ಕಡಬ: ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.03. ಲಾಕ್ ಡೌನ್ ವೇಳೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತಾದರೂ ಈ ವೇಳೆ ಅನಗತ್ಯವಾಗಿ ತಿರುಗಾಡುತ್ತಿದ್ದ ಖಾಸಗಿ ವಾಹನವೊಂದನ್ನು ಕಡಬ ಪೊಲೀಸರು ಶುಕ್ರವಾರದಂದು ಮುಟ್ಟುಗೋಲು ಹಾಕಿಕೊಂಡಿದ್ದಾರೆ.   ಶುಕ್ರವಾರ ಮಧ್ಯಾಹ್ನದಿಂದ ಕಡಬ ಪರಿಸರದಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಹಲವೆಡೆ ನಾಕಾಬಂಧಿ ಹಾಕಲಾಗಿದೆ. ಈ‌ ನಡುವೆ ಅನಗತ್ಯವಾಗಿ ತಿರುಗಾಡುತ್ತಿದ್ದ ರಿಟ್ಝ್ ಕಾರನ್ನು ಕಡಬ ಪೊಲೀಸರು ಶುಕ್ರವಾರದಂದು ವಶಪಡಿಸಿಕೊಂಡಿದ್ದಾರೆ.

ಕಡಬ: ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರು ಪೊಲೀಸ್ ವಶಕ್ಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದ.ಕ. ಜಿಲ್ಲೆಗೆ 20 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ: ಸಚಿವ ಕೋಟ

ಮಂಗಳೂರು, ಎ.3: ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡುದಾರರಿಗೆ ವಿತರಣೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಗೆ 20 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಪಡಿತರದಲ್ಲಿ ಕುಚ್ಚಲಕ್ಕಿ ನೀಡಬೇಕೆಂದು ವ್ಯಾಪಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸರಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಇದೀಗ ಲಭ್ಯವಿರುವ 20000 ಕ್ವಿಂಟಾಲ್ ಕುಚ್ಚಲಕ್ಕಿ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಮುಂದಿನ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕುಚ್ಚಲಕ್ಕಿ ಜಿಲ್ಲೆಗೆ ಬಿಡುಗಡೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ದ.ಕ. ಜಿಲ್ಲೆಗೆ 20 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ: ಸಚಿವ ಕೋಟ Read More »

ಕರಾವಳಿ

ಕೇಂದ್ರ-ರಾಜ್ಯ ಸರಕಾರಗಳ ಯೋಜನೆ ಜಿಲ್ಲೆಗೆ ತಲುಪಿಲ್ಲ: ಐವನ್ ಡಿಸೋಜ ಆರೋಪ

ಮಂಗಳೂರು, ಎ.3: ಕೊರೋನ ವೈರಸ್ ಹರಡದಂತೆ ಲಾಕ್‌ಡೌನ್ ಮಾಡಿದ ನಂತರ ಕೇಂದ್ರ- ರಾಜ್ಯ ಸರಕಾರದಿಂದ ಯಾವುದೇ ಯೋಜನೆಗಳು ಫಲಾನುಭವಿಗಳಿಗೆ ತಲುಪಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ. ಪಡಿತರ ಅಂಗಡಿಗಳ ಮೂಲಕ 7 ಕೆಜಿ ಅಕ್ಕಿ, 7 ಕೆಜಿ ಗೋಧಿ, ಎರಡು ಕೆಜಿ ತೊಗರಿಬೇಳೆ ಕೊಡುವುದಾಗಿ ಸರಕಾರಗಳು ಘೋಷಣೆ ಮಾಡಿದ್ದವು. ಆದರೆ ಈಗ ಕೇವಲ 5 ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ, ಪಿಂಚಣಿದಾರಿಗೆ ಮೂರು ತಿಂಗಳ ಪಿಂಚಣಿ ಹಣ, ರೈತರಿಗೆ

ಕೇಂದ್ರ-ರಾಜ್ಯ ಸರಕಾರಗಳ ಯೋಜನೆ ಜಿಲ್ಲೆಗೆ ತಲುಪಿಲ್ಲ: ಐವನ್ ಡಿಸೋಜ ಆರೋಪ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಳ್ಳಾಲ: ಲಕ್ಷಾಂತರ ರೂ. ಮೌಲ್ಯದ ಮದ್ಯ ಕಳವು

