ದ್ವಿತೀಯ ಪಿ.ಯು.ಸಿ ಫಲಿತಾಂಶ ► ನೂಜಿಬಾಳ್ತಿಲ ಬೆಥನಿ ಪದವಿ ಪುರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ 100 ಶೇಕಡಾ ಫಲಿತಾಂಶ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಮೇ.1. ಬೆಥನಿ ಪದವಿ ಪೂರ್ವ ಕಾಲೇಜು, ನೂಜಿಬಾಳ್ತಿಲ ಇದರ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಒಟ್ಟು 19 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗು 15 ವಿದ್ಯಾರ್ಥಿಗಳು ದ್ವೀತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗ: ಆಶ್ವಿನಿ ಎಸ್ 490 ಅಂಕಗಳು (ಶಶಿಧರ ಹಾಗೂ ಸುಧಾಮಣಿ ದಂಪತಿಗಳ ಪುತ್ರಿ […]

ದ್ವಿತೀಯ ಪಿ.ಯು.ಸಿ ಫಲಿತಾಂಶ ► ನೂಜಿಬಾಳ್ತಿಲ ಬೆಥನಿ ಪದವಿ ಪುರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ 100 ಶೇಕಡಾ ಫಲಿತಾಂಶ Read More »

ಕರಾವಳಿ

ದ್ವಿತೀಯ ಪಿಯುಸಿ ಪರೀಕ್ಷೆ ► ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಮೇ.1. ಬಂಟ್ವಾಳ ತಾಲೂಕಿನ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 91 ವಿದ್ಯಾರ್ಥಿಗಳಲ್ಲಿ 73 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ 73 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ವಿಭಾಗ: ಸುಬ್ರಹ್ಮಣ್ಯ

ದ್ವಿತೀಯ ಪಿಯುಸಿ ಪರೀಕ್ಷೆ ► ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ Read More »

ಕರಾವಳಿ

ಬಿಜೆಪಿಯಿಂದ ಮಹಾ ಅಭಿಯಾನ ► ಏಣಿತಡ್ಕದಲ್ಲಿ ಮತಭೇಟೆ

(ನ್ಯೂಸ್ ಕಡಬ) newskadaba.com ಕಡಬ, ಮೇ.1. ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವನಾ ಪ್ರಚಾರ ಹಿನ್ನೆಯಲ್ಲಿ ಬುಧವಾರ ಕ್ಷೇತ್ರದಾದ್ಯಂತ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು, ಮುಖಂಡರು ಮಹಾ ಅಭಿಯಾನ ನಡೆಸಿ ಮತಯಾಚನೆ ಮಾಡಿದರು. ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಬೂತ್ನಲ್ಲಿ ಬಿಜೆಪಿ ಕೊೖಲ ಗ್ರಾಮ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮಹಾ ಅಭಿಯಾನದ ಪ್ರಯುಕ್ತ ಮನೆ ಮನೆ ಭೇಟಿ ಮಾಡಿ ಮತಭೇಟೆ ಮಾತಾಡಿದರು. ಬೆಳಿಗ್ಗೆ ಎಂಟು ಗಂಟೆಯಿಂದಲೇ ಈ ತಂಡ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿತು.

ಬಿಜೆಪಿಯಿಂದ ಮಹಾ ಅಭಿಯಾನ ► ಏಣಿತಡ್ಕದಲ್ಲಿ ಮತಭೇಟೆ Read More »

ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ ►ಶ್ರೀ ರಾಮಕುಂಜೇಶ್ವರ ಪದವಿಪುರ್ವ ಕಾಲೇಜಿಗೆ ಶೇ.94 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.1.  ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾವಿಭಾಗಗಳಿಂದ ಒಟ್ಟು 305 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 286 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.94 ಫಲಿತಾಂಶ ಬಂದಿದೆ. ಈ ಪೈಕಿ 54 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 176 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 42 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 14 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದಲ್ಲಿ 103 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 99 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.95.19 ತೇರ್ಗಡೆ ಫಲಿತಾಂಶ ಬಂದಿದೆ.

ದ್ವಿತೀಯ ಪಿಯುಸಿ ಫಲಿತಾಂಶ ►ಶ್ರೀ ರಾಮಕುಂಜೇಶ್ವರ ಪದವಿಪುರ್ವ ಕಾಲೇಜಿಗೆ ಶೇ.94 ಫಲಿತಾಂಶ Read More »

ಕರಾವಳಿ

ಇಂದು(ಮೇ.1) – ವಿಶ್ವ ಅಸ್ತಮಾ ದಿನ

(ನ್ಯೂಸ್ ಕಡಬ) newskadaba.com, ಮೇ.1. ಪ್ರತಿ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ಅಸ್ತಮಾ ರೋಗದ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸ್ತೈರ್ಯವನ್ನು ನೀಡುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆಯನ್ನು ಉಂಟುಮಾಡುತ್ತದೆ. ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬಿನ್ನವಾಗಿದ್ದು, ಅಸ್ತಮಾ ರೋಗವನ್ನು ಸಂಪೂರ್ಣವಾಗಿ

