ಸುಳ್ಯದಲ್ಲಿ ಶಾಸಕ ಅಂಗಾರ ಗೆದ್ದು ಸಚಿವರಾಗಲಿದ್ದಾರೆ : ಪುಲಸ್ತ್ಯಾ ರೈ

(ನ್ಯೂಸ್ ಕಡಬ) newskadaba.com  ಕಡಬ, ಮೇ.7. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಸುಳ್ಯದ ಬಂಗಾರ ಎಸ್.ಅಂಗಾರ ಅತ್ಯಧಿಕ ಮತಗಳೊಂದಿಗೆ ವಿಜಯಿಯಾಗಿ ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಬಿಜೆಪಿ ಸುಳ್ಯ ಮಂಡಲ ಉಪಾಧ್ಯಕ್ಷೆ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ರಾಜ್ಯ ಕಾರ್ಯದರ್ಶಿ ಪುಲಸ್ತ್ಯಾ ರೈ ವಿಶ್ವಾಸ ವ್ಯಕ್ತಪಡಿಸಿದರು. ಅವರು ಸೋಮವಾರ ಕಡಬ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸತತ 5 ಬಾರಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ಅಜಾತ ಶತ್ರು ಶಾಸಕ ಎಸ್.ಅಂಗಾರ […]

ಸುಳ್ಯದಲ್ಲಿ ಶಾಸಕ ಅಂಗಾರ ಗೆದ್ದು ಸಚಿವರಾಗಲಿದ್ದಾರೆ : ಪುಲಸ್ತ್ಯಾ ರೈ Read More »

ಕರಾವಳಿ

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ 79% ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.7. ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ 10ನೇಯಲ್ಲಿ 79% ಫಲಿತಾಂಶ ಬಂದಿರುತ್ತದೆ. ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 30 ಜನ ಉತ್ತಿರ್ಣರಾಗಿರುತ್ತಾರೆ. ದೀಪಕ್ ಕೆ 575(92) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಭರತ್ ಕೆ 571(91%) ದ್ವಿತೀಯ ಹಾಗೂ ಮಯೂರ್ ಎಂ 562(89.9%) ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಉನ್ನತ ಶ್ರೇಣಿ 2 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿ 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ 3 ಹಾಗೂ ತೃತೀಯ ಶ್ರೇಣಿ 4 ವಿದ್ಯಾರ್ಥಿಗಳು ಪಡೆದಿರುತ್ತಾರೆ.

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ 79% ಫಲಿತಾಂಶ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ. 98 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.7.  ಕಡಬ ತಾಲೂಕಿನ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಿಂದ ಈ ಭಾರಿಯ ಎಸ್ ಎಸ್ ಎಲ್ ಸಿ ಪರೀಕ್ಷಗೆ ಹಾಜರಾದ 126 ವಿದ್ಯಾರ್ಥಿಗಳ ಪೈಕಿ 124 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 98.50 ಫಲಿತಾಂಶ ಲಭಿಸಿದೆ. ರಶ್ಮಿತಾ ಕೆ 590, ರಕ್ಷಿತಾ ಎನ್ 585, ಮಧುಶ್ರೀ 564, ಚರಿತ್ ಪಿ 563, ಶೋಭಾದೇವಿ 560, ಜಯಶ್ರೀ ಕೆ. 551, ದೀಪಶ್ರೀ 551, ಸಂಧ್ಯಾ ಬಿ.ಕೆ 537,ಸುರಕ್ಷಾ ಜೆ 531 ಅಂಕ ಪqದು ಉನ್ನತ ಶ್ರೇಣಿಯಲ್ಲಿ

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ. 98 ಫಲಿತಾಂಶ Read More »

ಕರಾವಳಿ

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಮೆಚ್ಚುಗೆಗೆ ಪಾತ್ರನಾದ ಎಂಡೋ ಸಂತ್ರಸ್ಥ

