ಕಜಕಿಸ್ಥಾನ: 100 ಜನರಿದ್ದ ವಿಮಾನ ಪತನ; ಕನಿಷ್ಠ 9 ಪ್ರಯಾಣಿಕರು ಸಾವು

ಕಜಕಿಸ್ಥಾನ, ಡಿ.27: 95 ಮಂದಿ ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಗಳಿದ್ದ ವಿಮಾನವೊಂದು ಪತನಗೊಂಡು ಕನಿಷ್ಠ ಒಂಬತ್ತು ಮಂದಿ ಮೃತಪಟ್ಟ ಘಟನೆ ಕಜಕಿಸ್ಥಾನದಲ್ಲಿ ಶುಕ್ರವಾರ ನಡೆದಿದೆ. ವಿಮಾನವು ಕಜಕಿಸ್ಥಾನದ ರಾಜಧಾನಿ ನೂರ್ ಸುಲ್ತಾನ್ ಗೆ ಹೊರಟಿದ್ದು ಅಲ್ಮಾಟಿ ವಿಮಾನ ನಿಲ್ದಾಣದ ಸಮೀಪ ಈ ದುರ್ಘಟನೆ ನಡೆದಿದೆ. ವಿಮಾಣ ಟೇಕ್‌ ಆಫ್‌ ಆಗುವ ಸಂದರ್ಭದಲ್ಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಪತನವಾಗಿದೆ. ಟೇಕ್‌ ಆಫ್‌ ಆದ ಸಂದರ್ಭದಲ್ಲಿ ವಿಮಾನದ ಸಂಪರ್ಕವು ಕಡಿತವಾಗಿದೆ ಎಂದು ತಿಳಿದು ಬಂದಿದೆ. ಈವಿಮಾನವು ಕಜಕ್ ಕ್ಯಾರಿಯರ್ […]

ಕಜಕಿಸ್ಥಾನ: 100 ಜನರಿದ್ದ ವಿಮಾನ ಪತನ; ಕನಿಷ್ಠ 9 ಪ್ರಯಾಣಿಕರು ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್

ಮಕ್ಕಳು ಪ್ರೇಮ, ಸಹವಾಸದ ಸಮಸ್ಯೆಗೆ ಹೀಗೆ ಮಾಡಿ. ದಿನಭವಿಷ್ಯ ನೋಡಿ

ಮಕ್ಕಳು ನಿಮ್ಮ ಮಾತು ಕೇಳದಿರುವುದು. ಪ್ರೀತಿ-ಪ್ರೇಮ ಎಂಬಿತ್ಯಾದಿ ವಿಚಾರಗಳಿಂದ ಸಮಸ್ಯೆ ಮಾಡಿಕೊಳ್ಳುತ್ತಿರುವುದು ಮತ್ತು ದುಷ್ಟ ಜನರ ಸಹವಾಸದಿಂದ ಹಾಳಾಗಿರುವ ಸಾಧ್ಯತೆ ಇರಬಹುದು. ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಶುಕ್ರವಾರದ ದಿನ ವಿಳ್ಳೆದೆಲೆ ತೆಗೆದುಕೊಂಡು ಅರಿಶಿನ-ಕುಂಕುಮವನ್ನು ಹಾಕಿ, ಅಂತಹ ಒಂಬತ್ತು ಎಲೆಯನ್ನು ದಾರದಿಂದ ಕಟ್ಟಿ ಹಾರವಾಗಿ ಪರಿವರ್ತಿಸಿ ಇದನ್ನು ಎಕ್ಕದ ಗಿಡದ ಹತ್ತಿರ ಇಟ್ಟು ಬನ್ನಿ ಮತ್ತು ಇತರರ ಜೊತೆಗೆ ಸುದರ್ಶನ ಹೋಮವನ್ನು ನಡೆಸುವುದು ಒಳ್ಳೆಯದು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ

ಮಕ್ಕಳು ಪ್ರೇಮ, ಸಹವಾಸದ ಸಮಸ್ಯೆಗೆ ಹೀಗೆ ಮಾಡಿ. ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್
download