ಇಂದು(ಮೇ.1) – ವಿಶ್ವ ಅಸ್ತಮಾ ದಿನ Read More »

ಆರೋಗ್ಯ ಮಾಹಿತಿ

ಹೆಬ್ರಿ: ಬ್ರೇಕ್ ವೈಫಲ್ಯಕ್ಕೀಡಾಗಿ ಚೆಕ್ ಪೋಸ್ಟ್ ಗೆ ನುಗ್ಗಿದ ಟೆಂಪೋ ಟ್ರಾವೆಲ್ಲರ್ ► ತಪ್ಪಿದ ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಾರ್ಕಳ, ಮೇ‌.01. ಬ್ರೇಕ್ ವೈಫಲ್ಯಕ್ಕೀಡಾದ ಟೆಂಪೋ ಟ್ರಾವೆಲ್ಲರೊಂದು ವಿಧಾನಸಭಾ ಚುನಾವಣಾ ದೃಷ್ಟಿಯಿಂದ ನಿರ್ಮಿಸಲಾದ ಚೆಕ್‌ಪೋಸ್ಟ್ ನಲ್ಲಿ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಮುನ್ನುಗ್ಗುತ್ತಿರುವ ಘಟನೆಯ ವೀಡಿಯೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ  ಸೋಮೇಶ್ವರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಸೋಮವಾರ ಸಂಜೆ ವೇಳೆಗೆ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಆಗುಂಬೆ ಘಾಟಿಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರೊಂದು ಬ್ರೇಕ್ ವೈಫಲ್ಯಕ್ಕೀಡಾಗಿ ವೇಗವಾಗಿ ಬಂದು ಚೆಕ್‌ಪೋಸ್ಟ್ ನಲ್ಲಿ ನಿಂತಿದ್ದ ವಾಹನಗಳ ಮಧ್ಯೆ ಬ್ಯಾರಿಕೇಡ್ ತಳ್ಳಿಕೊಂಡು ಮುಂದೆ ಸಾಗಿದೆ. ಇದರಿಂದಾಗಿ

ಹೆಬ್ರಿ: ಬ್ರೇಕ್ ವೈಫಲ್ಯಕ್ಕೀಡಾಗಿ ಚೆಕ್ ಪೋಸ್ಟ್ ಗೆ ನುಗ್ಗಿದ ಟೆಂಪೋ ಟ್ರಾವೆಲ್ಲರ್ ► ತಪ್ಪಿದ ಸಂಭಾವ್ಯ ಅನಾಹುತ Read More »

ಕರಾವಳಿ

ಕಡಬ: ಸಿ.ಸಿ.ಕ್ಯಾಮರಾ ಹಾಗೂ ಕಂಪ್ಯೂಟರ್ ಮಳಿಗೆ ‘ಡಿಜಿಟಲ್ ಸಿಸ್ಟಮ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಬಜಾರ್ ಬಿಲ್ಡಿಂಗ್‌ನಲ್ಲಿ ಕಂಪ್ಯೂಟರ್ ಮತ್ತು ಸಿ.ಸಿ.ಟಿವಿ ಮಳಿಗೆ “ಡಿಜಿಟಲ್ ಸಿಸ್ಟಮ್ಸ್” ಸೋಮವಾರದಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಆಲಂಕಾರು ಹಾಗೂ ಕಟ್ಟಡದ ಮಾಲಕ ತೋಮ್ಸನ್ ಕೆ.ಟಿ. ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಕೃಪಾ ಕನ್‌ಸ್ಟ್ರಕ್ಷನ್ ನ ಮಾಲಕ ಶಾಜಿ ಜೋನ್ ಮೊದಲ ಗ್ರಾಹಕರಾಗಿ ಖರೀದಿಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲಕರ ತಾಯಿ ಸೂಸಮ್ಮ, ಅನ್ನಮ್ಮ, ಎಲಿಯಮ್ಮ,

ಕಡಬ: ಸಿ.ಸಿ.ಕ್ಯಾಮರಾ ಹಾಗೂ ಕಂಪ್ಯೂಟರ್ ಮಳಿಗೆ ‘ಡಿಜಿಟಲ್ ಸಿಸ್ಟಮ್ಸ್’ ಶುಭಾರಂಭ Read More »

ಕರಾವಳಿ

ಮೇ 02 ಹಾಗೂ ಮೇ 05 ರಂದು ವಿದ್ಯುತ್ ಮಾರ್ಗದ ಕಾಮಗಾರಿಯ ಹಿನ್ನೆಲೆ ► ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.01. ಪ್ರಸ್ತುತ ನೆಟ್ಲಮುಡ್ನೂರು – ಪುತ್ತೂರು ಮಾರ್ಗದಲ್ಲಿರುವ ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಮೇ 02 ಬುಧವಾರ ಹಾಗೂ ಮೇ 05 ಶನಿವಾರದಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಮೆಸ್ಕಾಂ ತಿಳಿಸಿದೆ. ಆದುದರಿಂದ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ವ್ಯಾಪ್ತಿಯ 110/33/11 ಕೆವಿ ಪುತ್ತೂರು ಹಾಗೂ 33/11 ಕೆವಿ ಕ್ಯಾಂಪ್ಕೋ, ಕುಂಬ್ರ, ಬೆಳ್ಳಾರೆ, ಸುಳ್ಯ, ಸವಣೂರು, ನೆಲ್ಯಾಡಿ, ಕಡಬ

