BREAKING NEWS ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ 20ಕ್ಕೆ ಏರಿಕೆ

ಶನಿವಾರ ಒಂದೇ ದಿನ ಐದು ಪ್ರಕರಣ ಪತ್ತೆ ಬೆಂಗಳೂರು, ಮಾ.21: ಮಹಾಮಾರಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ ಶನಿವಾರ ಐದು ಹೊಸ ಪ್ರಕರಣಗಳು ಬೆಳಕಿದೆ ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಒಂದು ಪ್ರಕರಣ ಮತ್ತು ಬೆಂಗಳೂರಿನಲ್ಲಿ ಮೂರು ಹೊಸ ಪ್ರಕರಣ ಹಾಗೂ ಮೈಸೂರಿನಲ್ಲಿ ಒಂದು ಪ್ರಕರಣ ದೃಢವಾಗಿದೆ ಎಂದು ವರದಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 20ಕ್ಕೇರಿದೆ. ಮೈಸೂರಿನಲ್ಲಿ ಇದು ಪ್ರಥಮ ಪ್ರಕರಣವಾಗಿದೆ ಎಂದು ತಿಳಿದು […]

BREAKING NEWS ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ 20ಕ್ಕೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಮತ್ತೊಂದು ಕೊರೋನ ದೃಢ: ಒಟ್ಟು ಪೀಡಿತರ ಸಂಖ್ಯೆ 19ಕ್ಕೆ ಏರಿಕೆ

ಬೆಂಗಳೂರು, ಮಾ.21: ಮಹಾಮಾರಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ ಶನಿವಾರ ನಾಲ್ಕು ಹೊಸ ಪ್ರಕರಣಗಳು ಬೆಳಕಿದೆ ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಒಂದು ಪ್ರಕರಣ ಮತ್ತು ಬೆಂಗಳೂರಿನಲ್ಲಿ ಮೂರು ಹೊಸ ಪ್ರಕರಣಗಳು ದೃಢವಾಗಿದೆ ಎಂದು ವರದಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 19ಕ್ಕೇರಿದೆ. ಮಕ್ಕಾ ಪ್ರವಾಸದಿಂದ ಆಗಮಿಸಿದ್ದ 32 ವರ್ಷದ ಚಿಕ್ಕಬಳ್ಳಾಪುರ ಗೌರಿಬಿದನೂರಿನ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದರು.

ರಾಜ್ಯದಲ್ಲಿ ಮತ್ತೊಂದು ಕೊರೋನ ದೃಢ: ಒಟ್ಟು ಪೀಡಿತರ ಸಂಖ್ಯೆ 19ಕ್ಕೆ ಏರಿಕೆ Read More »

ಕರ್ನಾಟಕ

ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 18ಕ್ಕೇರಿಕೆ

ಬೆಂಗಳೂರು, ಮಾ.21: ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ 18ಕ್ಕೇರಿದೆ. ಶನಿವಾರ ಒಂದೇ ದಿನ ಮೂವರಿಗೆ ಕೊರೋನ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೊರೋನ ಸೋಂಕು ಇರುವವರಿಗೆ ಹಾಗೂ ಮನೆ ಮತ್ತು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಆಗಿರುವವರಿಗೆ ಮಾನಸಿಕ ಆರೋಗ್ಯ ಸಮಾಲೋಚನೆ ನಡೆಸಲಾಗುತ್ತಿದ್ದು ಈ ವರೆಗೆ 4,390 ಜನರಿಗೆ ಕೌನ್ಸಲಿಂಗ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 18ಕ್ಕೇರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಠಿಣ ನಿರ್ಧಾರ ಕೈಗೊಂಡಲ್ಲಿ ಸಹಕರಿಸಿ: ಸಚಿವ ಕೋಟ

ಕೊರೋನ ವೈರಸ್ ಹಿನ್ನೆಲೆ ಮಂಗಳೂರು, ಮಾ.21: ಕರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ಕಟು ನಿರ್ಧಾರಗಳನ್ನು ಜಿಲ್ಲಾಡಳಿತ ಕೈಗೊಳ್ಳುವ ಪರಿಸ್ಥಿತಿ ಬರಬಹುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತಮಟ್ಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 89 ಜನರ ಸ್ಯಾಂಪಲ್ ಗಳನ್ನು ಕಳುಹಿಸಿ ಕೊಡಲಾಗಿದ್ದು

