ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಿಂಚಿದ ಕಡಬದ ಮೋಹನ್ ಕೆರೆಕೋಡಿ ➤ 800 ಮೀಟರ್ ಓಟದಲ್ಲಿ ಕಂಚು

(ನ್ಯೂಸ್ ಕಡಬ) newskadaba.com ಕಡಬ, ಜ.11. ಕೇರಳದ ಕ್ಯಾಲಿಕಟ್ ನ ಒಲಿಂಪಿಯನ್ ರೆಹಮಾನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾವನ್ನು ಒಳಗೊಂಡ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಕಡಬದ ಮೋಹನ್ ಕೆರೆಕೋಡಿ 800ಮೀಟರ್ ಓಟದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಕಡಬದ ಗ್ರಾಮೀಣ ಕ್ರೀಡಾ ಸಾಧಕನಾಗಿರುವ ಮೋಹನ್ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಜನವರಿ 11 ಮತ್ತು 12 ರಂದು 1500 ಮೀಟರ್ ಓಟ ಹಾಗೂ 100 ಮೀಟರ್ ಓಟದಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಿಂಚಿದ ಕಡಬದ ಮೋಹನ್ ಕೆರೆಕೋಡಿ ➤ 800 ಮೀಟರ್ ಓಟದಲ್ಲಿ ಕಂಚು Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶನಿ ಗ್ರಹದ ಮಾಹಿತಿ. ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ಅವರಿಂದ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಜನಮಾನಸದಲ್ಲಿ ಶನಿ ಗ್ರಹದ ಪ್ರಭಾವ ವೆಂದರೆ ಭಯ-ಆತಂಕ ಕಂಡುಬರುತ್ತದೆ. ಆದರೆ ಸ್ವಾಮಿಯ ಕೃಪಾಕಟಾಕ್ಷ ಒಲಿದರೆ ನಾಲ್ಕು ತಲೆಮಾರು ಸುಖ ಸುಪ್ಪತ್ತಿಗೆಯಿಂದ ಇರುವ ಅವಕಾಶಗಳನ್ನು ದಯಪಾಲಿಸುವರು. ಕರ್ಮ ಕಾರಕನಾಗಿ ಶನಿ ನಮ್ಮ ಪೂರ್ವಾರ್ಜಿತ ಪಾಪಗಳ ಪುಣ್ಯಗಳ ಫಲಾಫಲ ದಂತೆ ಸುಖ-ದುಃಖಗಳನ್ನು ನೀಡುವನು. ಭಾಗ್ಯ ಕಾರಕನಾಗಿ ನಮ್ಮ ಜೀವನ ಮಟ್ಟ ಅನುಸಾರ ಹಾಗೂ ನಮ್ಮ ರೀತಿನೀತಿಗಳಂತೆ ಫಲಿತಾಂಶ ನೀಡುವರು. ಆಯುಷ್ಯ ಕಾರಕನಾಗಿ ರೋಗರುಜಿನ ಮತ್ತು ಜೀವಿತಾವಧಿಯನ್ನು ನಿರ್ಧರಿಸುವರು. ಸಂತಾನ

ಶನಿ ಗ್ರಹದ ಮಾಹಿತಿ. ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ಅವರಿಂದ Read More »

ವಿಶೇಷ ಲೇಖನಗಳು
Astrology

ಮಂತ್ರ ಮತ್ತು ಅದರ ವಿಶೇಷ ಶಕ್ತಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್ 9945410150 ವೈದಿಕ ಶಾಸ್ತ್ರದಲ್ಲಿ ಮಂತ್ರಗಳಿಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಇದು ಸಾಕ್ಷಾತ್ ಭಗವಂತನಿಂದ ರಚಿಸಲ್ಪಟ್ಟಿದೆ ಎಂಬುದು ವಿಶೇಷ. ಇದರಿಂದ ಆತ್ಮಬಲ ಮತ್ತು ಮನೋಚೈತನ್ಯ ವೃದ್ಧಿಸಿಕೊಳ್ಳುವ ವಿಶೇಷ ಮಾರ್ಗ ಗೋಚರವಾಗುತ್ತದೆ. ಸುಮಾರು ಮೂರು ಸಾವಿರ ವರ್ಷಗಳ ಹಳೆಯ ಇತಿಹಾಸದಿಂದ ನಾವು ಕಾಣಬಹುದು. ನಮ್ಮಲ್ಲಿನ ದುಃಖದುಮ್ಮಾನ, ಅಶಾಂತಿ ಹಾಗೂ ಆತಂಕಗಳನ್ನು ಮಂತ್ರಶಕ್ತಿಯಿಂದ ದೂರ ಮಾಡಿಕೊಳ್ಳಬಹುದಾದ ವಿಶೇಷ ಸಾಧನ. ಮಂತ್ರಗಳ ಶಕ್ತಿಯಿಂದ ಆರೋಗ್ಯ ಸಮಸ್ಯೆಯನ್ನು ದೂರವಿಡಬಹುದು, ನಮ್ಮ ಉದ್ದೇಶಿತ ಗುರಿಗಳನ್ನು ಸಾಧಿಸಲು