ಉಳ್ಳಾಲ, ಎ.3: ಇಲ್ಲಿನ ಎಂಎಸ್ ಐಎಲ್ ನ ವೈನ್ಸ್ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 1 ಲಕ್ಷ ರೂ. ಮೌಲ್ಯದ ಮದ್ಯವನ್ನು ಕಳವುಗೈದಿರುವ ಘಟನೆ ಕುತ್ತಾರು ನಿತ್ಯಾನಂದನಗರದಲ್ಲಿ ಬೆಳಕಿಗೆ ಬಂದಿದೆ. ಪುರುಷೋತ್ತಮ್ ಪಿಲಾರ್ ಎಂಬವರಿಗೆ ಸೇರಿದ ವೈನ್ಸ್ ಅಂಗಡಿಯಲ್ಲಿ ಕಳವು ನಡೆದಿದೆ. ಶಟರ್ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಡಿಮೆ ಬೆಲೆಯ ಮದ್ಯ ಸೇರಿದಂತೆ ಅಧಿಕ ಬೆಲೆಯ ಮದ್ಯದ ಬಾಟಲಿಗಳನ್ನು ದರೋಡೆಗೈದಿದ್ದಾರೆ. ವೈನ್ಸ್ ಅಂಗಡಿಯೊಳಕ್ಕೆ ಸಿಸಿಟಿವಿ ಅಳವಡಿಸಲಾಗಿದೆ. ಆದರೆ ಚಾಣಾಕ್ಷತನ ತೋರಿಸಿರುವ ಕಳ್ಳರು ಸಿಸಿಟಿವಿ ದಾಖಲೆ ಹೊಂದಿರುವ

ಉಳ್ಳಾಲ: ಲಕ್ಷಾಂತರ ರೂ. ಮೌಲ್ಯದ ಮದ್ಯ ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮುಸ್ಲಿಂ ಮುಖಂಡರ ಜೊತೆ ಸಿಎಂ ಯಡಿಯೂರಪ್ಪ ಸಭೆ: ವೈದ್ಯಕೀಯ ಸಿಬ್ಬಂದಿಗೆ ಸಹಕರಿಸಲು ಮನವಿ

ಬೆಂಗಳೂರು, ಎ.3: ದಿಲ್ಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲವರಲ್ಲಿ ಕೊರೋನ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಪರೀಕ್ಷೆ ಮಾಡಲು ಹೋದ ವೈದ್ಯಕೀಯ ಸಿಬ್ಬಂದಿ ಮೇಲೆ ಗುಂಪಿನ ದಾಳಿ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ರಾಜ್ಯದ ಮುಸ್ಲಿಂ ಮುಖಂಡರು ಹಾಗೂ ಶಾಸಕರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರ ಸಹಕಾರ ಕುರಿತಂತೆ ಯಡಿಯೂರಪ್ಪ ಮನವಿ ಮಾಡಿ, ಕೊರೋನ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ

ಮುಸ್ಲಿಂ ಮುಖಂಡರ ಜೊತೆ ಸಿಎಂ ಯಡಿಯೂರಪ್ಪ ಸಭೆ: ವೈದ್ಯಕೀಯ ಸಿಬ್ಬಂದಿಗೆ ಸಹಕರಿಸಲು ಮನವಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Astrology

ದೃಷ್ಟಿ,ದೋಷ, ಮಾಂತ್ರಿಕ ಸಮಸ್ಯೆಯೇ? ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಜನ ದೃಷ್ಟಿ, ಕೆಟ್ಟ ದೋಷಗಳು, ಮಾಂತ್ರಿಕ ರೂಪದ ಸಮಸ್ಯೆ ಇವುಗಳನ್ನು ಅನುಭವಿಸುತ್ತಿದ್ದರೆ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ, ದೀಪದಲ್ಲಿ ಏಲಕ್ಕಿಯನ್ನು ಹಾಕಿ ಇದರಿಂದ ದುಷ್ಟ ಭಾದೆಗಳಿಂದ ರಕ್ಷಣೆ ಸಿಗುವುದು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.

ದೃಷ್ಟಿ,ದೋಷ, ಮಾಂತ್ರಿಕ ಸಮಸ್ಯೆಯೇ? ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಲಾಕ್ ಡೌನ್ ವೇಳೆ ಯಾವೆಲ್ಲಾ ವಾಹನಗಳು ಸಂಚರಿಸಬಹುದು..? ➤ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಏನಂತಾರೆ ಗೊತ್ತೇ..?

