ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ದಾವಣಗೆರೆ, ನ.30. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ 07 ವರ್ಷದ ಬಾಲಕಿಯೊಬ್ಬಳು ಬಟ್ಟೆಗೆ ಬೆಂಕಿ ಹಚ್ಚಿಕೊಂಡು ಸಂಪೂರ್ಣ ಬೆಂದು ನರಳಿ ನರಳಿ ದಾರುಣ ಅಂತ್ಯಕಂಡ ಘಟನೆ ಇಲ್ಲಿನ ಹರಿಹರದಲ್ಲಿ ನಡೆದಿದ್ದು, ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಣ್ಣ ವಯಸ್ಸಿನ ಮಕ್ಕಳಿಗೆ ಟಿವಿ, ಮಾಧ್ಯಮಗಳಲ್ಲಿ ಬರುವ ಕೆಲ ದೃಶ್ಯಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ದುರಂತ ಸಾಕ್ಷಿ. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ  7 ವರ್ಷ ದ ಬಾಲಕಿಯೊಬ್ಬಳು ಬಟ್ಟೆಗೆ […]

ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು Read More »

ಕರ್ನಾಟಕ

ಪೊಲೀಸ್ ಇಲಾಖೆಯ ಕೈಗಾರಿಕಾ ಭದ್ರತಾ ದಳ ► 395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.30. ರಾಜ್ಯ ಪೊಲೀಸ್ ಇಲಾಖೆಯ ಕೈಗಾರಿಕಾ ಭದ್ರತಾ ದಳ (ಕೆಎಸ್ಐಎಸ್ಎಫ್)ದಲ್ಲಿ 395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. 356 ಪುರುಷ ಅಭ್ಯರ್ಥಿಗಳು ಹಾಗೂ 39 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 395 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, ಇಲಾಖೆಯು ನಿಗದಿಪಡಿಸಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಒಂದಕ್ಕಿಂತ ಹೆಚ್ಚು ಜೀವಂತ ಪತ್ನಿ ಹೊಂದಿರುವ ಪುರುಷ ಮತ್ತು

ಪೊಲೀಸ್ ಇಲಾಖೆಯ ಕೈಗಾರಿಕಾ ಭದ್ರತಾ ದಳ ► 395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಈದ್ ಮೀಲಾದ್ ಪ್ರಯುಕ್ತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಡಿ.01. ರಂದು ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.29. ಈದ್ ಮಿಲಾದ್ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಡಿ.1ರಂದು ರಜೆ ಘೋಷಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಮೀಲಾದುನ್ನಬಿ ಆಚರಣೆಗೆ ಡಿ.02 ರಂದು ಸರಕಾರಿ ರಜೆ ಘೋಷಿಸಿ ರಾಜ್ಯ ಸರಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೀಲಾದುನ್ನಬಿಯನ್ನು ಮುಸ್ಲಿಮರು ಡಿ.01 ರಂದು ಆಚರಿಸುತ್ತಿರುವುದರಿಂದ ಅಂದೇ ಸರಕಾರಿ ರಜೆ ಘೋಷಿಸುವಂತೆ ಆಹಾರ ಸಚಿವ ಯು.ಟಿ.ಖಾದರ್ ಅವರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಪರಿಣಾಮ ದಕ್ಷಿಣ

ಈದ್ ಮೀಲಾದ್ ಪ್ರಯುಕ್ತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಡಿ.01. ರಂದು ರಜೆ Read More »

ಕರ್ನಾಟಕ

ಬೆಳ್ತಂಗಡಿ: ಮನೆಯ ಒಡೆಯನನ್ನು ಕಟ್ಟಿಹಾಕಿದ ದರೋಡೆಕೋರರು ► ನಗ – ನಗದು ಸೇರಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.29. ಇಲ್ಲಿನ ಹೇಂತನಾಜೆ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿರುವ ದರೋಡೆಕೋರರು ಮನೆಯವರನ್ನು ಕಟ್ಟಿ ಹಾಕಿ ನಗ-ನಗದು ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ದರೋಡೆಗೈದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ದರೋಡೆಗೆ ಒಳಗಾದವರನ್ನು ಹೇಂತನಾಜೆ ನಿವಾಸಿ ನಾಗೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಒಬ್ಬರೇ ಇದ್ದ ಕಾರಣ ಪೇಟೆಗೆ ತೆರಳಿ ರಾತ್ರಿ 10:30ರ ಸುಮಾರಿಗೆ ನಾಗೇಂದ್ರ ಪ್ರಸಾದ್ ಹಿಂತಿರುಗಿ ಮನೆಗೆ ಬಂದು ಮನೆಯ ಬೀಗ ತೆಗೆಯುತ್ತಿದ್ದ ವೇಳೆ ದಾಳಿ ನಡೆಸಿದ ದರೋಡೆಕೋರರು ಮನೆಯೊಳಗೆ

ಬೆಳ್ತಂಗಡಿ: ಮನೆಯ ಒಡೆಯನನ್ನು ಕಟ್ಟಿಹಾಕಿದ ದರೋಡೆಕೋರರು ► ನಗ – ನಗದು ಸೇರಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಕಳ್ಳರ ಪಾಲು Read More »

