ಪುತ್ತೂರು ಮೊಸರು ಕುಡಿಕೆ ಉತ್ಸವದಲ್ಲಿ ಪ್ರಚೋದನಕಾರಿ ಭಾಷಣ ➤ ಭಜರಂಗದಳದ ಮುಖಂಡ ರಘು ಸಕಲೇಶಪುರ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.18. ಮೊಸರು ಕುಡಿಕೆ ಉತ್ಸವದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಆಗಸ್ಟ್ 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಭಜರಂಗ ದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಲ್ಲದೆ, ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ […]

ಪುತ್ತೂರು ಮೊಸರು ಕುಡಿಕೆ ಉತ್ಸವದಲ್ಲಿ ಪ್ರಚೋದನಕಾರಿ ಭಾಷಣ ➤ ಭಜರಂಗದಳದ ಮುಖಂಡ ರಘು ಸಕಲೇಶಪುರ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು Read More »

ಕರ್ನಾಟಕ

ಸುಬ್ರಹ್ಮಣ್ಯ: ಚಾರಣಕ್ಕೆಂದು ಕುಮಾರ ಪರ್ವತಕ್ಕೆ ತೆರಳಿ ನಾಪತ್ತೆಯಾಗಿದ್ದ ಯುವಕ ಪತ್ತೆ ➤ ಯುವಕನ ಜೀವ ಉಳಿಸಿದ ನೀರಿನ ಪೈಪ್ ➤ ಮೂರು ದಿನಗಳ ಕಾಲ ದಟ್ಟಡವಿಯಲ್ಲಿ ಕಳೆದ ಯುವಕನ ಯಶೊಗಾಥೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.17. ಇಲ್ಲಿನ ಕುಮಾರ ಪರ್ವತಕ್ಕೆ ತನ್ನ ಸ್ನೇಹಿತರೊಂದಿಗೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವಕ ಮಂಗಳವಾರದಂದು ಸುಬ್ರಹ್ಮಣ್ಯಕ್ಕೆ ತಲುಪಿದ್ದು, ಆತಂಕಕ್ಕೆ ಒಳಗಾಗಿದ್ದ ಆತನ ಕುಟುಂಬಿಕರು ಹಾಗೂ ಸ್ನೇಹಿತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನ ಗಾಯತ್ರಿ ನಗರ ನಿವಾಸಿ ಸಂತೋಷ್ ತನ್ನ 12 ಮಂದಿ ಗೆಳೆಯರೊಂದಿಗೆ ಶನಿವಾರದಂದು ಪರ್ವತ ಚಾರಣದ ನಿಮಿತ್ತ ಸುಬ್ರಹ್ಮಣ್ಯಕ್ಕೆ ಬಂದಿದ್ದು ಅರಣ್ಯ ಇಲಾಖೆಯವರ ಅನುಮತಿ ಪಡೆದು ಮಧ್ಯಾಹ್ನ 11:00 ಗಂಟೆಗೆ ಶೇಷಪರ್ವತ ಎಂಬಲ್ಲಿಗೆ ತಲುಪಿ ಹಿಂತಿರುಗುತ್ತಿರುವಾಗ ಕಾಣೆಯಾಗಿದ್ದರು. ಜೊತೆಗಾರರು ಸಂತೋಷ್

ಸುಬ್ರಹ್ಮಣ್ಯ: ಚಾರಣಕ್ಕೆಂದು ಕುಮಾರ ಪರ್ವತಕ್ಕೆ ತೆರಳಿ ನಾಪತ್ತೆಯಾಗಿದ್ದ ಯುವಕ ಪತ್ತೆ ➤ ಯುವಕನ ಜೀವ ಉಳಿಸಿದ ನೀರಿನ ಪೈಪ್ ➤ ಮೂರು ದಿನಗಳ ಕಾಲ ದಟ್ಟಡವಿಯಲ್ಲಿ ಕಳೆದ ಯುವಕನ ಯಶೊಗಾಥೆ Read More »

