ನೂಜಿಬಾಳ್ತಿಲ: ಮಾತೃ ವಂದನಾ ಅರಿವು ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.26  ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ ನೂಜಿಬಾಳ್ತಿಲ ಗ್ರಾ.ಪಂ. ನಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅವರು ಯೋಜನೆಯ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮಾರಾಮ್‍ದಾಸ್ ಮಾತೃ ವಂದನಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ ಸದಸ್ಯರಾದ ಪುಷ್ಪಲತಾ, ಜಾನಕಿ, ಹೊನ್ನಮ್ಮ ಉಪಸ್ಥಿತರಿದ್ದರು. ಪಂ.ಅಭಿವೃದ್ಧಿ ಅಧಿಕಾರಿ ಆನಂದ ಎ. […]

ನೂಜಿಬಾಳ್ತಿಲ: ಮಾತೃ ವಂದನಾ ಅರಿವು ಕಾರ್ಯಕ್ರಮ Read More »

ಕರಾವಳಿ

ಕಲಬುರಗಿ: ಗ್ರಹಣದ ವೇಳೆ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟ ಪೋಷಕರು

ಕಲಬುರಗಿ, ಡಿ.26: ಗ್ರಹಣದ ಹಿನ್ನೆಲೆಯಲ್ಲಿ ಪೋಷಕರು ವಿಕಲಾಂಗ ಮಕ್ಕಳನ್ನು  ತಿಪ್ಪೆಯಲ್ಲಿ ಹೂತಿಟ್ಟ ಘಟನೆಗಳು ಕಲಬುರಗಿಯಲ್ಲಿ ನಡೆದಿವೆ.‌ ಕಲಬುರಗಿ ತಾಲೂಕಿನ ತಾಜ್ ಸುಲ್ತಾನ್ ಪುರ ಗ್ರಾಮದಲ್ಲಿ ಮೂವರು ಮಕ್ಕಳು ಹಾಗೂ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ಸುಮಾರು ನಾಲ್ವರು ಮಕ್ಕಳನ್ನು ಮೂಢನಂಬಿಕೆಯಿಂದ ಕುತ್ತಿಗೆ ಮಟ್ಟ ಹೂತಿಡಲಾಗಿತ್ತು. ಗ್ರಹಣ ಸಮಯದಲ್ಲಿ ತಿಪ್ಪೆ ಮತ್ತು‌ ಮಣ್ಣನಲ್ಲಿ ಹೂತಿಟ್ಟರೆ ಅಂಗವೈಕಲ್ಯ ಸರಿಯಾಗುತ್ತದೆ ಎಂಬ ಮೂಢನಂಬಿಕೆ ಜನರಲ್ಲಿ ಇದೆ. ಹೀಗಾಗಿ ಚಿಕ್ಕ-ಚಿಕ್ಕ ಮಕ್ಕಳನ್ನು ಪೋಷಕರು ಹೂತಿಟ್ಟಿದ್ದರು.

ಕಲಬುರಗಿ: ಗ್ರಹಣದ ವೇಳೆ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟ ಪೋಷಕರು Read More »

ಕರ್ನಾಟಕ

ನೂಜಿಬಾಳ್ತಿಲ ಗ್ರಾ.ಪಂ: ಹೆಣ್ಣು ಶಿಶುಪ್ರದರ್ಶನ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.26   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇದರ ವತಿಯಿಂದ ನೂಜಿಬಾಳ್ತಿಲ ಗ್ರಾ.ಪಂ. ಸಹಯೋಗದಲ್ಲಿ ಹೆಣ್ಣು ಮಗು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಅಂಗವಾಗಿ ಆರೋಗ್ಯವಂತ ಹೆಣ್ಣು ಶಿಶುಪ್ರದರ್ಶನ ಕಾರ್ಯಕ್ರಮವು ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಿತು. ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರೆಂದು ಪೂಜಿಸಲ್ಪಡುವ ಹೆಣ್ಣಿನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ. ದೇಶದ ಕಣ್ಣಾಗಿರುವ ಹೆಣ್ಣು

ನೂಜಿಬಾಳ್ತಿಲ ಗ್ರಾ.ಪಂ: ಹೆಣ್ಣು ಶಿಶುಪ್ರದರ್ಶನ Read More »

