ದೆಹಲಿಯ ನಡೆದ ಧಾರ್ಮಿಕ ಸಭೆಯಲ್ಲಿ ಉಪ್ಪಿನಂಗಡಿಯ ವ್ಯಕ್ತಿ ಭಾಗಿ ➤ ವೆನ್ಲಾಕ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.01. ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಿವಾಸಿಯೋರ್ವರು ಭಾಗವಹಿಸಿದ್ದಾರೆ ಎಂಬ ಶಂಕೆಯಿಂದ ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಆ ವ್ಯಕ್ತಿಯನ್ನು ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಲವರು ಈಗಾಗಲೇ ಕೊರೋನಾ ಪೀಡಿತರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ನಿವಾಸಿಯಾಗಿರುವ ವ್ಯಕ್ತಿಯು ಪಾಲ್ಗೊಂಡಿದ್ದಾರೆ ಎನ್ನಲಾಗಿದ್ದು, ವಿಚಾರ ತಿಳಿದ ಉಪ್ಪಿನಂಗಡಿ ಪೊಲೀಸರು ಅವರ […]

ದೆಹಲಿಯ ನಡೆದ ಧಾರ್ಮಿಕ ಸಭೆಯಲ್ಲಿ ಉಪ್ಪಿನಂಗಡಿಯ ವ್ಯಕ್ತಿ ಭಾಗಿ ➤ ವೆನ್ಲಾಕ್ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳು ‘ರೆಡ್ ಝೋನ್’ ಘೋಷಣೆ ➤ ಈ ನಾಲ್ಕು ಜಿಲ್ಲೆಗಳಲ್ಲಿ ಕೊರೋನಾ ಬಗ್ಗೆ ತೀವ್ರ ನಿಗಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.01. ಕೊರೋನಾ ವೈರಸ್ ನಿಂದ ತತ್ತರಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರಾಜ್ಯ ಸರ್ಕಾರ ರೆಡ್ ಝೋನ್ ಎಂದು ಘೋಷಣೆ ಮಾಡಿದೆ. ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ರಾಜ್ಯ ಸರ್ಕಾರ ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ರೆಡ್ ಝೋನ್ ಘೋಷಣೆಯಾಗಿರುವ ನಗರ

ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳು ‘ರೆಡ್ ಝೋನ್’ ಘೋಷಣೆ ➤ ಈ ನಾಲ್ಕು ಜಿಲ್ಲೆಗಳಲ್ಲಿ ಕೊರೋನಾ ಬಗ್ಗೆ ತೀವ್ರ ನಿಗಾ Read More »

ಬ್ರೇಕಿಂಗ್ ನ್ಯೂಸ್

ವಿದೇಶದಿಂದ ಆಗಮಿಸಿ ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯ ತಿರುಗಾಟ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.01. ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯೋರ್ವರು ಮನೆಯಲ್ಲಿ ಇರದೇ ಹೊರಗಡೆ ತೆರಳಿದ ವಿಚಾರ ಕೊರೊನಾ ನಿಗ್ರಹ ದಳದ ಸಿಬ್ಬಂದಿಗಳು ಆಗಮಿಸಿದ ವೇಳೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಹೋಂ ಕ್ವಾರಂಟೈನ್ ನಲ್ಲಿ ಇರದೆ ಇದ್ದ ವ್ಯಕ್ತಿಯ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವ್ಯಕ್ತಿಯೋರ್ವರು ಕೆಲದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದು,14 ದಿನಗಳ ಕಾಲ‌ ಹೋಂ ಕ್ವಾರಂಟೈನ್ ನಲ್ಲಿರುವಂತೆ ಅವರಿಗೆ ಸೂಚಿಸಲಾಗಿತ್ತು. ಮಾರ್ಚ್ 30ರಂದು ಆರೋಗ್ಯ ಇಲಾಖೆ, ಕಂದಾಯ

ವಿದೇಶದಿಂದ ಆಗಮಿಸಿ ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯ ತಿರುಗಾಟ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು Read More »

