ಇನ್ನು ಪಾಸ್‌ಪೋರ್ಟ್ ಪಡೆಯುವುದು ಬಹಳ ಸುಲಭ ► ಇನ್ಮುಂದೆ ಜನನ ಪ್ರಮಾಣ ಪತ್ರ ಅಗತ್ಯವಿಲ್ಲ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.24. ಇನ್ನುಮುಂದೆ ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರ ಅಗತ್ಯವಿಲ್ಲ. ಭಾರತೀಯ ಪ್ರಜೆಗಳಿಗೆಗಾಗಿ ಪಾಸ್‌ಪೋರ್ಟ್ ಅನ್ನು ಸರಳಗೊಳಿಸುವ ಪ್ರಕ್ರಿಯೆ ಆರಂಭಿಸಲಾಗದೆ. ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರಕಾರ, ಜನ್ಮ ದಿನಾಂಕ ದಾಖಲೆಗಾಗಿ ಆಧಾರ್, ಪಾನ್ ಕಾರ್ಡ್‌ಗಳನ್ನು ಬಳಸಬಹುದು ಎಂದು ಹೇಳಿದೆ. 1980ರ ಪಾಸ್‌ಪೋರ್ಟ್ ನಿಯಮದ ಪ್ರಕಾರ, 26.01.1989ರಂದು ಹಾಗೂ ಬಳಿಕ ಜನಿಸಿದ ಪಾಸ್‌ಪೋರ್ಟ್ ಅರ್ಜಿದಾರರು ಕಡ್ಡಾಯವಾಗಿ ಜನನ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ ಇನ್ನು ಮುಂದೆ ಪಾಸ್‌ಪೋರ್ಟ್ ಅರ್ಜಿದಾರರು ಮಾನ್ಯತೆ ಪಡೆದ […]

ಇನ್ನು ಪಾಸ್‌ಪೋರ್ಟ್ ಪಡೆಯುವುದು ಬಹಳ ಸುಲಭ ► ಇನ್ಮುಂದೆ ಜನನ ಪ್ರಮಾಣ ಪತ್ರ ಅಗತ್ಯವಿಲ್ಲ Read More »

ರಾಷ್ಟ್ರೀಯ ನ್ಯೂಸ್

ಸೆಪ್ಟೆಂಬರ್ 21 ರಿಂದ ಮೈಸೂರು ದಸರಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.24. 2017ನೇ ಸಾಲಿನ ಮೈಸೂರು ದಸರಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಸಾಂಪ್ರದಾಯಿಕ ಹಾಗೂ ಆಕರ್ಷಣೀಯವಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಸೋಮವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ದಸರಾ ಆಚರಣೆ 2017 ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸೆಪ್ಟೆಂಬರ್ 21ರಂದು ಬೆಳಗ್ಗೆ ದಸರಾ ಉದ್ಘಾಟನೆಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೂ ಅಂದೇ ಚಾಲನೆ ನೀಡಲಾಗುವುದು. ನವರಾತ್ರಿಯು ಸೆ.29ರಂದು ಅಂತ್ಯ ಗೊಳ್ಳುತ್ತದೆ ಎಂದರು. ವಿಜಯ ದಶಮಿ

ಸೆಪ್ಟೆಂಬರ್ 21 ರಿಂದ ಮೈಸೂರು ದಸರಾ Read More »

ಕರ್ನಾಟಕ

1000 ರೂಪಾಯಿಯ ನೋಕಿಯಾ ಮೊಬೈಲ್ ಬಿಡುಗಡೆ

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಜು.24. ರಿಲಾಯನ್ಸ್ ಒಡೆತನದ ಜಿಯೋ ತನ್ನ ವಿಶೇಷ ಆಫರ್ ಗಳ ಮೂಲಕ ಟೆಲಿಕಾಂ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿರುವುದರ ಮಧ್ಯೆ ನೋಕಿಯಾ ಕಂಪೆನಿಯೂ ಸದ್ದುಮಾಡತೊಡಗಿದೆ. ವಿವಿಧ ಕಂಪೆನಿಗಳ ನವೀನ ಮಾದರಿಯ ಮಾಡೆಲ್‌ಗಳು ಮಾರುಕಟ್ಟೆಯನ್ನು ಅಲಂಕರಿಸಿದ್ದರೂ ನೋಕಿಯಾ ಹೆಸರು ಮಾತ್ರ ಈಗಲೂ ಬಳಕೆದಾರರ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಪ್ರಸ್ತುತ ನೋಕಿಯಾ ಎರಡು ಹೊಸ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನೋಕಿಯಾ 105 ಮತ್ತು ನೋಕಿಯಾ 130 ಆಗಿದೆ. ಈ ಎರಡೂ ಫೋನ್‌ಗಳು ಒಂದೇ ಸಿಮ್ ವೈಶಿಷ್ಟ್ಯತೆಯೊಂದಿಗೆ

1000 ರೂಪಾಯಿಯ ನೋಕಿಯಾ ಮೊಬೈಲ್ ಬಿಡುಗಡೆ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

