ಇನ್ಮುಂದೆ ಕಡಬದಲ್ಲಿ ಪ್ರತೀ ತಿಂಗಳು ಲೋಕಯುಕ್ತರಿಂದ ಸಾರ್ವಜನಿಕ ದೂರು ಸ್ವೀಕಾರ ➤ ಕಡಬದಲ್ಲಿ ಅಹವಾಲು ಸ್ವೀಕರಿಸಿ ಲೋಕಾಯುಕ್ತ ಡಿವೈಎಸ್ಪಿ ಹೇಳಿಕೆ
(ನ್ಯೂಸ್ ಕಡಬ) newskadaba.com ಕಡಬ, ಸೆ.18. ನೂತನವಾಗಿ ಉದ್ಘಾಟನೆಗೊಂಡ ಕಡಬ ತಾಲೂಕಿನಲ್ಲಿ ಇನ್ಮುಂದೆ ಪ್ರತೀ ತಿಂಗಳು ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕ ದೂರುಗಳ ಸ್ವೀಕಾರ ಸಭೆ ನಡೆಯಲಿದೆ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಡಿವೈಎಸ್ಪಿ ವಿಜಯಪ್ರಸಾದ್ ಹೇಳಿದರು. ಅವರು ಮಂಗಳೂರು ವಿಭಾಗದ ಲೋಕಾಯುಕ್ತ ಪೋಲಿಸರಿಂದ ಬುಧವಾರದಂದು ಕಡಬದ ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ದೂರುಗಳನ್ನು ಸ್ವೀಕರಿಸಿ ಮಾತನಾಡಿದರು. ಕಡಬ ತಾಲೂಕು ನೂತನವಾಗಿ ಅನುಷ್ಠಾನಕ್ಕೆ ಬಂದಿರುವುದರಿಂದ ಇಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕ ದೂರು ಸ್ವೀಕಾರ ನಡೆದಿರಲಿಲ್ಲ. […]