ಕಡಬ: ದ್ವಿಚಕ್ರ – ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ➤ ಮಹಿಳೆ ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.26. ಕೆಎಸ್ಸಾರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಕಡಬದ ಹಳೇ ಸ್ಟೇಷನ್ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತರನ್ನು ನೂಜಿಬಾಳ್ತಿಲ ಗ್ರಾಮದ ಪಳೆಯಮಜಲು ನಿವಾಸಿ ಜೂಲಿ ತೋಮಸ್ ಎಂದು ಗುರುತಿಸಲಾಗಿದೆ. ಮೃತರು ತನ್ನ ಪತಿ ಹಾಗೂ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ಕಡಬ ಕಡೆಗೆ ಬರುತ್ತಿದ್ದ ವೇಳೆ ಹಳೇಸ್ಟೇಷನ್ ಸಮೀಪ ಮುಖ್ಯ ರಸ್ತೆಗೆ ಬರುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್

ಕಡಬ: ದ್ವಿಚಕ್ರ – ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ➤ ಮಹಿಳೆ ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದ.ಕ ಜಿಲ್ಲೆ ಗೃಹರಕ್ಷಕ ದಳ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26  ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಗೃಹರಕ್ಷಕರನ್ನು ಭರ್ತಿ ಮಾಡಲು ಮೂಡಬಿದ್ರಿ, ಸುರತ್ಕಲ್, ಪಣಂಬೂರು, ಮಂಗಳೂರು, ಮೂಲ್ಕಿ ಘಟಕಗಳಲ್ಲಿ ಪುರುಷರಿಂದ ಅರ್ಜಿ ಆಹ್ವಾನಿಸಲಾಗಿದ್ದು, 20 ವರ್ಷ ವಯಸ್ಸು ಮೇಲ್ಪಟ್ಟ  ಆಸಕ್ತ ಪುರುಷ ಅಭ್ಯರ್ಥಿಗಳು ಅರ್ಜಿ ನೀಡಬಹುದು. ಅರ್ಜಿಯನ್ನು ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್, ಮಂಗಳೂರು, ಕಚೇರಿ ದೂರವಾಣಿ ಸಂಖ್ಯೆ 0824-2220562 ಇಲ್ಲಿ ಪಡೆಯಬಹುದು ಎಂದು ದ.ಕ ಜಿಲ್ಲೆ ಸಮಾದೇಷ್ಟರ  ಪ್ರಕಟಣೆ ತಿಳಿಸಿದೆ.

ದ.ಕ ಜಿಲ್ಲೆ ಗೃಹರಕ್ಷಕ ದಳ – ಅರ್ಜಿ ಆಹ್ವಾನ Read More »

ಕರಾವಳಿ

ಜ.3 ರಂದು ಬಂಟ್ವಾಳ ತಾ. ಕೆ.ಡಿ.ಪಿ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26   ಬಂಟ್ವಾಳ ತಾಲೂಕು ಪಂಚಾಯತ್‍ನ 2019-20 ನೇ ಸಾಲಿನ ತ್ರೈಮಾಸಿಕ ಕೆ.ಡಿ.ಪಿ ಸಭೆ ಜನವರಿ 3 ರಂದು ಬೆಳಿಗ್ಗೆ 10.30 ಗಂಟೆಗೆ  ತಾಲೂಕು ಪಂಚಾಯತ್  ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಜ.3 ರಂದು ಬಂಟ್ವಾಳ ತಾ. ಕೆ.ಡಿ.ಪಿ ಸಭೆ Read More »

ಕರಾವಳಿ

ಕೇಂದ್ರ ಸರಕಾರಿ ಉದ್ಯೋಗ – ಉಚಿತ ಪರೀಕ್ಷಾ ಪೂರ್ವ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26   ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜನವರಿ 6 ರಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಇಚ್ಛಿಸುವ  ಅಭ್ಯರ್ಥಿಗಳು ತಮ್ಮ ಹೆಸರನ್ನು ಖುದ್ದಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಬೇಕು. ದೂರವಾಣಿ ಸಂಖ್ಯೆ  0824-2457139 ಸಂಪರ್ಕಿಸಬಹುದು ಎಂದು  ಉದ್ಯೋಗಾಧಿಕಾರಿ ಜಿಲ್ಲಾ ಉದ್ಯೋಗ ವಿನಿಮಯ

ಕೇಂದ್ರ ಸರಕಾರಿ ಉದ್ಯೋಗ – ಉಚಿತ ಪರೀಕ್ಷಾ ಪೂರ್ವ ತರಬೇತಿ Read More »

