ಇಚಿಲಂಪಾಡಿ: ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರಿನಲ್ಲಿ ಕಣ್ಮರೆ ➤ ಓರ್ವನ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಡಬ, ಮಾ.20. ಸ್ನಾನಕ್ಕೆಂದು ತೆರಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಶುಕ್ರವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ. ನಾಪತ್ತೆಯಾಗಿರುವ ಯುವಕರನ್ನು ಇಚಿಲಂಪಾಡಿ ಸಮೀಪದ ಕೊರಮೇರು ನಿವಾಸಿಗಳಾದ ವೆಂಕಟೇಶ್ ಹಾಗೂ ಗುರುನಂದನ್ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಇಚಿಲಂಪಾಡಿ ಸಮೀಪದ ಕೊರಮೇರು ಬದನೆಗುಂಡಿ ಎಂಬಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇಚಿಲಂಪಾಡಿ: ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರಿನಲ್ಲಿ ಕಣ್ಮರೆ ➤ ಓರ್ವನ ಮೃತದೇಹ ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್‌ಗೆ ಕೊರೋನ ಪಾಸಿಟಿವ್

ಮುಂಬೈ, ಮಾ.20: ಬಾಲಿವುಡ್‌ನ ಪ್ರಸಿದ್ದ ಗಾಯಕಿ ಕನ್ನಿಕಾ ಕಪೂರ್ ಇತ್ತೀಚೆಗೆ ಇಂಗ್ಲೆಂಡಿನಿಂದ ಮರಳಿದ್ದು, ಅವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಸದ್ಯ ಗಾಯಕಿ ಕನ್ನಿಕಾರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾನಿಲಯದ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಿಕಾ ಅವರು ಮ.15ರಂದು ಲಂಡನ್‌ನಿಂದ ಲಕ್ನೋಗೆ ಮರಳಿದ್ದರು ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನದವರೆಗಿನ ಮಾಹಿತಿ ಪ್ರಕಾರ, ಭಾರತದಲ್ಲಿ 194 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 20 ಜನರು ಗುಣಮುಖರಾಗಿದ್ದು, 170 ಜನರು ಚಿಕಿತ್ಸೆ ಪಡೆಯುತ್ತಿದ್ಧಾರೆ. ನಾಲ್ವರು

ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್‌ಗೆ ಕೊರೋನ ಪಾಸಿಟಿವ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊರೋನ ಭೀತಿ ಹಿನ್ನೆಲೆ: ಮನಪಾ ವ್ಯಾಪ್ತಿಯ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ನಾಳೆಯಿಂದ ಬಂದ್

ಮಂಗಳೂರು, ಮಾ.20: ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಮಾರಣಾಂತಿಕ ಸೋಂಕು ವೈರಾಣು ರಾಜ್ಯದಲ್ಲಿಯೂ ಕಾಣಿಸಿಕೊಂಡಿರುವುದರಿಂದ ಈ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯೊಳಗೆ ಕಾರ್ಯಚರಿಸುವ ಎಲ್ಲಾ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಮಾ.21ರಿಂದ ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಮುಚ್ಚುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ. ಈ ಕುರಿತು ಎಲ್ಲಾ ಸೆಲೂನ್, ಬ್ಯೂಟಿ ಪಾರ್ಲರ್ ಅಸೋಸಿಯೇಷನ್‌ಗಳು ಗಮನಹರಿಸಿ ಮಾ.21ರಿಂದ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು

ಕೊರೋನ ಭೀತಿ ಹಿನ್ನೆಲೆ: ಮನಪಾ ವ್ಯಾಪ್ತಿಯ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ನಾಳೆಯಿಂದ ಬಂದ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನಾ ನಿಯಂತ್ರಣಕ್ಕೆ ಸ್ವಯಂ ನಿಗಾ ಅನಿವಾರ್ಯ ➤ ಮಾಧ್ಯಮ ಸಂವಾದದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್

ಮಂಗಳೂರು, ಮಾ.20. ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಸ್ವಯಂ ನಿಗಾ ಅಳವಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾ ವೈರಾಣು ಅತಿ ವೇಗವಾಗಿ ಹಬ್ಬುತ್ತದೆ. ಇದಕ್ಕೆ ತಕ್ಕ ಜನಸಾಮಾನ್ಯರು ಮುನ್ನೆಚ್ಚರಿಕೆ

