ಪುಣ್ಚಪ್ಪಾಡಿ :ಕಾಂಗ್ರೆಸ್‍ಗೆ ಸೇರ್ಪಡೆಯಾಗಿಲ್ಲ : ಬಿಜೆಪಿ ಸ್ಪಷ್ಟನೆ

ಸವಣೂರು : ಪುಣ್ಚಪ್ಪಾಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಾದ ಜೀವಿತ್ ಆಚಾರ್ಯ ಕುಮಾರಮಂಗಲ,ರಾಘವೇಂದ್ರ ಗೌಡ ಕೊಳಣಬೆತ್ತಡ್ಕ,ಕರುಣಾಕರ ಗೌಡ ಸಾರಕರೆ,ಗೋಪಿ ಅವರು ಸ್ಪಷ್ಟನೆ ನೀಡಿದ್ದಾರೆ.

ನಾವು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಜತೆಗೆ ಪರಿವಾರ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು,ತಮಗೆ ಅರಿವಾಗದ ರೀತಿಯಲ್ಲಿ ಕಾಂಗ್ರೆಸ್ ಮುಖಂಡರು ಮಾದ್ಯಮಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ.ತಾವೂ ಕಾಂಗ್ರೆಸ್‍ನ ಪ್ರಚಾರ ಸಭೆಯಲ್ಲೂ ಭಾಗವಹಿಸಿಲ್ಲ .ಸುಳ್ಳು ಮಾಹಿತಿ ನೀಡುವ ಮೂಲಕ ಕಾಂಗ್ರೆಸ್‍ನ ಹತಾಶ ಸ್ಥಿತಿ ಬಯಲಾಗಿದೆ ಎಂದು ತಿಳಿಸಿದ್ದಾರೆ.

Scroll to Top