➤➤ ವೀಡಿಯೋ | Video ಲಾಕ್ ಡೌನ್ ವೇಳೆ ಯಾವೆಲ್ಲಾ ವಾಹನಗಳು ಸಂಚರಿಸಬಹುದು..? ➤ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಏನಂತಾರೆ ಗೊತ್ತೇ..? ವೀಡಿಯೋಗಾಗಿ??ಕ್ಲಿಕ್ ಮಾಡಿ

ಲಾಕ್ ಡೌನ್ ವೇಳೆ ಯಾವೆಲ್ಲಾ ವಾಹನಗಳು ಸಂಚರಿಸಬಹುದು..? ➤ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಏನಂತಾರೆ ಗೊತ್ತೇ..? Read More »

ಬ್ರೇಕಿಂಗ್ ನ್ಯೂಸ್

7, 8, 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್, ಎಸೆಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಎ.14ರ ನಂತರ ತೀರ್ಮಾನ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಎ.2 ರಾಜ್ಯದಲ್ಲಿನ 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಿಲ್ಲ. ಈ ವರ್ಷ ಎಲ್ಲರನ್ನೂ ಪಾಸ್ ಮಾಡಲಾಗುತ್ತದೆ. ಆದ್ರೇ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎಪ್ರಿಲ್ 14ರ ಬಳಿಕ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತಂತೆ ಫೇಸ್ ಬುಕ್ ನಲ್ಲಿ ಲೈವ್ ಮೂಲಕ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನೆಲೆಯಲ್ಲಿ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬಳಿಕ 7ರಿಂದ 9ನೇ ತರಗತಿಯ

7, 8, 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್, ಎಸೆಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಎ.14ರ ನಂತರ ತೀರ್ಮಾನ: ಸಚಿವ ಸುರೇಶ್ ಕುಮಾರ್ Read More »

ಕರ್ನಾಟಕ

ಕೇರಳ ರಾಜ್ಯದ ರೋಗಿಗಳನ್ನು ದ.ಕ.ದ ಯಾವುದೇ ಆಸ್ಪತ್ರೆಯಲ್ಲಿ ದಾಖಲಿಸಬೇಡಿ: ಡಿಎಚ್ಒ

ಮಂಗಳೂರು, ಎ.2: ಕೇರಳ ರಾಜ್ಯದಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆ ರಾಜ್ಯದ ಯಾವುದೇ ರೋಗಿಗಳನ್ನು‌‌ ದ.ಕ.ಜಿಲ್ಲೆಯ ಆಸ್ಪತ್ರೆಗಳಲ್ಲಿ ದಾಖಲಿಸದಂತೆ‌ ದ.ಕ. ಜಿಲ್ಲಾ ಆರೋಗ್ಯ‌ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ. ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ‌ ನೇತೃತ್ವದಲ್ಲಿ ‌ನಡೆದ ಸಭೆಯಲ್ಲಿ ‌ಈ ತೀರ್ಮಾನ ಕೈಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೇರಳ ರಾಜ್ಯದ ರೋಗಿಗಳನ್ನು ದ.ಕ.ದ ಯಾವುದೇ ಆಸ್ಪತ್ರೆಯಲ್ಲಿ ದಾಖಲಿಸಬೇಡಿ: ಡಿಎಚ್ಒ Read More »

ಕರಾವಳಿ

ಸೆಂಟ್ರಲ್ ಮಾರ್ಕೆಟ್‌ನ ತರಕಾರಿ, ಹಣ್ಣುಹಂಪಲು ವ್ಯಾಪಾರ ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರ

ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮಂಗಳೂರು, ಎ.2: ಸೆಂಟ್ರಲ್ ಮಾರ್ಕೆಟ್‌ನ ತರಕಾರಿ, ಹಣ್ಣು ವ್ಯಾಪಾರ ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಿಸಿ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶಿಸಿದ್ದಾರೆ.   ಸೆಂಟ್ರಲ್‌ ಮಾರ್ಕೆಟ್‌ಗೆ ಚಿಲ್ಲರೆ ವ್ಯಾಪಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ತರಕಾರಿ ಹಾಗೂ ಹಣ್ಣಿನ ಅಂಗಡಿಗಳಲ್ಲಿ ಖರೀದಿ ಮಾಡಬೇಕಾಗಿದೆ. ಬಂದರಿನಲ್ಲಿನ ದಿನಸಿ ವಸ್ತುಗಳ ಸಗಟು ವ್ಯಾಪಾರ ಎಂದಿನಂತೆ ಮುಂದುವರಿಯುತ್ತದೆ.

ಸೆಂಟ್ರಲ್ ಮಾರ್ಕೆಟ್‌ನ ತರಕಾರಿ, ಹಣ್ಣುಹಂಪಲು ವ್ಯಾಪಾರ ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರ Read More »

ಕರಾವಳಿ
Scroll to Top