ಶ್ರೀ ರಾಮಕುಂಜೇಶ್ವರ ಎನ್ನೆಸೆಸ್ಸ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com ,ಕಡಬ.ಜೂ.11. ಮನುಷ್ಯ ತನ್ನ ಜೀವಿತವಾಧಿಯಲ್ಲಿ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸದರೆ ಬದುಕು ಸಾರ್ಥಕವಾಗುತ್ತದೆ ಎಂದು ಕಡಬ ಸರಸ್ವತೀ ವಿದ್ಯಾಲಯ ಸಂಚಾಲಕ ವೆಂಕಟ್ರಮಣ ಮಂಕುಡೆ ಹೇಳಿದರು. ಅವರು ಶ್ರೀ ರಾಮಕುಂಜೇಶ್ವರ ಪದವಿ ಪುರ್ವ ಕಾಲೇಜಿನ ಎನ್ನೆಸೆಸ್ಸ್ ಘಟಕದ ಪ್ರಸಕ್ತ ಸಾಲಿನ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ನಿಸ್ವಾರ್ಥ ಸೇವಾ ಮನೊಭಾವನೆ ಬೆಳೆಯಲು ಎನ್ನೆಸೆಸ್ಸ್ ಪೂರಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎನ್ನೆಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶಿಸ್ತುಬದ್ದ ಅನುಸಾಸನ ಜೀವನದಿಂದ ನಮ್ಮ ವ್ಯಕ್ತಿತ್ವ ಬೆಳಗುತ್ತದೆ. […]

ಶ್ರೀ ರಾಮಕುಂಜೇಶ್ವರ ಎನ್ನೆಸೆಸ್ಸ್ ಉದ್ಘಾಟನೆ Read More »

ಕರಾವಳಿ

ಮಾಜಿ ಸಚಿವ ಬಿ.ಎ.ಮೊಹಿದಿನ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.10. ಹಿರಿಯ ರಾಜಕೀಯ ನೇತಾರ, ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಹಿದಿನ್(81) ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಚೇತರಿಕೆಯ ನಂತರ ವಾರದ ಹಿಂದೆ ಬೆಂಗಳೂರಿಗೆ ತೆರಳಿದ್ದರೆನ್ನಲಾಗಿದೆ. ಅಲ್ಲಿ ಆರೋಗ್ಯ ಪರಿಸ್ಥಿತಿ ಹದಗೆಟ್ಟಾಗ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿತ್ತು. ಮಂಗಳವಾರ ಮುಂಜಾನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮಾಜಿ ಸಚಿವ ಬಿ.ಎ.ಮೊಹಿದಿನ್ ವಿಧಿವಶ Read More »

ಕರ್ನಾಟಕ

ಉಪ್ಪಳ: ಲಾರಿ – ತೂಫಾನ್ ಮುಖಾಮುಖಿ ಢಿಕ್ಕಿ ► ಮಂಗಳೂರಿನ ಒಂದೇ ಕುಟುಂಬದ ಐವರ ದುರ್ಮರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.09. ಲಾರಿ ಹಾಗೂ ತೂಫಾನ್ ನಡುವೆ ಢಿಕ್ಕಿ ಸಂಭವಿಸಿ ಐವರು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ನಯಾ ಬಜಾರ್‍‍ ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೆ.ಸಿ.ರೋಡ್ ಅಜ್ಜಿನಡ್ಕ ನಿವಾಸಿಗಳಾದ ಬೀಫಾತಿಮ್ಮ(65), ಅಸ್ಮಾ(30), ನಸೀಮಾ(38), ಮುಸ್ತಾಕ್(41), ಇಮ್ತಿಯಾಝ್(35) ಎಂದು ಗುರುತಿಸಲಾಗಿದೆ. ಇವರು ಕುಟುಂಬ ಸಮೇತರಾಗಿ ಕೇರಳದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಹಿಂತಿರುಗುತ್ತಿದ್ದಾಗ ಉಪ್ಪಳ ಸಮೀಪ ಲಾರಿ ಹಾಗೂ ತೂಫಾನ್ ನಡುವೆ ಢಿಕ್ಕಿಯುಂಟಾಗಿ

