ಕೊಂಬಾರು ಗ್ರಾಮ ಕರಣಿಕ ನೆಬಿ ಸಾಹೇಬ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜು.08. ಕೊಂಬಾರು ಗ್ರಾಮ ಕರಣಿಕರಾಗಿ ಸೇವೆಯಲ್ಲಿದ್ದ ನೆಬಿಸಾಹೇಬ್ ಮಿದುಳು ರಕ್ತಸ್ರಾವದಿಂದಾಗಿ ಭಾನುವಾರದಂದು ನಿಧನ ಹೊಂದಿದರು.

ನಿವೃತ್ತ ಯೋಧರಾಗಿದ್ದ ಇವರು ಕಳೆದ ನಾಲ್ಕು ವರ್ಷಗಳ ಹಿಂದೆ ಕಂದಾಯ ಇಲಾಖೆಗೆ ಸೇರ್ಪಡೆಗೊಂಡು ಪ್ರಸ್ತುತ ಕೊಂಬಾರು ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರದಂದು ಕಡಬದಲ್ಲಿ ಕುಸಿದು ಬಿದ್ದ‌ ಇವರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಿದುಳು ರಕ್ತಸ್ರಾವದಿಂದಾಗಿ ಮೃತಪಟ್ಟರು.

Scroll to Top