ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ

 (ನ್ಯೂಸ್ ಕಡಬ) newskadaba.com ಮಂಗಳೂರು, ನ.15  ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ, ಹಿಂದೂಸ್ತಾನ್ ಪತ್ರಿಕೆಯ ಸಂಪಾದಕಿಯಾಗಿದ್ದ ಮೃಣಾಲ್ ಪಾಂಡೆ ಅವರ ಕುರಿತಾದ ಎರಡು ಕೃತಿಗಳ ಬಿಡುಗಡೆ ಸಮಾರಂಭ ನವೆಂಬರ್ 18ರಂದು ಸಂಜೆ 4ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಹಿಂದಿ ಶಿಕ್ಷಕಿ ಡಾ.ಯಶೋಧಾ ಕರನಿಂಗ ಅವರು ಬರೆದಿರುವ ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಬಿಡುಗಡೆ ಮಾಡಿ, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ (ಎನ್ ಎಸ್ ಸಿಡಿಎಫ್)ವತಿಯಿಂದ ನಡೆಯುವ ಮೂರು ದಿನಗಳ ಸಂಸ್ಖೃತಿ […]

ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ Read More »

ಕರಾವಳಿ

ನೂಜಿಬಾಳ್ತಿಲದಲ್ಲಿ ಪಿಂಗಾರ ಕಲಾ ಸಂಘದ ಕಲಾವಿಧರಿಂದ ಬೀದಿ ನಾಟಕ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.15  ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದ.ಕ. ಜಿಲ್ಲಾ ಪಂಚಾಯತ್ ಇದರ ಸಹಯೋಗದಲ್ಲಿ ಪಿಂಗಾರ ಕಲಾ ಸಂಘ ಕೈಕಂಬ ಮಂಗಳೂರು ಕಲಾವಿಧರಿಂದ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಬೀದಿ ನಾಟಕ ಬುಧವಾರದಂದು ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಪಿಂಗಾರ ಕಲಾವಿಧರು ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಟನೆ, ಪ್ರದರ್ಶನದ ಮೂಲಕ

ನೂಜಿಬಾಳ್ತಿಲದಲ್ಲಿ ಪಿಂಗಾರ ಕಲಾ ಸಂಘದ ಕಲಾವಿಧರಿಂದ ಬೀದಿ ನಾಟಕ Read More »

ಕರಾವಳಿ

ನ.15: ಇಂದಿನ ದಿನ ಭವಿಷ್ಯ

ಇಷ್ಟಪಟ್ಟಿದ್ದರು ನಿಮ್ಮ ವಿಚಾರದಂತೆ ಪ್ರೇಮದಿಂದ ನಡೆದುಕೊಳ್ಳುವ ಸರಳ ಮಾರ್ಗ: ಶುಕ್ರವಾರದ ದಿನದಂದು ಕುಂಕುಮ, ಹರಿಶಿಣ ಮತ್ತು ಚಂದನವನ್ನು ಮಿಶ್ರಣಮಾಡಿ ಬನ್ನಿಗಿಡದ ಕಡ್ಡಿಯಿಂದ ಅವರ ಹೆಸರನ್ನು ಬಿಳಿಯ ಕಾಗದದಲ್ಲಿ ಬರೆದು ಅದನ್ನು ಬನ್ನಿ ಗಿಡದ ಹತ್ತಿರ ಇಟ್ಟು ಬನ್ನಿ ಉತ್ತಮ ಫಲಿತಾಂಶ ಸಿಗುವುದು. ಶ್ರೀ ದುರ್ಗಾಂಬ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ,

ನ.15: ಇಂದಿನ ದಿನ ಭವಿಷ್ಯ Read More »