ಕರಾವಳಿ

ವಿಟ್ಲ: ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಲಾರಿ ► ನಿವೃತ್ತ ಯೋಧ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ನ.29. ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ನಿವೃತ್ತ ಯೋಧ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಕಾಶಿಮಠ ಎಂಬಲ್ಲಿ ಬುಧವಾರದಂದು ನಡೆದಿದೆ. ಮೃತರನ್ನು ಕನ್ಯಾನ ಮೂಲದ ಅಂಗ್ರಿ ನಿವಾಸಿ ವೆಂಕಪ್ಪ ಮೂಲ್ಯ ಎಂದು ಗುರುತಿಸಲಾಗಿದೆ. ಅವರು ತನ್ನ ಬೈಕಿನಲ್ಲಿ ವಿಟ್ಲಕ್ಕೆ ಬರುತ್ತಿದ್ದ ಸಂದರ್ಭ ಲಾರಿಯೊಂದು ವೆಂಕಪ್ಪ ಮೂಲ್ಯರಿದ್ದ ಬೈಕಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದಿದ್ದು, ರಸ್ತೆಗೆಸೆಯಲ್ಪಟ್ಟ ವೆಂಕಪ್ಪರ ತಲೆಯ ಮೇಲೆ ಲಾರಿಯ ಚಕ್ರ ಹರಿದಿದೆ. ತಕ್ಷಣವೇ ವೆಂಕಪ್ಪ ಮೂಲ್ಯರನ್ನು

ವಿಟ್ಲ: ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಲಾರಿ ► ನಿವೃತ್ತ ಯೋಧ ಮೃತ್ಯು Read More »

ಕರಾವಳಿ

ಉದನೆ: ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಲ್ಲಿ ಕೈಚಳಕ ತೋರಿಸಿದ ಕಳ್ಳರು ► ನೂರಕ್ಕೂ ಅಧಿಕ ಬಾಕ್ಸ್ ಅಡುಗೆ ಎಣ್ಣೆ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.28. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯಿಂದ ಅಡುಗೆ ಎಣ್ಣೆಗಳನ್ನು ಕಳವುಗೈದಿರುವ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ. ಅಡುಗೆ ಎಣ್ಣೆಯ ಬಾಕ್ಸ್ ಗಳನ್ನು ಲೋಡ್ ಮಾಡಿ ರಾತ್ರಿ ವೇಳೆ ಉದನೆಯಲ್ಲಿ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಚಾಲಕ ನಿದ್ದೆ ಮಾಡಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಎದ್ದು ನೋಡುವಾಗ ಲೋಡ್ ಮಾಡಿ ಮುಚ್ಚಲಾಗಿದ್ದ ಟಾರ್ಪಾಲನ್ನು ಹರಿದು ಲಾರಿಯಿಂದ ನೂರಕ್ಕೂ ಅಧಿಕ ಎಣ್ಣೆಯ ಬಾಕ್ಸ್ ಗಳನ್ನು ಕದಿಯುವ

ಉದನೆ: ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಲ್ಲಿ ಕೈಚಳಕ ತೋರಿಸಿದ ಕಳ್ಳರು ► ನೂರಕ್ಕೂ ಅಧಿಕ ಬಾಕ್ಸ್ ಅಡುಗೆ ಎಣ್ಣೆ ಕಳ್ಳರ ಪಾಲು Read More »

ಕರಾವಳಿ

ಸುದ್ದಿ ಬಿಡುಗಡೆಯ ಸಂಪಾದಕರಿಗೆ ‘ಮಾಧ್ಯಮ ವಾರ್ಷಿಕ ಪ್ರಶಸ್ತಿ’ ► 40 ಮಂದಿ ಪತ್ರಕರ್ತರಿಗೆ ಒಳಿದು ಬಂತು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.28. ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡಮಿಯು 2017ನೆ ಸಾಲಿನ “ಮಾಧ್ಯಮ ವಾರ್ಷಿಕ ಪ್ರಶಸ್ತಿ”ಗೆ ರಾಜ್ಯದ 40 ಪತ್ರಕರ್ತರನ್ನು ಆಯ್ಕೆ ಮಾಡಿದ್ದು, ಈ‌ ಸಾಲಿನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು.ಪಿ. ಶಿವಾನಂದ ರವರನ್ನು ಪ್ರಶಸ್ತಿ ಅರಸಿ ಬಂದಿದೆ. ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಶಸ್ತಿ ಪ್ರಧಾನ‌ ಮಾಡಲಿದ್ದಾರೆ ಎಂದು ಕರ್ನಾಟಕ

ಸುದ್ದಿ ಬಿಡುಗಡೆಯ ಸಂಪಾದಕರಿಗೆ ‘ಮಾಧ್ಯಮ ವಾರ್ಷಿಕ ಪ್ರಶಸ್ತಿ’ ► 40 ಮಂದಿ ಪತ್ರಕರ್ತರಿಗೆ ಒಳಿದು ಬಂತು ಪ್ರಶಸ್ತಿ Read More »

