ಅಡ್ಡಹೊಳೆ: ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆ ► ರಾಷ್ಟ್ರೀಯ ಹೆದ್ದಾರಿ ತಡೆ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ.10. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಕೊಟ್ಟಿಕ್ಕಲ್ ಎಂಬಲ್ಲಿ ಗ್ಯಾಸ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ಬುಧವಾರ ಸಂಜೆ ನಡೆದಿದೆ.







ಪಲ್ಟಿಯಾದ ಪರಿಣಾಮ ಗ್ಯಾಸ್ ಸೋರಿಕೆಯುಂಟಾಗಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾಗ್ರತೆಯಾಗಿ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ಉರಿಯದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನ ಸಂಚಾರವನ್ನು ತಡೆಹಿಡಿಯಲಾಗಿದ್ದು, ಬದಲಿಯಾಗಿ ಇಚಿಲಂಪಾಡಿ, ಕೈಕಂಬ, ಗುಂಡ್ಯ ಹಾಗೂ ಕಡಬ, ಕೈಕಂಬ, ಗುಂಡ್ಯ ರಸ್ತೆಯ ಮೂಲಕ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.






error: Content is protected !!
Scroll to Top