ಕಠಿಣ ನಿರ್ಧಾರ ಕೈಗೊಂಡಲ್ಲಿ ಸಹಕರಿಸಿ: ಸಚಿವ ಕೋಟ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಇಂಜಿನಿಯರಿಂಗ್ ಪದವೀಧರೆ ಯುವತಿ ಅಸೌಖ್ಯದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.21. ಅನಾರೋಗ್ಯದಿಂದ ಬಳಲುತ್ತಿದ್ದ ಇಂಜಿನಿಯರ್ ಪದವೀಧರೆ ಯುವತಿ ಶನಿವಾರದಂದು ಮೃತಪಟ್ಟಿದ್ದಾರೆ. ಮೃತ ಯುವತಿಯನ್ನು ಕಡಬ ತಾಲೂಕು ಪಿಜಕ್ಕಳದ ಕಲ್ಲರ್ಪೆ ನಿವಾಸಿ ಪುಟ್ಟಣ್ಣ ಗೌಡರ ಪುತ್ರಿ ವೀಕ್ಷಿತಾ(27) ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಇನ್ಫೋಸಿಸ್ ನಲ್ಲಿ ಅಮೇರಿಕಾ, ಬೆಂಗಳೂರು ನಲ್ಲಿ ಉದ್ಯೋಗ ಮಾಡುತ್ತಿದ್ದ ವೀಕ್ಷಿತಾ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದೆರಡು ವರ್ಷಗಳಿಂದ ಮನೆಯಲ್ಲಿದ್ದರು ಎನ್ನಲಾಗಿದೆ. ಮೃತರು ತಾಯಿ ಯಶೋಧಾ, ಸಹೋದರಿಯರಾದ ಅಕ್ಷತಾ, ರಕ್ಷಿತಾ ಅವರನ್ನು ಅಗಲಿದ್ದಾರೆ.

ಕಡಬ: ಇಂಜಿನಿಯರಿಂಗ್ ಪದವೀಧರೆ ಯುವತಿ ಅಸೌಖ್ಯದಿಂದ ನಿಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಿಮ್ಮ ಪ್ರಿಯರು ನಿಮ್ಮ ವಶವಾಗಲು ಈ ಸರಳ ಪರಿಹಾರ ಆಚರಿಸಿ 9945410150

ನಿಮ್ಮ ಮನಸ್ಸಿಗೆ ಹತ್ತಿರರಾದವರು ಯಾವುದೋ ಕಾರಣಕ್ಕಾಗಿ ದೂರ ಹೋಗಬಹುದು. ನಿಮ್ಮ ಜೀವನದಲ್ಲಿ ಸದಾ ಕಾಲ ಜೊತೆಗಿರುವೆನು ಎಂದು ಭಾಷೆಯಿತ್ತು ಈ ದಿನ ಮರೆಯಾಗಿರಬಹುದು. ನಿಮ್ಮ ಪ್ರಿಯರನ್ನು ನೀವು ಮತ್ತೆ ಪಡೆಯಲು ಬಯಸಿದ್ದಲ್ಲಿ ಈ ನಿಯಮವನ್ನು ಮಾಡಿ. ಕಾಡಿಗೆಯಲ್ಲಿ ನಿಮ್ಮ ಪ್ರಿಯರ ಹೆಸರನ್ನು ಹಳದಿ ಬಟ್ಟೆಯಲ್ಲಿ ಬರೆದು ಅದನ್ನು ಬಿಳಿ ಎಕ್ಕದ ಗಿಡ ಬುಡದಲ್ಲಿ ಇಟ್ಟು ಬನ್ನಿ. ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ

ನಿಮ್ಮ ಪ್ರಿಯರು ನಿಮ್ಮ ವಶವಾಗಲು ಈ ಸರಳ ಪರಿಹಾರ ಆಚರಿಸಿ 9945410150 Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕರ್ನಾಟಕ – ಕೇರಳ ಗಡಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ➤ ಕೊರೋನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.20. ಕೇರಳ ರಾಜ್ಯದ ಕಾಸರಗೋಡಿನಲ್ಲಿ ಕೊರೋನ ವೈರಸ್ ಪತ್ತೆಯಾಗಿರುವುದರಿಂದ ದಕ್ಷಿಣ ಕನ್ನಡಕ್ಕೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21 ಶನಿವಾರ ಮಧ್ಯಾಹ್ನ‌‌ 2ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ಕೇರಳದ ಗಡಿಭಾಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ. ಕರಾವಳಿಯಿಂದ ಕೇರಳವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದ್ದು, ತುರ್ತು ‌ಸಂದರ್ಭದಲ್ಲಿ ತಲಪಾಡಿ ಚೆಕ್‌ಪೋಸ್ಟ್ ಮೂಲಕ‌ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕರ್ನಾಟಕ – ಕೇರಳ ಗಡಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ➤ ಕೊರೋನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ನಾನಕ್ಕೆಂದು ತೆರಳಿದ ಇಬ್ಬರು ನೀರುಪಾಲು

(ನ್ಯೂಸ್ ಕಡಬ) newskadaba.com ಕಡಬ, ಮಾ.20. ಸ್ನಾನಕ್ಕೆಂದು ತೆರಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ. ಮೃತಪಟ್ಟ ಯುವಕರನ್ನು ಇಚಿಲಂಪಾಡಿ ಗ್ರಾಮದ ಕಲ್ಯ ನಿವಾಸಿಗಳಾದ ಸುಂದರ ಗೌಡ ಎಂಬವರ ಪುತ್ರ ಗುರುನಂದನ್(23) ಹಾಗೂ ಸುಬ್ರಾಯ ಎಂಬವರ ಪುತ್ರ ವೆಂಕಟೇಶ್ (22) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸಹೋದರಿಯರ ಜೊತೆಗೂಡಿ ಐವರು ಇಚಿಲಂಪಾಡಿ ಸಮೀಪ ಕೆಂಪುಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕೆಂಪುಹೊಳೆಯ ಗಯದಲ್ಲಿ ಗುರುನಂದನ್ ಮುಳುಗುತ್ತಿದ್ದ ವೇಳೆ

ಸ್ನಾನಕ್ಕೆಂದು ತೆರಳಿದ ಇಬ್ಬರು ನೀರುಪಾಲು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

BEARING NEWS ಮಾ.21ರಿಂದ ಕೇರಳಕ್ಕೆ ವಾಹನ ಸಂಚಾರ ನಿಷೇಧ: ದ.ಕ ಡಿಸಿ ಆದೇಶ

ಮಂಗಳೂರು, ಮಾ.20: ಕೊರೋನ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21ರ ಅಪರಾಹ್ನ 2ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ಕೇರಳದ ಗಡಿಭಾಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ. ಈ ಮಧ್ಯೆ ತುರ್ತು ಸಂದರ್ಭ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

BEARING NEWS ಮಾ.21ರಿಂದ ಕೇರಳಕ್ಕೆ ವಾಹನ ಸಂಚಾರ ನಿಷೇಧ: ದ.ಕ ಡಿಸಿ ಆದೇಶ Read More »

ಕರಾವಳಿ

ಕಾಸರಗೋಡು: ಒಂದೇ ದಿನ 6 ಮಂದಿಗೆ ಕೊರೋನ ಪಾಸಿಟಿವ್

ಜಿಲ್ಲೆಯಲ್ಲಿ ಕೊರೋನ ಪೀಡಿತರ ಸಂಖ್ಯೆ 9ಕ್ಕೇರಿಕೆ ಕಾಸರಗೋಡು, ಮಾ.20: ಜಿಲ್ಲೆಯಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 9ಕ್ಕೇರಿದೆ. ಶುಕ್ರವಾರ ಒಂದೇ ದಿನ 6 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಕೊರೋನ ಶಂಕಿತರು ಕಾಸರಗೋಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 6 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಇದರಲ್ಲಿ 6 ಮಂದಿಯ ವರದಿ ಕೊರೋನ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ. ಮಾ.19ರಂದು ಕಾಸರಗೋಡು ನಗರದ ಹೊರವಲಯದ ವ್ಯಕ್ತಿಯೋರ್ವರಲ್ಲಿ

ಕಾಸರಗೋಡು: ಒಂದೇ ದಿನ 6 ಮಂದಿಗೆ ಕೊರೋನ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top