ಸರಕಾರಿ ಜಮೀನಿನಲ್ಲಿದ್ದ 150 ಮನೆಗಳನ್ನು ನೆಲಸಮಗೊಳಿಸಿದ ಸರ್ಕಾರಿ ಅಧಿಕಾರಿಗಳು ►ಸರಕಾರದ ನಡೆಯ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಉಡುಪಿ, ಜ.11. ಸರ್ಕಾರಿ ಜಮೀನಿನಲ್ಲಿ ಕಟ್ಟಿದ್ದ ಸುಮಾರು 150 ಗುಡಿಸಲುಗಳನ್ನು ಸರಕಾರಿ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ ಘಟನೆ ಕುಂದಾಪುರದಲ್ಲಿ ಬುಧವಾರದಂದು ನಡೆದಿದೆ. ಸ್ವಂತ ಜಮೀನಿಲ್ಲದ ಕುಂದಾಪುರದ ನಿವಾಸಿಗಳು ಕೆಲ ತಿಂಗಳ ಹಿಂದೆ ಕುಂದಾಪುರದ ಕಂದಾವರ ಎಂಬಲ್ಲಿ 25 ಎಕರೆ ಸರಕಾರಿ ಜಮೀನಿನಲ್ಲಿ ಕಟ್ಟಿಕೊಂಡಿದ್ದ ಸುಮಾರು 150 ದಲಿತರ, ಹಿಂದುಳಿದವರ, ಕಾರ್ಮಿಕರ ಮನೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ತಹಶೀಲ್ದಾರ್ ಜೆಸಿಬಿ ತರಿಸಿ ನೆಲ ಸಮಗೊಳಿಸಿದ್ದಾರೆ. ಮನೆ ತೆರವುಗೊಳಿಸುವುದನ್ನು ವಿರೋಧಿಸಿದ ಸಂತ್ರಸ್ತರನ್ನು ಬಂಧಿಸಲಾಗಿದೆ. ಸರಕಾರದ ಈ ನಡೆ ಸಾರ್ವಜನಿಕ […]

ಸರಕಾರಿ ಜಮೀನಿನಲ್ಲಿದ್ದ 150 ಮನೆಗಳನ್ನು ನೆಲಸಮಗೊಳಿಸಿದ ಸರ್ಕಾರಿ ಅಧಿಕಾರಿಗಳು ►ಸರಕಾರದ ನಡೆಯ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ Read More »

ಕರ್ನಾಟಕ

ನೀವು‌‌ ಊಟದ ನಂತರ ಇಂತಹ ತಪ್ಪನ್ನು ಮಾಡಲೇಬೇಡಿ ►ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.11. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ನಂತರ ಕೆಲವರಿಗೆ ಏನಾದರೂ ತಿನ್ನುವ ಚಟಗಳಿರುತ್ತವೆ. ಅವುಗಳಲ್ಲಿ ಕೆಲವು ತಪ್ಪು ಅಭ್ಯಾಸಗಳು ಅಪಾಯ ಸೃಷ್ಟಿಸುವುದರೊಂದಿಗೆ ನಿಮ್ಮ ದೇಹ‌ದ ಆರೋಗ್ಯವನ್ನು ಕೆಡಿಸಬಹುದಲ್ಲದೆ ವಿವಿಧ ರೋಗಗಳನ್ನ ಆಹ್ವಾನಿಸಬಹುದು. ಅಂತಹ ಅಭ್ಯಾಸಗಳು ಯಾವುವು ಎಂದು ನೋಡೋಣ ಬನ್ನಿ ಊಟ ಮಾಡಿದ ತಕ್ಷಣ ಈಜಾಡುವುದು ಅಪಾಯ. ಈ ವೇಳೆ ರಕ್ತ ಪ್ರಸಾರದ ವೇಗ ಅಧಿಕವಾಗಿ ಶರೀರದ ಮಾಂಸ ಖಂಡಗಳು ಸ್ಥಗಿತಗೊಳ್ಳುತ್ತದೆ. ವ್ಯಾಯಾಮ, ಜಿಮ್, ಮಾಡಬಾರದು.

