ಕೋಡಿಂಬಾಳದ ಅರ್ಪಾಜೆ ಕೆರೆ ಒತ್ತುವರಿ ಆರೋಪ ► ಕೆರೆ ಅಭಿವೃದ್ಧಿಗೆ ಮುಂದಾದ ಸ್ಥಳೀಯರಿಗೆ ಕಾನೂನಿನ ತೊಡಕು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಇಲ್ಲಿನ ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ  ಸರ್ವೆ ನಂ.33/3 ರಲ್ಲಿ 0.62 ಎಕರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ ಕೆರೆಯ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿರುವುದರ ವಿರುದ್ಧ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಹಲವು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ತಿಂಗಳ ಹಿಂದೆ ದೂರಿಗೆ ಸ್ಪಂದಿಸಿದ ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಅವರು ಕೆರೆಯನ್ನು ಅಳೆದು ಗಡಿ ಗುರುತು ಮಾಡಿ ಅತಿಕ್ರಮಣ ನಡೆದಿದ್ದರೆ ಕೂಡಲೇ ತೆರವುಗೊಳಿಸುವಂತೆ ಕಡಬ ಕಂದಾಯ […]

ಕೋಡಿಂಬಾಳದ ಅರ್ಪಾಜೆ ಕೆರೆ ಒತ್ತುವರಿ ಆರೋಪ ► ಕೆರೆ ಅಭಿವೃದ್ಧಿಗೆ ಮುಂದಾದ ಸ್ಥಳೀಯರಿಗೆ ಕಾನೂನಿನ ತೊಡಕು Read More »

ಕರಾವಳಿ

ಬಂಟ್ವಾಳ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.26. ಯುವತಿಯೋರ್ವಳು ತನ್ನ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ‌ಘಟನೆ ಬಂಟ್ವಾಳದ ದಡ್ಡಲಕಾಡು ಎಂಬಲ್ಲಿ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಬಂಟ್ವಾಳ ತಾಲೂಕಿನ ದಡ್ಡಲಕಾಡು ನಿವಾಸಿ ಪವಿತ್ರಾ‌(20) ಎಂದು ಗುರುತಿಸಲಾಗಿದೆ. ತಂದೆ ತಾಯಿ ಇಲ್ಲದೆ ಅನಾಥೆಯಾಗಿದ್ದ ಪವಿತ್ರಾ ತನ್ನ ಅಜ್ಜಿಯ ಜೊತೆಗೆ ವಾಸ ಮಾಡಿಕೊಂಡಿದ್ದು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ. ಸೋಮವಾರದಂದು ಅಡುಗೆ ಕೋಣೆಯಲ್ಲಿ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಟ್ವಾಳ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ Read More »

ಕರಾವಳಿ

ಬಂಟ್ವಾಳ: ಮಹಾಮಳೆಗೆ ಮುರಿದು ನದಿಗೆ ಬಿದ್ದ ಮುಳ್ಳರಪಟ್ಣ ಸೇತುವೆ ► ವಾಹನ ಸಂಚಾರವಿಲ್ಲದ ಕಾರಣ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.25. ನದಿಗೆ ಅಡ್ಡಲಾಗಿ ಕಟ್ಟಿಲಾಗಿದ್ದ ಸೇತುವೆಯೊಂದು ಕುಸಿದು ನದಿಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಮುಲ್ಲರಪಟ್ಣದಲ್ಲಿ ಸೋಮವಾರ ಸಂಜೆ‌ ನಡೆದಿದೆ. ಕುಪ್ಪೆಪದವು – ಬಿ.ಸಿ‌. ರೋಡ್ ರಾಜ್ಯ ಹೆದ್ದಾರಿಯ ಮುಲ್ಲರಪಟ್ಣ ಎಂಬಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯು ಸೋಮವಾರ ಸಂಜೆ ಇದ್ದಕ್ಕಿದ್ದಂತೆ ತುಂಬಿ ಹರಿಯುತ್ತಿರುವ ಫಲ್ಗುಣಿ ನದಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸೇತುವೆಯ ಮೇಲೆ ಯಾವುದೇ ವಾಹನ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸೇತುವೆಯ ಅಡಿಭಾಗದಲ್ಲಿ ಮರಳುಗಾರಿಕೆ ನಡೆಸಿರುವ

ಬಂಟ್ವಾಳ: ಮಹಾಮಳೆಗೆ ಮುರಿದು ನದಿಗೆ ಬಿದ್ದ ಮುಳ್ಳರಪಟ್ಣ ಸೇತುವೆ ► ವಾಹನ ಸಂಚಾರವಿಲ್ಲದ ಕಾರಣ ತಪ್ಪಿದ ಭಾರೀ ಅನಾಹುತ Read More »