ಭವಿಷ್ಯ

ನೀರಿನಲ್ಲಿ ಮುಳುಗಿ 9‌ನೇ ತರಗತಿಯ ವಿದ್ಯಾರ್ಥಿ ಮೃತ್ಯು ➤ ಮಕ್ಕಳ ದಿನಾಚರಣೆಯಂದೇ ದುರ್ಘಟನೆ

(ನ್ಯೂಸ್ ಕಡಬ) newskadaba.com ವಿಟ್ಲ, ನ.14. ಮಕ್ಕಳ ದಿನಾಚರಣೆ ದಿನದಂದೇ 9ನೇ ತರಗತಿಯ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಕಾಶಿಮಠ ಕೋಟಿಕೆರೆಯಲ್ಲಿ ಗುರುವಾರದಂದು ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ಜುಬೈದಾ ಎಂಬವರ ಪುತ್ರ, ವಿಟ್ಲದ ಖಾಸಗಿ ಶಾಲೆಯ ವಿದ್ಯಾರ್ಥಿ ಅಶ್ವದ್ ಅಹಮ್ಮದ್ ಎಂದು ಗುರುತಿಸಲಾಗಿದೆ. ಇತಿಹಾಸ ಪ್ರಸಿದ್ಧ ವಿಟ್ಲದ ಕೋಟಿಕೆರೆಯಲ್ಲಿ ಹಲವು ಮಂದಿ ಈಜಾಡುತ್ತಿದ್ದುದನ್ನು ವೀಕ್ಷಿಸುತ್ತಿದ್ದ ಅಶ್ವದ್ ಆಕಸ್ಮಿಕವಾಗಿ ಕಾಲು ಜಾರಿ ಕೆರೆ ಬಿದ್ದಿದ್ದು, ಆತ ಮುಳುಗುತ್ತಿರುವುದನ್ನು ಕಂಡ

ನೀರಿನಲ್ಲಿ ಮುಳುಗಿ 9‌ನೇ ತರಗತಿಯ ವಿದ್ಯಾರ್ಥಿ ಮೃತ್ಯು ➤ ಮಕ್ಕಳ ದಿನಾಚರಣೆಯಂದೇ ದುರ್ಘಟನೆ Read More »

ಕರಾವಳಿ

ಕಡಬದಲ್ಲಿ ಕೆಸಿಸಿ ಆರೋಗ್ಯ ಕಾರ್ಡ್ ಬಗ್ಗೆ ಗೊಂದಲ ನಿರ್ಮಾಣ

 (ನ್ಯೂಸ್ ಕಡಬ) newskadaba.com ಕಡಬ, ನ.14  ಸರಕಾರದ ಅನುಮತಿ ಇಲ್ಲದೆ ಕೆಸಿಸಿ ಆರೋಗ್ಯ ಕಾರ್ಡ್ ಎನ್ನುವ ಹೆಸರಿನಲ್ಲಿ ನ.12ರಂದು ಕಡಬ ಗ್ರಾ.ಪಂ.ಕಚೇರಿಯಲ್ಲಿ ಕುಳಿತು ಹಣ ಸಂಗ್ರಹಿಸಿ ಆರೋಗ್ಯ ಕಾರ್ಡ್ ವಿತರಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರ ದೂರಿನಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ ಘಟನೆಗೆ ಸಂಬಂಧಿಸಿ ಕೆಸಿಸಿ ಆರೋಗ್ಯ ಕಾರ್ಡ್‍ನ ಗೊಂದಲ ನಿವಾರಣೆಗೆ ಟ್ರಸ್ಟ್‍ನ ಮುಖ್ಯಸ್ಥರು ಕಡಬ ಠಾಣೆಗೆ ಆಗಮಿಸಿ ಮಾತುಕತೆ ನಡೆಸಿ 15 ದಿನಗಳಲ್ಲಿ ಕಾರ್ಡ್‍ನ ಬಗ್ಗೆ ಮಾಹಿತಿ ಮತ್ತು ಪ್ರಯೋಜನ ಪಡೆದುಕೊಂಡ ಫಲಾನುಭವಿಗಳ ವಿವರಣೆ

ಕಡಬದಲ್ಲಿ ಕೆಸಿಸಿ ಆರೋಗ್ಯ ಕಾರ್ಡ್ ಬಗ್ಗೆ ಗೊಂದಲ ನಿರ್ಮಾಣ Read More »

ಕರಾವಳಿ

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಜ್ಞಾನೋದಯ ಬೆಥನಿ ನೆಲ್ಯಾಡಿಯ ಆದರ್ಶ್‍ಶೆಟ್ಟಿ