(ನ್ಯೂಸ್ ಕಡಬ) newskadaba.com ಕಡಬ, ಮೇ.7. ಎಂಡೋ ಸಂತ್ರಸ್ಥನೋರ್ವ ಈ ಭಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿಉತ್ತೀರ್ಣರಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಕೊೖಲ ಎಂಡೋ ಪಾಲನ ಕೇಂದ್ರದ ವಿದ್ಯಾರ್ಥಿ ಪೆರಾಬೆ ಗ್ರಾಮದ ವಸಂತ ಮತ್ತು ಗಂಗಾರತ್ನಾ ದಂಪತಿ ಪುತ್ರ ಅಭಿಷೇಕ್ ಪ್ರಥಮ ಪಯತ್ನದಲ್ಲಿ463 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಾಧನೆ ಮೆರೆದಿದ್ದಾನೆ. ಕುಂತೂರು ಮಾರ್ ಇವಾನಿಯಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಾಖಲಾತಿ ಪಡೆದು ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಸಂಬಂಧಿ ಶಾಯಿಲಿ ಅಗತ್ತಾಡಿ ನೆರವಿನೊಂದಿಗೆ

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಮೆಚ್ಚುಗೆಗೆ ಪಾತ್ರನಾದ ಎಂಡೋ ಸಂತ್ರಸ್ಥ Read More »

ಕರಾವಳಿ

ಎಸ್.ಎಸ್.ಎಲ್.ಸಿ ಪರೀಕ್ಷೆ: ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆಗೆ ಶೇ.93% ಫಲಿತಾಂಶ

(ನ್ಯೂಸ್ ಕಡಬ) newskadaba.com  ಕಡಬ,ಮೇ.7. ಕಳೆದ ಏಪ್ರಿಲ್ 2018 ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆಯ ಒಟ್ಟು 49 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು ಶೇಕಡಾ 93.88% ಫಲಿತಾಂಶ ಗಳಿಸಿದೆ. ಶಬೀಹ (581) ಆಯಿಷಾ ತನಾಜ್ (580) ನಿಖಿಲ್ (556) ಸುಕನ್ಯ ರೈ ಕೆ. ಎಸ್. (543) ಆಯಿಷತ್ ಆಶಿಕ ( 532) ಅರುಣ್ ಪಿ. ಎನ್. (512) ಆಮಿನತ್ ರುಫೈದಾ (510)

ಎಸ್.ಎಸ್.ಎಲ್.ಸಿ ಪರೀಕ್ಷೆ: ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆಗೆ ಶೇ.93% ಫಲಿತಾಂಶ Read More »

ಕರಾವಳಿ

ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆ, ಆತೂರು – ಶೇ. 100 ಫಲಿತಾಂಶ

(ನ್ಯೂಸ್ ಕಡಬ) newskadaba.com  ಆತೂರು,ಮೇ.7. 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಯಿಂದ 25 ವಿದ್ಯಾರ್ಥಿನಿಯರು ಹಾಜರಾಗಿದ್ದು 8 ವಿಶಿಷ್ಟ ಶ್ರೇಣಿ , 14 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ಮೂವರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ. ಬಿ.ಕೆ ಪರ್ಝಾನ – 580 (A+),  ಫಾತಿಮಾ ಫಿದಾ- 578(A+) , ಫಾತಿಮಾ ಅಝ್ಮಿಯಾ – 575(A+) , ಅನೂಫಾ – 570 ( A+) , ಶೈಮಾ- 568 ( A+) , ನಈಮಾ ಮರಿಯಂ

ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆ, ಆತೂರು – ಶೇ. 100 ಫಲಿತಾಂಶ Read More »

ಕರಾವಳಿ

ಎಸ್ಎಸ್ಎಲ್ಸಿ ಫಲಿತಾಂಶ: ತಂದೆಯ ಸಾವಿನ ನೋವಲ್ಲೂ ಪರೀಕ್ಷೆ ಬರೆದ ದರ್ಶಿನಿಗೆ 80% ಅಂಕ

(ನ್ಯೂಸ್ ಕಡಬ) newskadaba.com ಮಂಡ್ಯ,ಮೇ.7. ತನ್ನ ತಂದೆಯ ಸಾವಿನ ನೋವನ್ನು ಇಟ್ಟುಕೊಂಡು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ತ್ಯಾಗರಾಜು ಎಂಬುವವರ ಮಗಳಾದ ದರ್ಶಿನಿ ಅವರು 80% ಅಂಕಗಳನ್ನು ಪಡೆದು ಪಾಸಾಗುವುದರೊಂದಿಗೆ ಸಾಧನೆಯನ್ನು ಮಾಡಿದ್ದಾರೆ. ಎಪ್ರಿಲ್ 2ರಂದು ವಿಜ್ಞಾನ ಪರೀಕ್ಷೆಯ ದಿನದಂದು ದರ್ಶಿನಿಯ ತಂದೆ ತ್ಯಾಗರಾಜು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ದರ್ಶಿನಿಯು ತಂದೆಯ ಸಾವಿನ ನೋವನ್ನು ಮನಸಿನಲ್ಲೇ ಇಟ್ಟುಕೊಂಡು ಪರೀಕ್ಷೆ ಬರೆದಿದ್ದರು. ದರ್ಶಿನಿ ಒಟ್ಟು 500 ಅಂಕ ಗಳಿಸಿದ್ದು, ಮದ್ದೂರು ತಾಲೂಕಿನ ದೇಶಹಳ್ಳಿ