ಉಪ್ಪಳ: ಲಾರಿ – ತೂಫಾನ್ ಮುಖಾಮುಖಿ ಢಿಕ್ಕಿ ► ಮಂಗಳೂರಿನ ಒಂದೇ ಕುಟುಂಬದ ಐವರ ದುರ್ಮರಣ Read More »

ರಾಷ್ಟ್ರೀಯ ನ್ಯೂಸ್

ಕರಾವಳಿ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆ ► ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.08. ತೀವ್ರ ಮಳೆಯ ಹಿನ್ನೆಲೆಯಲ್ಲಿ ಜುಲೈ 09 ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅವರು ರಜೆ ಘೋಷಿಸಿದ್ದಾರೆ. ಕರಾವಳಿ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ತೀವ್ರ ಮಳೆಯಾಗುತ್ತಿರುವುದರಿಂದಾಗಿ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಹಾಗೂ ಪ್ರಾಕೃತಿಕ ವಿಕೋಪದ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಸೋಮವಾರದಂದು ರಜೆ ಘೋಷಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆ ► ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ Read More »

ಕರಾವಳಿ

ಕೊಂಬಾರು ಗ್ರಾಮ ಕರಣಿಕ ನೆಬಿ ಸಾಹೇಬ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜು.08. ಕೊಂಬಾರು ಗ್ರಾಮ ಕರಣಿಕರಾಗಿ ಸೇವೆಯಲ್ಲಿದ್ದ ನೆಬಿಸಾಹೇಬ್ ಮಿದುಳು ರಕ್ತಸ್ರಾವದಿಂದಾಗಿ ಭಾನುವಾರದಂದು ನಿಧನ ಹೊಂದಿದರು. ನಿವೃತ್ತ ಯೋಧರಾಗಿದ್ದ ಇವರು ಕಳೆದ ನಾಲ್ಕು ವರ್ಷಗಳ ಹಿಂದೆ ಕಂದಾಯ ಇಲಾಖೆಗೆ ಸೇರ್ಪಡೆಗೊಂಡು ಪ್ರಸ್ತುತ ಕೊಂಬಾರು ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರದಂದು ಕಡಬದಲ್ಲಿ ಕುಸಿದು ಬಿದ್ದ‌ ಇವರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಿದುಳು ರಕ್ತಸ್ರಾವದಿಂದಾಗಿ ಮೃತಪಟ್ಟರು.

ಕೊಂಬಾರು ಗ್ರಾಮ ಕರಣಿಕ ನೆಬಿ ಸಾಹೇಬ್ ನಿಧನ Read More »

ಕರಾವಳಿ

ಪುತ್ತೂರು: ಮನೆಯ ಮೇಲೆ ಗುಡ್ಡ ಕುಸಿತ ► ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.07. ಶುಕ್ರವಾರದಿಂದ ಸುರಿದ ಭಾರೀ ಮಳೆಗೆ ಮನೆತ ಮೇಲೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆ ಪುತ್ತೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಪುತ್ತೂರು ಕಸಬಾ ಗ್ರಾಮದ ಹೆಬ್ಬಾರ್ ಬೈಲ್ ನಿವಾಸಿ ಪಾರ್ವತಿ(70) ಹಾಗೂ ಧನುಷ್(11) ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತಿದ್ದು ಗುಡ್ಡ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟರು ಎಂದು ಹೇಳಲಾಗಿದೆ.

