ದ.ಕ, ಉಡುಪಿಯ ಹಲವು ಮಸೀದಿಗಳಲ್ಲಿ ಗ್ರಹಣ ನಮಾಝ್

ಮಂಗಳೂರು, ಡಿ.26: ಈ ವರ್ಷದ ಕೊನೆಯ ಸೂರ್ಯಗ್ರಹಣ ಗುರುವಾರ ಗೋಚರಿಸಿದೆ. ಈ ಹಿನ್ನಲೆಯಲ್ಲಿ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಸೀದಿಗಳಲ್ಲಿ ಗ್ರಹಣ ಸಂಬಂಧ ವಿಶೇಷ ನಮಾಝ್ ನಡೆಯಿತು.

ಮಂಗಳೂರಿನ ಬಂದರು ಕೇಂದ್ರ ಜುಮಾ ಮಸೀದಿಯಲ್ಲಿ ಬೆಳಗ್ಗೆ 9 ಗಂಟೆಗೆ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವದಲ್ಲಿವಿಶೇಷ ನಮಾಝ್ ನಡೆಯಿತು. ಉಡುಪಿ ಜಿಲ್ಲೆಯ ಕುಂದಾಪುರ ಗಂಗೊಳ್ಳಿ ಜುಮಾ ಮಸೀದಿಯಲ್ಲಿ ಎರಡು ಗಂಟೆಗಳ ಕಾಲ ವಿಶೇಷ ಪ್ರಾರ್ಥನೆ ನಡೆಯಿತು. ಜುಮಾ ಮಸೀದಿಯ ಖತೀಬರಾಗಿರುವ ಮೌಲಾನಾ ಮಝಮ್ಮಿಲ್ ಸಾಹಬ್ ನದ್ವಿ ನೇತೃತ್ವದಲ್ಲಿ ವಿಶೇಷ ನಮಾಝ್ ನಡೆಯಿತು.

Scroll to Top