ಕರ್ನಾಟಕ

ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ➤ಅರ್ಜಿ ಹಾಗೂ ನಾಮನಿರ್ದೇಶನಗಳ ಆಹ್ವಾನ

(ನ್ಯೂಸ್ ಕಡಬ) newskadaba.com ಕರ್ನಾಟಕ ,ಸಪ್ಟೆಂಬರ್.17. ಮಹಾತ್ಮ ಗಾಂಧಿ ಆಶಯಗಳನ್ನು ಎಲ್ಲೆಡೆ ಪಸರಿಸುತ್ತಿರುವ ಹಾಗೂ ಪಾಲಿಸುತ್ತಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕೊಡಮಾಡುವ ಐದು ಲಕ್ಷ ನಗದು ಒಳಗೊಂಡ ರಾಜ್ಯ ಸರ್ಕಾರದ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಅರ್ಹರು ಮತ್ತು ಆಸಕ್ತರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಜಿಗಳು ಹಾಗೂ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆಯ್ಕೆ ಸಮಿತಿಯ ಮೊದಲ ಸಭೆಯಲ್ಲಿ ಅಸ್ಪøಷ್ಯತಾ

ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ➤ಅರ್ಜಿ ಹಾಗೂ ನಾಮನಿರ್ದೇಶನಗಳ ಆಹ್ವಾನ Read More »

ಕರ್ನಾಟಕ

➤➤ಸಂಚಾರಿ ವಾಹನದ ಮೂಲಕ ಕಲಾಜಾಥ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.17. ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮೀಣ ಕರ್ನಾಟಕವನ್ನು “ಬಯಲು ಬಹಿರ್ದೆಸೆ ಮುಕ್ತ” ಎಂದು ಪೋಷಣೆ ಮಾಡಲಾಗಿದ್ದು, ಗ್ರಾಮೀಣ ಸಮುದಾಯದಲ್ಲಿ ಶೌಚಾಲಯ ಬಳಕೆ ಮತ್ತು “ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2019”ರ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರಲ್ಲಿ ನೈರ್ಮಲ್ಯ ವಿಷಯಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರಸಕ್ತ ವರ್ಷದಲ್ಲಿ ಮೊದಲ ಹಂತದಲ್ಲಿ 2000 ಗ್ರಾಮ ಪಂಚಾಯತಿಗಳಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಜಾಗೃತಿ

➤➤ಸಂಚಾರಿ ವಾಹನದ ಮೂಲಕ ಕಲಾಜಾಥ ಚಾಲನೆ Read More »

ಕರಾವಳಿ

ಸೆ.21 ವಾರ್ಷಿಕ ಮಹಾಸಭೆ ➤ಕೇಂದ್ರ ಸಗಟು ಮಾರಾಟ ಸಂಘ

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.17. ದ.ಕ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿ., ಮಂಗಳೂರು ಜನತಾ ಬಜಾರ್ ಇದರ 2018-19ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ. ಸೆಪ್ಟೆಂಬರ್ 21 ರಂದು ಮಧ್ಯಾಹ್ನ 2.30 ಗಂಟೆಗೆ ಸಂಘದ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಉದಯ ಮಾದೋಡಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸೆ.21 ವಾರ್ಷಿಕ ಮಹಾಸಭೆ ➤ಕೇಂದ್ರ ಸಗಟು ಮಾರಾಟ ಸಂಘ Read More »