ಕರಾವಳಿ

ಬೆಳ್ಳಾರೆ: ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ

(ನ್ಯೂಸ್ ಕಡಬ) newskadaba.com ಬೆಳ್ಳಾರೆ ಜೂ,25. ಯುವ ಜೇಸಿ ಬೆಳ್ಳಾರೆ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಕೆ.ಮಂ.ಸಿ ಆಸ್ಪತ್ರೆ, ಕೆ.ವಿ.ಜಿ ದಂತ ಕಾಲೇಜು, ಇಂಡಿಯನ್ ರೆಡ್ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇವರುಗಳ ಸಹಕಾರದೊಂದಿಗೆ ದಿನಾಂಕ 24 ಭಾನುವಾರದಂದು ಕಲ್ಮಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ವಠಾರದಲ್ಲಿ ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ ಜರುಗಿತು. ಬೆಳ್ಳಾರೆಯ ಖ್ಯಾತ ವೈದ್ಯರಾಗಿದ್ದ ದಿವಂಗತ ಡಾ|| ಎಸ್. ನಾರಾಯಣ ಭಟ್ ಇವರ ಸ್ಮರಣಾರ್ಥವಾಗಿ

ಬೆಳ್ಳಾರೆ: ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ Read More »

ಕರಾವಳಿ

ಮಾರ್ ಇವಾನಿಯೋಸ್ ಕಾಲೇಜು: ವಿಶ್ವ ಯೋಗ ದಿನಾಚರಣೆ.

(ನ್ಯೂಸ್ ಕಡಬ) newskadaba.com ಕುಂತೂರು,ಜೂ.25. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಜೂನ್ 21 ರಂದು ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ತರಬೇತಿಯನ್ನು ನೀಡಲಾಯಿತು. ತರಬೇತುದಾರಾಗಿ ಆಗಮಿಸಿದ ಯೋಗ ಶಿಕ್ಷಕ ಶ್ರೀ ವಿಜೇಶ್ ಅವರ ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿಗಳು ಯೋಗ ದಿನಾಚರಣೆಯನ್ನು ಆಚರಿಸಿದರು.

ಮಾರ್ ಇವಾನಿಯೋಸ್ ಕಾಲೇಜು: ವಿಶ್ವ ಯೋಗ ದಿನಾಚರಣೆ. Read More »

ಕರಾವಳಿ

ವಿಶ್ವದಾದ್ಯಂತ ಜೂನ್ 26ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ

(ನ್ಯೂಸ್ ಕಡಬ) newskadaba.com ಜೂ.25. ‘ಮತ್ತು ತಂದೀತು ಜೀವಕೇ’ ಕುತ್ತು ವಿಶ್ವದಾದ್ಯಂತ ಜೂನ್ 26ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. 1987 ರಲ್ಲಿ ಆರಂಭವಾದ ಈ ಆಚರಣೆ, ಜಗತ್ತಿನಾದ್ಯಂತ ‘ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅದರ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮಾದಕ ವ್ಯಸನಿಗಳನ್ನು ವ್ಯಸನಮುಕ್ತಗೊಳಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಗುರುತರವಾದ ಉದ್ದೇಶವನ್ನು ಹೊಂದಿದೆ. ಒಂದು ಅಂದಾಜು ಮೂಲದ ಪ್ರಕಾರ ಸುಮಾರು 200 ಮಿಲಿಯನ್ ಮಂದಿ ಜಗತ್ತಿನೆಲ್ಲೆಡೆ ಮಾದಕ

ವಿಶ್ವದಾದ್ಯಂತ ಜೂನ್ 26ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ Read More »

ಕರಾವಳಿ

ಚಕ್ರವಿಲ್ಲದೆ ಸ್ಥಗಿತಗೊಂಡ ಕಡಬದ ಜೀವರಕ್ಷಕ ► ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ 108 ಆಂಬ್ಯುಲೆನ್ಸ್

