ಪುಣ್ಚಪ್ಪಾಡಿ :ಕಾಂಗ್ರೆಸ್‍ಗೆ ಸೇರ್ಪಡೆಯಾಗಿಲ್ಲ : ಬಿಜೆಪಿ ಸ್ಪಷ್ಟನೆ

ಸವಣೂರು : ಪುಣ್ಚಪ್ಪಾಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಾದ ಜೀವಿತ್ ಆಚಾರ್ಯ ಕುಮಾರಮಂಗಲ,ರಾಘವೇಂದ್ರ ಗೌಡ ಕೊಳಣಬೆತ್ತಡ್ಕ,ಕರುಣಾಕರ ಗೌಡ ಸಾರಕರೆ,ಗೋಪಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾವು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಜತೆಗೆ ಪರಿವಾರ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು,ತಮಗೆ ಅರಿವಾಗದ ರೀತಿಯಲ್ಲಿ ಕಾಂಗ್ರೆಸ್ ಮುಖಂಡರು ಮಾದ್ಯಮಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ.ತಾವೂ ಕಾಂಗ್ರೆಸ್‍ನ ಪ್ರಚಾರ ಸಭೆಯಲ್ಲೂ ಭಾಗವಹಿಸಿಲ್ಲ .ಸುಳ್ಳು ಮಾಹಿತಿ ನೀಡುವ ಮೂಲಕ […]

ಪುಣ್ಚಪ್ಪಾಡಿ :ಕಾಂಗ್ರೆಸ್‍ಗೆ ಸೇರ್ಪಡೆಯಾಗಿಲ್ಲ : ಬಿಜೆಪಿ ಸ್ಪಷ್ಟನೆ Read More »

ಕರಾವಳಿ

ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ► ಸಿಬಿಐ ತನಿಖೆಗೆ ನಿರಾಕರಿಸಿದ ಸುರ್ಪಿಂಕೋರ್ಟ್

(ನ್ಯೂಸ್ ಕಡಬ) newskadaba.com ದೆಹಲಿ,ಮೇ.8. ಕಥುವಾದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದ ಹೊರಗೆ ಪಂಜಾಬ್ ನ ಪಠಾನ್ ಕೋಟ್ ಗೆ ವರ್ಗಾಯಿಸುವಂತೆ ಸೋಮವಾರದಂದು ಸುರ್ಪಿಂಕೋರ್ಟ್ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬೆಂಬಲಿಸುವ ಸಂಗತಿಗಳು ಅಧಿಕಗೊಂಡಿದೆ ಎಂದು ಕತುವಾದಿಂದ ಪ್ರಕರಣವನ್ನು ವರ್ಗಾವಣೆ ಮಾಡಬೇಕೆಂದು ಆಸಿಫಾಳ ಕುಟುಂಬವು ಮನವಿ ಮಾಡಿತ್ತು. ಸುಪ್ರೀಂ ಕೋರ್ಟ್ ದಿನನಿತ್ಯದ ಕ್ಯಾಮರಾ ವಿಚಾರಣೆಗೆ ಆದೇಶಿಸಿದೆ ಮತ್ತು ಪ್ರಕರಣದ ಪ್ರಗತಿಗೆ ಈ ಮೇಲ್ವಿಚಾರಣೆ ಸಹಕರಿಸಲಿದೆ ಎಂದು ತಿಳಿಸಿದೆ. ನ್ಯಾಯಾಲಯವು

ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ► ಸಿಬಿಐ ತನಿಖೆಗೆ ನಿರಾಕರಿಸಿದ ಸುರ್ಪಿಂಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಸಚಿವ ರಮಾನಾಥ ರೈ ಇಂದು ಕಡಬಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ.08. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರದಂದು ಕಡಬಕ್ಕೆ ಆಗಮಿಸಲಿದ್ದಾರೆ. ಮಂಗಳವಾರ ಅಪರಾಹ್ನ 03 ಗಂಟೆಗೆ ಕಡಬ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಬಿ.ರಘ ಪರವಾಗಿ ಮತ ಯಾಚಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಗಂಗಾಧರ ಗೌಡ, ವಿಜಯ ಕುಮಾರ್, ಪಿ.ಪಿ.ವರ್ಗೀಸ್, ದಿವಾಕರ ಗೌಡ ಶೀರಾಡಿ, ವಿಜಯ ಕುಮಾರ್ ರೈ, ಎಚ್.ಕೆ‌.ಇಲ್ಯಾಸ್, ಎ.ಸಿ.ಜಯರಾಜ್ ಮೊದಲಾದವರು

ಸಚಿವ ರಮಾನಾಥ ರೈ ಇಂದು ಕಡಬಕ್ಕೆ Read More »