ಬ್ರೇಕಿಂಗ್ ನ್ಯೂಸ್
Astrology

ನಿಮ್ಮ ಪ್ರಿಯರ ಮನಸ್ಸನ್ನು ಆಕರ್ಷಿಸುವ ಸರಳ ತಂತ್ರ 9945410150

ಮಾಡಿದ ಪ್ರೀತಿ ಪಡೆಯುವ ಹಂಬಲವೇ ಅಥವಾ ನೀವು ಆಕರ್ಷಿತರಾಗಿ ಅವರ ಮುಂದೆ ಕಾಣುವಂತಾಗಬೇಕೇ? ನಿಮ್ಮ ಮನ ಇಚ್ಛೆಯ ಪ್ರಿಯರು ನಿಮ್ಮಂತೆ ಆಗಲು ಸರಳ ವಶ ತಂತ್ರ. ನಿಮ್ಮ ಪ್ರಿಯರ ಹೆಸರನ್ನು ಹಳದಿ ವಸ್ತ್ರದ ಮೇಲೆ ಕಪ್ಪು ಶಾಯಿಯಿಂದ ಬರೆದು ನವಧಾನ್ಯಗಳು ಮತ್ತು ತುಳಸಿಯನ್ನು ವಸ್ತ್ರದಲ್ಲಿ ಕಟ್ಟಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ಕಾರ್ಯಸಿದ್ದಿ ಆಗುತ್ತದೆ. ಶ್ರೀ ಮಹಾ ವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ

ನಿಮ್ಮ ಪ್ರಿಯರ ಮನಸ್ಸನ್ನು ಆಕರ್ಷಿಸುವ ಸರಳ ತಂತ್ರ 9945410150 Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಮದ್ಯಪ್ರಿಯರಿಗೆ ಶಾಕಿಂಗ್‌ ನ್ಯೂಸ್ ➤ ಅಬಕಾರಿ ಇಲಾಖೆಯ ಹೊಸ ಆದೇಶ ಕೇಳಿ ಮದ್ಯ ಪ್ರಿಯರು ಕಂಗಾಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.31. ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದ್ದು, ದೇಶಾದ್ಯಂತ ಎಪ್ರಿಲ್ 14 ರವರೆಗೆ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಎ.14ರ ಮಧ್ಯರಾತ್ರಿವರೆಗೆ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಅಬಕಾರಿ ಆಯುಕ್ತರು ಆದೇಶಿಸಿದ್ದಾರೆ. ಮಾರ್ಚ್ 31ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟದ ಎಲ್ಲಾ ಮಳಿಗೆಗಳನ್ನು ಮುಚ್ಚಲು ಈ ಹಿಂದೆ ಆದೇಶಿಸಲಾಗಿತ್ತು. ಆದರೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಎ.14ರವರೆಗೆ ರಾಜ್ಯಾದ್ಯಂತ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ

ಮದ್ಯಪ್ರಿಯರಿಗೆ ಶಾಕಿಂಗ್‌ ನ್ಯೂಸ್ ➤ ಅಬಕಾರಿ ಇಲಾಖೆಯ ಹೊಸ ಆದೇಶ ಕೇಳಿ ಮದ್ಯ ಪ್ರಿಯರು ಕಂಗಾಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದಲ್ಲಿ ಮಧ್ಯಾಹ್ನದವರೆಗೆ ತೆರೆಯಲಿದೆ ದಿನಸಿ, ತರಕಾರಿ ಅಂಗಡಿಗಳು ➤ ಜನರಲ್ಲಿ ಯಾವುದೇ ಗೊಂದಲ ಬೇಡ: ಎಸಿ ಡಾ| ಯತೀಶ್ ಉಳ್ಳಾಲ್

(ನ್ಯೂಸ್ ಕಡಬ) newskadaba.com ಕಡಬ, ಮಾ.31. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿ, ತರಕಾರಿ, ಹಾಲು ಮೊದಲಾದ ದಿನಬಳಕೆಯ ಸಾಮಾಗ್ರಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕಡಬ ಪೇಟೆಯಲ್ಲೂ ನಾಳೆ ಅಂಗಡಿ ಮುಂಗಟ್ಟು ತೆರೆದಿರಲಿದೆ. ಈಗಾಗಲೇ ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅದು ಹಾಗೆಯೇ ಮುಂದುವರಿಯಲಿದೆ. ಜೊತೆಗೆ ವಿವಿಧ ಗ್ರಾಮಗಳಿಂದ ದಿನಬಳಕೆಯ ವಸ್ತುಗಳಿಗೆ ಕಡಬಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಅಂಗಡಿಗಳನ್ನು ತೆರೆಯಬಹುದಾಗಿದೆ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್

ಕಡಬದಲ್ಲಿ ಮಧ್ಯಾಹ್ನದವರೆಗೆ ತೆರೆಯಲಿದೆ ದಿನಸಿ, ತರಕಾರಿ ಅಂಗಡಿಗಳು ➤ ಜನರಲ್ಲಿ ಯಾವುದೇ ಗೊಂದಲ ಬೇಡ: ಎಸಿ ಡಾ| ಯತೀಶ್ ಉಳ್ಳಾಲ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಾಳೆಯಿಂದ ದ.ಕ. ಜಿಲ್ಲೆಯಲ್ಲಿ7ರಿಂದ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ   ಅಮಂಗಳೂರು, ಮಾ. 31: ದ.ಕ. ಜಿಲ್ಲೆಯ ಜನರಿಗೆ ಎಲ್ಲ  ಅಗತ್ಯ ವಸ್ತುಗಳು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಲಭ್ಯವಾಗಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.   ಎರಡು ದಿನಗಳ ಸಂಪೂರ್ಣ ಬಂದ್ ಬಳಿಕ ಮಂಗಳವಾರದಂದು ದ.ಕ. ಜಿಲ್ಲೆಯಲ್ಲಿ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬುಧವಾರದ ಬಳಿಕ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ಇನ್ನು