ಮಂತ್ರ ಮತ್ತು ಅದರ ವಿಶೇಷ ಶಕ್ತಿ Read More »

ವಿಶೇಷ ಲೇಖನಗಳು

ರಸ್ತೆ ಸುರಕ್ಷತಾ ಸಪ್ತಾಹ -2020 ಮತ್ತು ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಪುತ್ತೂರು, ಜ.11   ಪುತ್ತೂರು ಸಂಚಾರ ಠಾಣಾ ವತಿಯಿಂದ 31 ನೇ ರಸ್ತೆ ಸುರಕ್ಷತಾ ಸಪ್ತಾಹ -2020 ನೇದರ ಜಾಥಾ ಕಾರ್ಯಕ್ರಮಕ್ಕೆ ಹಾಗೂ ಹೊಸ ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿ ಇಂದು ನಡೆಯಿತು. ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು , ಪುತ್ತೂರು ಇವರು ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ದಿನಕರ ಶೆಟ್ಟಿ ಹಾಗೂ

ರಸ್ತೆ ಸುರಕ್ಷತಾ ಸಪ್ತಾಹ -2020 ಮತ್ತು ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ Read More »

ಕರಾವಳಿ

ಕರಾವಳಿ ಉತ್ಸವದ ಮೆರವಣಿಗೆಯಲ್ಲಿ – ಸಾಂಸ್ಕೃತಿಕ ತಂಡಗಳು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    2019-20 ನೇ ಸಾಲಿನ ಕರಾವಳಿ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಸಾಂಸ್ಕೃತಿಕ ತಂಡಗಳ ವಿವರ ಇಂತಿವೆ:- ಗಿರಿ-ಸಿರಿ ಜಾನಪದ ಕಲಾ ತಂಡ(ರಿ).,ಕನ್ಯಾನ, ಬಂಟ್ವಾಳ ತಂಡದಿಂದ ಕೊರಗರ ಡೋಲು-ಕೋಲು ಕುಣಿತ, ರಮೇಶ ಕನ್ಯಾನ, ಶಿವಗಿರಿ ಹೊೈಗೆಗದ್ದೆ, ಕನ್ಯಾನ ಗ್ರಾಮ, ಬಂಟ್ವಾಳ ತಂಡದಿಂದ ಕರಡಿ-ಸಿಂಹ ನೃತ್ಯ, ರಾಮನಗರ ತಂಡದಿಂದ ಪೂಜಾ ಕುಣಿತ, ಕಾರವಾರ ತಂಡದಿಂದ ಸುಗ್ಗಿ ಕುಣಿತ, ಹಾವೇರಿ ತಂಡದಿಂದ ಬೇಡರ ಕುಣಿತ, ಚಿಕ್ಕಮಂಗಳೂರು ತಂಡದಿಂದ ಮಹಿಳಾ ವೀರಗಾಸೆ, ಮಾಗಡಿ ತಂಡದಿಂದ ನಂದಿಧ್ವಜ,

ಕರಾವಳಿ ಉತ್ಸವದ ಮೆರವಣಿಗೆಯಲ್ಲಿ – ಸಾಂಸ್ಕೃತಿಕ ತಂಡಗಳು Read More »

ಕರಾವಳಿ

ಬಾಲಕಾರ್ಮಿಕ ಕಾನೂನು ಅರಿವು ಕಾರ್ಯಾಗಾರ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯಾವಂತರ ಜಿಲ್ಲೆಯಾಗಿದ್ದು ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಸಮಸ್ಯೆಯು ತುಂಬಾ ಕಡಿಮೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ರವಿ ಎಮ್ ನಾಯಕ್  ಹೇಳಿದರು. ಶುಕ್ರವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘ, ದಕ್ಷಿಣ

ಬಾಲಕಾರ್ಮಿಕ ಕಾನೂನು ಅರಿವು ಕಾರ್ಯಾಗಾರ Read More »