ಕರಾವಳಿ

ಎಸ್.ಎಸ್.ಎಲ್.ಸಿ. ಪರೀಕ್ಷೆ: ಎಂಡೋ ಪಾಲನ ಕೇಂದ್ರದ ವಿದ್ಯಾರ್ಥಿಗಳ ಸಾಧನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.8. ಸೇವಾಭಾರತಿ(ರಿ) ಮಂಗಳೂರು ನಡೆಸುತ್ತಿರುವ ಕೊಕ್ಕಡ ಮತ್ತು ಎಂಡೋ ಪಾಲನ ಕೇಂದ್ರದ ಎರಡು ವಿದ್ಯಾರ್ಥಿಗಳು ಖಾಸಗಿಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಕರ್ನಾಟಕದಲ್ಲೇ ಪ್ರಪ್ರಥಮವಾಗಿ ಎಂಡೋಪೀಡಿತ ವಿದ್ಯಾರ್ಥಿಗಳು ಪಾಲನಾಕೇಂದ್ರದ ಮೂಲಕ ತರಬೇತಿ ಪಡೆದು ಕೊಕ್ಕಡ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಡಿ.ಡಿ.ಪಿ.ಪಿ ಸಹಕಾರದಿಂದ, ಬರಹಗಾರರ ಸಹಕಾರದಿಂದ ಪರೀಕ್ಷೆ ಬರೆದಿರುತ್ತಾರೆ. ಕು|| ತುಳಸಿ ಎನ್. ಕೊಕ್ಕಡದ ಶ್ರೀ ನಾರಾಯಣ ನಾಕ್, ಶ್ರೀಮತಿ ಯಶೋದ ರವರ ಪುತ್ರಿ. ಹಿಂದಿ ಮತ್ತು ಇಂಗ್ಲಿಷ್ ನಿಂದ ವಿನಾಯಿತಿ ಪಡೆದು ಉಳಿದ

ಎಸ್.ಎಸ್.ಎಲ್.ಸಿ. ಪರೀಕ್ಷೆ: ಎಂಡೋ ಪಾಲನ ಕೇಂದ್ರದ ವಿದ್ಯಾರ್ಥಿಗಳ ಸಾಧನೆ Read More »

ಕರಾವಳಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಸುಳ್ಯಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.08. ರಾಜ್ಯದಲ್ಲಿ ಚುನಾವಣಾ ಕಾವು ಏರಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳು ತಾರಾ ಪ್ರಚಾರಕರನ್ನು ಕರೆಸಿ ಪ್ರಚಾರ ಮಾಡಿಸುವುದರ‌ ಮೂಲಕ ಕ್ಷೇತ್ರದಲ್ಲಿ ಪಾರುಪತ್ಯ ಸ್ಥಾಪಿಸಲು ಶ್ರಮಿಸುತ್ತವೆ. ಅದರಂತೆ ಬಿಜೆಪಿ ತಾರಾ ಪ್ರಚಾರಕರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರದಂದು ಸುಳ್ಯ ಶಾಸಕ ಎಸ್.ಅಂಗಾರ ಪರ ಮತ ಯಾಚಿಸಲು ಸುಳ್ಯಕ್ಕೆ ಆಗಮಿಸಲಿದ್ದಾರೆ. ಇಂದು ಅಪರಾಹ್ನ 3 ಗಂಟೆಗೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಲಿದ್ದು,

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಸುಳ್ಯಕ್ಕೆ Read More »

ಕರಾವಳಿ

ಮಾರ್ ಇವಾನಿಯೋಸ್ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕುಂತೂರು, ಮೇ.8. ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ನಿಷ್ಠೆಯಿಂದ ಕರ್ತವ್ಯವನ್ನು ಪಾಲಿಸಿದರೆ ಯಶಸ್ಸನ್ನು ಗಳಿಸಲು ಸಾಧ್ಯ ಎಂಬುದಾಗಿ ಶ್ರೀ ದುರ್ಗಾಂಬ ಫ್ರೌಢ ಶಾಲೆ ಆಲಂಕಾರು ಇಲ್ಲಿನ ಮುಖ್ಯೊಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ಅವರು ನುಡಿದರು. ಅವರು ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ 2017-18ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಗುರಿಯನ್ನು ತಲುಪಲು ಛಲ ಮುಖ್ಯವಾದದ್ದು ಮತ್ತು ಗುರಿಯನ್ನು ತಲುಪಲು ಗುರುವಿನ ಮಾರ್ಗದರ್ಶನದಂತೆ ಮುನ್ನಡೆಯಲು ತಾಳ್ಮೆ, ಹೊಂದಾಣಿಕೆ,

ಮಾರ್ ಇವಾನಿಯೋಸ್ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ Read More »