ಕರಾವಳಿ

ಸೌದಿಯಲ್ಲಿ ಬಂಧಿತ ಹರೀಶ್ ಹೆಸರಲ್ಲಿ ಮತ್ತೊಂದು ಫೇಸ್‌ಬುಕ್‌ ಖಾತೆ

ಉಡುಪಿ, ಡಿ. 26: ಫೇಸ್‍ಬುಕ್ ಮೂಲಕ ಸೌದಿ ದೊರೆ ಹಾಗೂ ಮಕ್ಕಾದ  ಕುರಿತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತನಾದ ಹರೀಶ್ ಬಂಗೇರ ಪ್ರಕರಣದಲ್ಲಿ ಇದೀಗ ಇನ್ನೊಂದು ನಕಲಿ ಖಾತೆಯನ್ನು ಸೃಷ್ಠಿಸಿರುವುದಾಗಿ ತಿಳಿದು ಬಂದಿದೆ.   ಮೊದಲ ಬಾರಿಗೆ ಡಿ.20ರಂದು ರಾತ್ರಿ 1.35ಕ್ಕೆ ಸೃಷ್ಠಿಸಿದ ನಕಲಿ ಖಾತೆಯಲ್ಲಿ ಕಿಡಿಗೇಡಿಗಳು ಡಿ.22ರಂದು ಸಂಜೆ ಸುಮಾರು 4.30ಕ್ಕೆ ಹರೀಶ್ ಬಂಧನಕ್ಕೆ ಕಾರಣರಾಗಿದ್ದರು. ಈ ನಕಲಿ ಖಾತೆಯನ್ನು ಅದೇ ದಿನ ರಾತ್ರಿ 8.30ಕ್ಕೆ ಡಿಲೀಟ್ ಮಾಡಲಾಗಿತ್ತು. ಇದೀಗ ಡಿ.24ರಂದು ಮಧ್ಯಾಹ್ನ

ಸೌದಿಯಲ್ಲಿ ಬಂಧಿತ ಹರೀಶ್ ಹೆಸರಲ್ಲಿ ಮತ್ತೊಂದು ಫೇಸ್‌ಬುಕ್‌ ಖಾತೆ Read More »

ಕರಾವಳಿ

ದ.ಕ, ಉಡುಪಿಯ ಹಲವು ಮಸೀದಿಗಳಲ್ಲಿ ಗ್ರಹಣ ನಮಾಝ್

ಮಂಗಳೂರು, ಡಿ.26: ಈ ವರ್ಷದ ಕೊನೆಯ ಸೂರ್ಯಗ್ರಹಣ ಗುರುವಾರ ಗೋಚರಿಸಿದೆ. ಈ ಹಿನ್ನಲೆಯಲ್ಲಿ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಸೀದಿಗಳಲ್ಲಿ ಗ್ರಹಣ ಸಂಬಂಧ ವಿಶೇಷ ನಮಾಝ್ ನಡೆಯಿತು. ಮಂಗಳೂರಿನ ಬಂದರು ಕೇಂದ್ರ ಜುಮಾ ಮಸೀದಿಯಲ್ಲಿ ಬೆಳಗ್ಗೆ 9 ಗಂಟೆಗೆ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವದಲ್ಲಿವಿಶೇಷ ನಮಾಝ್ ನಡೆಯಿತು. ಉಡುಪಿ ಜಿಲ್ಲೆಯ ಕುಂದಾಪುರ ಗಂಗೊಳ್ಳಿ ಜುಮಾ ಮಸೀದಿಯಲ್ಲಿ ಎರಡು ಗಂಟೆಗಳ ಕಾಲ ವಿಶೇಷ ಪ್ರಾರ್ಥನೆ ನಡೆಯಿತು. ಜುಮಾ ಮಸೀದಿಯ ಖತೀಬರಾಗಿರುವ ಮೌಲಾನಾ ಮಝಮ್ಮಿಲ್ ಸಾಹಬ್ ನದ್ವಿ

ದ.ಕ, ಉಡುಪಿಯ ಹಲವು ಮಸೀದಿಗಳಲ್ಲಿ ಗ್ರಹಣ ನಮಾಝ್ Read More »

ಕರಾವಳಿ

ಮಂಗಳೂರು:ಕಂಕಣ ಸೂರ್ಯಗ್ರಹಣ ವಿಕ್ಷೀಸಿದ ಆಸಕ್ತರು

ಮಂಗಳೂರು, ಡಿ.26: ಸೂರ್ಯಗ್ರಹಣ ಗುರುವಾರ ಬೆಳಗ್ಗೆ 8:04ಕ್ಕೆ ಆರಂಭಗೊಂಡಿದ್ದು, ರಾಜ್ಯಾದ್ಯಂತ ಖಗೋಳಾಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಸೌರ ಕನ್ನಡಕ, ಮಸೂರ, ದೂರದರ್ಶಕದ ಮೂಲಕ ಗ್ರಹಣ ವಿಕ್ಷೀಸಿದರು. ಮಂಗಳೂರಿನ ಪಾದುವಾ ಕಾಲೇಜಿನಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್ ಮತ್ತು ಕಾಲೇಜಿನ ಕೊಠಡಿಯಲ್ಲಿ ಬೃಹತ್ ಪರದೆಯ ಮೇಲೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆಯ ಮಾಡಲಾಗಿತ್ತು.    