ಕರಾವಳಿ

ಸಿರಿದೊಂಪ-ತುಡರ್ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಪ್ರತಿ ತಿಂಗಳ ಚಾವಡಿ ಕಾರ್ಯಕ್ರಮದಲ್ಲಿ ಒಬ್ಬ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಿದೆ. ಜನವರಿ 13 ರಂದು ಮಧ್ಯಾಹ್ನ  2 ಗಂಟೆಗೆ ಅಕಾಡೆಮಿ ಸಿರಿಚಾವಡಿಯಲ್ಲಿ ಹಿರಿಯ ಸಾಹಿತಿ ಮತ್ತು ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು ಇವರನ್ನು ಸನ್ಮಾನಿಸಲಾಗುವುದು ಹಾಗೂ  ‘ಸಿರಿದೊಂಪ – ತುಡರ್ ಎರಡು ಪುಸ್ತಕ’ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ತುಳು

ಸಿರಿದೊಂಪ-ತುಡರ್ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ Read More »

ಕರಾವಳಿ

ಮಂಗಳೂರು: ದಾಖಲೆ ಇಲ್ಲದ ವಿದೇಶಿ ಕರೆನ್ಸಿ ವಶ

ಮಂಗಳೂರು, ಜ.11: ದಾಖಲೆ ಇಲ್ಲದ ಸುಮಾರು 5,48,000 ರೂಪಾಯಿಯ ವಿದೇಶಿ ಕರೆನ್ಸಿಗಳನ್ನು ಹೊಂದಿದ್ದ ದುಬೈಗೆ ಸಂಚರಿಸುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಫ್‌ಎಸ್‌ಎಫ್ ಅಧಿಕಾರಿಗಳು ಶನಿವಾರ ಮುಂಜಾನೆ 6.30 ಗಂಟೆಗೆ ಪ್ರಯಾಣಿಕರ ಬ್ಯಾಗೇಜುಗಳ ತಪಾಸಣೆ ಮಾಡುತ್ತಿದ್ದ ವೇಳೆ ದುಬೈಗೆ ಸ್ಪಯ್ಸ್ ಜೆಟ್ ವಿಮಾನದ ಮೂಲಕ ತೆರಳಲಿದ್ದ ಪ್ರಯಾಣಿಕ ಶಾಹುಲ್ ಹಮೀದ್‌ ಎಂಬವರ ಕೈ ಚೀಲದಲ್ಲಿ ಅನುಮಾನಾಸ್ಪದ ಚಿತ್ರವನ್ನು ಗಮನಿಸಿದ್ದು ಪರಿಶೀಲನೆ ನಡೆಸಿ ವಿದೇಶಿ ಕರೆನ್ಸಿಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಯಾಣಿಕನಿಂದ ಯುಎಸ್

ಮಂಗಳೂರು: ದಾಖಲೆ ಇಲ್ಲದ ವಿದೇಶಿ ಕರೆನ್ಸಿ ವಶ Read More »

ಕರಾವಳಿ

ಗ್ರಾಪಂ ಚುನಾವಣೆ ದಿನಾಂಕ ಪ್ರಕಟ

ಬೆಂಗಳೂರು, ಜ.11: ರಾಜ್ಯದ ಕೆಲವು ಗ್ರಾಮ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಎಪ್ರಿಲ್ 5ರಂದು ಮೊದಲ ಹಂತದ ಮತದಾನ ಮತ್ತು ಎಪ್ರಿಲ್ 9ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕ ಮತ್ತು

ಗ್ರಾಪಂ ಚುನಾವಣೆ ದಿನಾಂಕ ಪ್ರಕಟ Read More »

ಕರ್ನಾಟಕ

ಉನ್ನತ ಶಿಕ್ಷಣದ ಸವಾಲುಗಳು ಮತ್ತು ಶಿಕ್ಷಕರ ತೊಡಗುವಿಕೆ – ವಿಚಾರ ಸಂಕಿರಣ

  (ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ), ಮಂಗಳೂರು ಘಟಕ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ನ್ಯಾಕ್ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಉನ್ನತ ಶಿಕ್ಷಣದ ಸವಾಲುಗಳು – ಶಿಕ್ಷಕರ ತೊಡಗುವಿಕೆ ಎಂಬ  ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದೆ.

ಉನ್ನತ ಶಿಕ್ಷಣದ ಸವಾಲುಗಳು ಮತ್ತು ಶಿಕ್ಷಕರ ತೊಡಗುವಿಕೆ – ವಿಚಾರ ಸಂಕಿರಣ Read More »

ಕರಾವಳಿ
Scroll to Top