ಸಾಂಸ್ಕೃತಿಕ ಲೋಕದ ದಿಗ್ಗಜ, ಡಿಂಡಿಮ ಚಿದಾನಂದ ಕಾಮತ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.24. ಸಾಂಸ್ಕೃತಿಕ ಲೋಕದ ದಿಗ್ಗಜ, ಮೇರುನಟ, ಮಕ್ಕಳ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದುಕೊಂಡಿದ್ದ ರಂಗಭೂಮಿಯಲ್ಲಿ ಮತ್ತು ಚಿತ್ರದಲ್ಲೂ ನಟನಾಗಿದ್ದ ಬೊಳುವಾರು ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡುರವರು ಸೋಮವಾರ ಬೆಳಗಿನ ಜಾವ ನಿಧನರಾದರು. ರಾತ್ರಿ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಸಾಂಸ್ಕೃತಿಕ ಲೋಕದ ದಿಗ್ಗಜ, ಡಿಂಡಿಮ ಚಿದಾನಂದ ಕಾಮತ್ ಇನ್ನಿಲ್ಲ Read More »

ಕರಾವಳಿ

ಬಾಹ್ಯಾಕಾಶ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.24. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋದ ಮಾಜಿ ಮುಖ್ಯಸ್ಥ ಪದ್ಮವಿಭೂಷಣ ಉಡುಪಿ ರಾಮಚಂದ್ರ ರಾವ್​ (85) ಸೋಮವಾರದಂದು ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದರು. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಜಾನೆ 2.30ರ ಸುಮಾರಿಗೆ ಕೊನೆಯುಸಿರೆಳಿದಿದ್ದಾರೆ. ಭೌತಿಕ ಸಂಶೋಧನಾ ಪ್ರಯೋಗಾಲಯ ಆಡಳಿತ ಮಂಡಳಿ ಹಾಗೂ ತಿರುವನಂತಪುರದ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದ ಅವರು ನಿವೃತ್ತರಾದ ಬಳಿಕವೂ ಹಲವು ಮಹತ್ವದ ಯೋಜನೆಗಳ ಭಾಗವಾಗಿದ್ದರು. ಲಕ್ಷ್ಮೀನಾರಾಯಣ ರಾವ್ ಹಾಗೂ

ಬಾಹ್ಯಾಕಾಶ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಎಸ್ಕೆಎಸ್ಸೆಸ್ಸೆಫ್ ಮಾಡಾವು ಯುನಿಟ್ ಅಧ್ಯಕ್ಷರಾಗಿ ಹಾರಿಸ್ ಪಾತುಂಜ ಆಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.24.  ಎಸ್ಕೆ ಎಸ್ ಎಸ್ ಎಫ್ ಮಾಡಾವು ಯುನಿಟ್ ಇದರ ಅಧ್ಯಕ್ಷರಾಗಿ ಹಾರಿಸ್ ಪಾತುಂಜ, ಪ್ರ್ರಧನ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಯ್ಯನಕಟ್ಟೆ, ಉಪಾಧ್ಯಕ್ಷರಾಗಿ ನಿಝಾಮ್ ಹೊನೆಸ್ಟ್, ಜೊತೆ ಕಾರ್ಯದರ್ಶಿಯಾಗಿ ಮಸೂದ್ ಮಾಡಾವು ಹಾಗೂ ಸಿರಾಜ್ ಎ.ಕೆ, ಕೋಶಾಧಿಕಾರಿಯಾಗಿ ಸುಲೈಮಾನ್ ಮುಸ್ಲಿಯಾರ್, ಲೆಕ್ಕ ಪರಿಶೋಧಕರಾಗಿ ಹನೀಫ್ ಹಾಜಿ ಹಾಗೂ ಶಾಫಿ ಕಣಿಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಖಾದರ್ ಮುಸ್ಲಿಯಾರ್ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಹಾಗೂ ಗೌರವ ಸಲಹೆಗಾರರಾಗಿ ಮೂಸಾ

ಎಸ್ಕೆಎಸ್ಸೆಸ್ಸೆಫ್ ಮಾಡಾವು ಯುನಿಟ್ ಅಧ್ಯಕ್ಷರಾಗಿ ಹಾರಿಸ್ ಪಾತುಂಜ ಆಯ್ಕೆ Read More »