ಪುತ್ತೂರು: ಮನೆಯ ಮೇಲೆ ಗುಡ್ಡ ಕುಸಿತ ► ಇಬ್ಬರು ಮೃತ್ಯು Read More »

ಕರಾವಳಿ

ಮಂಗಳೂರು: ಪಜೀರು ಗ್ರಾಮಸಭೆ

(ನ್ಯೂಸ್ ಕಡಬ) newskadaba.com,ಜು.06. ಬಂಟ್ವಾಳ ತಾಲೂಕು, ಪಜೀರು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ, ಜುಲೈ 16 ರಂದು ಪೂರ್ವಾಹ್ನ 10.30 ಗಂಟೆಗೆ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ(ಗ್ರಾ.ಪಂ.ಬಳಿ), ಪಜೀರು ಇಲ್ಲಿ ನಡೆಯಲಿದೆ.

ಮಂಗಳೂರು: ಪಜೀರು ಗ್ರಾಮಸಭೆ Read More »

ಕರಾವಳಿ

ಕೇಂದ್ರ ಸಚಿವರ ಪ್ರವಾಸ

(ನ್ಯೂಸ್ ಕಡಬ) newskadaba.com,ಜು.06. ಕೇಂದ್ರ ಅಂಕಿ ಅಂಶ ಸಚಿವ ಸದಾನಂದ ಗೌಡ ಅವರ ದ.ಕ ಜಿಲ್ಲಾ ಪ್ರವಾಸ ಇಂತಿವೆ. ಜುಲೈ 7 ರಂದು 7 ಗಂಟೆಗೆ ಮಂಗಳೂರಿಗೆ ಆಗಮಿಸಿ ವಾಸ್ತವ್ಯ, ಜುಲೈ 8 ರಂದು ಪೂರ್ವಾಹ್ನ 11.30 ಗಂಟೆಗೆ ಪುತ್ತೂರಿನಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಂಗಳೂರಿನಲ್ಲಿ ವಾಸ್ತವ್ಯ. ಜುಲೈ 9 ರಂದು 3 ಗಂಟೆಗೆ ಮಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ತೆರಳುವರು.

ಕೇಂದ್ರ ಸಚಿವರ ಪ್ರವಾಸ Read More »

ಕರಾವಳಿ

ದೀನ್ ದಯಾಳ್ ಸ್ಪರ್ಶ್ ಯೋಜನೆ

(ನ್ಯೂಸ್ ಕಡಬ) newskadaba.com,ಜು.06. ಅಂಚೆ ಇಲಾಖೆಯು ದೀನ್ ದಯಾಳ್ ಸ್ಪರ್ಶ್ ಯೋಜನೆಯಡಿ 6ನೇ ತರಗತಿಯಿಂದ 9ನೇ ತರಗತಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಪಿಲೇಟಲಿ (ಅಂಚೆ ಸಂಗ್ರಹಣೆ) ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಕ್ವಿಜ್‍ನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ರೂ. 6000/- ನಗದು ಬಹುಮಾನವನ್ನು ಘೋಷಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಜುಲೈ 20 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು 575002 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.    

ದೀನ್ ದಯಾಳ್ ಸ್ಪರ್ಶ್ ಯೋಜನೆ Read More »

ಕರಾವಳಿ

ಪಿಲಿಕುಳದ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ

(ನ್ಯೂಸ್ ಕಡಬ) newskadaba.com,ಜು.06. ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‍ನಲ್ಲಿ ಕೆರೆಯಲ್ಲಿ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮವು ನೆರವೇರಲಿದ್ದು, ಜುಲೈ 15 ರಂದು ಮೀನುಗಾರಿಕಾ ಇಲಾಖೆ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಪಿಲಿಕುಳ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮವು ಜಿಲ್ಲೆಯ ಮೀನು ಪ್ರಿಯರಿಗೆ ಸುವರ್ಣಾವಕಾಶವಾಗಿದೆ. ಈ ಹಬ್ಬದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‍ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು,

ಪಿಲಿಕುಳದ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ Read More »

ಕರಾವಳಿ
Scroll to Top