ನೀವು‌‌ ಊಟದ ನಂತರ ಇಂತಹ ತಪ್ಪನ್ನು ಮಾಡಲೇಬೇಡಿ ►ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ Read More »

ಆರೋಗ್ಯ ಮಾಹಿತಿ

ರಸ್ತೆ ದಾಟುವಾಗ ಆಟೋರಿಕ್ಷಾ ಢಿಕ್ಕಿ ►ಬಂಟ್ವಾಳದ ಉದ್ಯಮಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.10. ರಸ್ತೆ‌ ದಾಟುತ್ತಿದ್ದ ಸಂದರ್ಭದಲ್ಲಿ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಬಂಟ್ವಾಳದ ಉದ್ಯಮಿಯೋರ್ವರು ಮೃತಪಟ್ಟ ಘಟನೆ ಮಂಗಳೂರಿನ ಆರ್ಟಿಓ ಕಛೇರಿಯ ಸಮೀಪದಲ್ಲಿ ಬುಧವಾರ ಸಂಜೆ ನಡೆದಿದೆ. ಮೃತ ಉದ್ಯಮಿಯನ್ನು ಸಾಮಾಜಿಕ, ಧಾರ್ಮಿಕ ಮುಂದಾಳು ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ ಮಾವಂತೂರು ದೇವಪ್ಪ ಶೆಟ್ಟಿ(70) ಎಂದು ಗುರುತಿಸಲಾಗಿದೆ. ಬಂಟ್ವಾಳ ಲಯನ್ಸ್ ಕ್ಲಬ್‌ನ ಪೂರ್ವಾಧ್ಯಕ್ಷರಾಗಿದ್ದ ಇವರು ಪ್ರಸ್ತುತ ಲಯನ್ಸ್ ಕ್ಲಬ್‌ನ ಪ್ರಾಂತ್ಯ ಸಂಯೋಜಕರಾಗಿದ್ದರು.

ರಸ್ತೆ ದಾಟುವಾಗ ಆಟೋರಿಕ್ಷಾ ಢಿಕ್ಕಿ ►ಬಂಟ್ವಾಳದ ಉದ್ಯಮಿ ಮೃತ್ಯು Read More »

ಕರಾವಳಿ

‌ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ►ವಾಟ್ಸಪ್, ಫೇಸ್‌ಬುಕ್‌ ಗಳಲ್ಲಿ ಮಾನ ಹಾನಿ ನಡೆಸಿದವರ ವಿರುದ್ಧ ಕಠಿಣ ಕ್ರಮ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ.10. ಇತ್ತೀಚೆಗೆ ಮೂಡಿಗೆರೆಯ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ಯಶ್ರೀಯ ಮಾನಹಾನಿ ನಡೆಸಿದ, ಆತ್ಮಹತ್ಯೆಗೆ ಪ್ರೇರೇಪಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಗುರುವಾರದಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂತೋಷ್‌ ಸೇರಿದಂತೆ ನಾಲ್ಕೈದು ಜನ ಧಮ್ಕಿ ಹಾಕಿದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾಯುವ ಮುನ್ನ ಎರಡು ದಿನಗಳ ಕಾಲ ಊಟ ಮಾಡಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ್ದು, ಧನ್ಯಶ್ರೀ ಅವರ ತಂದೆಯಲ್ಲಿ ಸುಳ್ಳು ಪ್ರಕರಣ ನೀಡಲು

‌ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ►ವಾಟ್ಸಪ್, ಫೇಸ್‌ಬುಕ್‌ ಗಳಲ್ಲಿ ಮಾನ ಹಾನಿ ನಡೆಸಿದವರ ವಿರುದ್ಧ ಕಠಿಣ ಕ್ರಮ Read More »