ಕರಾವಳಿ

ಕಡಬ ಸರಕಾರಿ ಪದವಿ ಪೂರ್ವ ಕಾಲೇಜು: ವನಮಹೋತ್ಸವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಜು.24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ಬಿ ಒಕ್ಕೂಟ, ,ಕಡಬ ಸರಕಾರಿ ಪದವಿ ಪೂರ್ವ ಕಾಲೇಜ್ ಹಳೇವಿದ್ಯಾಥಿ೯ ಸಂಘ, ಕಡಬ ರಾಷ್ಟ್ರೀಯ ಸೇವಾ ಯೋಜನೆ ಘಟಕ ದ ಸಂಯುಕ್ತ ಆಶ್ರಯ ದಲ್ಲಿ “ವನಮಹೋತ್ಸವ” ಹಾಗೂ ಬೀಜದಉಂಡೆ ಬಿತ್ತೋತ್ಸವ ಕಾರ್ಯಕ್ರಮವು ಕಡಬ ‌ಸರಕಾರಿ ಪದವಿ ಪೂರ್ವ ಕಾಲೇಜ್ ನ‌ ವಠಾರದಲ್ಲಿ ಶನಿವಾರದಂದು ನಡೆಯಿತು. ಈ ಕಾರ್ಯ ಕ್ರಮದ ಅಧ್ಯಕ್ಷ ತೆಯನ್ನು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾದ

ಕಡಬ ಸರಕಾರಿ ಪದವಿ ಪೂರ್ವ ಕಾಲೇಜು: ವನಮಹೋತ್ಸವ ಕಾರ್ಯಕ್ರಮ Read More »

ಕರಾವಳಿ

ಕಡಬ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜು.24. ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ನಿವಾಸಿ ರೈತನೋರ್ವ ಸಾಲ ಬಾಧೆಯಿಂದಾಗಿ ಬೇಸತ್ತು ಶನಿವಾರದಂದು ವಿಷ ಸೇವಿಸಿದ್ದು, ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟ ರೈತನನ್ನು ಕುಟ್ರುಪ್ಪಾಡಿ ಕಾಂಞರವಿಳ ನಿವಾಸಿ ರಾಜು(54) ಎಂದು ಗುರುತಿಸಲಾಗಿದೆ‌. ಅಪಾರ ಸಾಲದಿಂದಿದ್ದು, ಕೃಷಿಯಲ್ಲಿನ ಬೆಲೆಯೇರಿಕೆಯಿಂದಾಗಿ ಬೇಸತ್ತು ಶನಿವಾರ ಸಂಜೆ ವಿಷ ಸೇವಿಸಿದ ರಾಜುರವರು ಪುತ್ತೂರಿನ ಪ್ರಗತಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು. ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ‌.

ಕಡಬ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ Read More »

ಕರಾವಳಿ

ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23. ನಗರದ ಅಳಕೆಯ ಫಲ್ಗುಣಿ ನದಿ ಸಮೀಪ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಅಳಕೆ ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಅಡ್ಡೂರು ಸಮೀಪದ ನೂಹಿ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಮಂಗಳೂರಿನ ಮಹೇಶ್ ಕಾಲೇಜಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಅರ್ಶದ್ (17) ಎಂದು ಗುರುತಿಸಲಾಗಿದೆ. ಈತ ನಗರದ ಅಳಕೆಯ ಫಲ್ಗುಣಿ ನದಿ ಸಮೀಪದಲ್ಲಿ ಹೊಂಡವೊಂದಿದ್ದು, ಮಳೆಗಾಲವಾದುದರಿಂದ ಅದರಲ್ಲಿ ನೀರು ತುಂಬಿತ್ತು. ರವಿವಾರ ಸಂಜೆ ಅರ್ಶದ್ ಮತ್ತು ಆತನ

ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು Read More »

ಕರಾವಳಿ

ಸೇತುವೆ ಕಾಮಗಾರಿ ನಡೆದರೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ, ಈ ವರ್ಷವೂ ನೆರೆ ನೀರಿನ ಭೀತಿ ತಪ್ಪಿಲ್ಲ….!

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿಗೆ ಸಮೀಪದ ಹೊಸಮಠ ಎಂಬಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಮುಗಿದರೂ ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣವಾಗದೆ ಈ ವರ್ಷವೂ ಹೊಸಮಠದ ಹಳೇ ಸೇತುವೆ ಮುಳುಗಡೆಗೊಂಡು ಜನರು ಸುತ್ತು ಬಳಸಿ ಪ್ರಯಾಣಿಸಬೇಕಾಗಿದೆ. ಹೊಸ ಸೇತುವೆ ಕಾಮಗಾರಿ ಪುರ್ಣಗೊಂಡರೂ ಸಂಪರ್ಕ ರಸ್ತೆ ನಿರ್ಮಾಣವಾಗದೆ ಈ ವರ್ಷವೂ ಹಳೆ ಸೇತುವೆಯನ್ನು ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನೆರೆ ಭೀತಿ ಹಾಗೂ ಅಪಾಯ ಇನ್ನೂ ಅಬಾಧಿತವಾಗಿದೆ. ಈ ಭಾಗದ ಜನತೆಯ ಬಹು ನಿರೀಕ್ಷೆಯ ಬೃಹತ್ ಸೇತುವೆ

ಸೇತುವೆ ಕಾಮಗಾರಿ ನಡೆದರೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ, ಈ ವರ್ಷವೂ ನೆರೆ ನೀರಿನ ಭೀತಿ ತಪ್ಪಿಲ್ಲ….! Read More »

ಕರಾವಳಿ
Scroll to Top