ಕರಾವಳಿ

ಎಮ್.ಐ.ಎಫ್.ಎಸ್.ಸಿ ವತಿಯಿಂದ ನಡೆದ ಕೌಶಲ್ಯ ಭಾರತ ಉದ್ಘಾಟನಾ ಸಮಾರಂಭ ➤ಮಂಗಳೂರು ಪುರಭವನ

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.17.  ಯುವ ಸಮುದಾಯ ಪದವೀಧರರಾದರೆ ಸಾಲದು, ಉತ್ತಮ ಕೌಶಲ್ಯ ಅಭಿವೃದ್ಧಿಯಾಗಿ, ಉದ್ಯೋಗಕ್ಕೆ ಅಣಿಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಎಸ್ ಯಡಪಡಿತ್ತಾಯ ಹೇಳಿದರು. ಸೋಮವಾರ ಮಂಗಳೂರು ಪುರಭವನದಲ್ಲಿ ಎಮ್.ಐ.ಎಫ್.ಎಸ್.ಸಿ ವತಿಯಿಂದ ನಡೆದ ಕೌಶಲ್ಯ ಭಾರತ ಉದ್ಘಾಟನಾ ಸಮಾರಂಭದ ಉದ್ಘಾಟನೆ ನಡೆಸಿ ಮಾತಾನಾಡಿದ ಇವರು ಜನಸಂಖ್ಯೆ ಹೆಚ್ಚಾಗಿದೆ, ಜನರಿಗೆ ಉದ್ಯೋಗದಲ್ಲಿ ಸ್ಪರ್ಧೆಯು ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದೆ ಅನುಕೂಲವಾಗುವಂತೆ ಉಚಿತ ತರಬೇತಿ ಯೋಜನೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು

ಎಮ್.ಐ.ಎಫ್.ಎಸ್.ಸಿ ವತಿಯಿಂದ ನಡೆದ ಕೌಶಲ್ಯ ಭಾರತ ಉದ್ಘಾಟನಾ ಸಮಾರಂಭ ➤ಮಂಗಳೂರು ಪುರಭವನ Read More »

ಕರಾವಳಿ

ಪ್ರಸಿದ್ಧ ಮೈಸೂರು ದಸರಾ ಉತ್ಸವ-2019➤ಪುಸ್ತಕ ಮಾರಾಟ ಮೇಳ

ನ್ಯೂಸ್ ಕಡಬ) newskadaba.com ಮೈಸೂರು ,ಸಪ್ಟೆಂಬರ್.17. ಜಗತ್ತಿನ ಪ್ರಸಿದ್ಧ ಮೈಸೂರು ದಸರಾ ಉತ್ಸವ-2019ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಪುಸ್ತಕ ಮಾರಾಟ ಮೇಳವನ್ನು ಸೆಪ್ಟೆಂಬರ್ 29ರಿಂದ ಅಕ್ಟೋಬರ್ 7 ರವರೆಗೆ ಮೈಸೂರಿನಲ್ಲಿ ಏರ್ಪಡಿಸಲಾಗಿದೆ. ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು /ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ 2000/ ಗಳ ಭದ್ರತಾ ಠೇವಣಿ ಡಿ.ಡಿ ಯನ್ನು ಆಡಳಿತ ಅಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ

ಪ್ರಸಿದ್ಧ ಮೈಸೂರು ದಸರಾ ಉತ್ಸವ-2019➤ಪುಸ್ತಕ ಮಾರಾಟ ಮೇಳ Read More »

ಕರ್ನಾಟಕ

ರೆಡ್ ಕ್ರಾಸ್ ಸಮಿತಿ➤ವಿಶೇಷ ಉಪನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17.  ಸೇವೆ ಮಾಡಲು ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಸೇವೆಯಲ್ಲಿ ಸಿಗುವ ತೃಪ್ತಿಯನ್ನು ಬೇರೆ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ, ಇದು ರೆಡ್‍ಕ್ರಾಸ್‍ನಿಂದ ದೊರೆಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ರೆಡ್‍ಕ್ರಾಸ್ ಸಮಿತಿಯ ಅಧ್ಯಕ್ಷ ಸಚೇತ್ ಸುವರ್ಣ ಹೇಳಿದರು. ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತ್ತೀಚೆಗೆ ಯುವ ರೆಡ್‍ಕ್ರಾಸ್ ಸಂಘ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ರೆಡ್‍ಕ್ರಾಸ್‍ನಲ್ಲಿ ಮೊತ್ತಮೊದಲಿಗೆ ಮಾನವೀಯತೆ ಮತ್ತು ಮಾನವ ಸೇವೆಗೆ ಆದ್ಯತೆ ನೀಡಲಾಗುತ್ತದೆ ಎಂದರು. ಅಲ್ಲದೇ ರೆಡ್‍ಕ್ರಾಸ್ ಉಗಮ

