ಕುಟ್ರುಪ್ಪಾಡಿಯ ಸರಕಾರಿ ಶಾಲೆಯಲ್ಲಿ ತರಕಾರಿ ಸಂತೆ ► ಕೇಪು ಶಾಲೆಯಲ್ಲಿ ಗಮನ ಸೆಳೆದ ಮೆಟ್ರಿಕ್ ಮೇಳ

(ನ್ಯೂಸ್ ಕಡಬ) newskadaba.com ಕಡಬ, ನ.26. ಕುಟ್ರುಪ್ಪಾಡಿ ಗ್ರಾಮದ ಕೇಪು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ  ವಿದ್ಯಾರ್ಥಿಗಳಲ್ಲಿ ವ್ಯಾಪಾರ, ಲೆಕ್ಕಾಚಾರ, ವ್ಯವಹಾರ ಜ್ಞಾನ ವೃದ್ಧಿಸುವ ಮತ್ತು ಲಾಭ ನಷ್ಟದ ಅನುಭವವನ್ನು ಪಡೆಯುವ ಉದ್ದೇಶದಿಂದ ಆಯೋಜಿಸಲಾಗಿದ್ದ ಮೆಟ್ರಿಕ್ ಮೇಳವು ವಿದ್ಯಾರ್ಥಿಗಳ ತರಕಾರಿ ಸಂತೆಯ ಮೂಲಕ ಗಮನ ಸೆಳೆಯಿತು. ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ವ್ಯಾಪಾರಿಗಳಂತೆ ಶಾಲಾ ವರಾಂಡ ಮತ್ತು ರಂಗ ಮಂದಿರದಲ್ಲಿ ತಾವು ತಂದಿದ್ದ ತರಕಾರಿಗಳನ್ನು ಮುಂದಿಟ್ಟುಕೊಂಡು ಕುಳಿತ ವಿದ್ಯಾರ್ಥಿಗಳು ಬೆಳಗ್ಗೆ 10.30 ರಿಂದ 11.30 ರ ತನಕ ಪಕ್ಕಾ ನುರಿತ ವ್ಯಾಪಾರಿಗಳಂತೆ […]

ಕುಟ್ರುಪ್ಪಾಡಿಯ ಸರಕಾರಿ ಶಾಲೆಯಲ್ಲಿ ತರಕಾರಿ ಸಂತೆ ► ಕೇಪು ಶಾಲೆಯಲ್ಲಿ ಗಮನ ಸೆಳೆದ ಮೆಟ್ರಿಕ್ ಮೇಳ Read More »

ಕರಾವಳಿ

ಪಂಜ: ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ವತಿಯಿಂದ ► ಸಮರ್ಥನಾ ಸಮಾವೇಶ

(ನ್ಯೂಸ್ ಕಡಬ) newskadaba.com ಸುಳ್ಯ, ನ.27. ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಯಿಂದ ಪ್ರಭಾವಿತಗೊಂಡು ಅಲ್ಪಸಂಖ್ಯಾತರು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದ್ದಾರೆ. ಅವರು ಸುಳ್ಯ ಮಂಡಲ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಪಂಜ ಸಿ.ಎ. ಬ್ಯಾಂಕ್ ಸಭಾಭವನದಲ್ಲಿ ಸೋಮವಾರದಂದು ನಡೆದ ಸಮರ್ಥನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅಪ್ಪಯ್ಯ

ಪಂಜ: ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ವತಿಯಿಂದ ► ಸಮರ್ಥನಾ ಸಮಾವೇಶ Read More »

ಕರಾವಳಿ

ಸುಳ್ಯ: ಟಿಪ್ಪರ್ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ನ.27. ಟಿಪ್ಪರ್ ವಾಹನವನ್ನು ಓವರ್ ಟೇಕ್ ಮಾಡುತ್ತಿದ್ದಾಗ ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ರಸ್ತೆಗೆಸೆಯಲ್ಪಟ್ಟು ಟಿಪ್ಪರ್ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯದಲ್ಲಿ ಸೋಮವಾರದಂದು ನಡೆದಿದೆ. ಮೃತ ಸವಾರನನ್ನು ಆಲಂಕಲ್ಯ ನಿವಾಸಿ ವೆಂಕಪ್ಪ ಗೌಡ ಎಂಬವರ ಪುತ್ರ ಅವಿನ್ ಎಂದು ಗುರುತಿಸಲಾಗಿದೆ. ಇವರು ತನ್ನ ಟಿವಿಎಸ್ ವೇಗೋ ವಾಹನದಲ್ಲಿ ತನ್ನ ಅಂಗಡಿಗೆಂದು ತೆರಳುತ್ತಿದ್ದಾಗ ಸುಳ್ಯ ಮೀನು ಮಾರುಕಟ್ಟೆಯ ಸಮೀಪ ಮೀನುಗಳನ್ನು ಇಳಿಸುವ ವಾಹನಗಳು ರಸ್ತೆಯ