ಕರಾವಳಿ

ಅಡ್ಡಹೊಳೆ: ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆಯ ಹಿನ್ನೆಲೆ ►ಗುರುವಾರ ಬೆಳಿಗ್ಗೆಯವರೆಗೆ ವಾಹನ ಸಂಚಾರ ತಡೆ ಹಿಡಿಯಲು ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.10. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನ ಕೊಟ್ಟಿಕ್ಕಲ್ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಅನ್ವಯವಾಗುವಂತೆ ಜ.11 ಗುರುವಾರ ಬೆಳಿಗ್ಗೆ 7.30 ಗಂಟೆಯವರೆಗೆ ಶಿರಾಡಿ ಘಾಟಿಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಗಿದೆ. ಮಂಗಳೂರು ಬೆಂಗಳೂರು ತೆರಳುವ ವಾಹನಗಳು ಪರ್ಯಾಯವಾಗಿ ಚಾರ್ಮಾಡಿ ಅಥವಾ ಮಾಣಿ-ಮಡಿಕೇರಿ ಮಾರ್ಗದಲ್ಲಿ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಡ್ಡಹೊಳೆ: ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆಯ ಹಿನ್ನೆಲೆ ►ಗುರುವಾರ ಬೆಳಿಗ್ಗೆಯವರೆಗೆ ವಾಹನ ಸಂಚಾರ ತಡೆ ಹಿಡಿಯಲು ಆದೇಶ Read More »

ಕರಾವಳಿ

ಅಡ್ಡಹೊಳೆ: ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆ ► ರಾಷ್ಟ್ರೀಯ ಹೆದ್ದಾರಿ ತಡೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ.10. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಕೊಟ್ಟಿಕ್ಕಲ್ ಎಂಬಲ್ಲಿ ಗ್ಯಾಸ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ಬುಧವಾರ ಸಂಜೆ ನಡೆದಿದೆ. ಪಲ್ಟಿಯಾದ ಪರಿಣಾಮ ಗ್ಯಾಸ್ ಸೋರಿಕೆಯುಂಟಾಗಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾಗ್ರತೆಯಾಗಿ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ಉರಿಯದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನ ಸಂಚಾರವನ್ನು ತಡೆಹಿಡಿಯಲಾಗಿದ್ದು, ಬದಲಿಯಾಗಿ ಇಚಿಲಂಪಾಡಿ, ಕೈಕಂಬ, ಗುಂಡ್ಯ ಹಾಗೂ ಕಡಬ, ಕೈಕಂಬ, ಗುಂಡ್ಯ ರಸ್ತೆಯ ಮೂಲಕ ಸಂಚಾರ

ಅಡ್ಡಹೊಳೆ: ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆ ► ರಾಷ್ಟ್ರೀಯ ಹೆದ್ದಾರಿ ತಡೆ Read More »

ಕರಾವಳಿ

ದಿನಾಲೂ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ದರ ► ಪೆಟ್ರೋಲ್ ಲೀ.71.72 ಹಾಗೂ ಡೀಸೆಲ್‌ ಲೀ.6183

(ನ್ಯೂಸ್ ಕಡಬ) newskadaba.com ನವದೆಹಲಿ, ಜ.10. ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್ ಬೆಲೆಯನ್ನು ಇದೀಗ ಕೇಂದ್ರ ಸರ್ಕಾರ ಸದ್ದಿಲ್ಲದೇ ಏರಿಕೆ ಮಾಡಿದೆ. ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ತೈಲ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 1.55 ರೂ., ಡೀಸೆಲ್ ಬೆಲೆ ಲೀಟರ್ ಗೆ 1.50 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.72 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 61.83 ರೂ. ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ

ದಿನಾಲೂ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ದರ ► ಪೆಟ್ರೋಲ್ ಲೀ.71.72 ಹಾಗೂ ಡೀಸೆಲ್‌ ಲೀ.6183 Read More »

