ದ .ಕ ಜಿ. ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ➤ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕರ್ನಾಟಕ ,ಸಪ್ಟೆಂಬರ್.20.ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2019-20 ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೇಟ್ ಬಾಲ್, ಹ್ಯಾಂಡ್ ಬಾಲ್, ಕುಸ್ತಿ, ಟೇಬಲ್ ಟೆನ್ನಿಸ್, ನೆಟ್ ಬಾಲ್, ಭಾರ ಎತ್ತುವುದು ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ವರ್ಧೆಗಳು ಸಪ್ಟೆಂಬರ್ 21 ರಿಂದ 22 ರವರೆಗೆ ಮಂಗಳೂರು […]

ದ .ಕ ಜಿ. ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ➤ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ Read More »

ಕರಾವಳಿ

➤➤ ದಿನ ಭವಿಷ್ಯ – ದಾಂಪತ್ಯ ಕಲಹದ ಭೀತಿಯೇ.? ➤ ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ ರವರಿಂದ ಪರಿಹಾರ

ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ. 9945410150 ಮೇಷ ರಾಶಿ ನೀವು ಎಷ್ಟೇ ಪ್ರಯತ್ನಪಟ್ಟರೂ ಕಾರ್ಯದಲ್ಲಿ ಯಶಸ್ವಿಯಾಗುವುದಿಲ್ಲ. ಪ್ರೀತಿ-ಪ್ರೇಮ-ಪ್ರಣಯದಲ್ಲಿ ಜಿಗುಪ್ಸೆ ಆಗುವ ಸಂಭವ

➤➤ ದಿನ ಭವಿಷ್ಯ – ದಾಂಪತ್ಯ ಕಲಹದ ಭೀತಿಯೇ.? ➤ ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ ರವರಿಂದ ಪರಿಹಾರ Read More »

ಭವಿಷ್ಯ

ಏಷ್ಯಾದ ನಂ.1 ‘ನಿಪ್ಪೋನ್ ಪೈಂಟ್’ ಇದೀಗ ಕಡಬದಲ್ಲಿ ➤ ಅಧಿಕೃತ ವಿತರಕ ಸಂಸ್ಥೆ ಎಂ.ಎಚ್. ಟ್ರೇಡರ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.19. ಇಲ್ಲಿನ ಕಡಬ – ಪಂಜ ರಸ್ತೆಯಲ್ಲಿನ ಮಧುರಾ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಂಡಿರುವ ನಿಪ್ಪೋನ್ ಪೈಂಟ್ಸ್ ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ ಎಂ.ಎಚ್ ಟ್ರೇಡರ್ಸ್‍ನ ಉದ್ಘಾಟನಾ ಸಮಾರಂಭವು ಗುರುವಾರದಂದು ನಡೆಯಿತು. ಸಂಸ್ಥೆಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಉದ್ಯಮ ವ್ಯವಹಾರಗಳು ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ. ಉತ್ತಮ ತಂತ್ರಜ್ಞಾನ, ಆಧುನಿಕ ವ್ಯವಸ್ಥೆಯೊಂದಿಗೆ ಉದ್ಯಮ ಸಂಸ್ಥೆಗಳು ಕಡಬ ಭಾಗದ

ಏಷ್ಯಾದ ನಂ.1 ‘ನಿಪ್ಪೋನ್ ಪೈಂಟ್’ ಇದೀಗ ಕಡಬದಲ್ಲಿ ➤ ಅಧಿಕೃತ ವಿತರಕ ಸಂಸ್ಥೆ ಎಂ.ಎಚ್. ಟ್ರೇಡರ್ಸ್ ಶುಭಾರಂಭ Read More »

ಕರಾವಳಿ

ಬಲ್ಯ: ಕಾರುಗಳೆರಡರ ಮಧ್ಯೆ ಮುಖಾಮುಖಿ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.19. ಮಾರುತಿ ಸುಝುಕಿ ಸ್ವಿಫ್ಟ್ ಹಾಗೂ ಮಹೀಂದ್ರಾ ಕೆಯುವಿ 100 ಕಾರುಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ವಿಫ್ಟ್ ಕಾರಿ‌ನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಗುರುವಾರ ಸಂಜೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಜಂಕ್ಷನ್ ನಲ್ಲಿ ನಡೆದಿದೆ. ಗಾಯಾಳುಗಳನ್ನು ಬೆಳ್ತಂಗಡಿ ನಿವಾಸಿ ವಾಸುದೇವ ಗೋಖಲೆ(55) ಹಾಗೂ ಅವರ ಪತ್ನಿ ಪೂರ್ಣ ಗೋಖಲೆ(53) ಎಂದು ಗುರುತಿಸಲಾಗಿದೆ. ಕಡಬದಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ

