ಬಿಜೆಪಿಯ ಸೇಡಿನ ರಾಜಕೀಯದಿಂದ ಡಿಕೆಶಿ ಮೇಲೆ ಐಟಿ ದಾಳಿ ► ನಾಳೆ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ಸಚಿವ ಡಿ.ಕೆ.ಶಿವಕುಮಾರ್ ಮನೆ ಹಾಗೂ ಕಚೇರಿಯ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಖಂಡಿಸಿ ಆ.04 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಡಬ ವಿಶೇಷ ತಹಶೀಲ್ದಾರ್ ರವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಹಾಗೂ ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸೇಡಿನ ರಾಜಕೀಯಕ್ಕಾಗಿ ಕಾನೂನನ್ನು ಗಾಳಿಗೆ ತೂರಿ ಆದಾಯ ತೆರಿಗೆ […]

ಬಿಜೆಪಿಯ ಸೇಡಿನ ರಾಜಕೀಯದಿಂದ ಡಿಕೆಶಿ ಮೇಲೆ ಐಟಿ ದಾಳಿ ► ನಾಳೆ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ Read More »

ಕರಾವಳಿ

ಕಡಬ: ತೀವ್ರ ತರದ ಜ್ವರಕ್ಕೆ ಮಹಿಳೆ ಬಲಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ಕಡಬ ಗ್ರಾಮದ ಪಿಜಕ್ಕಳ ಲಕ್ಷ್ಮೀನಾರಾಯಣ ಆಚಾರಿ ಎಂಬವರ ಪತ್ನಿ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಸುಗುಣ(35) ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಕಳೆದೊಂದು ವಾರದಿಂದ ತೀವ್ರ ತರದ ಜ್ವರದಿಂದ ಬಳಲುತ್ತಿದ್ದ ಸುಗುಣರವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ಮೃತರಾಗಿದ್ದಾರೆ. ಇವರು ಪತಿ ಲಕ್ಷ್ಮೀ ನಾರಾಯಣ, ಪುತ್ರ ರೀತೇಶ್ ಹಾಗೂ ಪುತ್ರಿ ಜ್ಯೋತಿಕಾರನ್ನು ಅಗಲಿದ್ದಾರೆ.

ಕಡಬ: ತೀವ್ರ ತರದ ಜ್ವರಕ್ಕೆ ಮಹಿಳೆ ಬಲಿ Read More »

ಕರಾವಳಿ

ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ಕೈಕಂಬಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ವಿಸ್ತಾರಕರಾಗಿ ಕಡಬ ಶಕ್ತಿ ಕೇಂದ್ರದ ಕೈಕಂಬ ಬೂತ್ ಸಮಿತಿಗೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಡಬ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಬಿಳಿನೆಲೆ ತಾ.ಪಂ.ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್, ಕಡಬ ಶಕ್ತಿ ಕೇಂದ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್ ವಾಲ್ತಾಜೆ, ಬಿಳಿನೆಲೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಘು ಚೆಂಡೆಹಿತ್ಲು, ಬಿಳಿನೆಲೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಿ.,

ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ಕೈಕಂಬಕ್ಕೆ ಭೇಟಿ Read More »

ಕರಾವಳಿ

ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ► ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಒಕ್ಕೂಟ ಜನಜಾಗೃತಿ ವೇದಿಕೆಯಲ್ಲಿ ಒಮ್ಮತದ ತೀರ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಆ.02. ಬಿಳಿನೆಲೆ ಗ್ರಾಮದಲ್ಲಿ ಮಾತ್ರವಲ್ಲದೆ ಇಡೀ ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯದಂಗಡಿ, ಬಾರ್ & ರೆಸ್ಟೋರೇಂಟ್, ರೆಸಾರ್ಟ್ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀಕ್ಷೇ.ಧ.ಗ್ರಾ.ಯೋಜನೆಯ ಬಿಳಿನೆಲೆ ವಲಯ ಒಕ್ಕೂಟ, ಬಿಳಿನೆಲೆ ಜನಜಾಗೃತಿ ವತಿಯಿಂದ ಆ.1 ರಂದು ಬಿಳಿನೆಲೆ ಶ್ರಿ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಿಳಿನೆಲೆ, ಕೊಂಬಾರು, ಕೈಕಂಬ, ಐತ್ತೂರು, ಒಕ್ಕೂಟ ಹಾಗೂ ವಲಯ ಜನಜಾಗೃತಿ ಸಮಿತಿ ವತಿಯಿಂದ ತೀರ್ಮಾನಿಸಿದ್ದಲ್ಲದೆ ಈ ಬಗ್ಗೆ ಬಿಳಿನೆಲೆ ಗ್ರಾ.ಪಂ.ಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಘಟನೆ ನಡೆಯಿತು. ಮನವಿ

ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ► ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಒಕ್ಕೂಟ ಜನಜಾಗೃತಿ ವೇದಿಕೆಯಲ್ಲಿ ಒಮ್ಮತದ ತೀರ್ಮಾನ Read More »

ಕರಾವಳಿ

ಮರ್ದಾಳ: ವಿವಾಹಿತ ಮಹಿಳೆ ನಾಪತ್ತೆ ► ಕಡಬ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಆ.02. ಅಂಗಡಿಗೆ ಸಾಮಾನು ತರಲೆಂದು ಹೋದ ಮಹಿಳೆಯೊರ್ವಳು ನಾಪತ್ತೆಯಾಗಿರುವ ಘಟನೆ ಜು.29ರಂದು ನಡೆದಿದ್ದು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ಕುಡಾಲ ನಿವಾಸಿ ಸಿ. ರವಿಚಂದ್ರನ್ ಎಂಬವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ರವಿಚಂದ್ರನ್ ಪತ್ನಿ ಹಾಗೂ 2 ವರ್ಷದ ಮಗುವಿನೊಂದಿಗೆ ಕುಡಾಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ರವಿಚಂದ್ರನ್ ಅವರ ಅಕ್ಕ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ಕಾರಣ ಜು.24ರಿಂದ ಮಂಗಳೂರಿನ ಆಸ್ಪತ್ರೆಯಲ್ಲೇ ಇದ್ದು, ಜು.29ರಂದು ಸಂಜೆ ಮನೆಯ

ಮರ್ದಾಳ: ವಿವಾಹಿತ ಮಹಿಳೆ ನಾಪತ್ತೆ ► ಕಡಬ ಠಾಣೆಯಲ್ಲಿ ದೂರು ದಾಖಲು Read More »

ಕರಾವಳಿ

ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.02. ಕಟ್ಟಡ ಪರವಾನಗಿ ನೀಡಲು ಲಂಚ ಕೇಳಿದ್ದಾರೆ ಎಂದು ಉದ್ಯಮಿ ಕೆ.ಟಿ. ತೋಮ್ಸನ್ ಮಾಡಿರುವ ಅರೋಪ ಆಧಾರ ರಹಿತವಾಗಿದ್ದು, ಈ ವಿಚಾರದಲ್ಲಿ ಯಾವುದೇ ಸತ್ಯ ಪ್ರಮಾಣಕ್ಕೆ ಸಿದ್ದ ಎಂದು ಬಿಳಿನೆಲೆ ಗ್ರಾ.ಪಂ ಅಧ್ಯಕ್ಷೆ ಶಾರದ ದಿನೇಶ್ ಹೇಳಿದರು. ಅವರು ಬುಧವಾರ ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಪಂಚಾಯಿತಿ ಸದಸ್ಯಳಾಗಿ ಅಧ್ಯಕ್ಷಳಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪುರಕವಾಗಿ ಕೆಲಸ ಮಾಡುತ್ತಿದ್ದೆನೆ. ನಾನು ಉತ್ತಮ ರೀತಿಯಲ್ಲಿ ಸಮಾಜ ಸೇವೆ

ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ Read More »

ಕರಾವಳಿ

ನೆಲ್ಯಾಡಿ: ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.02. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ನೆಲ್ಯಾಡಿಯಲ್ಲಿ ಮದ್ಯದಂಗಡಿಯೊಂದಕ್ಕೆ ಪರವಾನಿಗೆ ನೀಡಿರುವ ಅಬಕಾರಿ ಇಲಾಖೆಯ ವಿರುದ್ಧ ನೆಲ್ಯಾಡಿಯಲ್ಲಿಂದು ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯ, ನೆಲ್ಯಾಡಿ-ಕೌಕ್ರಾಡಿ ಗ್ರಾಮಗಳ ಎಲ್ಲ ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಂಘಟನೆಗಳು ಮತ್ತು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಸಂಘಟಿಸಲಾಗಿರುವ ಈ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ 220 ಮೀಟರ್ ಅಂತರದಲ್ಲಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಗಳನ್ನು

ನೆಲ್ಯಾಡಿ: ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ Read More »

ಕರಾವಳಿ

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.02. ರಾಜ್ಯ ಇಂಧನ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ನಿವಾಸ, ಕಾಂಗ್ರೆಸ್ ನಾಯಕರು ಹಾಗೂ ಗುಜರಾತ್ ನ ಶಾಸಕರು ತಂಗಿರುವ ರೆಸಾರ್ಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ.ಕೆ ಶಿವಕುಮಾರ್ ಅವರ ‘ಕೆಂಕೇರಿ’ ನಿವಾಸ ಮತ್ತು ಕಚೇರಿ, ಅವರ ಆಪ್ತ ವಿಧಾನಪರಿಷತ್ ಸದಸ್ಯ ಕನಕಪುರದ ಎಸ್. ರವಿ ನಿವಾಸ, ಶಿವಕುಮಾರ್ ಸಹೋದರ ಸಂಸದ ಡಿ.ಕೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ Read More »