ರಾಷ್ಟ್ರೀಯ ನ್ಯೂಸ್

ನಾವು ಸಾಮರಸ್ಯದಿಂದ ಬದುಕಿ ಬುದ್ದಿವಂತರೆಂದು ಸಾಬೀತುಪಡಿಸಬೇಕಾಗಿದೆ: ಡಾ| ಹೆಗ್ಗಡೆ ►ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಂದ ‘ಅಮೈ ಕೆರೆ’ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜ‌.10. ಬುದ್ಧಿವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದಿಂದಾಗಿ ಜಿಲ್ಲೆಗೆ ಇದೀಗ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲೆಯ ಜನತೆ ವೈಷಮ್ಯ ಬಿಟ್ಟು ಸಾಮರಸ್ಯದಿಂದ ಬದುಕಿ ಜಿಲ್ಲೆಯ ಜನತೆ ಬುದ್ದಿವಂತರೆನ್ನುವುದನ್ನು ಸಾಬೀತು ಪಡಿಸಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ವಿವಿಧ ಇಲಾಖೆಗಳ ಸಂಯೋಜನೆಯಲ್ಲಿ ರಾಮಕುಂಜ ಗ್ರಾಮದ ಅಮೈ ಎಂಬಲ್ಲಿ ನಿರ್ಮಿಸಲಾಗಿರುವ ‘ಅಮೈ ಕೆರೆ’ಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ

ನಾವು ಸಾಮರಸ್ಯದಿಂದ ಬದುಕಿ ಬುದ್ದಿವಂತರೆಂದು ಸಾಬೀತುಪಡಿಸಬೇಕಾಗಿದೆ: ಡಾ| ಹೆಗ್ಗಡೆ ►ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಂದ ‘ಅಮೈ ಕೆರೆ’ ಲೋಕಾರ್ಪಣೆ Read More »

ಕರಾವಳಿ

ರಾಜಕಾರಣಿ ಆಗುವುದಕ್ಕಾಗಿ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ ಪೊಲೀಸ್ ಅಧಿಕಾರಿ ► ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಬಜ್ಪೆ ಸಬ್ ಇನ್ಸ್‌ಪೆಕ್ಟರ್ ಮದನ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.10. ರಾಜಕೀಯಕ್ಕೆ ಧುಮುಕುವುದಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ವ್ಯಕ್ತಿಯೋರ್ವರು ಖಾಕಿ ಕಳಚಿಟ್ಟು ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ನಗರ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆ ಸ್ಟೇಷನ್ ನಲ್ಲಿ ಸಬ್ ಇನ್ಸ್ ಪೆಕ್ಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮದನ್ ತಮ್ಮ ಪೊಲೀಸ್ ಡ್ಯೂಟಿಗೆ ಗುಡ್ ಬೈ ಹೇಳಿ ಸಕ್ರಿಯ ರಾಜಕೀಯಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಮೂಲತಃ ಕೊಡಗಿನವರಾದ ಮದನ್ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್

ರಾಜಕಾರಣಿ ಆಗುವುದಕ್ಕಾಗಿ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ ಪೊಲೀಸ್ ಅಧಿಕಾರಿ ► ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಬಜ್ಪೆ ಸಬ್ ಇನ್ಸ್‌ಪೆಕ್ಟರ್ ಮದನ್ Read More »

ಕರಾವಳಿ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನ ►ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಜ.10. ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಅವಹೇಳನಕಾರಿ ವಿಡಿಯೋವನ್ನು ಹರಿಬಿಟ್ಟ ಸಂಬಂಧ ಆರೋಪಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ ಘಟನೆ ಮಂಗಳವಾರದಂದು ನಡೆದಿದೆ. ಬಂಧಿತನನ್ನು ಚಿಕ್ಕಬಳ್ಳಾಪುರ ನಿವಾಸಿ ಯಾಸೀನ್ ಎಂದು ಗುರುತಿಸಲಾಗಿದೆ. ಈತ ಮೋದಿ ಹಾಗೂ ಯೋಗಿ ಅವರನ್ನು ಅವಹೇಳನ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಜನವರಿ 06 ರಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರ ಠಾಣೆಗೆ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನ ►ಆರೋಪಿ ಪೊಲೀಸ್ ವಶಕ್ಕೆ Read More »

ಕರ್ನಾಟಕ
Scroll to Top