50,000ರೂ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.7. ತನಗೆ ಬಿದ್ದು ದೊರೆಕಿದಂತಹಾ 50,000 ರುಪಾಯಿಗಳನ್ನು ಅದರ ವಾರಿಸುದಾರನಿಗೆ ಹಿಂತಿರುಗಿಸುವ ಮೂಲಕ ರಿಕ್ಷಾ ಚಾಲಕನೊಬ್ಬ ಪ್ರಾಮಾಣಿಕತೆ ತೋರಿದ ಘಟನೆಯು ನಿನ್ನೆ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾದ ಪ್ರಶಾಂತ್ ಕುಮಾರ್ ಅವರು ನಿನ್ನೆ ಬೆಳಿಗ್ಗೆ ನಗರದ ಪಂಪ್ ವೆಲ್ ಸರ್ಕಲ್ ಬಳಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಜೇಬಿನಿಂದ ಮೊಬೈಲ್ ತೆಗೆಯುವ ವೇಳೆಗೆ ಜೇಬಿನಲ್ಲಿದ್ದ 50,000ರೂ ಅವರಿಗೆ ತಿಳಿಯದಂತೆ ಕೆಳಗೆ ಬಿದ್ದಿತ್ತು. ಅಲ್ಲಿಂದ ಇನ್ನೊಂದು ಕಡೆಗೆ ತೆರಳಿದ ನಂತರ ಅವರಿಗೆ ತನ್ನ […]

50,000ರೂ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ Read More »

ಕರಾವಳಿ

ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಕ್ಷಣಗಣನೆ ► ಫಲಿತಾಂಶ ಪಡೆಯಲು ಕ್ಲಿಕ್ ಮಾಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.06. ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶವು ಮೇ 07 ಸೋಮವಾರದಂದು ಪ್ರಕಟವಾಗಲಿದ್ದು, ಮೇ 08 ಮಂಗಳವಾರದಂದು ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಬೆಳಿಗ್ಗೆ 11 ಗಂಟೆಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಫಲಿತಾಂಶ ಪ್ರಕಟಿಸಲಿದ್ದು, ಮಧ್ಯಾಹ್ನ 01 ಗಂಟೆಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 8,54,424 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಫಲಿತಾಂಶ ಪಡೆಯಲು http://sslc.kar.nic.in

ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಕ್ಷಣಗಣನೆ ► ಫಲಿತಾಂಶ ಪಡೆಯಲು ಕ್ಲಿಕ್ ಮಾಡಿ Read More »

ಕರಾವಳಿ

ಕಡಬ ಬ್ಲಾಕ್ ಕಾಂಗ್ರೆಸ್ ಮಾಧ್ಯಮ ಸಂಯೋಜಕರಾಗಿ ► ಶರೀಫ್ ಬದ್ರಿಯಾ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಕಡಬ ಬ್ಲಾಕ್ ಕಾಂಗ್ರೆಸ್‌ನ ಮಾಧ್ಯಮ ಸಂಯೋಜಕರಾಗಿ ಕಾಂಗ್ರೆಸ್ ಮುಖಂಡ ಕಡಬ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಶರೀಫ್ ಎ.ಎಸ್. (ಶರೀಫ್ ಬದ್ರಿಯಾ) ರವರು ನೇಮಕಗೊಂಡಿದ್ದಾರೆ. ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾ ಮಾಧ್ಯಮ ಸಂಯೋಜಕರಾದ ಕೆ.ಕೆ. ಹರಿಪ್ರಸಾದ್ ರವರು ಮಹಮ್ಮದ್ ಶರೀಫ್ ರವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.

