ಸುಳ್ಯ: ಇನ್ನೋವಾ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ನ.13. ಇನ್ನೋವಾ ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.   ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮುರೂರು ನಿವಾಸಿ ಬಾಬು ನಾಯರ್ ಎಂದು ಗುರುತಿಸಲಾಗಿದೆ. ಮೃತರು ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮುರೂರು ಬಳಿ ಇನ್ನೋವಾ ಕಾರು ನಡುವೆ ಢಿಕ್ಕಿಯಾದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಇನ್ನೋವಾ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಸರಸ್ವತೀ ವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ನೇಜಿ ಕಟಾವು ಕಾರ್ಯ

(ನ್ಯೂಸ್ ಕಡಬ) newskadaba.com ನ.13  ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅನ್ನದ ಬೆಲೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರಸ್ವತೀ ವಿದ್ಯಾಲಯದ ಪ್ರೌಢ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳೇ ನೇಜಿ ನಾಟಿ ಬೆಳೆದ ಪೈರನ್ನು ಕಟಾವು ಮಾಡಿದರು. ಸಂಸ್ಥೆಯ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಭತ್ತ ಕಟಾವು ಕಾರ್ಯಕ್ಕೆ ಚಾಲನೆ ನೀಡಿ ಕೃಷಿಕರೇ ದೇಶದ ಬೆನ್ನೆಲುಬು, ಕೃಷಿ ಕಾರ್ಯದಲ್ಲಿ ತೊಡಗಿರುವವರಿಗೆ ಯಾವತ್ತು ದುರ್ಭೀಕ್ಷೆ ಇಲ್ಲ ಎಂದರು. ಆಡಳಿತ ಮಂಡಳಿ ನಿರ್ದೇಶಕ ಶಿವ ಪ್ರಸಾದ್ ರೈ ಮೈಲೇರಿ

ಸರಸ್ವತೀ ವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ನೇಜಿ ಕಟಾವು ಕಾರ್ಯ Read More »

ಕರಾವಳಿ

ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ➤ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸುಪ್ರೀಂ ತೀರ್ಪು

(ನ್ಯೂಸ್ ಕಡಬ) newskadaba.com ನವದೆಹಲಿ, ನ.13. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ 17 ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ರವರ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ವಿಧಾನಸಭೆಯ ಸ್ಪೀಕರ್ ಆಗಿದ್ದ ರಮೇಶ್‍ಕುಮಾರ್ ಅವರು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಒಟ್ಟು 17 ಮಂದಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರಲ್ಲದೆ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅವರು ಯಾವುದೇ ರೀತಿಯ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸುವಂತಿಲ್ಲ

ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ➤ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸುಪ್ರೀಂ ತೀರ್ಪು Read More »

ರಾಷ್ಟ್ರೀಯ ನ್ಯೂಸ್

ನೂತನ “ಕಡಬ ತಾಲೂಕು ಪಂಚಾಯತ್” ರಚನೆ ✍?ವಿಜಯ ಕುಮಾರ್ ಕಡಬ

✍?ವಿಜಯ ಕುಮಾರ್ ಕಡಬ (ನ್ಯೂಸ್ ಕಡಬ) newskadaba.com  ಕಡಬ,  ನ.13  ನೂತನ ಕಡಬ ತಾಲೂಕು ಉದ್ಘಾಟನೆಯಾಗಿ ಅನುಷ್ಠಾನ ಪ್ರಕ್ರಿಯೆಗಳು ಪ್ರಾರಂಭವಾಗುತ್ತಿದ್ದಂತೆ ಅದರಲ್ಲಿ ಕಡಬ ಗ್ರಾ.ಪಂ. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ಬಳಿಕ ಇದೀಗ ಕಡಬ ತಾಲೂಕು ಪಂಚಾಯತ್ ಅಸ್ತಿತ್ವಕ್ಕೆ ಸರಕಾರದಿಂದ ಅಧಿಕೃತ ಆದೇಶ ನೀಡಿದೆ. ದಿನಾಂಕ: 14-10-2019ರಿಂದ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಸ್. ಮಹಾಲಕ್ಷ್ಮೀ ಅವರು ಕರ್ನಾಟಕ ರಾಜ್ಯ ಪತ್ರದಲ್ಲಿ ಆದೇಶ ಹೊರಡಿಸಿದ್ದಾರೆ. 13

ನೂತನ “ಕಡಬ ತಾಲೂಕು ಪಂಚಾಯತ್” ರಚನೆ ✍?ವಿಜಯ ಕುಮಾರ್ ಕಡಬ Read More »