ಕೊರೋನಾ ನಿಯಂತ್ರಣಕ್ಕೆ ಸ್ವಯಂ ನಿಗಾ ಅನಿವಾರ್ಯ ➤ ಮಾಧ್ಯಮ ಸಂವಾದದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ Read More »

ಕರ್ನಾಟಕ

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ➤ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.20. ಗ್ಯಾಸ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಉರುಳಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಸಮೀಪದ ಲಾವತಡ್ಕ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾವತ್ತಡ್ಕದಲ್ಲಿ ಪಲ್ಟಿಯಾಗಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕ ಗಾಯಗೊಂಡಿದ್ದು, ಅಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಗಳೂರಿನಿಂದ ಅಧಿಕಾರಿಗಳು ಆಗಮಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಟ್ಯಾಂಕರ್ ಅನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು,

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ➤ ಚಾಲಕನಿಗೆ ಗಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿಯಲ್ಲಿ 50 ಅಡಿ ಕಂದಕಕ್ಕೆ ಬಿದ್ದ ಕಾರು: ಅಪಾಯದಿಂದ ಪಾರು

ಉಪ್ಪಿನಂಗಡಿ, ಮಾ.20: ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಕಂದಕ್ಕೆ ಉರುಳಿ ಬಿದ್ದ ಘಟನೆ ಇಲ್ಲಿಗೆ ಸಮೀಪ ಪಂಜಾಳದಲ್ಲಿ ಶುಕ್ರವಾರ ನಡೆದಿದೆ. ಬೆಂಗಳೂರಿನಿಂದ ಉಡುಪಿ ಬರುತ್ತಿದ್ದ ಕಾರು ಉಪ್ಪಿನಂಗಡಿಯ ಪಂಜಾಳ ಸಮೀಪ ತಲುಪುತ್ತಿದ್ದಂತೆ 50 ಅಡಿ ಆಳದ ಕಂದಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಉಡುಪಿಯ ಶಿರ್ವ ಮೂಲದ ನವೀನ್ ಮತ್ತವರ ಕುಟುಂಬ ಬೆಂಗಳೂರಿನಿಂದ ಊರಿಗೆ ಬರುತ್ತಿದ್ದರು. ನವೀನ್, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇವರನ್ನು

ಉಪ್ಪಿನಂಗಡಿಯಲ್ಲಿ 50 ಅಡಿ ಕಂದಕಕ್ಕೆ ಬಿದ್ದ ಕಾರು: ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೇರಳದಲ್ಲಿ ಕೊಲೆಗೆ ಯತ್ನಿಸಿ ಕಡಬದಲ್ಲಿ ಆಶ್ರಯ ➤ ಊರವರ ಸಹಕಾರದಲ್ಲಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.20. ಕೇರಳದಲ್ಲಿ ಕೊಲೆಯತ್ನ ನಡೆಸಿ ಕಡಬದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಊರವರ ಸಹಕಾರದೊಂದಿಗೆ ಕೇರಳ ಪೊಲೀಸರು ಶುಕ್ರವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸುಗು ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಕೊಲ್ಲಂ ಠಾಣಾ ವ್ಯಾಪ್ತಿಯಲ್ಲಿ 307 ಕೇಸು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಮಡುಪು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಶುಕ್ರವಾರದಂದು ಕಡಬಕ್ಕೆ ಆಗಮಿಸಿದ ಕೊಲ್ಲಂ ಠಾಣಾ ಎಸ್ಐ