ಮೇ 02 ಹಾಗೂ ಮೇ 05 ರಂದು ವಿದ್ಯುತ್ ಮಾರ್ಗದ ಕಾಮಗಾರಿಯ ಹಿನ್ನೆಲೆ ► ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತ Read More »

ಕರಾವಳಿ

ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗಾಗಿ ಪೊಲೀಸರಿಂದ ಜಾಗೃತಿ ► ಬೆಳ್ಳಾರೆ ಹಾಗೂ ಸವಣೂರಿನಲ್ಲಿ CRPF ಪಡೆಯಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.30. ವಿಧಾನಸಭಾ ಚುನಾವಣಾ ಕಾವು ಏರಿರುವಂತೆಯೇ ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗೆ ಸಂಬಂದಿಸಿದಂತೆ ಪೊಲೀಸ್ ಇಲಾಖೆಯು ಸರ್ವ ಸನ್ನದ್ಧವಾಗಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳ್ಳಾರೆ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಬೆಳ್ಳಾರೆ ಪೊಲೀಸರು ಹಾಗೂ ಸಿಆರ್ ಪಿಎಫ್ ಪಡೆಯಿಂದ ಸೋಮವಾರದಂದು ಪಥಸಂಚಲನ ನಡೆಯಿತು. ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನ ಮಾಂತೂರಿನಿಂದ ಸವಣೂರು ಜಂಕ್ಷನ್ ವರೆಗೆ ಸೋಮವಾರ ಸಂಜೆ ಪಥ ಸಂಚಲನ ನಡೆದಿದ್ದು, ಆ ಬಳಿಕ ಬೆಳ್ಳಾರೆ ಕೆಳಗಿನ ಪೇಟೆಯಿಂದ

ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗಾಗಿ ಪೊಲೀಸರಿಂದ ಜಾಗೃತಿ ► ಬೆಳ್ಳಾರೆ ಹಾಗೂ ಸವಣೂರಿನಲ್ಲಿ CRPF ಪಡೆಯಿಂದ ಪಥ ಸಂಚಲನ Read More »

ಕರಾವಳಿ

ಮರ್ಧಾಳ: NIIYF ವತಿಯಿಂದ ಬಡ ಯತೀಂ ಹೆಣ್ಣಿನ ವಿವಾಹ ಸಮಾರಂಭ ► ನೂತನ ಇಸ್ಲಾಮಿಕ್ ಶರೀಅತ್ ಕಾಲೇಜಿನ ದಾಖಲಾತಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಎ.30. ವಿವಾಹ ಎನ್ನುವುದು ಜೀವನದ ಮಹತ್ವದ ಕರ್ಮವಾಗಿದ್ದು, ಆಡಂಬರಗಳಿಲ್ಲದೆ, ಸರಳವಾಗಿ ನಡೆಯುವ ಮದುವೆಯಲ್ಲಿ ಅಲ್ಲಾಹನ ಅನುಗ್ರಹ ಇರುತ್ತದೆ ಎಂದು ಕಾಜೂರಿನ ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಹೇಳಿದರು. ಅವರು ಮರ್ಧಾಳದ ಪ್ರವಾಸಿ ಸಂಘಟನೆಯಾದ ನುಸ್ರತ್ತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂತ್ ಫೆಡರೇಶನ್ ವತಿಯಿಂದ ಭಾನುವಾರದಂದು ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಮಸೀದಿಯಲ್ಲಿ ನಡೆದ ಮರ್ಧಾಳ ಜಮಾಅತಿಗೊಳಪಟ್ಟ ಬಡ ಯತೀಮ್ ಹೆಣ್ಣಿನ ಮದುವೆಯ ನಿಖಾಹ್ ನೆರವೇರಿಸಿ ಮಾತನಾಡಿದರು. ವಿವಾಹ ಸಮಾರಂಭದಲ್ಲಿ ನಮ್ಮ ಅರ್ಹತೆಗೆ ತಕ್ಕಷ್ಟು

ಮರ್ಧಾಳ: NIIYF ವತಿಯಿಂದ ಬಡ ಯತೀಂ ಹೆಣ್ಣಿನ ವಿವಾಹ ಸಮಾರಂಭ ► ನೂತನ ಇಸ್ಲಾಮಿಕ್ ಶರೀಅತ್ ಕಾಲೇಜಿನ ದಾಖಲಾತಿಗೆ ಚಾಲನೆ Read More »

ಕರಾವಳಿ
Scroll to Top