ಸುಳ್ಯ: ಟಿಪ್ಪರ್ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ದಿನಗೂಲಿ ಕೆಲಸ ಮಾಡಿ ತಂದೆಯಿಲ್ಲದ ತಬ್ಬಲಿಗಳನ್ನು ಐಎಎಸ್ ಮಾಡಿಸಿದ ತಾಯಿ ► ಬಡತನದ ಮಧ್ಯೆಯೂ ಐಎಎಸ್ ಪಾಸ್ ಮಾಡಿದ ಮೂವರು ಸಹೋದರಿಯರು

(ನ್ಯೂಸ್ ಕಡಬ) newskadaba.com ಕಡಬ, ನ.27. ತಂದೆ ಇಲ್ಲದೆ ತಬ್ಬಲಿಯಾದ ಮೂವರು ಹೆಣ್ಣು ಮಕ್ಕಳನ್ನು ಬಡತನದ ಬೇಗುದಿಯ ಮಧ್ಯೆಯೂ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅತ್ಯುನ್ನತ ಪದವಿಯಾದ ಐಎಎಸ್ ಕಲಿಸಿ ಹೆತ್ತ ತಾಯಿಯೋರ್ವಳು ದೇಶಕ್ಕೆ ಮಾದರಿಯಾಗಿದ್ದಾರೆ. ಇದು ದೇಶದಲ್ಲೇ ಬಲು ಅಪರೂಪದ ಘಟನೆ ಎಂದು ತಿಳಿಯಬಹುದಾಗಿದ್ದು, ತನ್ನ ಮೂವರು ಹೆಣ್ಣು ಮಕ್ಕಳನ್ನು ಕೂಲಿ ಕೆಲಸ ಮಾಡುತ್ತಲೇ ಈ ತಾಯಿ ಉನ್ನತ ಅಧಿಕಾರಿಗಳನ್ನಾಗಿ ಮಾಡಿದ್ದಾರೆ. ರಾಜಸ್ಥಾನದಿಂದ ಸಿವಿಲ್ ಸರ್ವಿಸಸ್ ಗೆ ಮೂವರು ಸಹೋದರಿಯರು ಆಯ್ಕೆಯಾಗಿದ್ದಾರೆ. ಅವರೇ ಕಮಲ, ಗೀತ, ಮಮತಾ.

ದಿನಗೂಲಿ ಕೆಲಸ ಮಾಡಿ ತಂದೆಯಿಲ್ಲದ ತಬ್ಬಲಿಗಳನ್ನು ಐಎಎಸ್ ಮಾಡಿಸಿದ ತಾಯಿ ► ಬಡತನದ ಮಧ್ಯೆಯೂ ಐಎಎಸ್ ಪಾಸ್ ಮಾಡಿದ ಮೂವರು ಸಹೋದರಿಯರು Read More »

ರಾಷ್ಟ್ರೀಯ ನ್ಯೂಸ್

ವಿದೇಶದಲ್ಲಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರಿನ ಮಹಿಳೆ ► ISF ಸಹಾಯಹಸ್ತದಿಂದ ಊರಿಗೆ ಮರಳಿದ ವಿಜಯಾ

(ನ್ಯೂಸ್ ಕಡಬ) newskadaba.com ದಮಾಮ್, ನ.27. ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ವಾಮಂಜೂರಿನ ಮಹಿಳೆ ವಿಜಯಾ (44) ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತವರಿಗೆ ಮರಳಿದ್ದಾರೆ. ಬಡ ಕುಟುಂಬದ ಆಸರೆಯಾಗಿದ್ದ ವಿಜಯಾ ಅವರು 2015ರಲ್ಲಿ ಸೌದಿ ಅರೇಬಿಯದ ದಮಾಮ್ ಗೆ ತೆರಳಿದ್ದರು. ಮೊದಲ ಮೂರು ತಿಂಗಳ ಕಾಲ ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದು, ಅನಂತರದ ದಿನಗಳಲ್ಲಿ ವಿಜಯಾ ಸರಿಯಾಗಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದಾಗಿ ಅನಾರೋಗ್ಯ ಪೀಡಿತ ಪತಿ ಬಾಲಪ್ಪ ಬಾಲಕೃಷ್ಣ

ವಿದೇಶದಲ್ಲಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರಿನ ಮಹಿಳೆ ► ISF ಸಹಾಯಹಸ್ತದಿಂದ ಊರಿಗೆ ಮರಳಿದ ವಿಜಯಾ Read More »