ಕಡಬ ಬ್ಲಾಕ್ ಕಾಂಗ್ರೆಸ್ ಮಾಧ್ಯಮ ಸಂಯೋಜಕರಾಗಿ ► ಶರೀಫ್ ಬದ್ರಿಯಾ ನೇಮಕ Read More »

ಕರಾವಳಿ

ಮರ್ಧಾಳ: ರಸ್ತೆ ಬಿಟ್ಟು ಕಮರಿಗೆ ಉರುಳಿದ ಕಾರು

(ನ್ಯೂಸ್ ಕಡಬ) newskadaba.com ಕಡಬ, ಮೇ‌.06. ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಬಿದ್ದು, ರಬ್ಬರ್ ಮರಕ್ಕೆ ವಾಲಿ ನಿಂತ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಚಾಕೋಟೆಕರೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಕುಟ್ರುಪ್ಪಾಡಿಯ ಸಿಜು ಎಂಬವರಿಗೆ ಸೇರಿದ ಮಾರುತಿ ಡಿಝೈರ್ ಕಾರು ಇಚಿಲಂಪಾಡಿ ಕಡೆಯಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದಾಗ ಚಾಕೋಟೆಕರೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದೆ. ಘಟನೆಯಲ್ಲಿ ಕಾರು ಚಾಲಕ ಸಿಜು ಹಾಗೂ ಪ್ರಯಾಣಿಕರೋರ್ವರು ಸಣ್ಣಪುಟ್ಟ

ಮರ್ಧಾಳ: ರಸ್ತೆ ಬಿಟ್ಟು ಕಮರಿಗೆ ಉರುಳಿದ ಕಾರು Read More »

ಕರಾವಳಿ

ಸುಳ್ಯದಲ್ಲಿ ಬಿಜೆಪಿಯು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಲಿದೆ ► ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಜಿಲ್ಲೆಯಲ್ಲಿ ಅತೀ ಹೆಚ್ಚಿನ ಅಭಿವೃದ್ಧಿ ಆಗಿರುವುದು ಸುಳ್ಯ ಕ್ಷೇತ್ರದಲ್ಲಾಗಿದೆ. ಶಾಸಕ ಎಸ್‌. ಅಂಗಾರರವರು ಮಾಡಿದ ಅಭಿವೃದ್ಧಿಯೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಎಸ್. ಅಂಗಾರರು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಸಮಿತಿ ಸದಸ್ಯ, ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಕೃಷ್ಣ ಶೆಟ್ಟಿ ಕಡಬ ಹೇಳಿದರು. ಜಿಲ್ಲೆಯ ಅಭಿವೃದ್ಧಿಯನ್ನು ತುಲನೆ ಮಾಡಿದಾಗ ಹೆಚ್ಚಿನ ಅಭಿವೃದ್ಧಿ ಆಗಿರುವುದು ಸುಳ್ಯ ಕ್ಷೇತ್ರದಲ್ಲಾಗಿದೆ. ಕಡಬವನ್ನು ತಾಲೂಕಾಗಿ

ಸುಳ್ಯದಲ್ಲಿ ಬಿಜೆಪಿಯು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಲಿದೆ ► ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ Read More »

ಕರಾವಳಿ

ಕಡಬ: ಧಾರ್ಮಿಕ ಕ್ಷೇತ್ರದ ಹಿರಿಮೆಯ ಗರಿ ಇನ್ನಿಲ್ಲ ► ಪನ್ಯ ಶೇಕಬ್ಬ ಮುಸ್ಲಿಯಾರ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಹಿರಿಯ ಧಾರ್ಮಿಕ ಮುಖಂಡ ಕಡಬ ತಾಲೂಕಿನ ಪನ್ಯ ನಿವಾಸಿ ಅಹ್ಮದ್ ಮುಸ್ಲಿಯಾರ್ ಯಾನೆ ಶೇಖಬ್ಬ ಮುಸ್ಲಿಯಾರ್ (78) ಭಾನುವಾರ ಮುಂಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಾಡನ್ನೂರು, ಮರ್ಧಾಳ, ಪಡ್ಡಂತಡ್ಕ, ನೆಟ್ಟಣ, ಪರ್ತಿಪ್ಪಾಡಿ, ಆಲಂಪಾಡಿ, ಗುರುಪುರ ಮನಲ್, ಉಪ್ಪಿನಂಗಡಿಯ ಅಡೆಕ್ಕಲ್, ಕಡಮಕಲ್ ಎಸ್ಟೇಟ್ ಸೇರಿದಂತೆ ವಿವಿಧೆಡೆ ಐವತ್ತು ವರ್ಷಗಳಿಗೂ ಅಧಿಕ ಅವಧಿಯಲ್ಲಿ ದರ್ಸ್ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಇವರು ಕಳೆದೆರಡು ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಂಗಳೂರಿನ

ಕಡಬ: ಧಾರ್ಮಿಕ ಕ್ಷೇತ್ರದ ಹಿರಿಮೆಯ ಗರಿ ಇನ್ನಿಲ್ಲ ► ಪನ್ಯ ಶೇಕಬ್ಬ ಮುಸ್ಲಿಯಾರ್ ನಿಧನ Read More »

ಕರಾವಳಿ

ಏನೂ ಅಭಿವೃದ್ಧಿ ಮಾಡದೆ ದೇಶದಲ್ಲಿಯೇ ಅಪರೂಪದ ಶಾಸಕರಿದ್ದರೆ ಅಂಗಾರ ಮಾತ್ರ ► ಐದು ಬಾರಿ ಶಾಸಕರಾದರೂ ಅಭಿವೃದ್ಧಿ ಶೂನ್ಯ: ಧನಂಜಯ ಅಡ್ಪಂಗಾಯ ಲೇವಡಿ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.06. ಸತತ ವಿಜಯಿಯಾಗಿ ಕಳೆದ 25 ವರ್ಷಗಳಿಂದ ಸೋಲಿನ ರುಚಿಯನ್ನೇ ಕಾಣದಿದ್ದರೂ, ಏನೂ ಅಭಿವೃದ್ಧಿ ಮಾಡದೆ ಇರುವ ಶಾಸಕರಿದ್ದರೆ ದೇಶದಲ್ಲಿಯೇ ಅಪರೂಪದ ಶಾಸಕ ಸುಳ್ಯದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಸ್.ಅಂಗಾರ ಮಾತ್ರ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಲೇವಡಿ ಮಾಡಿದ್ದಾರೆ. ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐದು ಬಾರಿ ಚುನಾಯಿತರಾಗಿ ಕಳೆದ ಇಪ್ಪತ್ತೈದು ವರ್ಷಗಳ ಕಾಲ ಶಾಸಕರಾದ ಬಿಜೆಪಿಯ ಎಸ್.ಅಂಗಾರರು ಸುಳ್ಯ

ಏನೂ ಅಭಿವೃದ್ಧಿ ಮಾಡದೆ ದೇಶದಲ್ಲಿಯೇ ಅಪರೂಪದ ಶಾಸಕರಿದ್ದರೆ ಅಂಗಾರ ಮಾತ್ರ ► ಐದು ಬಾರಿ ಶಾಸಕರಾದರೂ ಅಭಿವೃದ್ಧಿ ಶೂನ್ಯ: ಧನಂಜಯ ಅಡ್ಪಂಗಾಯ ಲೇವಡಿ Read More »

ಕರಾವಳಿ

ಬಂಟ್ವಾಳ: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ► ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.06. ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಶನಿವಾರದಂದು ಬಂಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಇಜ್ಜಾ ಗ್ರಾಮದ ಅಗ್ರಹಾರ ನಿವಾಸಿ ಶಶಿಧರ್(19) ಎಂದು ಗುರುತಿಸಲಾಗಿದೆ. ಆರೋಪಿಯು ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಬಾಲಕಿಯ ಷೋಷಕರು ನೀಡಿದ್ದ ದೂರಿನಂತೆ ಬಂಟ್ವಾಳ ಪೊಲೀಸರು ಆರೋಪಿಯನ್ನು ಶನಿವಾರದಂದು ಬಂಧಿಸಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ► ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ Read More »