ಬಲ್ಯ: ಕಾರುಗಳೆರಡರ ಮಧ್ಯೆ ಮುಖಾಮುಖಿ ಢಿಕ್ಕಿ ➤ ಇಬ್ಬರಿಗೆ ಗಾಯ Read More »

ಕರಾವಳಿ

ಗುಂಡ್ಯ: ಮೋರಿಗೆ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು ➤ ಚಾಲಕ ಮೃತ್ಯು, ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.19. ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರೊಂದು ರಸ್ತೆ ಬದಿಯ ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಓರ್ವ ಗಾಯಗೊಂಡ ಘಟನೆ ಗುರುವಾರದಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ನಡೆದಿದೆ. ಮೃತ ವ್ಯಕ್ತಿಯನ್ನು ಬೆಂಗಳೂರಿನ ಜಾಲಹಳ್ಳಿ ನಿವಾಸಿ ನಾಗರಾಜ್(60) ಎಂದು ಗುರುತಿಸಲಾಗಿದೆ. ನಾಗರಾಜ್ ಗುರುವಾರದಂದು ತನ್ನ ಸ್ವಿಫ್ಟ್ ಕಾರಿನಲ್ಲಿದ್ದ ಬೆಂಗಳೂರಿನಿಂದ ಪುತ್ತೂರಿಗೆಂದು ಆಗಮಿಸುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ

ಗುಂಡ್ಯ: ಮೋರಿಗೆ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು ➤ ಚಾಲಕ ಮೃತ್ಯು, ಓರ್ವನಿಗೆ ಗಾಯ Read More »

ಕರಾವಳಿ

ಸರಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ➤ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.19. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ಕಬ್ಬನ್ ಉದ್ಯಾನವನ, ಬೆಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಕ್ಕಳಿಗೆ 2019 ನೇ ಸಾಲಿನ ಎಸ್.ಎಸ್.ಎಲ್.ಸಿ/ ಪಿ.ಯು.ಸಿ (State/CBSE/ICSE) ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದಕ್ಕೆ ಅರ್ಹರಾದವರು ಮಾಹಿತಿಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು ಅವರಿಗೆ ನೇರವಾಗಿ ಸಲ್ಲಿಸಬೇಕು. ಪ್ರತಿಭಾ ಪುರಸ್ಕಾರ ಅರ್ಜಿಯನ್ನು ಮಂಗಳೂರು

ಸರಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ➤ಅರ್ಜಿ ಆಹ್ವಾನ Read More »

ಕರಾವಳಿ

ಸಂಸ್ಥಾಪನಾ ದಿನಾಚರಣೆ ➤ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.19. ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಸಂಸ್ಥಾಪನಾ ದಿನಾಚರಣೆ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಉದ್ಯಮಿ ಮತ್ತು ಲೆಕ್ಕಪರಿಶೋಧಕ ನಂದಗೋಪಾಲ್ ಶೆಣೈ ಜಿ. ಭಾಗವಹಿಸಲಿದ್ದು, ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸ್ಥಾಪನಾ ದಿನಾಚರಣೆ ➤ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು Read More »

ಕರಾವಳಿ

ಖ್ಯಾತ ಭಾಷಣಕಾರ್ತಿ ರೋಹಿಣಿ ಮುಂದ್ರಾರವರ ನೂತನ ಕೃತಿ “ದಿ 1% ಕ್ಲಬ್” ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19. ಅತ್ಯುತ್ತಮ ಭಾಷಣಕಾರ್ತಿಯಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶೇಷ ವಿಚಾರ ಸಂಕಿರಣಗಳ ಮೂಲಕ ಪ್ರಖ್ಯಾತರಾದ ರೋಹಿಣಿ ಮುಂಡ್ರಾ ತನ್ನ ಮೊದಲ ಪುಸ್ತಕ “ದಿ 1% ಕ್ಲಬ್” ಅನ್ನು ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ಸ್ ನಲ್ಲಿ ಬಿಡುಗಡೆ ಮಾಡಿದರು. ಈ ಮೂಲಕ ಉದಯೋನ್ಮುಖ ಲೇಖಕಿಯಾಗಿ ಹೊರಹೊಮ್ಮಿದ್ದು, ಇದು ಇವರ ಸಾಧನೆಯ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದೆ. ರೋಹಿಣಿ ಮುಂದ್ರರವರ ಪುಸ್ತಕವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಅಕ್ಕೈ ಪದ್ಮಶಾಲಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಭಾರತೀಯ ಅಂತರರಾಷ್ಟ್ರೀಯ