ನಾಳೆಯಿಂದ ದ.ಕ. ಜಿಲ್ಲೆಯಲ್ಲಿ7ರಿಂದ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ Read More »

ಕರಾವಳಿ

ದ.ಕ. ಜಿಲ್ಲೆ: ನಾಳೆಯಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು 12 ಗಂಟೆಯವರೆಗೆ ಓಪನ್

ದ.ಕ. ಜಿಲ್ಲೆ: ನಾಳೆಯಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ಓಪನ್ ಹಾಲು, ಮೆಡಿಕಲ್‌, ಗ್ಯಾಸ್ ವಿತರಣೆ, ಪೆಟ್ರೋಲ್ ಪಂಪ್, ಬ್ಯಾಂಕ್ ಗಳು ಎಂದಿನಂತೆ ಓಪನ್ ಪೆಟ್ರೋಲ್ ಪಂಪ್ ನಲ್ಲಿ ಖಾಸಗಿ ವಾಹನಗಳಿಗೆ ಬೆಳಿಗ್ಗೆ 7 ರಿಂದ 12 ರವರೆಗೆ ಮಾತ್ರ ಸೇವೆ. ಗೂಡ್ಸ್ ವಾಹನಗಳಿಗೆ ಇಡೀ ದಿನ ಸೇವೆ. ಮಧ್ಯಾಹ್ನ 12 ಗಂಟೆಯ ನಂತರ ಸಂಚರಿಸುವ ಖಾಸಗೀ ವಾಹನಗಳು ಸೀಝ್

ದ.ಕ. ಜಿಲ್ಲೆ: ನಾಳೆಯಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು 12 ಗಂಟೆಯವರೆಗೆ ಓಪನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದ.ಕ.ದಲ್ಲಿ ಮತ್ತೊಂದು ಕೊರೋನ ಪಾಸಿಟಿವ್: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

ಮಂಗಳೂರು, ಮಾ 31: ದ.ಕ. ಜಿಲ್ಲೆಯಲ್ಲಿ ಮತ್ತೊಂದು  ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೇರಿದೆ. ದುಬೈನಿಂದ ಮಾ.18 ರಂದು ಭಾರತಕ್ಕೆ ಹಿಂತಿರುಗಿದ್ದ ಸುಳ್ಯ ಮೂಲದ 34 ವರ್ಷದ ವ್ಯಕ್ತಿಯಲ್ಲಿ ಕೊರೋನ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಐಸೊಲೇಶನ್ ವಾರ್ಡ್ ನಲ್ಲಿ ಇರಿಸಲಾಗಿತ್ತು. ಈತನ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು ಮಂಗಳವಾರ ಬೆಳಗ್ಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಆತನನ್ನು ಇಂದು ಮಂಗಳೂರಿನ ವೆನ್ಲಾಕ್

ದ.ಕ.ದಲ್ಲಿ ಮತ್ತೊಂದು ಕೊರೋನ ಪಾಸಿಟಿವ್: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ Read More »

ಬ್ರೇಕಿಂಗ್ ನ್ಯೂಸ್

ಆರೋಗ್ಯವಂತರೆಲ್ಲಾ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ: ರಾಜ್ಯ ಆರೋಗ್ಯ ಇಲಾಖೆ ಸಲಹೆ

ಬೆಂಗಳೂರು, ಮಾ.31: ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಮಾಸ್ಕ್ ಧರಿಸುವಂತೆ ಅನೇಕರು ಸಾರ್ವಜನಿಕರಿಗೆ ಒತ್ತಾಯ ಹೇರಲಾಗುತ್ತಿದೆ. ಆದರೆ ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಯಾರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರಷ್ಟೇ ಮಾಸ್ಕ್ ಧರಿಸಿದರೆ ಸಾಕು ಎಂಬುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಈ ಕುರಿತಂತೆ ಸೂಚನೆ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ರಾಜ್ಯದ ಅನೇಕ ಅಂಗಡಿ, ಶಾಪ್ ಸೇರಿದಂತೆ ಇತರೆಡೆ ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಡ

ಆರೋಗ್ಯವಂತರೆಲ್ಲಾ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ: ರಾಜ್ಯ ಆರೋಗ್ಯ ಇಲಾಖೆ ಸಲಹೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top