ಕೇರಳದಲ್ಲಿ ಕೊಲೆಗೆ ಯತ್ನಿಸಿ ಕಡಬದಲ್ಲಿ ಆಶ್ರಯ ➤ ಊರವರ ಸಹಕಾರದಲ್ಲಿ ಆರೋಪಿಯ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನಿಮ್ಮ ಬೆಡ್ ರೂಂ ಹೀಗಿದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ. ಇಂದೇ ಕರೆ ಮಾಡಿ 9945410150 ದಂಪತಿಗಳು ಪ್ರೀತಿಯಿಂದ ವಿಶ್ವಾಸದಿಂದ ಇದ್ದರೆ ಮಾತ್ರ ಎಲ್ಲಾ ಖುಷಿ ಕ್ಷಣಗಳು ಪ್ರಾಪ್ತಿಯಾಗುತ್ತದೆ. ಮಾಡುವ ಕೆಲಸದಲ್ಲಿ ಆಸಕ್ತಿ, ನಿರೀಕ್ಷಿತ ಯಶಸ್ಸು ದೊರೆಯಲು ದಾಂಪತ್ಯ ಜೀವನ ಉತ್ತಮ ಪಡಿಸಿಕೊಳ್ಳುವುದು ಅವಶ್ಯಕ. ದಂಪತಿಗಳು ಮಲಗುವ ಕೋಣೆಯು ಈ ರೀತಿ ಯಾಗಿದ್ದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆ ಇದ್ದರೆ ಅಥವಾ ಇನ್ನಷ್ಟು ನೀವು ಹತ್ತಿರವಾಗಲು ನಾವು ನೀಡುವ ಈ

ನಿಮ್ಮ ಬೆಡ್ ರೂಂ ಹೀಗಿದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಮಧ್ಯಪ್ರದೇಶ ಮುಖ್ಯಮಂತ್ರಿ ಕಾಮಲ್ ನಾಥ್ ರಾಜೀನಾಮೆ

ಹೊಸದಿಲ್ಲಿ, ಮಾ.20: ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವ ಮುನ್ನವೇ ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಕಾಮಲ್ ನಾಥ್ ಶುಕ್ರವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ 15ತಿಂಗಳ ಕಾಂಗ್ರೆಸ್ ನೇತೃತ್ವದ ಸರಕಾರ ಪತನದ ಅಂಚಿನಲ್ಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಮಲ್ ನಾಥ್ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಂಡಾಯ ಎದ್ದು 22 ಶಾಸಕರು ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಏತನ್ಮಧ್ಯೆ ರಾಜ್ಯಪಾಲರು ಬಹುಮತ ಸಾಬೀತುಪಡಿಸುವಂತೆ ಕಮಲ್ ನಾಥ್ ಸರ್ಕಾರಕ್ಕೆ ಸೂಚಿಸಿದ್ದರು. ಆದರೆ ಬಜೆಟ್

ಮಧ್ಯಪ್ರದೇಶ ಮುಖ್ಯಮಂತ್ರಿ ಕಾಮಲ್ ನಾಥ್ ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊನೆಗು ನೇಣುಕಂಬವೇರಿದ ನಿರ್ಭಯಾ ಅಪರಾಧಿಗಳು

ಹೊಸದಿಲ್ಲಿ, ಮಾ.20: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳನ್ನು ಇಂದು ಮುಂಜಾವ ಗಲ್ಲಿಗೇರಿಸಲಾಯಿತು. ಅಕ್ಷಯ್ ಠಾಕೂರ್ (31), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಮುಖೇಶ್ ಸಿಂಗ್ (32) ಮರಣದಂಡನೆಗೆ ಕೊರಳೊಡ್ಡುವವರೆಗೂ ಕಾನೂನು ಹೋರಾಟ ನಡೆಸಿ ವಿಫಲರಾಗಿದ್ದರು. ಗಲ್ಲುಶಿಕ್ಷೆಗೆ ಎರಡು ಗಂಟೆ ಬಾಕಿ ಇರುವಾಗ ಸುಪ್ರೀಂಕೋರ್ಟ್ ಕದತಟ್ಟಿದ್ದು, ಅರ್ಜಿಯನ್ನು ವಜಾಗೊಳಿಸಿತ್ತು. ನಾಲ್ವರು ದೋಷಿಗಳು ಕೊನೆಯ ಯಾವ ಆಸೆಯನ್ನೂ ವ್ಯಕ್ತಪಡಿಸಿಲ್ಲವಾಗಿತ್ತು ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ನಸುಕಿನಲ್ಲಿ ಅರ್ಜಿ ವಜಾಗೊಳಿಸಿದ ನಂತರ

ಕೊನೆಗು ನೇಣುಕಂಬವೇರಿದ ನಿರ್ಭಯಾ ಅಪರಾಧಿಗಳು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top