ದಕ್ಷಿಣ ಕನ್ನಡಕ್ಕೆ ಒಲಿಯಲಿದೆಯೇ ರಾಜ್ಯ ಗೃಹ ಖಾತೆ ► ಗೃಹ ಸಚಿವರಾಗಿ ರಮಾನಾಥ ರೈ ಮುಂದುವರಿಕೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.26. ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯ ಗೃಹ ಸಚಿವರ ಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಗೆ ದಕ್ಕಲಿದೆಯೇ…?

ಹೀಗೊಂದು ಗುಮಾನಿ ಸರಕಾರದ ವಲಯದಲ್ಲಿ ಹಬ್ಬುತ್ತಿದ್ದು ಅರಣ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರಿಗೆ ಗೃಹ ಸಚಿವರಾಗಿ ಮುಂದುವರಿಯಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.

ಗೃಹ ಖಾತೆ ಬೇಡ ಎಂದಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ಪಕ್ಷ ನೀಡುವ ಯಾವುದೇ ಅಧಿಕಾರವನ್ನು ನಿಭಾಯಿಸಬಲ್ಲೆ ಎಂದಿರುವುದರಿಂದ ಗೃಹ ಸಚಿವರ ಬಗ್ಗೆ ಸಾರ್ವಜನಿಕರಲ್ಲಿ ಭಾರಿ ಕುತೂಹಲವಿದೆ. ರಮಾನಾಥ ರೈಯವರಿಗೆ ಗೃಹ ಖಾತೆ ನೀಡಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ ಎನ್ನಲಾಗಿದೆ.

Scroll to Top