ಕರಾವಳಿ

ಬಂಟ್ವಾಳ: ವಾಹನ ಚಾಲಕರ ದರೋಡೆಗೆ ಹೊಂಚು ► ಖಾರದ ಪುಡಿ, ಆಯುಧಗಳ ಸಮೇತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.06. ದರೋಡೆಗೈಯಲು ಹೊಂಚು ಹಾಕಿ ಕುಳಿತಿದ್ದ ಆರು ಮಂದಿ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಚಾಕು, ಕಬ್ಬಿಣದ ರಾಡ್ ಹಾಗೂ ಖಾರದ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಉಳ್ಳಾಲ ಮಿಲ್ಲತ್ ನಗರದ ಫಲಾಲ್ ಮಂಝಿಲ್‌ ನಿವಾಸಿ ಮಹಮ್ಮದ್ ಅರ್ಪಾಜ್(19) ಹಾಗೂ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಮಹಮ್ಮದ್ ಸುಹೈಲ್(27) ಎಂದು ಗುರುತಿಸಲಾಗಿದೆ. ಶುಕ್ರವಾರ ತಡರಾತ್ರಿ ಫರಂಗಿಪೇಟೆ, ಮಾರಿಪಳ್ಳ ಪರಿಸರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ರೊಟ್ಟಿಗುಡ್ಡೆ ಎಂಬಲ್ಲಿ ಆರು ಮಂದಿಯ

ಬಂಟ್ವಾಳ: ವಾಹನ ಚಾಲಕರ ದರೋಡೆಗೆ ಹೊಂಚು ► ಖಾರದ ಪುಡಿ, ಆಯುಧಗಳ ಸಮೇತ ಇಬ್ಬರ ಬಂಧನ Read More »

ಕರಾವಳಿ

ಅಭಿವೃದ್ಧಿ ಕಾಣದ ಪದವು – ಕೆದ್ದೋಟೆ – ಕುಂತೂರು ಕಚ್ಚಾ ರಸ್ತೆ ► ಮುಂದಿನ ಹೆಜ್ಜೆಯ ಬಗ್ಗೆ ಸಭೆ ಸೇರಿದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಕಳೆದ ಹಲವು ವರ್ಷಗಳಿಂದ ಬೇಡಿಕೆಯಾದ ಪದವಿನಿಂದ ಕೆದ್ದೋಟೆ – ಇಡಾಳ – ಕುಂಟ್ಯಾನ ಮೂಲಕ ಕುಂತೂರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಕಚ್ಚಾ ರಸ್ತೆಯನ್ನು ದುರಸ್ಥಿ ಮಾಡದ ವಿಚಾರದಲ್ಲಿ ಇಡೀ ಗ್ರಾಮಸ್ಥರಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೆದ್ದೋಟೆ ಶ್ರೀ ರಾಮ ಭಜನಾ ಮಂದಿರದಲ್ಲಿ ಗ್ರಾಮಸ್ಥರ ಸಭೆಯು ಶನಿವಾರ ನಡೆಯಿತು. ಗ್ರಾಮೀಣ ಯುವಕರು ರಸ್ತೆ ಅಭಿವೃದ್ಧಿಯ ವಿಚಾರದಲ್ಲಿ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಚರ್ಚಿಸಿ ಕೊನೆಗೆ ಶನಿವಾರ ರಾತ್ರಿ ಸಭೆ ಕರೆದಿದ್ದರು.

ಅಭಿವೃದ್ಧಿ ಕಾಣದ ಪದವು – ಕೆದ್ದೋಟೆ – ಕುಂತೂರು ಕಚ್ಚಾ ರಸ್ತೆ ► ಮುಂದಿನ ಹೆಜ್ಜೆಯ ಬಗ್ಗೆ ಸಭೆ ಸೇರಿದ ಗ್ರಾಮಸ್ಥರು Read More »

ಕರಾವಳಿ
Scroll to Top