ಕರಾವಳಿ

ಮೇ 8 – ವಿಶ್ವ ರೆಡ್ ಕ್ರಾಸ್ ದಿನ

(ನ್ಯೂಸ್ ಕಡಬ) newskadaba.com ಮೇ.8.  ಜಗತ್ತಿನಾದ್ಯಂತ ಮೇ 8 ರಂದು “ವಿಶ್ವ ರೆಡ್ ಕ್ರಾಸ್ ದಿನ” ಎಂದು ಆಚರಿಸಲಾಗುತ್ತದೆ. ಮಾನವೀಯತೆಯಿಂದ ಶಾಂತಿಯ ಕಡೆಗೆ [Through Humanity to Peace ] ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಶ್ರೀ ಹೆನ್ರಿ ಡ್ಯೂನಾಂಟ್ ಇವರು ಹುಟ್ಟಿದ ದಿನ ಮೇ 8.  1859 ರ ಜೂನ್ 24 ರಂದು ‘ಸಲ್ಫರಿನೋ’ ಕದನದ ಗಾಯಳುಗಳ ಮನ ಕಲುಕುವ ದೃಶ್ಯವನ್ನು ಕಂಡ ಶ್ರೀ

ಮೇ 8 – ವಿಶ್ವ ರೆಡ್ ಕ್ರಾಸ್ ದಿನ Read More »

ಆರೋಗ್ಯ ಮಾಹಿತಿ

ಕೋಡಿಂಬಾಳ: ಕುಮಾರಧಾರಾ ನದಿಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ.08. ಸ್ನಾನಕ್ಕೆಂದು ನೀರಿಗಿಳಿದ ವ್ಯಕ್ತಿಯೋರ್ವರು ಮುಳುಗಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಕುಮಾರಧಾರಾ ಹೊಳೆಯ ಪಟ್ನ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ ದಿ| ಮೇದಪ್ಪ ಗೌಡ ಎಂಬವರ ಪುತ್ರ ಬಾಲಕೃಷ್ಣ ಗೌಡ (35) ಎಂದು ಗುರುತಿಸಲಾಗಿದೆ. ಇವರು ತನ್ನ ಸ್ನೇಹಿತರೊಂದಿಗೆ ಸೋಮವಾರ ರಾತ್ರಿ ಸ್ನಾನಕ್ಕಿಳಿದಿದ್ದು, ನೀರು ಪಾಲಾಗಿದ್ದರು. ವಿಷಯ ತಿಳಿದು ಮಂಗಳವಾರ ಬೆಳಿಗ್ಗೆ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಹುಡುಕಾಟದಲ್ಲಿ ತೊಡಗಿದ್ದು, ಮೃತದೇಹ ಪತ್ತೆಯಾಗಿದೆ.

ಕೋಡಿಂಬಾಳ: ಕುಮಾರಧಾರಾ ನದಿಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು Read More »

ಕರಾವಳಿ

ಮೇ 10 ಸಂಜೆ ಆರು ಗಂಟೆಯ ನಂತರ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.08. ಮತದಾನ ಪ್ರಕ್ರಿಯೆ ಮುಗಿಯುವ 48 ಗಂಟೆಗೆ ಮೊದಲು ಹೊರಗಿನ ಯಾವೊಬ್ಬ ಚುನಾವಣಾ ತಾರಾ ಪ್ರಚಾರಕ, ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲವಾಗಿದ್ದು, ಎಲ್ಲರೂ ಕ್ಷೇತ್ರ ಬಿಟ್ಟು ತೆರಳಬೇಕು ಎಂದು ಚುನಾವಣಾಧಿಕಾರಿಯೂ ಆದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 12 ರಂದು ನಡೆಯುವ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಸೂಚಿಸಲಾಗುವ

ಮೇ 10 ಸಂಜೆ ಆರು ಗಂಟೆಯ ನಂತರ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ ► ಮಂಗಳೂರಿನ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.08. ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮಂಗಳೂರು ನಿವಾಸಿಯೋರ್ವರು ಮೃತಪಟ್ಟ ಘಟನೆ ಸೌದಿ ಅರೇಬಿಯಾದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ಮಂಗಳೂರಿನ ಕಿನ್ನಿಗೋಳಿ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಪುತ್ರ ಮಹಮ್ಮದ್ ರಾಹಿಲ್ ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ನಿದ್ದೆಯ ಮಂಪರಿನಲ್ಲಿ ಕಾರು ಟ್ರಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಾಹಿಲ್ ಮೃತಪಟ್ಟು, ಸಹೋದ್ಯೋಗಿ

ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ ► ಮಂಗಳೂರಿನ ಯುವಕ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top