ಕರಾವಳಿ

ಚಾಕಲೇಟ್ ತಯಾರಿ ತರಬೇತಿ- ದಿನ ಮುಂದೂಡಿಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26    ಸಿರಿ ತೋಟಗಾರಿಕೆ ಸಂಘದ ವತಿಯಿಂದ ಡಿಸೆಂಬರ್ 21  ರಂದು ನಡೆಯಬೇಕಿದ್ದ ಚಾಕಲೇಟ್ ತಯಾರಿ (ಹುಟ್ಟುಹಬ್ಬ, ಹೊಸವರ್ಷ, ಕ್ರಿಸ್‍ಮಸ್ ಆಚರಣೆಗಳಲ್ಲಿ ಉಪಯೋಗಿಸುವ ಚಾಕಲೇಟ್ ತಯಾರಿ) ತರಬೇತಿ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ತರಬೇತಿಯನ್ನು ಡಿಸೆಂಬರ್ 27 ರಂದು ಬಾಲಭವನ, ಕದ್ರಿ ಉದ್ಯಾನವನದ ಹತ್ತಿರ ಆಯೋಸಲಾಗಿದೆ. ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರ್‍ವೆಲ್, ಮಂಗಳೂರು ಇಲ್ಲಿ ತರಬೇತಿ ಶುಲ್ಕ ನೀಡಿ ಡಿಸೆಂಬರ್ 26 ರೊಳಗೆ  ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ  ರುಕ್ಮಯ ದೂರವಾಣಿ ಸಂಖ್ಯೆ 9845523944

ಚಾಕಲೇಟ್ ತಯಾರಿ ತರಬೇತಿ- ದಿನ ಮುಂದೂಡಿಕೆ Read More »

ಕರಾವಳಿ

ಎಣ್ಮೂರು :ಕೆಮ್ಮಲೆ (ಹೇಮಳ) ನಾಗಬ್ರಹ್ಮ ದೇವಸ್ಥಾನಕ್ಕೆ ಸರಕಾರದಿಂದ 45 ಲಕ್ಷ ಬಿಡುಗಡೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.26   ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ಶ್ರೀ ನಾಗಬ್ರಹ್ಮ ದೇವಸ್ಥಾನದ ಜೀರ್ಣೊದ್ಧಾರವು ಊರ-ಪರವೂರ ಭಕ್ತರ ಸಹಕಾರದಿಂದ ನಡೆಯುತ್ತಿದ್ದು, ಆರ್ಥಿಕ ಅಡಚಣೆಯುಂಟಾದ ಸಂದರ್ಭದಲ್ಲಿ ಗ್ರಾಮಸ್ಥರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೇಟಿಯಾಗಿ ಸಮಸ್ಯೆ ಹೇಳಿದಾಗ ತಕ್ಷಣ ಸ್ಪಂದಿಸಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿಸಿ ಅನುದಾನದ ಭರವಸೆ ನೀಡಿದ್ದರು. ಇದೀಗ ಸರಕಾರದಿಂದ ಕೆಲವೇ ದಿನಗಳಲ್ಲಿ ರೂ. 45 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ದೇವಾಲಯಕ್ಕೆ ಅನುದಾನ ಒದಗಿಸಿಕೊಟ್ಟ ಮುಖ್ಯಮಂತ್ರಿಗಳಾದ ಬಿ. ಎಸ್.

ಎಣ್ಮೂರು :ಕೆಮ್ಮಲೆ (ಹೇಮಳ) ನಾಗಬ್ರಹ್ಮ ದೇವಸ್ಥಾನಕ್ಕೆ ಸರಕಾರದಿಂದ 45 ಲಕ್ಷ ಬಿಡುಗಡೆ Read More »

ಕರಾವಳಿ

ಕೊಣಾಜೆ: ಉಚಿತ ಕಣ್ಣಿನ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.26  ಕಡ್ಯ ಕೊಣಾಜೆ ಗ್ರಾ.ಪಂ. ನೇತೃತ್ವದಲ್ಲಿ ಸಂಭವ್ ಫೌಂಡೇಶನ್ 2.5 ಎನ್‍ವಿಜಿ ಐ ಮಿತ್ರ ಸುರತ್ಕಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಡಾ. ಪಿ. ದಯಾನಂದ ಪೈ ಮತ್ತು ಟಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

ಕೊಣಾಜೆ: ಉಚಿತ ಕಣ್ಣಿನ ತಪಾಸಣಾ ಶಿಬಿರ Read More »

ಕರಾವಳಿ
Scroll to Top