ಕರ್ನಾಟಕ

ಇಲ್ಲೊಬ್ಬರು ಮನೆ ನಿರ್ಮಿಸಿ ಮೋದಿ ಹೆಸರಿಟ್ಟರು ► ಉದ್ಘಾಟನೆಗಾಗಿ ಆಹ್ವಾನ ಪತ್ರಿಕೆ ಕಳುಹಿಸಿದರು

(ನ್ಯೂಸ್ ಕಡಬ) newskadaba.com ಚನ್ನಪಟ್ಟಣ, ಆ.02. ಮನೆ ಕಟ್ಟಿದಾಕ್ಷಣ ದೇವರ ಹೆಸರು, ಮಕ್ಕಳ ಹೆಸರು, ಸಾಂಸ್ಕೃತಿಕ ಹೆಸರು ಮೊದಲಾದ ತಮ್ಮ ಅಭಿರುಚಿಗೆ ತಕ್ಕಂತೆ ಹೆಸರು ಇಡುವುದು ಸಹಜ. ಆದರೆ ಇಲ್ಲೊಬ್ಬರು ತಾವು ಕಟ್ಟಿಸಿದ ಮನೆಗೆ ಭಾರತದ ಪ್ರಧಾನ ಮಂತ್ರಿಯ ಹೆಸರನ್ನು ಇಟ್ಟು ಅಚ್ಚರಿ ಮೂಡಿಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿ ಮಾದಯ್ಯ ಶೆಟ್ಟಿಯವರು ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ ‘ಶ್ರೀ ಮೋದಿ ನಿಲಯ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಅಲ್ಲದೇ ಆಗಸ್ಟ್ 06

ಇಲ್ಲೊಬ್ಬರು ಮನೆ ನಿರ್ಮಿಸಿ ಮೋದಿ ಹೆಸರಿಟ್ಟರು ► ಉದ್ಘಾಟನೆಗಾಗಿ ಆಹ್ವಾನ ಪತ್ರಿಕೆ ಕಳುಹಿಸಿದರು Read More »

ಕರ್ನಾಟಕ

ದುಡಿಯಲೆಂದು ದುಬೈಗೆ ತೆರಳಿದವ 87 ಲಕ್ಷದ ಮನೆಯೊಡೆಯನಾದ ► ಮಂಗಳೂರಿನ ಯುವಕನಿಗೆ ಖುಲಾಯಿಸಿದ ಅದೃಷ್ಟ

(ನ್ಯೂಸ್ ಕಡಬ) newskadaba.com ದುಬೈ, ಆ.01. ಯುಎಇ ಎಕ್ಸ್‌ಚೇಂಜ್ ಸಂಸ್ಥೆಯ ಸಮ್ಮರ್ ಪ್ರಮೋಶನ್-2017 ‘ವಿನ್ ಎ ಹೋಮ್ ಇನ್ ದುಬೈ’ ಸ್ಪರ್ಧೆಯಲ್ಲಿ ಬಂಪರ್ ಬಹುಮಾನವಾಗಿ ನೀಡಲ್ಪಡುವ 5 ಲಕ್ಷ ದಿರ್ಹಮ್ ಮೌಲ್ಯದ ಮನೆಯನ್ನು ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಉಬೈದುಲ್ಲಾ ತನ್ನದಾಗಿಸಿಕೊಂಡಿದ್ದಾರೆ. ಯುಎಇ ಎಕ್ಸ್‌ಚೇಂಜ್ ಸಮೂಹವು ಬಂಪರ್ ಬಹುಮಾನವಾಗಿ ದುಬೈನಲ್ಲಿ ಮನೆ ಯೋಜನೆಯನ್ನು ಪ್ರಕಟಿಸಿತ್ತು. ಉಳಿದಂತೆ 26 ಮಂದಿ ವಿಜೇತರಿಗೆ10,000 ದಿರ್ಹಮ್ ಬಹುಮಾನ ನೀಡಲಾಗಿದೆ. ದುಬೈ ನಗರದಲ್ಲಿ ಮನೆಯೊಂದನ್ನು ಹೊಂದುವುದು ಹಲವರ ಪಾಲಿನ ಕನಸಾಗಿದೆ. ಇದನ್ನು ಗಮನಿಸಿಯೇ

ದುಡಿಯಲೆಂದು ದುಬೈಗೆ ತೆರಳಿದವ 87 ಲಕ್ಷದ ಮನೆಯೊಡೆಯನಾದ ► ಮಂಗಳೂರಿನ ಯುವಕನಿಗೆ ಖುಲಾಯಿಸಿದ ಅದೃಷ್ಟ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top