ಅಂತರ್ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ದೊಣ್ಣೆಯಿಂದ ಹೊಡೆದು ಹೋಟೆಲ್ ಕಾರ್ಮಿಕನ ಕೊಲೆ ► ಹೋಟೆಲ್ ಮಾಲಿಕ ಕೊಲೆ ಮಾಡಿರುವ ಬಗ್ಗೆ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.26. ಹೋಟೇಲ್ ಕಾರ್ಮಿಕನ ಮೇಲೆ ಹೋಟೆಲ್ ಮಾಲಕ ಇನ್ನಿಬ್ಬರ ಸಹಕಾರದೊಂದಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಕಾರ್ಮಿಕ ಮೃತಪಟ್ಟ ಘಟನೆ ಭಾನುವಾರದಂದು ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಮೃತರನ್ನು ಇಚ್ಲಂಪಾಡಿ ಗ್ರಾಮದ ಬಾಕಿಜಾಲು ಮನೆ ನಿವಾಸಿ ಅಣ್ಣಿಪೂಜಾರಿ ಎಂಬವರ ಮನೆ ಅಳಿಯ ಶ್ರೀನಿವಾಸ್ (45) ಎಂದು ಗುರುತಿಸಲಾಗಿದೆ. ನವೆಂಬರ್ 24 ಶುಕ್ರವಾರದಂದು ಸಂಜೆ ಅಡುಗೆ ಕೆಲಸಕ್ಕೆಂದು ಜಾರ್ಜ್ ಎಂಬವರ ಮಾಲಕತ್ವದ ಹೋಟೇಲಿಗೆ ಹೋದವರನ್ನು ಶನಿವಾರದಂದು ಹೋಟೇಲಿನಲ್ಲಿ ಜಾರಿ ಬಿದ್ದಿದ್ದಾರೆಂಬ ಕಾರಣ

ಉಪ್ಪಿನಂಗಡಿ: ದೊಣ್ಣೆಯಿಂದ ಹೊಡೆದು ಹೋಟೆಲ್ ಕಾರ್ಮಿಕನ ಕೊಲೆ ► ಹೋಟೆಲ್ ಮಾಲಿಕ ಕೊಲೆ ಮಾಡಿರುವ ಬಗ್ಗೆ ಪೊಲೀಸ್ ದೂರು Read More »

ಕರಾವಳಿ

ಕಲ್ಲಡ್ಕ: ಮೂರು ಕಾರುಗಳ ನಡುವೆ ಸರಣಿ ಅಪಘಾತ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.26. ಸ್ವಿಫ್ಟ್, ಇಂಡಿಕಾ ಮತ್ತು ವ್ಯಾಗನಾರ್ ಕಾರುಗಳ ನಡುವೆ ಸರಣಿ ಅಪಘಾತವಾಗಿ ಇಬ್ಬರು ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ನರಹರಿ ಪರ್ವತದ ಬಳಿ ಭಾನುವಾರ ಸಂಜೆ ನಡೆದಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಾಣಿ ಕಡೆಗೆ ತೆರಳುತ್ತಿದ್ದ ಇಂಡಿಕಾ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಇದೇ ವೇಳೆ ಇಂಡಿಕಾ ಕಾರಿನ ಹಿಂದಿನಿಂದ ಬರುತ್ತಿದ್ದ ವ್ಯಾಗನಾರ್ ಕಾರಿನ ಚಾಲಕ ಏಕಾಏಕಿ ಬ್ರೇಕ್

ಕಲ್ಲಡ್ಕ: ಮೂರು ಕಾರುಗಳ ನಡುವೆ ಸರಣಿ ಅಪಘಾತ ► ಇಬ್ಬರಿಗೆ ಗಾಯ Read More »

ಕರಾವಳಿ

ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಹೇಳಿಕೆಯ ಆರೋಪ ► ಪೇಜಾವರ ಶ್ರೀಗಳ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.26. ಶನಿವಾರ ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ಭಾರತೀಯ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ ಎನ್ನುವ ಹೇಳಿಕೆ ನೀಡಿದ ಆರೋಪದಲ್ಲಿ ಉಡುಪಿ ಪೇಜಾವರಶ್ರೀ ವಿರುದ್ಧ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೇಜಾವರ ಶ್ರೀಯವರು ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ, ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಒಂದು ಕಾನೂನು, ಬಹುಸಂಖ್ಯಾತರಿಗೆ ಒಂದು ಕಾನೂನಿದೆ. ಅದ್ದರಿಂದ ಸಂವಿಧಾನವನ್ನು ತಿದ್ದುಪಡಿ ಮಾಡಿದ್ರೆ ತಪ್ಪೇನಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ಇದೀಗ ಬೆಂಗಳೂರು ಸ್ನಾತಕೋತ್ತರ

ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಹೇಳಿಕೆಯ ಆರೋಪ ► ಪೇಜಾವರ ಶ್ರೀಗಳ ವಿರುದ್ಧ ದೂರು ದಾಖಲು Read More »

ಕರ್ನಾಟಕ

ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ವೆಂಕಟೇಶ್ ಪಾಡ್ಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.26. ಪ್ರತಿಷ್ಠಿತ ಜೇಸಿಐ ಕಡಬ ಕದಂಬ ಘಟಕದ ನೂತನ ಘಟಕಾಧ್ಯಕ್ಷರಾಗಿ ವೆಂಕಟೇಶ್ ಪಾಡ್ಲರವರು ಆಯ್ಕೆಯಾಗಿದ್ದಾರೆ. ನಿಕಟಪೂರ್ವಾಧ್ಯಕ್ಷರಾಗಿ ತಸ್ಲೀಂ ಮರ್ದಾಳ, ಕಾರ್ಯದರ್ಶಿಯಾಗಿ ಮೋಹನ ಕೋಡಿಂಬಾಳ,  ಉಪಾಧ್ಯಕ್ಷರಾಗಿ ರಮೇಶ್ ಕೊಠಾರಿ, ಝಫೀರ್ ಮಹಮ್ಮದ್, ಪ್ರಕಾಶ್ ಎನ್.ಕೆ., ತಿರುಮಲೇಶ್ ಭಟ್‌ ಹೊಸ್ಮಠ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್, ಜತೆ ಕಾರ್ಯದರ್ಶಿಯಾಗಿ ಜಯರಾಮ ಮೂರಾಜೆ, ನಿರ್ದೇಶಕರಾಗಿ ನಿಖಿಲ್ ಶೆಟ್ಟಿ ಕೇಪು, ಮಹೇಶ್ ರೈ ಕುಂಟೋಡಿ, ವೇಣುಗೋಪಾಲ ಕೊಲ್ಲಡ್ಕ, ಡಾ.ರಾಮ್‌ಪ್ರಕಾಶ್, ಯುವ ಜೇಸಿ ಸಂಯೋಜಕರಾಗಿ ರವಿಚಂದ್ರ ಪಡುಬೆಟ್ಟು, ಜೇಸಿರೆಟ್ ಸಂಯೋಜಕರಾಗಿ

ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ವೆಂಕಟೇಶ್ ಪಾಡ್ಲ ಆಯ್ಕೆ Read More »

ಕರಾವಳಿ

ಕುದ್ಮಾರು: ಡಿ.ಸಿ.ಮನ್ನಾ ಭೂಮಿಯನ್ನು ಅರ್ಹರಿಗೆ ಹಂಚಲು ಪ್ರಸ್ತಾವನೆ ► 15 ದಿನಗಳೊಳಗೆ ಸಾರ್ವಜನಿಕ ಅಭಿಪ್ರಾಯ ಸಲ್ಲಿಸಲು ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ನ.26. ಕುದ್ಮಾರು ಗ್ರಾಮದ ಸರ್ವೇ ನಂ. 167-3 ರಲ್ಲಿ 3.02 ಎಕರೆ ಡಿ.ಸಿ.ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹಂಚಿಕೆ ಮಾಡುವಂತೆ ಕಡಬ ಹೋಬಳಿಯ ಕಂದಾಯ ನಿರೀಕ್ಷಕರು ಪ್ರಸ್ತಾವನೆ ತಯಾರಿಸಿ ಉಲ್ಲೇಖ(2) ರಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುತ್ತಾರೆ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳೇನಾದರೂ ಇದ್ದಲ್ಲಿ 15 ದಿನಗಳ ಒಳಗಾಗಿ ಲಿಖಿತವಾಗಿ ಕಡಬ ವಿಶೇಷ ತಹಶಿಲ್ದಾರರ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ತಿಳಿಸಲಾಗಿದೆ. ನಿಗದಿತ ಸಮಯದೊಳಗೆ ಸಾರ್ವಜನಿಕರಿಂದ ಯಾವುದೇ ಅಭಿಪ್ರಾಯ ಬರದಿದ್ದಲ್ಲಿ

ಕುದ್ಮಾರು: ಡಿ.ಸಿ.ಮನ್ನಾ ಭೂಮಿಯನ್ನು ಅರ್ಹರಿಗೆ ಹಂಚಲು ಪ್ರಸ್ತಾವನೆ ► 15 ದಿನಗಳೊಳಗೆ ಸಾರ್ವಜನಿಕ ಅಭಿಪ್ರಾಯ ಸಲ್ಲಿಸಲು ಅವಕಾಶ Read More »

ಕರಾವಳಿ
Scroll to Top