ರೆಡ್ ಕ್ರಾಸ್ ಸಮಿತಿ➤ವಿಶೇಷ ಉಪನ್ಯಾಸ ಕಾರ್ಯಕ್ರಮ Read More »

ಕರಾವಳಿ

➤ ➤ ವನ್ಯಜೀವಿ ಸಪ್ತಾಹ 2019 ಅಂಗವಾಗಿ ವಿವಿಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17. ಅಕ್ಟೋಬರ್ 6 ರಂದು ಪಿಲಿಕುಳದಲ್ಲಿ ಪ್ರಕೃತಿ ಮತ್ತು ವನ್ಯಜೀವಿ ವಿಷಯದ ಮೇಲೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ರಾಜ್ಯಮಟ್ಟ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ :- ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ. ಭಾರತ ದೇಶದ ಪ್ರಾಣಿ, ಪಕ್ಷಿ, ಉರಗಗಳ ಛಾಯಾಚಿತ್ರಗಳಾಗಿರಬೇಕು. ನಿಸರ್ಗದಲ್ಲಿ ಅಥವಾ ಜೈವಿಕ ಉದ್ಯಾನವನಗಳಲ್ಲಿ ತೆಗೆದ 8.12 ಅಳತೆಗಿಂತ ಕಡಿಮೆಯಾಗದೆ ಛಾಯಾಚಿತ್ರಗಳನ್ನು ಅಕ್ಟೋಬರ್ 4 ರೊಳಗೆ ಕಳುಹಿಸಬೇಕು. ಅಕ್ಟೋಬರ್ 6 ರಂದು ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದು.

➤ ➤ ವನ್ಯಜೀವಿ ಸಪ್ತಾಹ 2019 ಅಂಗವಾಗಿ ವಿವಿಧ ಸ್ಪರ್ಧೆ Read More »

ಕರಾವಳಿ

ಹೊಸಗದ್ದೆ ತೋಟಗಾರಿಕೆ ಕ್ಷೇತ್ರ ➤ ಅಡಿಕೆ ಫಸಲು ವಿಲೇವಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17. 2019-20ನೇ ಸಾಲಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹೊಸಗದ್ದೆ ತೋಟಗಾರಿಕೆ ಕ್ಷೇತ್ರದ ಅಡಿಕೆ ಫಸಲನ್ನು ಇ-ಹರಾಜು ಮತ್ತು ಟೆಂಡರ್ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಇ-ಹರಾಜು ಅವಧಿಯು ಸೆಪ್ಟೆಂಬರ್ 13 ರಂದು ಪ್ರಾರಂಭವಾಗಿ ಅಕ್ಟೋಬರ್ 14 ರಂದು ಸಂಜೆ 4 ಗಂಟೆಗೆ ಕೊನೆಗೊಳ್ಳಲಿದೆ. ಆಸಕ್ತರು ತಮ್ಮ ಬಿಡ್ಡನ್ನು ಇ-ಹರಾಜು ಅಥವಾ ಟೆಂಡರ್ ಮೂಲಕ ಸಲ್ಲಿಸಬಹುದಾಗಿದೆ. ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು e.procurement.kar.in ರಲ್ಲಿ ಪಡೆಯಬಹುದಾಗಿದೆ. ಟೆಂಡರ್ ಸಂಖ್ಯೆ:KSHDA/2019-20/Auction.2311. ಟೆಂಡರ್ ಮೂಲಕ ಹರಾಜಿನಲ್ಲಿ ಭಾಗವಹಿಸಲು

ಹೊಸಗದ್ದೆ ತೋಟಗಾರಿಕೆ ಕ್ಷೇತ್ರ ➤ ಅಡಿಕೆ ಫಸಲು ವಿಲೇವಾರಿ Read More »

ಕರಾವಳಿ
Scroll to Top