ಕರಾವಳಿ

ಜೂಜಾಟ ಆಡುತ್ತಿದ್ದವರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com  ಧರ್ಮಸ್ಥಳ,  ನ.13  ಕೋಳಿ ಅಂಕ ಜೂಜಾಟ ಆಡುತ್ತಿದ್ದವರ ಪೈಕಿ 5 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಶಿಬರಾಜೆ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಅವರ ವಶದಿಂದ ವಿವಿಧ ಜಾತಿಯ ಒಟ್ಟು 8 ಹುಂಜ ಕೋಳಿಗಳನ್ನು ಮತ್ತು ಒಟ್ಟು 730 ರೂಪಾಯಿ ನಗದು ಹಣವನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಆಡುತ್ತಿದ್ದವರು ಪೊಲೀಸರ ವಶಕ್ಕೆ Read More »

ಕರಾವಳಿ

ಕಳವು

 (ನ್ಯೂಸ್ ಕಡಬ) newskadaba.com  ವೇಣೂರು,  ನ.13  ಮನೆಯ ಹಿಂದಿನ ಮತ್ತು ಮುಂದಿನ ಬಾಗಿಲಿಗೆ ಬೀಗ ಹಾಕಿಕೊಂಡು ಮನೆ ಸಮೀಪದ ವಿಷ್ಣುಮೂರ್ತಿ ದೇವಸ್ಥಾನದ ಪೂಜೆಗೆಂದು ಹೋದವರ ಮನೆಯಲ್ಲಿ ಸುಮಾರು 32000 ರೂ ಮೌಲ್ಯದ ಸೊತ್ತು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಮಂಗಳವಾರದಂದು ಕಳವಾಗಿದೆ. ಶ್ರೀಮತಿ ಕುಸುಮಾ ತನ್ನ ಕುಟುಂಬದೊಂದಿಗೆ ದೇವಸ್ಥಾನದ ಪೂಜೆ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಮನೆಯಲ್ಲಿರುವ ಸಾಮಾನು ಚೆಲ್ಲಪಿಲ್ಲಿ ಯಾಗಿರುವುದನ್ನು ಗಮನಿಸಿದರು ಮತ್ತು ಗ್ವಾಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 6 ಗ್ರಾಂ ತೂಕದ ಜುಮುಕಿ ಸಹಿತ

ಕಳವು Read More »

ಕರಾವಳಿ

ಕೆಸಿಸಿ ಆರೋಗ್ಯ ಕಾರ್ಡ್ ಹೆಸರಿನಲ್ಲಿ ವಂಚನೆಯ ಆರೋಪ ➤ ನೋಂದಣಿ ಪ್ರತಿನಿಧಿಯನ್ನು ಪೊಲೀಸರಿಗೆ ಒಪ್ಪಿಸಿದ ನಾಗರಿಕರು

ಕಡಬ, ನ. 13. ಸರಕಾರದ ಅನುಮತಿ ಇಲ್ಲದೆ ‘ಕೆಸಿಸಿ ಆರೋಗ್ಯ ಕಾರ್ಡ್’ ಎನ್ನುವ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕರು ಕಡಬ ಗ್ರಾ.ಪಂ. ಸಭಾಂಗಣದೊಳಗೆ ಪಂಚಾಯತ್‌ನ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಡ್ ನೋಂದಣಿ ಮಾಡುತ್ತಿದ್ದ ಪ್ರತಿನಿಧಿಯನ್ನು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಮಂಗಳವಾರದಂದು ಕಡಬದಲ್ಲಿ ನಡೆದಿದೆ. ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡು ಕಡಬ ಗ್ರಾ.ಪಂ. ಕಚೇರಿಯಲ್ಲಿ ಆರೋಗ್ಯ ಕಾರ್ಡ್ ಮಾಡಿಕೊಡುವ ಬಗ್ಗೆ ಹಣ ಸಂಗ್ರಹಿಸಲಾಗುತ್ತಿತ್ತು. ಇದೇ ವೇಳೆ ಆಗಮಿಸಿದ ರೈತ ಸಂಘದ

ಕೆಸಿಸಿ ಆರೋಗ್ಯ ಕಾರ್ಡ್ ಹೆಸರಿನಲ್ಲಿ ವಂಚನೆಯ ಆರೋಪ ➤ ನೋಂದಣಿ ಪ್ರತಿನಿಧಿಯನ್ನು ಪೊಲೀಸರಿಗೆ ಒಪ್ಪಿಸಿದ ನಾಗರಿಕರು Read More »