ಖ್ಯಾತ ಭಾಷಣಕಾರ್ತಿ ರೋಹಿಣಿ ಮುಂದ್ರಾರವರ ನೂತನ ಕೃತಿ “ದಿ 1% ಕ್ಲಬ್” ಲೋಕಾರ್ಪಣೆ Read More »

ಕರ್ನಾಟಕ

ಬೆಳ್ತಂಗಡಿ: ಒಂದು ಕೋಟಿ ರೂ. ಮೌಲ್ಯದ 10 ಆನೆ ದಂತ ವಶ ➤ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.19. ರಬ್ಬರ್ ತೋಟದಲ್ಲಿನ ಶೆಡ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ ಸುಮಾರು 1 ಕೋಟಿ ರೂ. ಮೌಲ್ಯದ 51 ಕೆ.ಜಿ. 730 ಗ್ರಾಂ. ತೂಕದ 10 ಆನೆ ದಂತ ಸೇರಿದಂತೆ ಒಂದು ಡಬಲ್ ಬ್ಯಾರೆಲ್ ರೈಫಲ್ ಹಾಗೂ 8 ಮದ್ದುಗುಂಡು ವಶಕ್ಕೆ ಪಡೆದುಕೊಂಡಿರುವ ಪುತ್ತೂರು ಸಂಚಾರಿ ಅರಣ್ಯ ದಳ ಅಧಿಕಾರಿಗಳ ತಂಡ ಮೂವರು ಆರೋಪಿಗಳನ್ನು ಬುಧವಾರದಂದು ಬಂಧಿಸಿದ್ದಾರೆ‌. ಬಂಧಿತ ಆರೋಪಿಗಳನ್ನು ಉಜಿರೆ ಸುರ್ಯ ರಸ್ತೆಯ ದೂಜಿರಿಗೆ ನಿವಾಸಿ ಅಬ್ರಹಾಂ ಎಂ.ಎ.(56), ಕೇರಳದ ಸುರೇಶ್

ಬೆಳ್ತಂಗಡಿ: ಒಂದು ಕೋಟಿ ರೂ. ಮೌಲ್ಯದ 10 ಆನೆ ದಂತ ವಶ ➤ ಮೂವರು ಆರೋಪಿಗಳ ಬಂಧನ Read More »

ಕರ್ನಾಟಕ

ಪುತ್ತೂರು: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.18. ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರ ಮೃತದೇಹವು ಮನೆಯ ಒಳಗಡೆ ಕೊಳೆತ ಸ್ಥಿತಿಯಲ್ಲಿ ಬುಧವಾರ ಸಂಜೆ ಪುತ್ತೂರಿನ ಪಾಂಗಳಾಯಿ ಎಂಬಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪಾಂಗಳಾಯಿ ನಿವಾಸಿ ದಿ. ಬಾಬು ಬಂಗೇರ ಎಂಬವರ ಪುತ್ರ ಚಂದ್ರಶೇಖರ್(57) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಟೈಲರ್ ಆಗಿದ್ದ ಚಂದ್ರಶೇಖರ್ ಅವಿವಾಹಿತರಾಗಿದ್ದು, ಕಳೆದ ಕೆಲವು ವರ್ಷಗಳಿಂದ ವೃತ್ತಿಯನ್ನು ಬಿಟ್ಟು ತಮ್ಮ ಮೂಲ ಮನೆಯಲ್ಲಿ ಏಕಾಂಗಿಯಾಗಿಯೇ ಇದ್ದರು. ಮನೆಯಿಂದ ಹೊರಬರದ ಅವರು ಯಾವುದೇ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದೆ ಮನೆಯಲ್ಲಿಯೇ ಇರುತ್ತಿದ್ದು, ಮಾನಸಿಕ

ಪುತ್ತೂರು: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ
Scroll to Top