(ನ್ಯೂಸ್ ಕಡಬ) newskadaba.com ಕಡಬ, ಜೂ.25. ಅಪಘಾತ ಮತ್ತು ತುರ್ತು ಆರೋಗ್ಯ ಸಮಸ್ಯೆ ಸಂಭವಿಸಿದಾಗ ಆಸ್ಪತ್ರೆಗೆ ಕೊಂಡೊಯ್ಯಲು ವಾಹನ ಸಮಸ್ಯೆ ಬರಬಾರದು. ಇದರಿಂದ ಜನರು ಪ್ರಾಣ ಕಳೆದುಕೊಳ್ಳಬಾರದು ಎಂಬ ಸದುದ್ದೇಶದಿಂದ ಸರಕಾರ 108 ವಾಹನವನ್ನು ಪ್ರಾರಂಭಿಸಿತ್ತು. ಜನರು ಇದರ ಪ್ರಯೋಜನವನ್ನು ಪಡೆದುಕೊಂಡರು, ಆದರೆ ಕಡಬದ ಆಂಬ್ಯುಲೆನ್ಸ್ ಮಾತ್ರ ಒಂದಲ್ಲ ಒಂದು ಸಮಸ್ಯೆಯಿಂದ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಇದೀಗ ಕಳೆದೊಂದು ವಾರದಿಂದ ಕಡಬದ ಆ್ಯಂಬುಲೆನ್ಸ್ ನಾಪತ್ತೆಯಾಗಿದೆ, ಈ ಬಗ್ಗೆ 108 ವಾಹನದ ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ಟಯರ್ ಸಮಸ್ಯೆಯಿಂದ 108

ಚಕ್ರವಿಲ್ಲದೆ ಸ್ಥಗಿತಗೊಂಡ ಕಡಬದ ಜೀವರಕ್ಷಕ ► ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ 108 ಆಂಬ್ಯುಲೆನ್ಸ್ Read More »

ಕರಾವಳಿ

ಆಲಂಕಾರು :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಕೆ. ಸುಬ್ರಹ್ಮಣ್ಯ ಭಟ್ ಶೇಡಿಗುಂಡಿ ನಿಧನ

(ನ್ಯೂಸ್ ಕಡಬ) newskadaba.com ಆಲಂಕಾರು, ಜೂ. 25. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಕೆ. ಸುಬ್ರಹ್ಮಣ್ಯ ಭಟ್ ಶೇಡಿಗುಂಡಿ(55) ಆದಿತ್ಯವಾರ ಸಂಜೆ ಸ್ವ-ಗೃಹದಲ್ಲಿ ನಿಧನ ಹೊಂದಿದದರು. ಮೃತರು ಕಳೆದ ಹಲವು ವರ್ಷಗಳಿಂದ ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರಗತಿಪರ ಕೃಷಿಕರೂ ಆಗಿದ್ದ ಇವರುಗಳು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನಲ್ಲಿ ಕಳೆದ 24 ವರ್ಷಗಳಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದರು.  1996ರಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ

ಆಲಂಕಾರು :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಕೆ. ಸುಬ್ರಹ್ಮಣ್ಯ ಭಟ್ ಶೇಡಿಗುಂಡಿ ನಿಧನ Read More »

ಕರಾವಳಿ

ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ► ವಿದ್ಯಾರ್ಥಿ ನಾಯಕಿಯಾಗಿ ಇಂದಿಕಾ ಕೆ. ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ಕಾಲೇಜು ವಿದ್ಯಾರ್ಥಿ ನಾಯಕಿಯಾಗಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಇಂದಿಕಾ ಕೆ. ಚುನಾಯಿತರಾಗಿದ್ದಾರೆ. ಶನಿವಾರದಂದು ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಇಂದಿಕಾ ಕೆ., ಅತ್ಯಧಿಕ ಮತ ಪಡೆದು ನಾಯಕಿಯಾಗಿ ಆಯ್ಕೆಗೊಂಡರು. ಇವರು ಕಡಬದ ಪರ್ತಕರ್ತ ಖಾದರ್ ಸಾಹೇಬ್ ಹಾಗೂ ಕಲ್ಲುಗುಡ್ಡೆ  ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ದಂಪತಿಯ ಪುತ್ರಿಯಾಗಿದ್ದಾರೆ.

ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ► ವಿದ್ಯಾರ್ಥಿ ನಾಯಕಿಯಾಗಿ ಇಂದಿಕಾ ಕೆ. ಆಯ್ಕೆ Read More »

ಕರಾವಳಿ

ಪೆರ್ನೆ: ಖಾಸಗಿ ಬಸ್ – ಕಾರು ಮುಖಾಮುಖಿ ಢಿಕ್ಕಿ ► ಹಲವರಿಗೆ ಗಾಯ

 ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜಶ್ರೀ ಹೆಸರಿನ ಖಾಸಗಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಆಗಮಸುತ್ತಿದ್ದ ಸ್ವಿಫ್ಟ್ ಕಾರು ನಡುವೆ ಪೆರ್ನೆಯ ದೋರ್ಮೆ ಮಸೀದಿ ಬಳಿ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಪೆರ್ನೆ: ಖಾಸಗಿ ಬಸ್ – ಕಾರು ಮುಖಾಮುಖಿ ಢಿಕ್ಕಿ ► ಹಲವರಿಗೆ ಗಾಯ Read More »

ಕರಾವಳಿ
Scroll to Top