ಬೆಳ್ತಂಗಡಿ: ಮನೆಯ ಒಡೆಯನನ್ನು ಕಟ್ಟಿಹಾಕಿದ ದರೋಡೆಕೋರರು ► ನಗ – ನಗದು ಸೇರಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.29. ಇಲ್ಲಿನ ಹೇಂತನಾಜೆ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿರುವ ದರೋಡೆಕೋರರು ಮನೆಯವರನ್ನು ಕಟ್ಟಿ ಹಾಕಿ ನಗ-ನಗದು ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ದರೋಡೆಗೈದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ದರೋಡೆಗೆ ಒಳಗಾದವರನ್ನು
ಹೇಂತನಾಜೆ ನಿವಾಸಿ ನಾಗೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಒಬ್ಬರೇ ಇದ್ದ ಕಾರಣ ಪೇಟೆಗೆ ತೆರಳಿ ರಾತ್ರಿ 10:30ರ ಸುಮಾರಿಗೆ ನಾಗೇಂದ್ರ ಪ್ರಸಾದ್ ಹಿಂತಿರುಗಿ ಮನೆಗೆ ಬಂದು ಮನೆಯ ಬೀಗ ತೆಗೆಯುತ್ತಿದ್ದ ವೇಳೆ ದಾಳಿ ನಡೆಸಿದ ದರೋಡೆಕೋರರು ಮನೆಯೊಳಗೆ ನುಗ್ಗಿದ್ದಾರೆ.

ಬಳಿಕ ನಾಗೇಂದ್ರರನ್ನು ಕಟ್ಟಿ ಹಾಕಿದ ತಂಡ ಮನೆಯನ್ನೆಲ್ಲ ಜಾಲಾಡಿ ಸುಮಾರು 40 ಸಾವಿರ ರೂ. ನಗದು 80 ಸಾವಿರ ಮೌಲ್ಯದ ಚಿನ್ನ ಹಾಗೋ ಎ.ಟಿ.ಎಂ. ಕಾರ್ಡುಗಳನ್ನು ದೋಚಿದ್ದಾರೆ. ಅದಲ್ಲದೆ ಕಳ್ಳರು ರಾತ್ರಿಯೇ ಎಟಿಎಂ ನಿಂದಲೂ ಹಣ ವಿತ್ ಡ್ರಾ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಜರು, ಧರ್ಮಸ್ಥಳ ಪೊಲೀಸರು ಅಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top