ಮಂಗಳೂರು:ಕಂಕಣ ಸೂರ್ಯಗ್ರಹಣ ವಿಕ್ಷೀಸಿದ ಆಸಕ್ತರು Read More »

ಕರಾವಳಿ

ಸಂತಾನ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ

ಸಂತಾನ ವಿಷಯದಲ್ಲಿ ಸಮಸ್ಯೆಗಳು ಕಂಡು ಬರುತ್ತಿದ್ದರೆ ಗೋಪಾಲಕೃಷ್ಣ ವೃತವನ್ನು ಆಚರಿಸಿ ಹಾಗೂ ಮನೆಯಲ್ಲಿ ಗೇಹಾಭಿವೃದ್ದಿ ಪೂಜೆಯನ್ನು ನಡೆಸಿ ಇದರಿಂದ ನಿಮ್ಮ ನಿರೀಕ್ಷೆ ಮತ್ತು ಕನಸುಗಳು ನನಸಾಗುತ್ತದೆ. ಶ್ರೀ ಸಾಯಿ ಬಾಬಾ ರವರನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.

ಸಂತಾನ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

“ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರು ಅಪರಾಧಿಗಳಾದಲ್ಲಿ ಒಂದು ರೂ. ಪರಿಹಾರ ನೀಡಲ್ಲ”

ಮಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರು, ಡಿ.25: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.9ರಂದು ಮಂಗಳೂರಿನಲ್ಲಿ ನಡೆದಿದ್ದ  ಪ್ರತಿಭಟನೆಯಲ್ಲಿ ಪೊಲೀಸ್‌ ಗುಂಡೇಟಿಗೆ ಬಲಿಯಾದ ಮೃತರಿಬ್ಬರು ಅಪರಾಧಿಗಳು ಎಂದು ಸಾಬೀತಾದರೆ ಒಂದು ರೂಪಾಯಿಯು ಪರಿಹಾರ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಪರಾಧ ಸಾಬೀತಾದರೆ, ಒಂದು ರೂಪಾಯಿಯು ಕೊಡಲ್ಲ. ಈ ಕುರಿತು ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ. ಮೃತ ಪಟ್ಟವರಿಗೆ ಪರಿಹಾರ ಘೋಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

“ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರು ಅಪರಾಧಿಗಳಾದಲ್ಲಿ ಒಂದು ರೂ. ಪರಿಹಾರ ನೀಡಲ್ಲ” Read More »

ಕರಾವಳಿ

ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಮಂಗಳೂರು, ಡಿ.25: ಯೇಸು ಕ್ರಿಸ್ತರ ಜನನದ ಹಬ್ಬದ ಮುನ್ನಾ ದಿನವಾದ ಮಂಗಳವಾರ ಕ್ರೈಸ್ತರು ಕ್ರಿಸ್ಮಸ್‌ ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್‌ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ನಕ್ಷತ್ರಗಳನ್ನು ಜೋಡಿಸಲಾಗಿತ್ತು. ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರಿಸ್ಮಸ್‌ ಕ್ಯಾರೊಲ್‌ಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ಕಂದ ಯೇಸುವಿಗೆ ನಮಿಸಿದರು. ಮಂಗಳೂರಿನ ರೊಸಾರಿಯ ಕೆಥೆಡ್ರಲ್‌ನಲ್ಲಿ ರಾತ್ರಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ

ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ Read More »

ಕರಾವಳಿ

ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಡಾ.ವೀರೇಂದ್ರ ಹೆಗ್ಗಡೆ ಆಯ್ಕೆ

ಬೆಂಗಳೂರು, ಡಿ.25: ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ಯುಗದ ಸಾಧಕ ಪ್ರಶಸ್ತಿಗೆ ಪ್ರೊ.ಜಿ.ವೆಂಕಟಸುಬ್ಬಯ್ಯ, 2019 ನೇ ಸಾಲಿನ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗಳಿಗೆ ಎಂ.ಸಿದ್ದರಾಜು, ಕೆ.ಸುನೀಲ್ ಪ್ರಸಾದ್, ಕೆ.ಎಚ್.ಸಾವಿತ್ರಿ, ಬಿ.ವಿ.ನಾಗರಾಜು, ರವೀಂದ್ರ ಜಿ. ಭಟ್, ಕೆ.ಎನ್.ಚೆನ್ನೇಗೌಡ, ಬಿ.ಹರಿಶ್ಚಂದ್ರ ಭಟ್, ಎಂ.ಅಬ್ದುಲ್ ಹಮೀದ್, ಇಮ್ರಾನ್ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣ ಕೊಡಸೆ, ಜೋಸೆಫ್ ಹೂವರ್, ಎನ್.ಎಸ್.ಶಂಕರ್, ಬಿ.ಕೆ.ರವಿ, ರು.ಬಸಪ್ಪ ಹಾಗೂ ಜಯಪ್ರಕಾಶ್ ಶೆಟ್ಟಿ ಅವರನ್ನು ಆಯ್ಕೆ

ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಡಾ.ವೀರೇಂದ್ರ ಹೆಗ್ಗಡೆ ಆಯ್ಕೆ Read More »

ಕರಾವಳಿ, ಕರ್ನಾಟಕ
Scroll to Top