ಕರ್ನಾಟಕ

ವಿಟ್ಲ: ಸೊಸೈಟಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ► ಕಳ್ಳತನಕ್ಕೆ ವಿಫಲ ಯತ್ನ

(ನ್ಯೂಸ್ ಕಡಬ) newskadaba.com ವಿಟ್ಲ, ನ.28. ನಗರದ ಹೊರವಲಯದ ಮಂಗಳಪದವಿನ ಸೊಸೈಟಿಯೊಂದರ ಶಟರ್ ಮುರಿದು ಒಳನುಗ್ಗಿರುವ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಮಂಗಳವಾರದಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಂಗಳಪದವು ಶಾಖೆಯ ಒಳ ನುಗ್ಗಿದ ಕಳ್ಳರು ಬ್ಯಾಂಕಿನೊಳಗಿದ್ದ ಕ್ಯಾಷ್ ಡ್ರಾವರ್, ಕಪಾಟನ್ನು ಮುರಿದು ಹಣಕ್ಕಾಗಿ ಜಾಲಾಡಿದ್ದು, ಬ್ಯಾಂಕ್ ಲಾಕರನ್ನು ಮುರಿಯಲು ವಿಫಲ ಯತ್ನ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ವಿಟ್ಲ: ಸೊಸೈಟಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ► ಕಳ್ಳತನಕ್ಕೆ ವಿಫಲ ಯತ್ನ Read More »

ಕರಾವಳಿ

ಕೋಡಿಂಬಾಳ, ಪಾದರೆ ನಿವಾಸಿಗಳ ಈಡೇರದ ರಸ್ತೆ ನಿರ್ಮಾಣ ಬೇಡಿಕೆ ► ಮುಂದಿನ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

(ನ್ಯೂಸ್ ಕಡಬ) newskadaba.com ಕಡಬ, ನ.28. ಇಲ್ಲಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸಮೀಪ ಪಾದರೆ ಎಂಬಲ್ಲಿಗೆ ಕಡಬ-ಪಂಜ ಮುಖ್ಯ ರಸ್ತೆಯಿಂದ ರಸ್ತೆ ಸಂಪರ್ಕಕ್ಕಾಗಿ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸುತ್ತಾ, ಜನಪ್ರತಿನಿಧಿಗಳ ಭರವಸೆಯಲ್ಲಿ ಕಾಲ ಕಳೆದಿರುವ ಇಲ್ಲಿನ ನಿವಾಸಿಗಳು ನಿರಾಸೆಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸದೆ ಇರಲು ನಿರ್ಧರಿಸಿದ್ದಾರೆ. ಓಂತ್ರಡ್ಕ ಸಮೀಪದ ಪಾದರೆ ಎಂಬಲ್ಲಿ ಸುಮಾರು 10-15 ಕುಟುಂಬಗಳಿದ್ದು ಸುಮಾರು 40-50 ಮಂದಿ ಇದ್ದಾರೆ, ಇವರಿಗೆ ಕಡಬ-ಪಂಜ ರಾಜ್ಯ ಹೆದ್ದಾರಿಯಿಂದ ಸುಮಾರು 300

ಕೋಡಿಂಬಾಳ, ಪಾದರೆ ನಿವಾಸಿಗಳ ಈಡೇರದ ರಸ್ತೆ ನಿರ್ಮಾಣ ಬೇಡಿಕೆ ► ಮುಂದಿನ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ Read More »

ಕರಾವಳಿ

ಪೇರಡ್ಕ: ಹಸುವಿನ ಮೇಲೆ ಹರಿದ ಕಾರು ► ಮೇಯುತ್ತಿದ್ದ ಹಸು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ. 28. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿಯಡ್ಕ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದು ಹಸುವಿನ ಮೇಲೆ ಹರಿದ ಪರಿಣಾಮ ಹಸು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರದಂದು ನಡೆದಿದೆ. ಗೋಳಿಯಡ್ಕದಿಂದ ಪೇರಡ್ಕ ಹೊರಟಿದ್ದ ಡೀಕಯ್ಯ ಎಂಬವರು ಚಲಾಯಿಸುತ್ತಿದ್ದ ಕಾರು ವಿರುದ್ಧ ದಿಕ್ಕಿನಲ್ಲಿ ಚಲಿಸಿ ರಸ್ತೆ ಬದಿಯಲ್ಲಿ ಮೇಯಲು ಕಟ್ಟಿ ಹಾಕಿದ್ದ ಶೀನಪ್ಪ ಗೌಡ ಎಂಬವರಿಗೆ ಸೇರಿದ ದನದ ಮೇಲೆ ಹರಿದ ಪರಿಣಾಮ ದನ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಯಲ್ಲಿ

ಪೇರಡ್ಕ: ಹಸುವಿನ ಮೇಲೆ ಹರಿದ ಕಾರು ► ಮೇಯುತ್ತಿದ್ದ ಹಸು ಸ್ಥಳದಲ್ಲೇ ಮೃತ್ಯು Read More »

ಕರಾವಳಿ
Scroll to Top