ಎಸ್ಎಸ್ಎಲ್ಸಿ ಫಲಿತಾಂಶ: ತಂದೆಯ ಸಾವಿನ ನೋವಲ್ಲೂ ಪರೀಕ್ಷೆ ಬರೆದ ದರ್ಶಿನಿಗೆ 80% ಅಂಕ Read More »

ಕರ್ನಾಟಕ

ವಿಧಾನಸಭಾ ಚುನಾವಣೆ: ಮೇ.10ರಂದು ಸಂಜೆ 6 ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.7. ಇದೇ ಬರುವ ಮೇ.10ರಂದು ಸಂಜೆ 6 ಕ್ಕೆ ಸರಿಯಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ ಎಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಇದೀಗ ಅಭ್ಯರ್ಥಿಗಳು ಬಹಿರಂಗವಾಗಿ ಪ್ರಚಾರ ನಡೆಸುತ್ತಿದ್ದು, ಮೇ.10 ರಂದು ಸಂಜೆ 6 ರ ನಂತರ ಕಲಂ 144 ರ ಅನ್ವಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಸಸಿಕಾಂತ್‌

ವಿಧಾನಸಭಾ ಚುನಾವಣೆ: ಮೇ.10ರಂದು ಸಂಜೆ 6 ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ Read More »

ಕರಾವಳಿ

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ► ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಸುಬ್ರಹ್ಮಣ್ಯದ ಅಭಿಜ್ಞಾ ರಾವ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.07. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸುಬ್ರಹ್ಮಣ್ಯದ ಕುಮಾರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳು 625 ರಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದಿರುವ ಹನ್ನೆರಡು ವಿದ್ಯಾರ್ಥಿಗಳ ಪೈಕಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿನಿ, ಮಾಜಿ ಪ್ರಾಂಶುಪಾಲ ಹಾಗೂ ಪತ್ರಕರ್ತ ದಿ| ವಿಠಲ ರಾವ್ ಅವರ ಪುತ್ರಿ ಅಭಿಜ್ಞಾ ರಾವ್ 623 ಅಂಕಗಳನ್ನು ಗಳಿಸಿದ್ದಾರೆ. ಕಳೆದ ಸಾಲಿನಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿ

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ► ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಸುಬ್ರಹ್ಮಣ್ಯದ ಅಭಿಜ್ಞಾ ರಾವ್ Read More »

ಕರಾವಳಿ

ಜೂನ್ 21ರಿಂದ 28ವರೆಗೆ ನಡೆಯಲಿದೆ ಎಸ್ಎಸ್ಎಲ್ಸಿ ಮರು ಪರೀಕ್ಷೆ

(ನ್ಯೂಸ್ ಕಡಬ) newskadaba.com, ಬೆಂಗಳೂರು,ಮೇ.7. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಇದೀಗಾಗಲೇ ಪ್ರಕಟಿಸಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳು 21ರಿಂದ 28ವರೆಗೆ ಮರು ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ. ಮರು ಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳು ಪ್ರತೀ ವಿಷಯಕ್ಕೆ 705 ರೂ. ರಂತೆ ಪಾವತಿಸಬೇಕು ಹಾಗು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮೇ 11 ರಿಂದ ಮೇ 21 ರ ವರೆಗೆ ಆನ್

ಜೂನ್ 21ರಿಂದ 28ವರೆಗೆ ನಡೆಯಲಿದೆ ಎಸ್ಎಸ್ಎಲ್ಸಿ ಮರು ಪರೀಕ್ಷೆ Read More »

ಕರ್ನಾಟಕ
Scroll to Top