ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ)ಬೆಳ್ಳಾರೆ ,ಎಸ್ಕೆ ಎಸ್ಸೆಸ್ಸೆಫ್ ಬೆಳ್ಳಾರೆ ವತಿಯಿಂದ ಈದ್ ಮೀಲಾದ್ ಸಂಭ್ರಮ;ವಿದ್ಯಾ ಸಂಸ್ಥೆ ಹಾಗೂ ಬೆಳ್ಳಾರೆ ಠಾಣೆಗೆ ಸಿಹಿತಿಂಡಿ ವಿತರಣೆ

ಬೆಳ್ಳಾರೆ(newskadaba.com) :ಶಂಸುಲ್ ಉಲಮಾ ಚಾರಿಟೇಬಲ್  ಟ್ರಸ್ಟ್ (ರಿ) ಬೆಳ್ಳಾರೆ , ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರರ ದಿನಾಚರಣೆ ಈದ್ ಮೀಲಾದ್ ಅಂಗವಾಗಿ ಸ್ಥಳೀಯ  ವಿದ್ಯಾಸಂಸ್ಥೆ ಗಳಿಗೆ ಹಾಗೂ ಬೆಳ್ಳಾರೆ ಠಾಣೆಗೆ ನವಂಬರ್ 12 ರಂದು  ಭೇಟಿ ನೀಡಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಟ್ರಸ್ಟಿಯ ಸ್ಥಾಪಕಧ್ಯಕ್ಷ ಯು ಹೆಚ್ ಅಬೂಬಕ್ಕರ್,ಶಂಸುಲ್ ಉಲಮಾ ಯೂತ್ ವಿಂಗ್ ಸ್ಥಾಪಕಧ್ಯಕ್ಷ ಶಾಫಿ ಸ್ಕೈ ,  ಜಮಾಲುದ್ದೀನ್ ಕೆ ಎಸ್ , ಬಶೀರ್ ಕಲ್ಲಪಣೆ ,ಅಬ್ದುಲ್ ಕುಂಞ , ಉಮ್ಮರ್ ಪೆರುವಾಜೆ ,ಹನೀಫ್ ,ಅಝರುದ್ದೀನ್ ಬೆಳ್ಳಾರೆ , ಸಿದ್ದೀಖ್ ,ಜಮಾಲುದ್ದೀನ್ ಮಣಿಮಜಲು ,ರಝಾಕ್ ಉಮಿಕ್ಕಳ, ನಾಸಿರ್ ಪೆರುವಾಜೆ  ಉಪಸ್ಥಿತರಿದ್ದರು.
Scroll to Top