 (ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.14  ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಡಲ ತಾಲೂಕಿನ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನವಂಬರ್ 11ರಿಂದ 14ರವರೆಗೆ ಜರುಗಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರಿಡಾ ಕೂಟದಲ್ಲಿ, ಪ್ರಾಥಮಿಕ ಶಾಲಾ 14 ರ ವಯೋಮಿತಿಯ ಬಾಲಕರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿ ಇವರು ಪ್ರಥಮ ಸ್ಥಾನ ಪಡೆದು ಡಿಸಂಬರ್ 4ರಿಂದ

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಜ್ಞಾನೋದಯ ಬೆಥನಿ ನೆಲ್ಯಾಡಿಯ ಆದರ್ಶ್‍ಶೆಟ್ಟಿ Read More »

ಕರಾವಳಿ

ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲದ ಸ್ವಪ್ನ ರಾಷ್ಟ್ರಮಟ್ಟಕ್ಕೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.14  ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಇದರ ಆಶ್ರಯದಲ್ಲಿ ಮಂಡ್ಯದ ನೆಲಮಂಗಲದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ಅಥ್ಲೆಟಿಕ್ ಕ್ರೀಡಾಕೂಟದ 3 ಕಿ.ಮೀ. ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ದಿ. ನಾರಾಯಣ ಹಾಗೂ ಪುಷ್ಪಾ ದಂಪತಿಗಳ ಪುತ್ರಿ. ಇವರಿಗೆ ಸಂಸ್ಥೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್

ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲದ ಸ್ವಪ್ನ ರಾಷ್ಟ್ರಮಟ್ಟಕ್ಕೆ Read More »

ಕರಾವಳಿ

ನವಂಬರ್ 14 – ವಿಶ್ವ ಮಧುಮೇಹಿಗಳ ದಿನ

(ನ್ಯೂಸ್ ಕಡಬ) newskadaba.com ನ.14  ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಖಾಯಿಲೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ “ಅತಿಯಾದ ಮೂತ್ರ ವಿಸರ್ಜಿಸುವ ರೋಗ” ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. (ಇರುವೆಗಳನ್ನು ಆಕರ್ಷಿಸುವ ಮೂತ್ರ) ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗಿಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್

ನವಂಬರ್ 14 – ವಿಶ್ವ ಮಧುಮೇಹಿಗಳ ದಿನ Read More »

ವಿಶೇಷ ಲೇಖನಗಳು

ನ.14: ಇಂದಿನ ದಿನ ಭವಿಷ್ಯ

ಮಕ್ಕಳು ಓದಿನಲ್ಲಿ ಹಿಂದುಳಿದಿದ್ದರೆ ಗುರುವಾರದ ದಿನದಂದು ಯೋಗ್ಯರಿಗೆ ವಸ್ತ್ರದಾನ ಮಾಡಿ, ನವಧಾನ್ಯಗಳನ್ನು ದಾನ ರೂಪವಾಗಿ ನೀಡಿ ಇದರಿಂದ ಒಳಿತಾಗುವುದು. ಶ್ರೀ ಗುರು ರಾಯರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು

ನ.14: ಇಂದಿನ ದಿನ ಭವಿಷ್ಯ Read More »

ಭವಿಷ್ಯ

➤➤ ವೀಡಿಯೋ ನ್ಯೂಸ್ ➤ ಇಂದಿನ ಮುಖ್ಯ ಸುದ್ದಿಗಳು (ನವೆಂಬರ್ 13)

➤➤ ವೀಡಿಯೋ ನ್ಯೂಸ್ ಇಂದಿನ ಮುಖ್ಯ ಸುದ್ದಿಗಳು (ನವೆಂಬರ್ 13) ವೀಡಿಯೋಗಾಗಿ??ಕ್ಲಿಕ್ ಮಾಡಿ

➤➤ ವೀಡಿಯೋ ನ್ಯೂಸ್ ➤ ಇಂದಿನ ಮುಖ್ಯ ಸುದ್ದಿಗಳು (ನವೆಂಬರ್ 13) Read More »

ಕರಾವಳಿ
Scroll to Top