ್ರ ಕಿಟ್ಟಣ್ಣ ಗೌಡ(53ವ) ಬಂಧಿತ ಆರೋಪಿಯಾಗಿದ್ದು, ಈತ ಆಲಂಕಾರು ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪಗಳು

ಆಲಂಕಾರು: ಅಕ್ರಮ ಮದ್ಯ ಮಾರಾಟ ಪ್ರಕರಣ ► ಬೈಕ್, ಮದ್ಯದೊಂದಿಗೆ ಆರೋಪಿ ಸೆರೆ Read More »

ಕರಾವಳಿ

ವಿದ್ಯುತ್ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ಕೆಪಿಸಿಎಲ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 183 ಅಸಿಸ್ಟೆಂಟ್ ಇಂಜಿನಿಯರ್ ಮತ್ತು 165 ಜೂನಿಯರ್ ಇಂಜಿನಿಯರ್ ಸೇರಿದಂತೆ ಒಟ್ಟು 348 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು 2017ನೇ ಆಗಸ್ಟ್ 18 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಸಿಸ್ಟೆಂಟ್ ಇಂಜಿನಿಯರ್ (183 ಹುದ್ದೆಗಳು) ವಿದ್ಯಾರ್ಹತೆ: ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್

ವಿದ್ಯುತ್ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರ್ನಾಟಕ

ಮಂಗಳೂರು: ರೌಡಿಶೀಟರ್ ಪುತ್ರನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.25. ಮಾಜಿ ರೌಡಿಶೀಟರ್ ವಾಮಂಜೂರು ರೋಹಿಯ ಪುತ್ರನನ್ನು ತಂಡವೊಂದು ಕೊಚ್ಚಿ ಕೊಲೆಗೈದ ಘಟನೆ ವಾಮಂಜೂರಿನಲ್ಲಿ ಮಂಗಳವಾರದಂದು ಬೆಳಿಗ್ಗೆ ನಡೆದಿದೆ. ರೌಡಿಶೀಟರ್ ವಾಮಂಜೂರು ರೋಹಿಯ ಪುತ್ರ ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಗೊಂಡಿದ್ದ ರೌಡಿಶೀಟರ್ ಪವನ್ ರಾಜ್ ಶೆಟ್ಟಿ (22) ಎಂಬಾತನನ್ನು ವಾಮಂಜೂರು ಕುಕ್ಕಿಪಲ್ಕೆ ಎಂಬಲ್ಲಿ ನಾಲ್ವರು ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕೊಚ್ಚಿ ಕೊಲೆಗೈದಿದೆ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು: ರೌಡಿಶೀಟರ್ ಪುತ್ರನ ಬರ್ಬರ ಹತ್ಯೆ Read More »

ಕರಾವಳಿ

ಭಾರತದ 14ನೇ ರಾಷ್ಟ್ರಪತಿಯಾಗಿ ಇಂದು ಕೋವಿಂದ್ ಪ್ರಮಾಣ ವಚನ

(ನ್ಯೂಸ್ ಕಡಬ) newskadaba.com ನವದೆಹಲಿ, ಜು.25. ಭಾರತದ 14 ನೇ ರಾಷ್ಟ್ರಪತಿಯಾಗಿ ಎನ್ ಡಿಎಯ ರಾಮನಾಥ್ ಕೋವಿಂದ್ ಪಾರ್ಲಿಮೆಂಟಿನ ಸೆಂಟ್ರಲ್ ಹಾಲಿನಲ್ಲಿ ಮಂಗಳವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಿಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಜೆ.ಎಸ್.  ಖೇಹರ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಜುಲೈ 17 ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ರಾಮನಾಥ್ ಕೋವಿಂದ್ ಸೋಲಿಸಿದ್ದು, ಭಾರತದ 14ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ,

ಭಾರತದ 14ನೇ ರಾಷ್ಟ್ರಪತಿಯಾಗಿ ಇಂದು ಕೋವಿಂದ್ ಪ್ರಮಾಣ ವಚನ Read More »

ರಾಷ್ಟ್ರೀಯ ನ್ಯೂಸ್

ನಿಮಗೆ ಬ್ಯಾಂಕಿನಲ್ಲಿ ಸಾಲವಿದ್ದು ಕಂತು ಬಾಕಿಯಾಗಿದೆಯೇ…? ► ಇನ್ನು ಮುಂದೆ ಬ್ಯಾಂಕಿನವರು ಸಾಲ ಮರುಪಾವತಿ ಮಾಡಲು ಒತ್ತಡ ಹೇರುವಂತಿಲ್ಲ.‌‌‌..

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.24. ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮರುಪಾವತಿ ಮಾಡಲಾಗದೆ ಒದ್ದಾಡುತ್ತಿದ್ದೀರಾ..? ಬ್ಯಾಂಕಿನವರು ಸಾಲವನ್ನು ಮರುಪಾವತಿ ಮಾಡುವಂತೆ ನಿಮಗೆ ಒತ್ತಡ ಹೇರುತ್ತಿದ್ದಾರೆಯೇ…? ಇನ್ಮುಂದೆ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡು ತೀರಿಸಲಾಗದೇ ಒದ್ದಾಡುತ್ತಿರುವವರನ್ನು ದಿವಾಳಿ ಎಂದು ಘೋಷಿಸಲು ವಿಧಿವಿಧಾನವೊಂದನ್ನು ರೂಪಿಸುವ ನಿಟ್ಟಿನಲ್ಲಿ ಸರಕಾರವು ಹೊಸ ಕರಡನ್ನು ಸಿದ್ಧಲಡಿಸುತ್ತಿದೆ. ಇದು ಸಾಲಗಾರರು ಬ್ಯಾಂಕುಗಳ ಒತ್ತಡ ತಂತ್ರಗಳಿಗೆ ಸಿಲುಕಿ ನರಳುವುದರ ಬದಲು ತಮ್ಮ ಆರ್ಥಿಕ ಸಂಕಷ್ಟವನ್ನು ಬಗೆಹರಿಸಿ ಕೊಳ್ಳಲು ನೆರವಾಗಲಿದೆ. ಸುಸ್ತಿದಾರರು ವ್ಯವಸ್ಥಿತ ರೀತಿಯಲ್ಲಿ

ನಿಮಗೆ ಬ್ಯಾಂಕಿನಲ್ಲಿ ಸಾಲವಿದ್ದು ಕಂತು ಬಾಕಿಯಾಗಿದೆಯೇ…? ► ಇನ್ನು ಮುಂದೆ ಬ್ಯಾಂಕಿನವರು ಸಾಲ ಮರುಪಾವತಿ ಮಾಡಲು ಒತ್ತಡ ಹೇರುವಂತಿಲ್ಲ.‌‌‌.. Read More »

ರಾಷ್ಟ್ರೀಯ ನ್ಯೂಸ್
Scroll to Top