ಕಡಬ: ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.03. ಲಾಕ್ ಡೌನ್ ವೇಳೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತಾದರೂ ಈ ವೇಳೆ ಅನಗತ್ಯವಾಗಿ ತಿರುಗಾಡುತ್ತಿದ್ದ ಖಾಸಗಿ ವಾಹನವೊಂದನ್ನು ಕಡಬ ಪೊಲೀಸರು ಶುಕ್ರವಾರದಂದು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

 

ಶುಕ್ರವಾರ ಮಧ್ಯಾಹ್ನದಿಂದ ಕಡಬ ಪರಿಸರದಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಹಲವೆಡೆ ನಾಕಾಬಂಧಿ ಹಾಕಲಾಗಿದೆ. ಈ‌ ನಡುವೆ ಅನಗತ್ಯವಾಗಿ ತಿರುಗಾಡುತ್ತಿದ್ದ ರಿಟ್ಝ್ ಕಾರನ್ನು ಕಡಬ ಪೊಲೀಸರು ಶುಕ್ರವಾರದಂದು ವಶಪಡಿಸಿಕೊಂಡಿದ್ದಾರೆ.

Scroll to Top