ಕರ್ನಾಟಕ

ನಿಮ್ಮ ಮನಸ್ಥಿತಿ ಸರಿಯಾಗಲು ಹೀಗೆ ಮಾಡಿ

ಬುದುವಾರ ದಿನದಂದು ಲಕ್ಷ್ಮೀನಾರಾಯಣ ಪ್ರಾರ್ಥನೆಯಿಂದ ಹಾಳಾಗಿರುವ ನಿಮ್ಮ ಮನಸ್ಥಿತಿ ಸರಿ ಹೋಗುತ್ತದೆ. ತೊಂದರೆಗಳು ನಿವಾರಣೆಯಾಗುವುದು. ಸಂಪತ್ತು ಹೆಚ್ಚುತ್ತದೆ ಮತ್ತು ಆರೋಗ್ಯ ವೃದ್ದಿಯಾಗುತ್ತದೆ. ಶ್ರೀ ಮಹಾವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು

ನಿಮ್ಮ ಮನಸ್ಥಿತಿ ಸರಿಯಾಗಲು ಹೀಗೆ ಮಾಡಿ Read More »

ಭವಿಷ್ಯ

ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ➤ ಓರ್ವನ ಬಂಧನ, ಮೂವರು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ನ.13. ಮನೆಯ ಹಿಂಬದಿಯ ಶೆಡ್ ವೊಂದರಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೊಲೀಸರು ಓರ್ವನನ್ನು ಬಂಧಿಸಿ 30 ಕೆಜಿಯಷ್ಟು ಮಾಂಸವನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ರಾತ್ರಿ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ಎಂಬಲ್ಲಿ ನಡೆದಿದೆ. ಬಂಧಿತನನ್ನು ಸ್ಥಳೀಯ ನಿವಾಸಿ ವಿನೋದ್ ಎಂದು ಗುರುತಿಸಲಾಗಿದೆ. ಬಾವೆ ಶ್ರೀಧರ್, ಪೂಪಿ ಯಾನೆ ತೋಮಸ್ ಎಂಬವರು ಪರಾರಿಯಾಗಿದ್ದಾರೆ. ನೂಜಿಬಾಳ್ತಿಲದಲ್ಲಿ ಅಕ್ರಮವಾಗಿ ದನದ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ

ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ➤ ಓರ್ವನ ಬಂಧನ, ಮೂವರು ಪರಾರಿ Read More »

ಕರಾವಳಿ

ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ)ಬೆಳ್ಳಾರೆ ,ಎಸ್ಕೆ ಎಸ್ಸೆಸ್ಸೆಫ್ ಬೆಳ್ಳಾರೆ ವತಿಯಿಂದ ಈದ್ ಮೀಲಾದ್ ಸಂಭ್ರಮ;ವಿದ್ಯಾ ಸಂಸ್ಥೆ ಹಾಗೂ ಬೆಳ್ಳಾರೆ ಠಾಣೆಗೆ ಸಿಹಿತಿಂಡಿ ವಿತರಣೆ

ಬೆಳ್ಳಾರೆ(newskadaba.com) :ಶಂಸುಲ್ ಉಲಮಾ ಚಾರಿಟೇಬಲ್  ಟ್ರಸ್ಟ್ (ರಿ) ಬೆಳ್ಳಾರೆ , ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರರ ದಿನಾಚರಣೆ ಈದ್ ಮೀಲಾದ್ ಅಂಗವಾಗಿ ಸ್ಥಳೀಯ  ವಿದ್ಯಾಸಂಸ್ಥೆ ಗಳಿಗೆ ಹಾಗೂ ಬೆಳ್ಳಾರೆ ಠಾಣೆಗೆ ನವಂಬರ್ 12 ರಂದು  ಭೇಟಿ ನೀಡಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು. ಟ್ರಸ್ಟಿಯ ಸ್ಥಾಪಕಧ್ಯಕ್ಷ ಯು ಹೆಚ್ ಅಬೂಬಕ್ಕರ್,ಶಂಸುಲ್ ಉಲಮಾ ಯೂತ್ ವಿಂಗ್ ಸ್ಥಾಪಕಧ್ಯಕ್ಷ ಶಾಫಿ ಸ್ಕೈ ,  ಜಮಾಲುದ್ದೀನ್ ಕೆ ಎಸ್ , ಬಶೀರ್ ಕಲ್ಲಪಣೆ ,ಅಬ್ದುಲ್ ಕುಂಞ

ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ)ಬೆಳ್ಳಾರೆ ,ಎಸ್ಕೆ ಎಸ್ಸೆಸ್ಸೆಫ್ ಬೆಳ್ಳಾರೆ ವತಿಯಿಂದ ಈದ್ ಮೀಲಾದ್ ಸಂಭ್ರಮ;ವಿದ್ಯಾ ಸಂಸ್ಥೆ ಹಾಗೂ ಬೆಳ್ಳಾರೆ ಠಾಣೆಗೆ ಸಿಹಿತಿಂಡಿ ವಿತರಣೆ Read More »

ಕರಾವಳಿ
Scroll to Top